ಲಾಬಿ, ಗುಂಪುಗಾರಿಕೆ ಬಿಜೆಪಿಗೆ ಸೂಟ್ ಆಗಲ್ಲ - ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದ್ರೆ ತಪ್ಪೇನಿಲ್ಲ ; ಕೆ.ಎಸ್.ಈಶ್ವರಪ್ಪ

ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ. ಪಕ್ಷದ ವಿರುದ್ಧ ತೀರ್ಮಾನ ತೆಗೆದುಕೊಂಡರೆ ತಪ್ಪಾಗುತ್ತದೆ, ಪಕ್ಷಕ್ಕೆ ದ್ರೋಹ ಬಗೆದಂತಾಗುತ್ತದೆ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

  • Share this:
ಕಲಬುರ್ಗಿ(ಜೂ.05): ಲಾಬಿ, ಗುಂಪುಗಾರಿಕೆ ಬಿಜೆಪಿ ಪಕ್ಷಕ್ಕೆ ಸೂಟ್ ಆಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಲ್ಲಿ ತಪ್ಪೇನಿಲ್ಲ. ಬಿಜೆಪಿ ಶಾಸಕರು ಪ್ರತ್ಯೇಕ ಸಭೆ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ಶಾಕರ ಪ್ರತ್ಯೇಕ ಸಭೆಯನ್ನು ಸಚಿವರು ಸಮರ್ಥಿಸಿಕೊಂಡರು. 

ಸಭೆ ಮಾಡಿ ಚರ್ಚೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಹಲವು ಶಾಸಕರು ಸಭೆ ಮಾಡಿ ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ. ಪಕ್ಷದ ವಿರುದ್ಧ ತೀರ್ಮಾನ ತೆಗೆದುಕೊಂಡರೆ ತಪ್ಪಾಗುತ್ತದೆ, ಪಕ್ಷಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ವಿಧಾನ ಪರಿಷತ್ ಸದಸ್ಯರ ನೇಮಕದ ವಿಚಾರಕ್ಕೆ ಸಂಬಂಧಿಸಿ ಇಷ್ಟರಲ್ಲಿಯೇ ಕೋರ್ ಕಮಿಟಿ ಸಭೆ ನಡೆಯಲಿದೆ. ವಲಸಿಗರಿಗೆ, ಮೂಲ ಬಿಜೆಪಿ ಎನ್ನುವ ಪ್ರಶ್ನೆಯಿಲ್ಲ, ಯಾರಿಗೆ ಕೊಡಬೇಕೆಂಬುದನ್ನು ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದರು.

ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ಸತ್ಯ, ಇದೇ ಕಾರಣಕ್ಕಾಗಿ ಕೆಲವರು ಸಭೆ ಸಹ ಸೇರಿದ್ದಾರೆ. ನೇರವಾಗಿ ಹೇಳುತ್ತೇನೆ ಕೆಲವು ಶಾಸಕರಲ್ಲಿ ಅಸಮಾಧಾನ ಇದೆ. ನಮ್ಮ ನಾಯಕರು ಕೂತು ಮಾತಾಡಿ ಅಸಮಾಧಾನ ಬಗೆಹರಿಸುತ್ತಾರೆ. ಯಾರು ಸನ್ಯಾಸಿಗಳಲ್ಲ
ಸ್ಥಾನ ಮಾನ ಕೇಳೋದು ಸಹಜ. ನಮ್ಮ ಸರಕಾರ ಮೂರೂ ವರ್ಷ ಅವಧಿ ಪೂರ್ಣಗೊಳಿಸುವುದು ಪಕ್ಕ ಎಂದು ತಿಳಿಸಿದರು.

ಸಾಮಾಜಿಕ ಅಂತರ ಪಾಲಿಸದ ಈಶ್ವರಪ್ಪ

ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ ವೇಳೆ ಸಚಿವರೇ ಸಾಮಾಜಿಕ ಅಂತರ ಮರೆತು ನಿರ್ಲಕ್ಷ್ಯ ತೋರಿದ ಘಟನೆ ಕಲಬುರ್ಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ.  ಸಚಿವ ಕೆ.ಎಸ್.ಈಶ್ವರಪ್ಪ ಉದ್ಯೋಗ ಖಾತ್ರಿ ಕೆಲಸ ವೀಕ್ಷಣೆಗಾಗಿ ಹೊನ್ನಕಿರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಸಾಮಾಜಿತ ಅಂತರ ಮರೆತು ಕಾಮಗಾರಿ ವೀಕ್ಷಣೆ ಮಾಡಿದರು. ಸಚಿವ ಈಶ್ವರಪ್ಪಗೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು. ಸಾಮಾಜಿಕ ಅಂತರ ಮರೆತು ಗುಂಪು ಸೇರಿದ ಸಚಿವರು. ಸಚಿವರಿಗೆ ಸನ್ಮಾನ ಕಾರ್ಯಕ್ರಮದಲ್ಲೂ ಸಾಮಾಜಿಕ ಅಂತರ ಕಾಣಿಸಲಿಲ್ಲ. ಹೆಮ್ಮಾರಿ ಕೊರೋನಾ ಬಗ್ಗೆ ಸಚಿವರ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ನಿನ್ನೆಯೂ ಈಶ್ವರಪ್ಪ ಇದೇ ರೀತಿಯಾಗಿ ವರ್ತಿಸಿ ಚರ್ಚೆಗೆ ಗ್ರಾಸವಾಗಿದ್ದರು.

ನರೇಗಾ ಕೆಲಸಕ್ಕೆ ಕೇಂದ್ರದಿಂದ 1861 ಕೋಟಿ ರೂಪಾಯಿ:

ಕೊರೋನಾ ದಿಂದಾಗಿ ಜನ ಉದ್ಯೋಗಕ್ಕಾಗಿ ಪರದಾಡುತ್ತಿದ್ದು, ಅವರಿಗೆ ನರೇಗಾ ಮೂಲಕ ಕೆಲಸ ಕೊಡುತ್ತಿದ್ದೇವೆ. ಕೆಲಸ ಮಾಡಿದ 15 ದಿನದೊಳಗಾಗಿ ಕೂಲಿ ಹಣಾನೂ ಹಾಕ್ತಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರ 1861 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಕೋವಿಡ್ ವೇಳೆ ನರೇಗಾ ಜನರಿಗೆ ಸಹಕಾರಿಯಾಗುತ್ತಿದೆ. ಕೂಲಿಯ ಮೊತ್ತ 249 ರಿಂದ 275 ರೂಪಾಯಿಗೆ ಏರಿಕೆಯಾಗಿದೆ. ಬಂದವರಿಗೆಲ್ಲಾ ಕೆಲಸ ಕೊಡುವುದು ನನ್ನ ಆದ್ಯ ಕರ್ತವ್ಯ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ : ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ರಾಕೇಶ್ ಸೂಪರ್ ಸಿಎಂ - ಆದರೆ ಬಿಎಸ್​ವೈ ವಿರುದ್ಧದ ಆರೋಪ ನಿರಾಧಾರ ; ಸಚಿವ ಬಿ.ಸಿ.ಪಾಟೀಲ್
First published: