HOME » NEWS » District » LODGE OWNER DENIED PRIVATE QUARANTINE HOME QUARANTINE PERSON ROAMING TENSED VILLAGERS HK

ಖಾಸಗಿ ಕ್ವಾರಂಟೈನ್ ಗೆ ಲಾಡ್ಜ್ ಮಾಲೀಕರ ನಿರಾಕರಣೆ - ಹೋಂ ಕ್ವಾರಂಟೈನ್ ಆದವರಿಂದ ಊರು ಸುತ್ತಾಟ - ಗ್ರಾಮೀಣ ಜನರ ಪೀಕಲಾಟ

ಮುಂಬೈ ನಿಂದ ಬಂದವರಲ್ಲೆ ಹೆಚ್ಚಾಗಿ ಕೊರೋನಾ ಪಾಸಿಟಿವ್ ದೃಢವಾಗುತ್ತಿರುವುದು ಜಿಲ್ಲೆಯ ಗ್ರಾಮೀಣ ಭಾಗದ ಜನರ ನಿದ್ದೆ ಕೆಡಿಸಿದೆ

news18-kannada
Updated:June 22, 2020, 7:24 AM IST
ಖಾಸಗಿ ಕ್ವಾರಂಟೈನ್ ಗೆ ಲಾಡ್ಜ್ ಮಾಲೀಕರ ನಿರಾಕರಣೆ - ಹೋಂ ಕ್ವಾರಂಟೈನ್ ಆದವರಿಂದ ಊರು ಸುತ್ತಾಟ - ಗ್ರಾಮೀಣ ಜನರ ಪೀಕಲಾಟ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜೂ.22): ಉತ್ತರ ಕನ್ನಡ ಜಿಲ್ಲೆಗೆ ಮುಂಬೈ ವಲಸಿಗರಿಂದ ಕೊರೋನಾ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಡೆ ಮುಂಬೈ ವಲಸಿಗರಿಗೆ ಖಾಸಗಿ ಕ್ವಾರಂಟೈನ್ ಆಗಲು ಹೊಟೇಲ್ ಲಾಡ್ಜ್ ಮಾಲಿಕರು ನಿರಾಕರಿಸುತ್ತಿದ್ದಾರೆ. ಇನ್ನೊಂದೆಡೆ ಮನೆಯಲ್ಲಿ ಕ್ವಾರಂಟೈನ್ ಆದರೆ, ಇವರ ಕುಟುಂಬಸ್ಥರು ಊರು ಸುತ್ತಾಡುತ್ತಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ ಹೀಗೆ ವಿವಿಧ ತಾಲೂಕಿನ ಗ್ರಾಮೀಣ ಭಾಗಕ್ಕೆ ಮುಂಬೈ ನಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಮುಂಬೈ ನಿಂದ ಬಂದವರಲ್ಲೆ ಹೆಚ್ಚಾಗಿ ಕೊರೋನಾ ಪಾಸಿಟಿವ್ ದೃಢವಾಗುತ್ತಿರುವುದು ಜಿಲ್ಲೆಯ ಗ್ರಾಮೀಣ ಭಾಗದ ಜನರ ನಿದ್ದೆ ಕೆಡಿಸಿದೆ. ಈ ಹಿನ್ನಲೆಯಲ್ಲಿ ಮುಂಬೈನಿಂದ ಬಂದವರಿಗೆ ಕ್ವಾರಂಟೈನ್ ಆಗಲು ಸ್ಥಳೀಯ ಹೊಟೇಲ್, ಲಾಡ್ಜ್ ಮಾಲಿಕರು ಕೂಡಾ ನಿರಾಕರಿಸುತ್ತಿದ್ದಾರೆ.

ಈ ಕಷ್ಟದ ನಡುವೆ ಮುಂಬೈನಿಂದ ಬಂದವರು ಹೋಮ್ ಕ್ವಾಂರಂಟೈನ್ ಆದರೆ ಇನೊಂದು ಸಮಸ್ಯೆ ಉದ್ಭವ ವಾಗಿದೆ. ಹೋಂ ಕ್ವಾರಂಟೈನ್ ಆದ ಮುಂಬೈ ವಲಸಿಗನ ಕುಟುಂಬದವರು ಆ ವ್ಯಕ್ತಿಯ ಕೊರೋನಾ ಪರೀಕ್ಷಾ ವರದಿ ಬರುವ ಮುಂಚಿತವೇ ಊರು ಕೇರಿ ಸುತ್ತಾಡುತ್ತಿರುವುದು ಸೋಂಕು ಹರಡಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಇದರಿಂದ ಅಕ್ಕಪಕ್ಕದ ಜನ ಗಾಬರಿಯಾಗುತ್ತಿದ್ದು, ಕೂಡಲೆ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಮುಂಬೈ ನಿಂದ ಬಂದವರಿಂದ ಕಟ್ಟುನಿಟ್ಟಾಗಿ ಹೋಂ ಕ್ವಾರಂಟೈನ್ ಪಾಲನೆ ಆಗುತ್ತಿಲ್ಲ, ಕ್ವಾರಂಟೈನ್ ಪಾಲಿಸಿದ್ರೆ ಕುಟುಂಬದವರು ಲಗಾಮು ಇಲ್ಲದ ಹಾಗೆ ಊರುಕೇರಿ ಸುತ್ತಾಡಿ ಅಕ್ಕಪಕ್ಕದ ಮನೆಯವರು ಭಯದ ನರೆಳಲ್ಲಿ ಜೀವನ ದೂಡುವಂತಾಗಿದೆ.

ಇನ್ನೂ ಈ ಬಗ್ಗೆ ಜಿಲ್ಲಾಡಳಿತ ಕೂಡಾ ಈ ನಡುವೆ ಮುಂಬೈ ನಿಂದ ಬಂದವರ ಬಗ್ಗೆ ಕೊಂಚ ನಿರ್ಲಕ್ಷ್ಯ ಮಾಡಿದ್ದು, ಸ್ಥಳೀಯರು ಜಿಲ್ಲಾಡಳಿತದ ಕೆಲವೊಂದು ನಿಯಮಕ್ಕೆ ಆಕ್ರೋಶಿತರಾಗಿದ್ದರು. ಈಗ ಕ್ವಾರಂಟೈನ್ ಅವಧಿ ಕೂಡಾ ಏಳು ದಿನಕ್ಕೆ ಸೀಮಿತ ಮಾಡಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ : ಕೊರೋನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದರೂ ಸೆಲ್ಪಿ ವಿಡಿಯೋ ಮಾಡಿ ಜನರಿಗೆ ಧೈರ್ಯ ತುಂಬಿದ ವೈದ್ಯದಂಪತಿ

ಜತೆಗೆ ಜಿಲ್ಲೆಯಲ್ಲಿ ಕೊರೋನಾ ಪರೀಕ್ಷಾ ವರದಿ ಬರಲು ಕೂಡಾ ವಿಳಂಬವಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದೆ. ಜನರ ಈ ಎಲ್ಲ ದೂರು ಸ್ವಿಕರಿಸಿದ ಜಿಲ್ಲಾಡಳಿತ ಈಗ ಮುಂಬೈ ನಿಂದ ಬಂದು ಹೋಂ ಕ್ವಾರಂಟೈನ್ ಆದವರ ಮನೆಯನ್ನೆ ಸೀಲ್ ಡೌನ್ ಮಾಡಲು ಚಿಂತನೆ ನಡೆಸಿದೆ. ಆದರೆ, ಇದು ಆದಷ್ಟು ಬೇಗ ಕಾರ್ಯರೂಪಕ್ಕೆ ಬಂದ್ರೆ ಒಳಿತು.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಬಾಗದಲ್ಲಿ ಮುಂಬೈ ವಲಸಿಗರ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲ ವಾಗುತ್ತಿದೆ. ಕಳೆದ ವಾರ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಇಂತದ್ದೆ ಪ್ರಕರಣ ಪಾಸಿಟಿವ್ ಬಂದ ಮೇಲೆ ಜನ ಮತ್ತಷ್ಟು ಭಯಭೀತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಿದೆ.
First published: June 22, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories