ಕೋಟೆನಾಡಲ್ಲಿ ಗಣೇಶಮೂರ್ತಿ ತಯಾರಕರಿಗೆ ತಟ್ಟಿದ ಕೊರೋನಾ ಬಿಸಿ; ವಿಘ್ನ ನಿವಾರಕನ ಪೂಜೆಗೆ ಸಂಕಷ್ಟ

ಪ್ರತೀ ವರ್ಷ ಇಷ್ಟೊತ್ತಿಗೆ ಕಲಾವಿದರು ಮಾಡಿ ಕೊಡಲು ಆಗದಷ್ಟು ಗಣೇಶ ಮೂರ್ತಿಗಳಿಗೆ ಬೇಡಿಕೆ ಇತ್ತು. ಈ ಬಾರಿ ಕೊರೋನಾ ಭಯದಿಂದ ಬೇಡಿಕೆಯೇ ಕಡಿಮೆಯಾಗಿದೆ. 6-7 ಅಡಿಗಳ ಎತ್ತರದ ಗಣೇಶ ಮೂರ್ತಿಗೆ ಬೇಡಿಕೆ ಇಲ್ಲವಾಗಿದ್ದು, ನೂರರಲ್ಲಿ ಕೇವಲ 25% ನಷ್ಟು ಮೂರ್ತಿಗಳನ್ನ ಮಾಡುತ್ತಿದ್ದಾರೆ. ಆದರೂ ಅವುಗಳು ಮಾರಾಟ ಆಗುತ್ತವೆಯೋ ಇಲ್ಲವೋ ಎಂಬ ಭಯ ಮತ್ತು ಸಂಕಷ್ಟ ಕಲಾವಿದರಿಗೆ ಕಾಡತೊಡಗಿದೆ.

ಗಣೇಶನ ವಿಗ್ರಹಗಳು

ಗಣೇಶನ ವಿಗ್ರಹಗಳು

  • Share this:
ಚಿತ್ರದುರ್ಗ: ಪ್ರಪಂಚವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಸೋಂಕಿನ ಕರಿನೆರಳು ಈ ಬಾರಿಯ ಗೌರಿ, ಗಣೇಶ ಹಬ್ಬದ ಮೇಲೂ ಬಿದ್ದಿದೆ. ಚಿತ್ರದುರ್ಗದಲ್ಲಿ ಹಬ್ಬಕ್ಕೆ  ಇನ್ನೂ ಒಂದು ತಿಂಗಳು ಇರುವಾಗಲೇ ಕಲಾವಿದರು ಪುರುಸೋತ್ತಿಲ್ಲದೆ ಗಣೇಶ ಮೂರ್ತಿಗಳನ್ನ ತಯಾರಿಸುತ್ತಿದ್ದರು. ಸಾವಿರಾರು ಮೂರ್ತಿಗಳನ್ನ ತಯಾರಿಸುತ್ತಿದ್ದ ಕಲಾವಿದರಿಗೆ ಈ ಭಾರಿ ಗಣೇಶ ಮೂರ್ತಿಗಳನ್ನ ಜನರು ಕೊಳ್ಳುವುದು ಅನುಮಾನವಾಗಿದೆ. ಕೊರೋನಾ ಸಂಕಷ್ಟದಲ್ಲಿ ಗಣೇಶನ ಉತ್ಸವ, ಹಬ್ಬ ಆಚರಣೆಗೆ ಸರ್ಕಾರದ ನಿರ್ಧಾರ ಬಾಕಿ ಇದೆ.

ಹಬ್ಬದಲ್ಲಿ ಗಣೇಶ ಮೂರ್ತಿ ಮಾರಾಟದ ಹಣದಿಂದ ವರ್ಷ ಪೂರ್ತಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕಿಗೆ ಕೊರೋನಾ ಅಡ್ಡಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟೆನಾಡು ಚಿತ್ರದುರ್ಗ ಹಿಂದೂ ಮಹಾ ಗಣೇಪತಿ ಉತ್ಸವದಲ್ಲಿ ರಾಜ್ಯಕ್ಕೆ ಪ್ರಥಮ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದರಿಂದಲೇ ಚಿತ್ರದುರ್ಗ ಜಿಲ್ಲೆಯ ಗಣೇಶ ಮೂರ್ತಿ ತಯಾರಕರಿಗೆ ಒಂದಷ್ಟು ಉಮ್ಮಸ್ಸು ತುಂಬುತ್ತಿತ್ತು.  ಈ ಬೃಹತ್ ಹಿಂದೂ ಮಹಾ ಮಹಾಗಣಪತಿಯ ಉತ್ಸವದ ಗುಂಗಲ್ಲಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಯುವ ಸಮೂಹ ದೊಡ್ಡ ದೊಡ್ಡ ಮೂರ್ತಿಗಳನ್ನ ಪ್ರತಿಷ್ಠಾಪಿಸಿ ಸಂಭ್ರಮ ಪಡುತ್ತಿದ್ದರು. ಆದ್ದರಿಂದಲೇ ಗೌರಿ ಗಣೇಶ ಹಬ್ಬ ಬಂತು ಅಂದ್ರೆ ಪ್ರತಿಯೊಬ್ಬರಲ್ಲೂ ಸಂಭ್ರಮ ಸಡಗರ.

ಅದರಲ್ಲೂ ಗಣೇಶನ ಮೂರ್ತಿ ತಯಾರಕರಿಗೆ ಈ ಸಂಭ್ರಮದಲ್ಲಿ ವರ್ಷದ ಬದುಕಿನ ಬುತ್ತಿ ತಯಾರಿಸುವ ದಿನಗಳು. ಕಲಾವಿದರು ಮಣ್ಣಿನಿಂದ ಕೈಯಲ್ಲಿ ತಯಾರಿಸುವ ಗಣೇಶ ಮೂರ್ತಿಗಳಿಗೆ ಜಿಲ್ಲೆಯಲ್ಲಿ ಅಷ್ಟೆ ಬೇಡಿಕೆಯೂ ಇದೆ. ಹಾಗಾಗಿ  ಬಣ್ಣ ಬಣ್ಣದ, ಬಗೆಬಗೆಯ, ವಿವಿಧ ಗಾತ್ರಗಳ ಗಣೇಶ ಮೂರ್ತಿ ತಯಾರಿಸಿ ಕಲೆಯ ಮೂಲಕ ದುಡಿಮೆ ಮಾಡುತ್ತಿದ್ದ ಕಲಾವಿಧರಿಗೆ ಸುದಿನವೂ ಆಗಿತ್ತು. ಆದರೆ ಈ ಬಾರಿ ದೇಶದಲ್ಲಿ ಕೊರೋನಾ ಮಹಾಮಾರಿ ಸೋಂಕಿನಿಂದ ಕಲಾವಿದರ ಹೊಟ್ಟೆಪಾಡಿನ ಬದುಕಿಗೆ ತಣ್ಣೀರು ಎರಚಿದಂತಾಗಿದೆ.

Coronavirus Updates: ಕರ್ನಾಟಕದಲ್ಲಿ ಒಂದೇ ದಿನ 5503 ಮಂದಿಗೆ ಕೊರೋನಾ​, 1.30 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

ಪ್ರತೀ ವರ್ಷ ಇಷ್ಟೊತ್ತಿಗೆ ಕಲಾವಿದರು ಮಾಡಿ ಕೊಡಲು ಆಗದಷ್ಟು ಗಣೇಶ ಮೂರ್ತಿಗಳಿಗೆ ಬೇಡಿಕೆ ಇತ್ತು. ಈ ಬಾರಿ ಕೊರೋನಾ ಭಯದಿಂದ ಬೇಡಿಕೆಯೇ ಕಡಿಮೆಯಾಗಿದೆ. 6-7 ಅಡಿಗಳ ಎತ್ತರದ ಗಣೇಶ ಮೂರ್ತಿಗೆ ಬೇಡಿಕೆ ಇಲ್ಲವಾಗಿದ್ದು, ನೂರರಲ್ಲಿ ಕೇವಲ 25% ನಷ್ಟು ಮೂರ್ತಿಗಳನ್ನ ಮಾಡುತ್ತಿದ್ದಾರೆ. ಆದರೂ ಅವುಗಳು ಮಾರಾಟ ಆಗುತ್ತವೆಯೋ ಇಲ್ಲವೋ ಎಂಬ ಭಯ ಮತ್ತು ಸಂಕಷ್ಟ ಕಲಾವಿದರಿಗೆ ಕಾಡತೊಡಗಿದೆ.

ಇನ್ನೂ ಜಿಲ್ಲೆಯಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿದ್ದ ಕಲಾವಿದರು ಕೊರೋನಾದ ಭಯಕ್ಕೆ ಬೆಚ್ಚಿ ಬಿದ್ದಿದ್ದಾರೆ. ಒಬ್ಬೊಬ್ಬ ಗಣೇಶ ತಯಾರಕರು ಹಲವು ಬಗೆಯ ನೂರಾರು ಗಣೇಶ ಮೂರ್ತಿ ತಯಾರಿಸುತ್ತಿದ್ದರು. ಈ ಸಾರಿ ಗಣೇಶ ಹಬ್ಬಕ್ಕೆ, ಉತ್ಸವಗಳನ್ನ ನಡೆಸಲು ಸರ್ಕಾರ ಯಾವ ತೀರ್ಮಾನ ಮಾಡುತ್ತದೋ, ಹಾಕಿದ ಬಂಡವಾಳ ಎಲ್ಲಿ ಕೈ ಬಿಟ್ಟು ಹೋಗುತ್ತದೆಯೋ ಎಂಬ ಬಯಕ್ಕೆ ಮೂರ್ತಿ ತಯಾರಿಕೆ ಕಡಿಮೆ ಮಾಡಿದ್ದಾರೆ.

ಪ್ರತೀ ವರ್ಷ ಗಣೇಶ ಮೂರ್ತಿ ಮಾರುತ್ತಿದ್ದ ತಯಾರಕರು,  3 ರಿಂದ 4 ಲಕ್ಷ ವ್ಯಾಪಾರ ಮಾಡಿ ಅವರ ಕಾಯಕದ ಪ್ರತಿಫಲ ದುಡುಮೆಯ ಲಾಭ ಗಳಿಸುತ್ತಿದ್ದರು. ಆದರೆ ಈ ವರ್ಷ ಅಡ್ವಾನ್ಸ್ ಬುಕ್ಕಿಂಗ್ ಗಳು ಕೂಡಾ ಕಡಿಮೆ ಆಗಿವೆ.  ಆದ್ದರಿಂದ ಸದ್ಯ ಈಗ ತಯಾರಿಸಿರುವ ಗಣೇಶ ಮೂರ್ತಿಗಳ  ಖರ್ಚು ವಾಪಾಸ್ ಬಂದರೇ ಸಾಕು ಎನ್ನುವಂತಾಗಿದೆ. ಆದರೆ ಕಾಯಕ ಕೈ ಬಿಡದ ಕಲಾವಿದರು, ಮನೆಗಳಲ್ಲಿ ಕೂರಿಸುವಂತ ಗಣೇಶ ವಿಗ್ರಹಗಳನ್ನ ತಯಾರಿಸಿದ್ದು, ಖರೀದಿಸಲು ಬರುವ ಜನರನ್ನ ಎದುರು ನೋಡುತ್ತಿದ್ದಾರೆ.

ಒಟ್ಟಾರೆ ದೇಶದ ಆರ್ಥಿಕ ಪರಿಸ್ಥಿಗೆ ದೊಡ್ಡ ಪೆಟ್ಟು ನೀಡಿರುವ ಕಿಲ್ಲರ್ ಕೊರೋನಾ ಮಾಹಾ ಮಾರಿ ಸೋಂಕು ಸಣ್ಣ ಪುಟ್ಟ ಕುಷಲ ಕರ್ಮಿಗಳನ್ನೂ ಬಿಟ್ಟಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಕೊರೋನಾ ಸಂಕಷ್ಟಕ್ಕೆ ಸಿಲುಕಿ ದುಡುಮೆ ಇಲ್ಲದೆ ಬೈರಿಗೈ ಆಗಿದ್ದ ಕಲಾವಿದರಿಗೆ ಈ ಸಾರಿ ಗಣೇಶ ಮೂರ್ತಿ ವ್ಯಾಪಾರವೂ ಕೈ ಬಿಡುತ್ತಿದೆ. ದುಡಿಮೆಗೆ ದಾರಿಯಾಗಿದ್ದ ಗಣೇಶ ಮೂರ್ತಿ ತಯಾರಿಕೆ ಕೈ ಹಿಡಿಯದಿದ್ದರೆ ಹಾಕಿದ ಬಂಡವಾಳವೂ ಇಲ್ಲದೆ ಕೈ ಸುಟ್ಟುಕೊಳ್ಳುವ ಪರಿಸ್ಥಿತಿಯಲ್ಲಿ ಕಲಾವಿದರು ದಿನ ಕಳೆಯುತ್ತಿದ್ದಾರೆ.
Published by:Latha CG
First published: