ಶಿವಮೊಗ್ಗ ರಂಗಾಯಣದಲ್ಲಿ ರಂಗಶಿಲ್ಪಗಳ ಲೋಕಾರ್ಪಣೆ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಲ್ಪಕಲಾ ಶಿಬಿರದಲ್ಲಿ ವಿವಿಧ ಪ್ರಸಿದ್ಧ ನಾಟಕಗಳ ಪಾತ್ರಗಳ ಶಿಲ್ಪಗಳು, ಯಕ್ಷಗಾನ, ಭೂತದ ಕೋಲ ಮತ್ತು ಕಥಕ್ಕಳಿಯ ಪಾತ್ರಧಾರಿಗಳ ಶಿಲ್ಪಗಳು ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಅನಾವರಣಗೊಳಿಸಲಾಗಿದೆ.

ಶಿವಮೊಗ್ಗದ ರಂಗಾಯಣ.

ಶಿವಮೊಗ್ಗದ ರಂಗಾಯಣ.

  • Share this:
ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ನಮ್ಮ ನಾಡಿನ ಶ್ರೀಮಂತ ಕಲೆ, ಸಾಹಿತ್ಯದ ಬಗ್ಗೆ ಹೆಚ್ಚು ಅಭಿರುಚಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ ಅವರು ಹೇಳಿದರು.  ಶಿವಮೊಗ್ಗ ರಂಗಾಯಣದಲ್ಲಿ ಆಯೋಜಿಸಲಾಗಿದ್ದ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ನಮ್ಮ ನಾಡಿನ ಕಲೆ, ಸಂಸ್ಕೃತಿಗಳು ಶ್ರೀಮಂತವಾಗಿದ್ದು, ಕಾಲಾತೀತವಾಗಿವೆ ಎಂದು ತಿಳಿಸಿದರು.  ಕಲೆಗಳು ನಮ್ಮ ಗತ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿ ನಮ್ಮನ್ನು ಜಾಗೃತಗೊಳಿಸುತ್ತದೆ. ಇಂತಹ ಕಲೆ ಮತ್ತು ಸಂಸ್ಕೃತಿಯಿಂದ ನಮ್ಮ ಮಕ್ಕಳು ಪ್ರೇರಣೆ ಪಡೆಯಬೇಕಾಗಿದೆ‌ ಎಂದು ಹೇಳಿದರು.ಕುವೆಂಪು ಅವರಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ಯುವ ಜನಾಂಗ ಹೆಚ್ಚೆಚ್ಚು ಅರಿತುಕೊಳ್ಳುವ ಅಗತ್ಯವಿದೆ. ರಂಗಾಯಣದಂತಹ ಸಂಸ್ಥೆಗಳು ಇದಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕು" ಎಂದು ಅವರು ಹೇಳಿದರು.

15 ದಿನಗಳ ಕಾಲ ನಡೆದ ಶಿಲ್ಪ ಕಲಾ ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಗೌರವ ಸಮರ್ಪಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕಲೆಯ ಮೂಲಕ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಇಲ್ಲಿ ಕಲಾವಿದರು ಅನಾವರಣಗೊಳಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಶಿಲ್ಪಿಗಳು ತಮ್ಮ ಕೈಚಳಕದ ಮೂಲಕ ಎಲ್ಲಾ ಶಿಲ್ಪಗಳಿಗೆ ಜೀವ ತುಂಬಿದ್ದಾರೆ‌ ಎಂದು ತಿಳಿಸಿದರು.  ನಾಡಿನ ಕಲೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ಇಂತಹ ಕೆಲಸಗಳು ಹೆಚ್ಚಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಲ್ಪಕಲಾ ಶಿಬಿರದಲ್ಲಿ ವಿವಿಧ ಪ್ರಸಿದ್ಧ ನಾಟಕಗಳ ಪಾತ್ರಗಳ ಶಿಲ್ಪಗಳು, ಯಕ್ಷಗಾನ, ಭೂತದ ಕೋಲ ಮತ್ತು ಕಥಕ್ಕಳಿಯ ಪಾತ್ರಧಾರಿಗಳ ಶಿಲ್ಪಗಳು ಶಿವಮೊಗ್ಗ ರಂಗಾಯಣದ ಆವರಣದಲ್ಲಿ ಅನಾವರಣಗೊಳಿಸಲಾಗಿದೆ.

ಈ ಶಿಲ್ಪ ಕಲೆಗಳು ನೋಡುಗರ ಗಮನ ಸೆಳೆಯುತ್ತಿವೆ. ‌ಮುಂದಿನ ‌ದಿನಗಳಲ್ಲಿ ಇದೊಂದು ಪ್ರವಾಸಿ ತಾಣವಾಗಲಿದೆ. ಜೊತೆಗೆ ಶಿಲ್ಪ ಕಲಾ ವಿದ್ಯಾರ್ಥಿಗಳಿಗೆ  ಅಧ್ಯಯನ ನಡೆಸಲು ಇದು ಸಹಕಾರಿಯಾಗಲಿದೆ. ಶಿಲ್ಪ ಕಲಾ ಶಿಭಿರದಲ್ಲಿ ರಚಿತಗೊಂಡಿರುವ ಮೂರ್ತಿಗಳು, ನೋಡುಗರನ್ನು ಮಂತ್ರ ಮುಗ್ದವಾಗಿಸುತ್ತಿವೆ.

ಇದನ್ನೂ ಓದಿ: Mamata Banerjee: ಬಿಜೆಪಿ ಭ್ರಷ್ಟ ನಾಯಕರನ್ನು ಖರೀದಿ ಮಾಡಬಹುದೇ ಹೊರತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನಲ್ಲ; ಮಮತಾ ಬ್ಯಾನರ್ಜಿ

ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಮಾ. ಅರ್ಕಸಾಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕ ಕೆ.ನಾರಾಯಣರಾವ್, ಸಂಚಾಲಕ ವಿಪಿನ್ ಭಧೌರಿಯಾ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗೌರವ ಸಮರ್ಪಣೆ: 72ನೇ ಗಣರಾಜ್ಯೋತ್ಸವ ಅಂಗವಾಗಿ ರಾಜಪಥದಲ್ಲಿ ನಡೆದ ಸಮಾರಂಭ ವೇಳೆ ಕರ್ನಾಟಕದ ಸ್ಥಬ್ದಚಿತ್ರದೊಂದಿಗೆ ಕಲಾವಿದರಾಗಿ ಭಾಗವಹಿಸಿದ್ದ ಶಿವಮೊಗ್ಗ ರಂಗಾಯಣದ ಎಲ್ಲಾ 12 ಮಂದಿ ಕಲಾವಿದರಿಗೆ ಗೌರವ ಸ್ಮರಣಕೆ ನೀಡಿ ಡಿ.ಎಚ್.ಶಂಕರಮೂರ್ತಿ ಅವರು ಈ ಸಂದರ್ಭದಲ್ಲಿ ಸನ್ಮಾನಿಸಿದರು.
Published by:MAshok Kumar
First published: