ರಾಯಚೂರಿಗೂ ದಾಳಿ ಇಟ್ಟವೇ ಆಫ್ರಿಕಾದ ಮಿಡತೆಗಳು?: ಬೆಳೆ ನಾಶ, ಕಂಗಾಲಾಗಿರುವ ರೈತ

ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಕಂಡ ಮಿಡತೆಗಳು ಈಗ ರಾಯಚೂರಿಗೂ ಬಂದಿರಬಹುದೇ? ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ. ಬೆಳೆಗಳು ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೇಗನೆ ಮಿಡತೆಗಳ ಹಾವಳಿಯನ್ನು ತಪ್ಪಿಸಬೇಕೆಂದು ಕೃಷಿ ಇಲಾಖೆಗೆ ರೈತರು ಆಗ್ರಹಿಸುತ್ತಿದ್ದಾರೆ. 

news18-kannada
Updated:July 6, 2020, 5:01 PM IST
ರಾಯಚೂರಿಗೂ ದಾಳಿ ಇಟ್ಟವೇ ಆಫ್ರಿಕಾದ ಮಿಡತೆಗಳು?: ಬೆಳೆ ನಾಶ, ಕಂಗಾಲಾಗಿರುವ ರೈತ
ರೈತರ ಫಸಲಿನ ಮೇಲೆ ಮಿಡತೆಗಳ ಹಾವಳಿ.
  • Share this:
ರಾಯಚೂರು; ಆಫ್ರಿಕಾ ಖಂಡದಿಂದ ಹೊರಟು ಇತ್ತೀಚೆಗೆ ಮಹಾರಾಷ್ಟ್ರ ಹಾಗೂ ಗುಜರಾತಿನವರೆಗೆ ದಾಳಿ ಮಾಡಿ ರೈತರನ್ನು ಕಂಗೆಡಿಸಿದ್ದ ಮಿಡತೆಗಳು ಇದೀಗ ರಾಯಚೂರಿನ ರೈತರನ್ನೂ ಕಾಡಲು ಶುರು ಮಾಡಿದೆ. ಉತ್ತಮ ಮಳೆಯಾಗಿದ್ದ ಸಂತೋಷದಲ್ಲಿದ್ದ ರೈತರ ಬೆಳಗಳನ್ನು ನಾಶ ಮಾಡುವ ಮೂಲಕ ಈ ಮಿಡತೆಗಳು ರೈತರನ್ನು ಮತ್ತೊಂದು ದೊಡ್ಡ ಸಮಸ್ಯೆಯಾಗಿ ಕಾಡುವ ಭೀತಿಯನ್ನು ಮುಂದಿಟ್ಟಿವೆ.

ರಾಯಚೂರು ತಾಲೂಕಿನ ಇಡಪನೂರು ಭಾಗದಲ್ಲಿ ಬಿತ್ತನೆ ಮಾಡಿ ಬೆಳೆಯುತ್ತಿರುವ ಬೆಳೆಯನ್ನು ಈ ಮಿಡತೆಗಳು ನಾಶ ಮಾಡುತ್ತಿವೆ. ಸಾಮಾನ್ಯವಾಗಿ ಬೆಳಗಿನ ‌ಜಾವ ಹಾಗೂ ರಾತ್ರಿಯ ವೇಳೆ ಬೆಳೆಗಳ ಎಲೆಗಳನ್ನು ಮಿಡತೆಗಳು ತಿಂದು ಹಾಕುತ್ತಿವೆ. ಈ ರೀತಿಯ ಮಿಡತೆಗಳನ್ನು ಈ ಭಾಗದಲ್ಲಿ ಇದೇ ಮೊದಲು ಬಾರಿಗೆ ನೋಡಿದ್ದು ಎನ್ನುತ್ತಾರೆ ಸ್ಥಳೀಯ ರೈತರು.

ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯನ್ನು ಇವು ನಾಶ ಮಾಡುತ್ತಿವೆ. ಈಗ ಸಣ್ಣ ಗಾತ್ರದಲ್ಲಿರುವ ಈ ಮಿಡತೆಗಳು ಬರುವ ದಿನಗಳಲ್ಲಿ ದೊಡ್ಡದಾಗಿ ಇವುಗಳ ಸಂತತಿ ಹೆಚ್ಚಾದರೆ ರೈತರ ಸಂಕಷ್ಟ ಅನುಭವಿಸುವಂತಾಗುತ್ತದೆ. ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಈ ಸಂದರ್ಭದಲ್ಲಿ ಬೆಳೆಯನ್ನು ಮಿಡತೆಗಳು ನಾಶ ಮಾಡುತ್ತಿರುವದಕ್ಕೆ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಕಂಡ ಮಿಡತೆಗಳು ಈಗ ರಾಯಚೂರಿಗೂ ಬಂದಿರಬಹುದೇ? ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ. ಬೆಳೆಗಳು ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೇಗನೆ ಮಿಡತೆಗಳ ಹಾವಳಿಯನ್ನು ತಪ್ಪಿಸಬೇಕೆಂದು ಕೃಷಿ ಇಲಾಖೆಗೆ ರೈತರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಕೃಷಿ ಇಲಾಖೆಯ ಗಮನಕ್ಕೆ ಬಂದಿದ್ದು, ಇವುಗಳು ಕ್ರಾಸ್ ಹೂಪರ್ ಎಂಬ ತಳಿಯ ಮಿಡತೆಯಾಗಿದ್ದು ಇವುಗಳ ಅಷ್ಟು ಹಾನಿಕಾರಕವಲ್ಲ. ಆದರೆ, ಬೆಳೆಗಳನ್ನು ನಾಶ ಮಾಡುತ್ತವೆ. ಇವುಗಳಿಗೆ ಸಕಾಲಕ್ಕೆ ಔಷಧಿ ಸಿಂಪಡಣೆ ಮಾಡಿದರೆ ನಿಯಂತ್ರಿಸಬಹುದಾಗಿದೆ. ಈ ಕೀಟ ಕಂಡುಬಂದರೆ ಲ್ಯಾಂಬ್ಡಾ ಸೈಲೊಥ್ರಿನ್  5  ಇ.ಸಿ.(ಕರಾಟೆ) ಕೀಟನಾಶಕವನ್ನು 1ಮಿ.ಲಿ. /1 ಲೀ ನೀರಿನಲ್ಲಿ ಬೆರೆಸಿ ಸಂಪೂರ್ಣ ಗಿಡ ಹಾಗೂ ಎಲೆಗಳಿಗೆ ತಗಲುವ ಹಾಗೆ ಸಿಂಪಡಣೆ ಮಾಡಲು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಅಮ್ಮಾ, ಅಜ್ಜನ ಮನೆಗೆ ಕಳಿಸ್ಬೇಡ!; ತಾತನಿಂದಲೇ 7 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ
ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವದರಿಂದ ಮಣ್ಣಿನಲ್ಲಿರುವ  ಮಿಡತೆಯ ಮೊಟ್ಟೆಗಳು ಈಗ ಮರಿಗಳಾಗಿವೆ. ಸಾಮಾನ್ಯವಾಗಿ ಮಣ್ಣಿನಲ್ಲಿರುವ ಮೊಟ್ಟೆಗಳು ತೇವಾಂಶ ಕಡಿಮೆ ಇದ್ದಾಗ ಮೊಟ್ಟೆಗಳು ನಾಶವಾಗುತ್ತಿದ್ದವು. ಆದರೆ, ಈಗ ಮಳೆಯಾಗಿದ್ದರಿಂದ ಮಿಡತೆಗಳ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಒಂದು ಔಷಧಿ ಸ್ಪ್ರೈ ಮಾಡಿದರೆ ನಾಶವಾಗುತ್ತವೆ. ರೈತರು ಭಯ ಪಡಬಾರದು ಎಂದು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ದ ಕೀಟ ತಜ್ಞರು ಹೇಳಿದ್ದಾರೆ.

 
Published by: MAshok Kumar
First published: July 6, 2020, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading