ದೇಶದಲ್ಲಿ ಲಾಕ್‍ಡೌನ್ ತೆರವಾದರೂ ಕೊಡಗಿನ ಟಿಬೆಟಿಯನ್ ಕ್ಯಾಂಪಿಗೆ ಮಾತ್ರ ಪ್ರವೇಶ ನಿಷಿದ್ಧ

ಟಿಬೆಟಿಯನ್ ಕ್ಯಾಂಪುಗಳ ಆಂತರಿಕ ಸರ್ಕಾರದ ಪ್ರಧಾನಿ ಅವರು ಈ ಬೌದ್ಧ ದೇವಾಲಯಗಳ ಲಾಕ್‍ಡೌನ್ ತೆರವು ಮಾಡಲು ಆದೇಶಿಸಿದರೆ ಆಗ ಮಾತ್ರವೇ ಲಾಕ್‍ಡೌನ್ ತೆರವು ಮಾಡಬಹುದು

ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್​ ದೇವಾಲಯ

ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್​ ದೇವಾಲಯ

  • Share this:
ಕೊಡಗು: ಕೊರೋನಾ ಮಹಾಮಾರಿಯ ಅಬ್ಬರ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ದೇಶದಲ್ಲೇ ಲಾಕ್‍ಡೌನ್ ತೆರವಾಗಿದೆ. ಅಲ್ಲದೇ, ದೇವಾಲಯಗಳ ವಿಶೇಷ ಪೂಜೆ, ಉತ್ಸವ, ಜಾತ್ರೆಗೂ ಸರ್ಕಾರ ಅವಕಾಶ ನೀಡಿದೆ. ಆದರೂ ಜಿಲ್ಲೆ ಕುಶಾಲನಗರ ಸಮೀಪದ ಟಿಬೆಟಿಯನ್ ಕ್ಯಾಂಪಿನಲ್ಲಿ ಮಾತ್ರ ಇಂದಿಗೂ ಲಾಕ್ ಡೌನ್ ತೆರವಾಗಿಲ್ಲ. ಬೈಲುಕೊಪ್ಪದಲ್ಲಿರುವ ಟಿಬೆಟಿಯನ್ ಕ್ಯಾಂಪ್  ಮತ್ತು ನಾಮ್ಡೋಲಿಂಗ್ ಮೊನಾಸ್ಟ್ರಿ ಅಂದರೆ, ಬೌದ್ಧ ದೇವಾಲಯ ಮತ್ತು ಅಧ್ಯಯನ ಕೇಂದ್ರಗಳು ಇಂದಿಗೂ ಸಂಪೂರ್ಣ ಬಂದ್ ಆಗಿವೆ. ಆಧ್ಯಾತ್ಮಿಕ ಕೇಂದ್ರಗಳಾಗಿರುವ ನಾಮ್ಡೋಲಿಂಗ್ ಮೊನಾಸ್ಟ್ರಿ ಸೇರಿದಂತೆ ಕ್ಯಾಂಪ್ ಗಳನ್ನು ಬಂದ್ ಮಾಡಲಾಗಿದೆ. ಹೊರಗಿನವರು ಯಾರು ಕೂಡ ಈ ಕ್ಯಾಂಪ್ ಅಥವಾ ಮೊನಾಸ್ಟ್ರೀಗಳಿಗೆ ಭೇಟಿ ನೀಡುವಂತಿಲ್ಲ. ಈ ಮೊನಾಸ್ಟ್ರಿಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಲಾಮಾ ವಿದ್ಯಾರ್ಥಿಗಳು ಅಧ್ಯಯನ ನಿರತರಾಗಿದ್ದಾರೆ. ಹೀಗಾಗಿಯೇ ಮೊನಾಸ್ಟ್ರೀಗಳಿಗೆ ಹೊರಗಿನ ಯಾರು ಭೇಟಿ ನೀಡದಂತೆ ಲಾಕ್ ಡೌನ್ ಮುಂದುವರೆಸಲಾಗಿದೆ. ಒಂದು ವೇಳೆ ಹೊರಗಿನವರಿಗೆ ಪ್ರವೇಶಿಸಿದರೆ, ಈ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡಬಹುದೆಂಬ ದೃಷ್ಟಿಯಿಂದ ನಾಮ್ಡೋಲಿಂಗ್ ಮೊನಾಸ್ಟ್ರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಇಲ್ಲಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಪ್ರವಾಸಿಗರು ಬರುವುದರಿಂದ ಅಲ್ಲಿನ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಇಂದಿಗೂ ಲಾಕ್‍ಡೌನ್ ಮುಂದುವರಿಸಲಾಗಿದೆ. ಮೊನಾಸ್ಟ್ರಿಗಳಲ್ಲಿ ಬೃಹತ್ ಬುದ್ಧ ಪ್ರತಿಮೆಗಳು ಸೇರಿದಂತೆ ವಿಶೇಷ ದೇವಾಲಯಗಳಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ ಈಗ ನಾಮ್ಡೋಲಿಂಗ್ ಮೊನಾಸ್ಟ್ರಿಗಳು ಬಂದ್ ಆಗಿರುವುದರಿಂದ ಮಾಹಿತಿ ಇಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ನಿರಾಶರಾಗಿ ವಾಪಾಸ್ಸಾಗುತ್ತಿದ್ದಾರೆ. ಪ್ರವಾಸಿಗರ ಕೊರತೆಯಿಂದಾಗಿ ಕ್ಯಾಂಪಿನ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ. ಜೊತೆಗೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಬ್ಧವಾಗಿದ್ದು ವ್ಯಾಪಾರಸ್ಥರು ಕೂಡ ಆತಂಕದಲ್ಲಿದ್ದಾರೆ. ಸದ್ಯ ಫೆಬ್ರವರಿ 13 ರಂದು ಟಿಬೆಟಿಯನ್ನರು ಹೊಸ ವರ್ಷಾಚರಣೆ ಮಾಡುತ್ತಿದ್ದು ಆ ಸಂದರ್ಭಕ್ಕೆ ಲಾಕ್‍ಡೌನ್ ತೆರವು ಮಾಡಿ ಕ್ಯಾಂಪುಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬಹುದು ಎನ್ನಲಾಗುತ್ತಿದೆ.

ಇದನ್ನು ಓದಿ: ಟಾಪ್​ ಟಕ್ಕರ್​ ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ಆದರೆ ಏಪ್ರಿಲ್ ತಿಂಗಳವರೆಗೆ ನಾಮ್ಡೋಲಿಂಗ್ ಮತ್ತು ಮೊನಾಸ್ಟ್ರೀಗಳ ಲಾಕ್‍ಡೌನ್ ತೆರವು ಮಾಡದಿರಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಟಿಬೆಟಿಯನ್ ಕ್ಯಾಂಪುಗಳ ಆಂತರಿಕ ಸರ್ಕಾರದ ಪ್ರಧಾನಿ ಅವರು ಈ ಬೌದ್ಧ ದೇವಾಲಯಗಳ ಲಾಕ್‍ಡೌನ್ ತೆರವು ಮಾಡಲು ಆದೇಶಿಸಿದರೆ ಆಗ ಮಾತ್ರವೇ ಲಾಕ್‍ಡೌನ್ ತೆರವು ಮಾಡಬಹುದು.

ಸದ್ಯ ದಿನಬಳಕೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದು, ವ್ಯಾಪಾರ ಆದರೂ ಆಗಲಿ ಎಂದು ಕೆಲವು ಸ್ಪೈಸಸ್ ಅಂಗಡಿಗಳು ಮಾತ್ರವೇ ತೆರೆದಿವೆಯಾದರೂ ವ್ಯಾಪಾರ ಮಾತ್ರ ಇಲ್ಲ. ಇನ್ನು ಹೊಟೇಲ್ ಸೇರಿದಂತೆ ಸಾಕಷ್ಟು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಆದರೆ ಟಿಬೆಟಿಯನ್ ಕ್ಯಾಂಪಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆ ಜೊತೆಗೆ ಟಿಬೆಟಿಯನ್ನರ ಅವರದೇ ಆಸ್ಪತ್ರೆಗಳು ತೆರೆದಿದ್ದು, ಕಾರ್ಯನಿರ್ವಹಿಸುತ್ತಿವೆ.
Published by:Seema R
First published: