• Home
  • »
  • News
  • »
  • district
  • »
  • ಕೋಲಾರದಲ್ಲಿ ಕ್ಯಾಪ್ಸಿಕಂ, ಟೊಮೆಟೊ, ಚೆಂಡು ಹೂ ಬೆಳೆಗಾರರ ಗೋಳು ಕೇಳೋರಿಲ್ಲ; ಸರ್ಕಾರಕ್ಕೆ ರೈತರ ಹಿಡಿ ಶಾಪ

ಕೋಲಾರದಲ್ಲಿ ಕ್ಯಾಪ್ಸಿಕಂ, ಟೊಮೆಟೊ, ಚೆಂಡು ಹೂ ಬೆಳೆಗಾರರ ಗೋಳು ಕೇಳೋರಿಲ್ಲ; ಸರ್ಕಾರಕ್ಕೆ ರೈತರ ಹಿಡಿ ಶಾಪ

ಕೈಯಾರೆ ಹೂ, ಕ್ಯಾಪ್ಸಿಕಂ ಬೆಳೆನಾಶ ಮಾಡಿದ ರೈತರು.

ಕೈಯಾರೆ ಹೂ, ಕ್ಯಾಪ್ಸಿಕಂ ಬೆಳೆನಾಶ ಮಾಡಿದ ರೈತರು.

ಮಾರಾಟ ಆಗದ ಅದೆಷ್ಟೊ ಸಾವಿರಾರು ಬಾಕ್ಸ್ ಟೊಮೆಟೊಗಳು ಕೋಲಾರ ಮಾರುಕಟ್ಟೆಯಲ್ಲಿ ಕೊಳೆತು ಗಬ್ಬು ನಾರುತ್ತಿದೆ. ಟೊಮೆಟೊ ಬೆಳೆಗೆ ಕೂಡಲೇ ಸರ್ಕಾರ ಬೆಂಬಲ ಘೋಷಿಸಬೇಕೆಂದು ಸಾವಿರಾರು ರೈತರು ಆಗ್ರಹಿಸಿದ್ದಾರೆ.

  • Share this:

ಕೋಲಾರ: ಕೊರೋನಾ ಸೆಮಿ ಲಾಕ್​ಡೌನ್ ನಿಂದ‌ ಕೋಲಾರದ ಅನ್ನದಾತರು ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ, ಕಳೆದ ವರ್ಷದ ಲಾಕ್ ಡೌನ್ ವೇಳೆ, ಹೇಳ‌ ಹೆಸರಿಲ್ಲದಂತಾಗಿದ್ದ ರೈತರು, ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದರು, ಈ ಬಾರಿ ಸೀಸನ್ ನಲ್ಲಿ ಅಲ್ಪ ಸ್ವಲ್ಪ ಲಾಭದ ದೃಷ್ಟಿಯಿಂದ ಹಾಕಿದ್ದ ಟೊಮೆಟೊ ಬೆಳೆ ಭರ್ಜರಿ ಫಸಲು ನೀಡಿದ್ದರು. ಬೇಡಿಕೆಯಿಲ್ಲದೆ ಬೆಲೆ ಕುಸಿತವಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೋಟ್ಯಾಂತರ ರೂಪಾಯಿ ಬಂಡವಾಳ  ಟೊಮೆಟೊ ಮೇಲೆ ರೈತರು ಹಾಕಿದ್ದು, ಇದೀಗ ಬಂಡವಾಳ ಹಾಕಿದವರು ಸಾಲದ ಶೂಲಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ.


ಕೋಲಾರದ ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಬಾಕ್ಸ್ ಟೊಮೆಟೊಗೆ ಗರಿಷ್ಟ 70 ರೂಪಾಯಿ ಸಿಗುವುದೆ ಹೆಚ್ಚಾಗಿದ್ದು, ಕೆಲವೊಂದು ಗುಣಮಟ್ಟದ ಟೊಮೆಟೊ 30 ರೂಪಾಯಿಗೂ ಮಾರಾಟ ಆಗುತ್ತಿದೆ. ಇನ್ನು ವಿಪರ್ಯಾಸವೆಂದರೆ ಮಾರಾಟ ಆಗದ ಅದೆಷ್ಟೊ ಸಾವಿರಾರು ಬಾಕ್ಸ್ ಟೊಮೆಟೊಗಳು ಮಾರುಕಟ್ಟೆಯಲ್ಲಿ ಕೊಳೆತು ಗಬ್ಬು ನಾರುತ್ತಿದೆ. ಟೊಮೆಟೊ ಬೆಳೆಗೆ ಕೂಡಲೇ ಸರ್ಕಾರ ಬೆಂಬಲ ಘೋಷಿಸಬೇಕೆಂದು ಸಾವಿರಾರು ರೈತರು ಆಗ್ರಹಿಸಿದ್ದಾರೆ.


ಆದರೆ ಬದಲಾದ ಮಾರುಕಟ್ಟೆ ವ್ಯವಸ್ಥೆಯಿಂದ ಬೆಂಬಲ  ನೀಡುವುದು ಸವಾಲಿನ ಕೆಲಸವೆಂದು ಅಧಿಕಾರಿಗಳು‌ ತಿಳಿಸಿದ್ದಾರೆ, ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲು ಲಾಕ್ ಡೌನ್ ಜಾರಿಯಲ್ಲಿದ್ದು, ಸರಕು ಸೇವೆ ಸಾಗಾಟಕ್ಕೆ ಸಮಸ್ಯೆ ಇಲ್ಲದಿದ್ದರು, ಕೊಳ್ಳುವ ಗ್ರಾಹಕರಿಲ್ಲದೆ ಬೇಡಿಕೆ ಕುಸಿತವಾಗಿದೆ, ಇನ್ನು ಬೇಡಿಕೆಯಿಲ್ಲದ ಕಾರಣ ಬೆಲೆಯು ಕುಸಿತವಾಗಿದ್ದು, ಹೊರ ರಾಜ್ಯಗಳಲ್ಲಿ ಕೊರೊನಾ ಪರಿಸ್ತಿತಿ ಸುಧಾರಣೆ ಆದಲ್ಲಿ ಟೊಮೆಟೊ ಸಾಧಾರಣ ದರಕ್ಕೆ ಮಾರಾಟ ಆಗುವ ನಿರೀಕ್ಷೆಯಿದೆ. ಬೆಲೆಯಿಲ್ಲದ ಕಾರಣ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮೆಟೊ ಕಟಾವು ಮಾಡದೆ,  ಹಾಗೆಯೇ ಬಿಟ್ಟಿರುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ.


ಕೈಯಾರೆ ಹೂ, ಕ್ಯಾಪ್ಸಿಕಂ ಬೆಳೆನಾಶ ಮಾಡಿದ ರೈತರು:


ಸೆಮಿ ಲಾಕ್ ಡೌನ್  ಹಿನ್ನಲೆ  ಕೋಲಾರದಲ್ಲಿ  ರೈತರ ಸಂಕಷ್ಟ ಕೇಳೋರಿಲ್ಲದಂತಾಗಿದೆ, ಕ್ಯಾಪ್ಸಿಕಂ, ಚೆಂಡು ಹೂ, ಟೊಮೆಟೊ‌, ಎಲೆ ಕೋಸು ಬೆಳೆಗಳಿಗೆ  ಬೇಡಿಕೆಯಿಲ್ಲದೆ  ಖುದ್ದು ಬೆಳೆನಾಶ ಮಾಡುತ್ತಿರುವ ರೈತರು, ರಾಜ್ಯ  ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಗಾರಪೇಟೆ ತಾಲೂಕಿನ ಎಮ್. ಹೊಸಹಳ್ಳಿ ಗ್ರಾಮದ ಜಿ.ಬಿ. ರೆಡ್ಡಿ ಎನ್ನುವ ರೈತ,  ಟ್ರಾಕ್ಟರ್ ನಿಂದ  ಚೆಂಡು ಹೂ ಬೆಳೆಯನ್ನ ನಾಶ ಮಾಡಿದ್ದಾರೆ. 3 ಎಕರೆಯಲ್ಲಿ ಚೆಂಡು ಹೂ ಬೆಳೆದಿದ್ದು, 2 ಲಕ್ಷಕ್ಕು ಅಧಿಕ ಬಂಡವಾಳ ಹಾಕಿದ್ದಾರೆ.


ಇದನ್ನೂ ಓದಿ: Priyanka Gandhi: ವಿಶ್ವದಲ್ಲೇ ಅತಿಹೆಚ್ಚು ಕೋವಿಡ್ ಲಸಿಕೆ ತಯಾರಿಸುವ ಭಾರತದಲ್ಲೇ ಕೊರತೆ ಏಕೆ?ಪ್ರಿಯಾಂಕಾ ಗಾಂಧಿ ಪ್ರಶ್ನೆ


ಇದೀಗ ಹೂ ಕೇಳೋರಿಲ್ಲದೆ ತೋಟದಲ್ಲಿ ಬೆಳೆ ಒಣಗುತ್ತಿದೆ. ಆಂದ್ರದಲ್ಲಿ ಮಾರುಕಟ್ಟೆ ಮುಚ್ಚಿರುವ ಹಿನ್ನಲೆ ಹೂ ಬೆಳೆ ತೆಗೆದುಕೊಂಡು ಹೋಗಿ ಅಲ್ಲಿಯೇ ಬೀಸಾಡಿ ಬಂದಿದ್ದಾಗಿ ಹೂ ಬೆಳೆಗಾರ ಜೆಬಿ ರೆಡ್ಡಿ ಹೇಳಿದ್ದಾರೆ. ಹೀಗಾಗಿ ನೊಂದ ರೈತರು ಬೆಳೆನಾಶ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಇನ್ನು  ಕೋಲಾರ ತಾಲೂಕಿನ ಮದ್ದೇರಿ ಗ್ರಾಮದಲ್ಲಿ ರೈತ ಚಲಪತಿ ಎನ್ನುವರು 2 ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆ ಹಾಕಿದ್ದು, ಲಕ್ಷ ಲಕ್ಷ ಬಂಡವಾಳ ಹಾಕಿ ಬೇಡಿಕೆಯಿಲ್ಲದೆ ಬೇಸತ್ತು ಹೋಗಿದ್ದಾರೆ.


ಇದನ್ನೂ ಓದಿ: Baba Ramdev: ಅವರಲ್ಲ ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲು ಸಾಧ್ಯವಿಲ್ಲ; ಬಾಬಾ ರಾಮ್​ದೇವ್ ಉದ್ಧಟತನದ ಹೇಳಿಕೆ


7 ಲಕ್ಷಕ್ಕು ಅಧಿಕ ಬಂಡವಾಳ ಇದುವರೆಗು ಹಾಕಿದ್ದು, ಬಿಸಿಲಿನಿಂದ ಬೆಳೆಯನ್ನ ರಕ್ಷಿಸಿಕೊಳ್ಳಲು ಬೆಳೆಯ ಮೇಲ್ಭಾಗದಲ್ಲಿ ಬಿಳಿ ಪರದೆಯನ್ನು ಹಾಸಿದ್ದಾರೆ. ಸಮೃದ್ಧವಾದ ಫಸಲು ಬಂದಿದ್ದರು ಇದೀಗ ಬೆಲೆಯಿಲ್ಲದೆ ರೈತ ಚಲಪತಿ ಕಂಗಾಲಾಗಿದ್ದಾರೆ. ಹಾಗಾಗಿ ಇರುವ ಬೆಳೆಗೆ ಔಷಧಿ ಸಿಂಪಡಿಸಲಾಗದೆ ನೊಂದ ರೈತ ಚಲಪತಿ, ತಮ್ಮ ಕೈಯಾರೆ ಗಿಡಗಳನ್ನು ಕಿತ್ತು ಬೆಳೆ ನಾಶ ಮಾಡಿದ್ದಾರೆ.


ಲಾಕ್ ಡೌನ್ ಹಿನ್ನಲೆ, ತರಕಾರಿ ಬೆಳೆಗಳು ಬೇರೆಡೆಗೆ ರವಾನೆಯಾಗದೆ ಇರುವ ಕಾರಣ ಹೊರ ರಾಜ್ಯದ ಮಾರುಕಟ್ಟೆಯ ದಳ್ಳಾಳಿಗಳು ತರಕಾರಿ ಕೊಳ್ಳಲು ಮುಂದೆ ಬಾರದ ಹಿನ್ನಲೆ ರೈತರಿಗೆ ಬೆಲೆ ಸಿಗುತ್ತಿಲ್ಲ. ಇನ್ನು ಸರ್ಕಾರ ಇತ್ತೀಚೆಗೆ ಘೋಷಿಸಿರುವ 10 ಸಾವಿರ  ಸಹಾಯಧನ, ರೈತರ ನೆರವಿಗೆ ಬರುವುದಿಲ್ಲ ಎಂದಿರುವ  ರೈತ ಚಲಪತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ‌.

Published by:MAshok Kumar
First published: