ರೈಲು ಬಾರದೆ ಸೀಬೆ ಸಾಗಣೆಗೆ ರೈತರು, ವ್ಯಾಪಾರಿಗಳ ಪರದಾಟ: ತೋಟದಲ್ಲೇ ಕೊಳೆಯುತ್ತಿರುವ ಕೋಳೂರು ಪೇರಲ

ಇವುಗಳನ್ನು ಆಯ್ದು ಗುಂಡಿ ತೋಡಿ ರೈತರು  ಮುಚ್ಚುತ್ತಿದ್ದಾರೆ. ಬಿದ್ದ ಹಣ್ಣುಗಳನ್ನು ಹಾಗೆ ಬಿಟ್ಟರೆ ಕೊಳೆತ ಹಣ್ಣುಗಳಿಗೆ ಕೀಟಗಳು ಬಿದ್ದು, ತೋಟವೇ ಹಾಳಾಗುತ್ತದೆ. ಹೀಗಾಗಿ ಹಣ್ಣಗಳನ್ನು ಆಯ್ದು ಗುಂಡಿಯಲ್ಲಿ ಮುಚ್ಚಬೇಕು. ಈ ಕೊರೋನಾದಿಂದಾಗಿ ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಸರ್ಕಾರ ಇಂತಹ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.

guava

guava

  • Share this:
ಹಾವೇರಿ; ಹೇರಳ ಪೌಷ್ಠಿಕಾಂಶ ಇರುವ ‘ಕೋಳೂರು ಪೇರಲ’ ಕೊಳ್ಳುವವರ ಗತಿಯಿಲ್ಲದೆ, ತೋಟದಲ್ಲೇ ನಿತ್ಯ ಸಾವಿರಾರು ಹಣ್ಣುಗಳು ಕೊಳೆಯುತ್ತಿವೆ. ಹಾವೇರಿ ತಾಲ್ಲೂಕಿನ ಕೋಳೂರು ಗ್ರಾಮದ ಸುತ್ತಮುತ್ತ ಸುಮಾರು 200 ಎಕರೆ ಪ್ರದೇಶದಲ್ಲಿ ಹಲವಾರು ರೈತರು ಪೇರಲ (ಸೀಬೆ) ಬೆಳೆದಿದ್ದಾರೆ. ಪ್ರತಿ ವರ್ಷದಂತೆ ಉತ್ತಮ ಆದಾಯ ನಿರೀಕ್ಷಿಸಿದ್ದ ರೈತರ ಕನಸು ಈ ಬಾರಿ ‘ಕೋವಿಡ್‌ ಲಾಕ್‌ಡೌನ್‌’ ನಿರ್ಬಂಧಗಳಿಂದ ಭಗ್ನಗೊಂಡಿದೆ.

ಜವಾರಿ ಪೇರಲ ಗಿಡಗಳಿಗೆ ಪ್ರಸಿದ್ಧಿಯಾಗಿದ್ದ ಕೋಳೂರು ಗ್ರಾಮದಲ್ಲಿ 30 ವರ್ಷಗಳಿಂದೀಚೆಗೆ ಹೈಬ್ರಿಡ್‌ ಪೇರಲ ಕಾಲಿಟ್ಟಿದೆ. ಅಲಹಾಬಾದ್‌ ಸಫೇದ್‌ ಮತ್ತು ಲಕ್ನೋ–49 ತಳಿಯ ಪೇರಲ ಗಿಡಗಳು ರೈತರಿಗೆ ಉತ್ತಮ ಆದಾಯ ಕೊಡುತ್ತವೆ. ಹುಬ್ಬಳ್ಳಿಯಿಂದ ಕರ್ಜಗಿ ರೈಲ್ವೆ ನಿಲ್ದಾಣಕ್ಕೆ ನಿತ್ಯ ಬೆಳಿಗ್ಗೆ 8.30ಕ್ಕೆ ಬರುತ್ತಿದ್ದ ಬೆಂಗಳೂರು ಪ್ಯಾಸೆಂಜರ್ ‌ರೈಲು ಪೇರಲ ಸಾಗಣೆಗೆ ಮುಖ್ಯ ಆಧಾರವಾಗಿತ್ತು.

ಕೋಳೂರು, ಕಳಸೂರು, ಗಣಜೂರು ಗ್ರಾಮಗಳ ಸುಮಾರು 200 ಯುವಕರು ನಿತ್ಯ 300ಕ್ಕೂ ಅಧಿಕ ಪೇರಲ ಬುಟ್ಟಿಗಳನ್ನು ರಾಣೆಬೆನ್ನೂರು, ಹರಿಹರ ಮತ್ತು ದಾವಣಗೆರೆಗೆ ಕೊಂಡೊಯ್ಯುತ್ತಿದ್ದರು. ಆದರೆ ಮಾರ್ಚ್‌ 21ರಿಂದ ರೈಲು ಸಂಚಾರ ಸ್ಥಗಿತಗೊಂಡಿತು. ರೈಲ್ವೆ ನಿಲ್ದಾಣದ ಅಕ್ಕ ಪಕ್ಕದಲ್ಲಿ ಪೇರಲ ತೋಟಗಳಿವೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳೇ  ರೈತರ ತೋಟಗಳಲ್ಲಿ ಹಣ್ಣುಗಳನ್ನು ಬಿಡಿಸಿ, ಲೆಕ್ಕ ಕೊಟ್ಟು ರೈಲಿನಲ್ಲಿ ದಾವಣಗೆರೆಗೆ ಸಾಗಿಸುತ್ತಿದ್ದರು. ಆದರೆ, ಈ ಬಾರಿ ಫಸಲು ಬರುವ ವೇಳೆಗೆ ಲಾಕ್‌ಡೌನ್‌ ಜಾರಿಯಾಯಿತು ವ್ಯಾಪಾರವೂ ಕಡಿಮೆ ಆಯಿತು. ಅಲ್ಪ ಸ್ವಲ್ಪ ಹಣ್ಣುಗಳು ಮಾತ್ರ ಮಾರಾಟವಾಗುತ್ತವೆ ಇನ್ನುಳಿದ ಹಣ್ಣುಗಳು ತೋಟಗಳಲ್ಲೇ ಉದುರಿ ಹಾಳಾಗುತ್ತಿವೆ.

ಇದನ್ನು ಓದಿ: ಸರ್ಕಾರ ಕೊರೋನಾ ರೋಗಿಗಳ ಹೆಸರಲ್ಲಿ ಹಣ ಲೂಟಿ ಆರೋಪ; ನ್ಯಾಯಾಂಗ ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ

ಇವುಗಳನ್ನು ಆಯ್ದು ಗುಂಡಿ ತೋಡಿ ರೈತರು  ಮುಚ್ಚುತ್ತಿದ್ದಾರೆ. ಬಿದ್ದ ಹಣ್ಣುಗಳನ್ನು ಹಾಗೆ ಬಿಟ್ಟರೆ ಕೊಳೆತ ಹಣ್ಣುಗಳಿಗೆ ಕೀಟಗಳು ಬಿದ್ದು, ತೋಟವೇ ಹಾಳಾಗುತ್ತದೆ. ಹೀಗಾಗಿ ಹಣ್ಣಗಳನ್ನು ಆಯ್ದು ಗುಂಡಿಯಲ್ಲಿ ಮುಚ್ಚಬೇಕು. ಈ ಕೊರೋನಾದಿಂದಾಗಿ ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಸರ್ಕಾರ ಇಂತಹ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಅಳಲಾಗಿದೆ.
Published by:HR Ramesh
First published: