HOME » NEWS » District » LOCALS COMPLAINT ABOUT BBMP FOR NOT CLEARING THE TREES WHICH FALLEN DUE TO HEAVY RAIN GNR

ಮಳೆ ಆರ್ಭಟಕ್ಕೆ ಧರೆಗುರುಳಿದ ಮರಗಳು; ವಾರ ಕಳೆದರೂ ತೆರವುಗೊಳಿಸದ ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

ಇನ್ನು, ಅನೇಕ ಕಡೆ ವಿದ್ಯುತ್ ವೈರ್ ಗಳನ್ನು ಜೊತೆಗೆ ಎಳೆದುಕೊಂಡೇ ಕೊಂಬೆಗಳು ಮುರಿದು ಬಿದ್ದಿವೆ. ಸ್ವಲ್ಪ ಯಾಮಾರಿದ್ರೂ ಯಾರಿಗಾದ್ರೂ ಇವುಗಳಿಂದ ಅಪಾಯ ಉಂಟಾಗುವ ಭಯ ಜನರದ್ದು. ಸಾಲದ್ದಕ್ಕೆ ಮಳೆ ಪ್ರತಿದಿನ ಮುಂದುವರೆದಿದೆ.

news18-kannada
Updated:May 30, 2020, 9:01 AM IST
ಮಳೆ ಆರ್ಭಟಕ್ಕೆ ಧರೆಗುರುಳಿದ ಮರಗಳು; ವಾರ ಕಳೆದರೂ ತೆರವುಗೊಳಿಸದ ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ
ಮಳೆ ಆರ್ಭಟಕ್ಕೆ ಬಿದ್ದ ಮರಗಳು
  • Share this:
ಬೆಂಗಳೂರು(ಮೇ.30): ಕಳೆದ ನಾಲ್ಕೈದು ದಿನಗಳಿಂದ ಬೆಂಗಳೂರಿನಲ್ಲಿ ಮಧ್ಯಾಹ್ನದ ನಂತರ ಗಾಳಿ ಮಳೆ ಆರ್ಭಟ ಭಾರೀ ಜೋರಾಗಿದೆ. ಇದರಿಂದಾಗಿ ನಗರದ ಅನೇಕ ಕಡೆ ಮರಗಳು ಧರೆಗುರುಳಿ, ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ಆದರೆ, ಸುಮಾರು ಒಂದು ವಾರ ಕಳೆದರೂ ರಸ್ತೆಗಳಿಂದ ಮರ ಮತ್ತು ಕೊಂಬೆಗಳನ್ನು ಬಿಬಿಎಂಪಿ ತೆರವು ಮಾಡಿಲ್ಲ. ಈ ಬಗ್ಗೆ ಸ್ಥಳೀಯರೇ ಆಕ್ರೋಶ ವ್ತಕ್ತಪಡಿಸಿದ್ದಾರೆ.

ಹೌದು, ಜಯನಗರ ಸಾರ್ವಜನಿಕ ಆಸ್ಪತ್ರೆ ಅಕ್ಕಪಕ್ಕದ ರಸ್ತೆಗಳ ತುಂಬೆಲ್ಲಾ ಮರದ ಕೊಂಬೆಗಳೇ ಇವೆ. ಇಲ್ಲಿ ಓಡಾಡುವ ವಾಹನಗಳು ಹರಸಾಹಸ ಮಾಡಿ ಕೊಂಬೆಗಳು ಬಿದ್ದು ಉಳಿದಿರುವ ಸಣ್ಣ ರಸ್ತೆಯಲ್ಲೇ ಓಡಾಡಬೇಕಾಗಿದೆ. ಅನೇಕ ಕಡೆ ಇಡೀ ರಸ್ತೆಯೇ ಮುಚ್ಚಿಹೋಗಿದೆ.ಇಷ್ಟೆಲ್ಲಾ ಅವಾಂತರಗಳಾದರೂ ಬಿಬಿಎಂಪಿ ಮಾತ್ರ ಪತ್ತೆಯಿಲ್ಲ.

ಇನ್ನು ಅನೇಕ ಕಡೆ ವಿದ್ಯುತ್ ವೈರ್ ಗಳನ್ನು ಜೊತೆಗೆ ಎಳೆದುಕೊಂಡೇ ಕೊಂಬೆಗಳು ಮುರಿದು ಬಿದ್ದಿವೆ. ಸ್ವಲ್ಪ ಯಾಮಾರಿದ್ರೂ ಯಾರಿಗಾದ್ರೂ ಇವುಗಳಿಂದ ಅಪಾಯ ಉಂಟಾಗುವ ಭಯ ಜನರದ್ದು. ಸಾಲದ್ದಕ್ಕೆ ಮಳೆ ಪ್ರತಿದಿನ ಮುಂದುವರೆದಿದೆ.

ಇದನ್ನೂ ಓದಿ: ಕೇಂದ್ರ ಸಂಸತ್​​ ಭವನ ಬೆನ್ನಲ್ಲೀಗ ವಿದೇಶಾಂಗ ಇಲಾಖೆಗೂ ತಟ್ಟಿದ ಕೊರೋನಾ ಬಿಸಿ: ಇಬ್ಬರು ಅಧಿಕಾರಿಗಳಿಗೆ ಪಾಸಿಟಿವ್​

ಹಾಗಾಗಿ ಈ ಕೊಂಬೆಗಳನ್ನು ಬೇಗ ತೆರವು ಮಾಡಿ ಎಂದು ಅನೇಕ ಬಾರಿ ಸ್ಥಳೀಯರು ಬಿಬಿಎಂಪಿ ಗೆ ಕರೆ ಮಾಡಿದ್ದಾರೆ. ಅದ್ಯಾವಾಗ ರಸ್ತೆ ಕ್ಲಿಯರ್ ಆಗಿ ಜನರ ಮತ್ತು ವಾಹನಗಳ ಓಡಾಟ ಸರಾಗವಾಗುತ್ತದೆಯೋ ಎಂದು ಇಲ್ಲಿನ ಜನ ಕಾಯ್ತಿದ್ದಾರೆ.
First published: May 30, 2020, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories