ಗೋವಾದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕಾರವಾರಕ್ಕೆ ಬಂದು SSLC ಪರೀಕ್ಷೆ ಬರೆಯಲು ಸ್ಥಳೀಯರ ವಿರೋಧ

ಝರಿ ಮತ್ತು ಯಲ್ಲಾಲಿಂಗೇಶ್ವರ ಶಾಲೆಗಳಿರುವ ವಾಸ್ಕೊ ನಗರವು ಗೋವಾದ ಕೊರೋನಾ ಹಾಟ್ಸ್ಪಾಟ್ ಪ್ರದೇಶಗಳ ಸಮೀಪವೇ ಇದೆ. ಇಲ್ಲಿಂದ ವಿದ್ಯಾರ್ಥಿಗಳು ಬಂದರೆ ಕಾರವಾರದಲ್ಲೂ ಕೊರೋನಾ ಹರಡಿಬಿಡುತ್ತದೆ ಎಂಬುದು ಸ್ಥಳೀಯರ ಭಯವಾಗಿದೆ.

ಗೋವಾದಿಂದ ವಿದ್ಯಾರ್ಥಿಗಳು ಕಾರವಾರಕ್ಕೆ ಬಂದು ಪರೀಕ್ಷೆ ಬರೆಯಲು ಸ್ಥಳೀಯರ ವಿರೋಧ

ಗೋವಾದಿಂದ ವಿದ್ಯಾರ್ಥಿಗಳು ಕಾರವಾರಕ್ಕೆ ಬಂದು ಪರೀಕ್ಷೆ ಬರೆಯಲು ಸ್ಥಳೀಯರ ವಿರೋಧ

  • Share this:
ಕಾರವಾರ(ಜೂನ್ 16): ಕೊರೋನಾ ನಡುವೆ ಇನ್ನೇನು ಒಂಬತ್ತು ದಿನದಲ್ಲಿ SSLC ಪರೀಕ್ಷೆ ನಡೆಯಲಿದೆ. ಗೋವಾದಲ್ಲಿನ ಕನ್ನಡ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಕಾರವಾರಕ್ಕೆ ಬಂದು ಪರೀಕ್ಷೆ ಬರೆಯಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದ್ರೆ ಈಗ ಗೋವಾದಲ್ಲಿ ಕೊರೋನಾ ಕೇಕೆ ಹಾಕುತ್ತಿರುವುದರಿಂದ ಅಲ್ಲಿಂದ ವಿದ್ಯಾರ್ಥಿಗಳು ಕಾರವಾರಕ್ಕೆ ಬರಲು ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ.

ಗೋವಾ ರಾಜ್ಯದ ವಾಸ್ಕೊದಲ್ಲಿರುವ ಝರಿ ಮತ್ತು ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳು ಜೂನ್ 25ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಕಾರವಾರದ ಉಳಗಾ ಗ್ರಾಮದ ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಬರೆಯಲಿದ್ದಾರೆ. ಕೊರೋನಾ ಭಯಕ್ಕೆ ಬೆಚ್ಚಿಬಿದ್ದ ಉಳಗಾ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗೋವಾದ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರವಾರದ ಉಳಗಾಕ್ಕೆ ಬಂದು ಪರೀಕ್ಷೆ ಬರೆಯಲಿದ್ದಾರೆ. ಝರಿ ಮತ್ತು ಯಲ್ಲಾಲಿಂಗೇಶ್ವರ ಶಾಲೆಗಳಿರುವ ವಾಸ್ಕೊ ನಗರವು ಗೋವಾದ ಕೊರೋನಾ ಹಾಟ್​ಸ್ಪಾಟ್ ಪ್ರದೇಶಗಳ ಸಮೀಪವೇ ಇದೆ. ಇಲ್ಲಿಂದ ವಿದ್ಯಾರ್ಥಿಗಳು ಬಂದರೆ ಕಾರವಾರದಲ್ಲೂ ಕೊರೋನಾ ಹರಡಿಬಿಡುತ್ತದೆ ಎಂಬುದು ಸ್ಥಳೀಯರ ಭಯವಾಗಿದೆ. ಈ ಹಿಂದೆ ಗೋವಾ ಸರಕಾರ ಕನ್ನಡ ಮಾಧ್ಯಮದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗೋವಾದಲ್ಲೇ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ತೆರೆಯುತ್ತೇವೆ ಎಂದು ಹೇಳಿತ್ತು. ಆದ್ರೆ ಈಗ ಏಕಾಏಕಿ ಉಲ್ಟಾ ಹೊಡೆದಿದ್ದು, ಕಾರವಾರದಲ್ಲಿ ಪರೀಕ್ಷೆ ಬರೆಯಲು ಹೇಳಿದೆ. ಇದರಿಂದ ಕನ್ನಡ ವಿದ್ಯಾರ್ಥಿಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ: ಯುವಕ ಸಂಘದಿಂದ ಪಾಳುಬಿದ್ದ ಕೆರೆ ಅಭಿವೃದ್ಧಿ ; ಗ್ರಾಮ ಪಂಚಾಯತ್​ನಿಂದ ನಗದು ಬಹುಮಾನ

ಇನ್ನು, ಈ ಬಗ್ಗೆ ಉಳಗಾದ ಕೆಲ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಬಳಿ ತಮ್ಮ ಆತಂಕ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಮ್ಮೆಲೆ ಆಕ್ರೋಶಿತರಾದ ಜಿಲ್ಲಾಧಿಕಾರಿ ಹರೀಶಕುಮಾರ್, ದೂರು ಹೇಳಲು ಬಂದವರ ಮೇಲೆಯೇ ಏರು ದನಿಯಲ್ಲಿ ಮಾತನಾಡಿ ಬಾಯಿ ಮುಚ್ಚಿಸಿದರು.

ಗೋವಾದಲ್ಲೇ ಕನ್ನಡಿಗ ವಿದ್ಯಾರ್ಥಿಗಳನ್ನ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ ಯಾರಿಗೂ ಸಮಸ್ಯೆ ಆಗಲ್ಲ. ಆದ್ರೆ ಈ ಬಗ್ಗೆ ಎರಡು ಸರಕಾರಗಳು ಮಾತನಾಡಿ ಸೂಕ್ತ ನಿರ್ಧಾರಕ್ಕೆ ಬರಬೇಕು. ಜಿಲ್ಲಾಧಿಕಾರಿ ಏನೇ ಸಮಜಾಯಿಷಿ ನೀಡಿದರೂ ಇಲ್ಲಿನ ಸ್ಥಳೀಯರಲ್ಲಿ ಭಯ ಇಮ್ಮಡಿ ಆಗಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಇದನ್ನೂ ಓದಿ: ಕಾಫಿನಾಡಿಗೆ ಕಂಟಕವಾಗಿರುವ ಕೊರೋನಾ ಲ್ಯಾಬ್; ಕಡೂರಿನ ವಿದ್ಯಾರ್ಥಿಯ ವರದಿ ಕೂಡ ತಪ್ಪು!ಗೋವಾ-ಕಾರವಾರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸರಕಾರ ಸೇತುವೆ ಆಗಿ ಸಮಸ್ಯೆ ಪರಿಹರಿಸಬೇಕು. ಕೊರೋನಾ ಭಯದಿಂದ ಗೋವಾದಲ್ಲಿ ಕಲಿಯುತ್ತಿದ್ದ ಕಾರವಾರ ಗಡಿ ವಿದ್ಯಾರ್ಥಿಗಳಿಗೆ ಕಾರವಾರದಲ್ಲಿ ಹೇಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆಯೋ ಅದೇ ರೀತಿ ಗೋವಾದ ಕನ್ನಡಿಗ ವಿದ್ಯಾರ್ಥಿಗಳಿಗೆ ಗೋವಾದಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಉತ್ತಮ. ಗೋವಾ ಸರ್ಕಾರ ಇದನ್ನ ಅರಿತುಕೊಂಡು ಸೂಕ್ತ ವ್ಯವಸ್ಥೆ ಮಾಡಿದರೆ ಒಳ್ಳೆಯದು.

ವರದಿ: ದರ್ಶನ್ ನಾಯಕ್
First published: