ಕೋಲಾರ (ಮೇ 28) ಉತ್ತರ ಭಾರತಕ್ಕೆ ಮಿಡತೆಗಳ ಹಿಂಡು ದಾಳಿ ನಡೆಸಿವೆ. ತಂಡೋಪ ತಂಡವಾಗಿ ಬರುವ ಈ ಮಿಡತೆಗಳು ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ. ಈಗ ಕೋಲಾರದಲ್ಲೂ ಮಿಡತೆಗಳು ಕಾಣಿಸಿಕೊಂಡಿದ್ದು ಭಾರೀ ಆತಂಕ ಸೃಷ್ಟಿಸಿತ್ತು.
ಕೋಲಾರದ ದಿಂಬ ಗ್ರಾಮದ ಬಳಿ ನೆನ್ನೆ ಮಿಡತೆಗಳು ಪ್ರತ್ಯಕ್ಷ್ಯ ಆಗಿವೆ. ಈ ಮಿಡತೆಗಳು ತಿಳಿ ಹಸಿರು ಬಣ್ಣದಿಂದ ಕೂಡಿದ್ದು, ಅವು ಕುಳಿತ ಗಿಡಗಳ ಎಲೆಯನ್ನು ತಿಂದು ಹಾಕಿದ್ದವು. ಈ ಮಿಡತೆಗಳು ಬೆಳೆಗಳನ್ನು ನಾಶ ಮಾಡುತ್ತವೆ ಎನ್ನುವ ಭೀತಿಯಲ್ಲಿ ರೈತರು ಮಿಡತೆಗಳಿಗೆ ಬೆಂಕಿಯಿಟ್ಟು ನಾಶ ಮಾಡಿದ್ದಾರೆ.
ತಡರಾತ್ರಿ ಸ್ಥಳಕ್ಕೆ ಆಗಮಿಸಿದ ತೋಟಗಾರಿಕಾ ಇಲಾಖೆ ತಜ್ಞರು, ಇದು ಹಾನಿಕಾರಕ ಲೋಕಸ್ಟ್ ಮಿಡತೆಗಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಂತರ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಕಳೆದ ಮೂರು ದಶಕದಲ್ಲೇ ಅತ್ಯಂತ ಭೀಕರ ಮಿಡತೆ ದಾಳಿಗೆ ನಡುಗುತ್ತಿರುವ ಉತ್ತರ ಭಾರತ
ರೈತರ ಪಾಲಿಗೆ ಸಿಂಹಸ್ವಪ್ನ ಎನಿಸಿರುವ ಮಿಡತೆಗಳು ಉತ್ತರ ಭಾರತದಲ್ಲಿ ಆರ್ಭಟ ಮಾಡುತ್ತಿವೆ. ರಾಜಸ್ಥಾನ, ಗುಜರಾತ್, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಹಸಿರು ಹೊಲವನ್ನು ತಿಂದುಂಡು ಈ ಮಿಡತೆಗಳು ದಾಂಗುಡಿ ಇಡುತ್ತಿವೆ. ದಕ್ಷಿಣ ಭಾರತದ ಇವು ಮುಖ ಮಾಡಿರುವುದರಿಂದ ರೈತರು ಆತಂಕಗೊಂಡಿದ್ದಾರೆ. ಅಲ್ಲದೆ, ಈ ಮಿಡತೆ ಈಗ ಬೀದರ್ಗೂ ಲಗ್ಗೆ ಇಡುವ ಮುನ್ಸೂಚನೆ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ