• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚಳಿಗೆ ನಲುಗಿ ಟೇಬಲ್ ಕೆಳಗೆ ಆಶ್ರಯ ಪಡೆದ ಬಾಲಕಿ; ಸವದಿ, ಜಾರಕಿಹೊಳಿಗೆ ಹೇಳ್ತೇನೆ ಅಂತ ಕಂಡಕ್ಟರ್ ಮಾಡಿದ್ದೇನು ಗೊತ್ತಾ ?

ಚಳಿಗೆ ನಲುಗಿ ಟೇಬಲ್ ಕೆಳಗೆ ಆಶ್ರಯ ಪಡೆದ ಬಾಲಕಿ; ಸವದಿ, ಜಾರಕಿಹೊಳಿಗೆ ಹೇಳ್ತೇನೆ ಅಂತ ಕಂಡಕ್ಟರ್ ಮಾಡಿದ್ದೇನು ಗೊತ್ತಾ ?

ಟೇಬಲ್ ಕೆಳಗೆ ಆಶ್ರಯ ಪಡೆದ ಬಾಲಕಿ

ಟೇಬಲ್ ಕೆಳಗೆ ಆಶ್ರಯ ಪಡೆದ ಬಾಲಕಿ

ಬಸ್ಸುಗಳಿಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿಯೇ ಕಾಲ ಕಳೆಯುವಂತಾಗಿದೆ. ಅದರಲ್ಲಿಯೂ ಚಳಿ ಮಾತ್ರ ಎಂಥವರನ್ನೂ ಹೈರಾಣಾಗಿಸುತ್ತಿದೆ.  ಅದರಲ್ಲೂ ಪುಟ್ಟ ಮಕ್ಕಳು, ಹಿರಿಯ ನಾಗರಿಕರ ಗೋಳಂತೂ ಹೇಳತೀರದಾಗಿದೆ.

  • Share this:

ವಿಜಯಪುರ(ಡಿ. 13): ಈ ಎರಡು ದೃಶ್ಯಗಳನ್ನು ನೋಡಿದರೆ ನಿಮಗೆ ಆ ಪ್ರಸಂಗಗಳು ಅರ್ಥವಾಗುತ್ತವೆ.  ಒಂದೆಡೆ ಟೇಬಲ್ ಕೆಳಗೆ ಆಶ್ರಯ ಪಡೆದ ಪುಟ್ಟ ಬಾಲಕಿ. ಮತ್ತೊಂದೆಡೆ ನಾನು ಸವದಿಗೂ ಹೇಳ್ತೇನೆ. ಜಾರಕಿಹೊಳಿಗೂ ಹೇಳ್ತೇನೆ ಎಂದು ಕೂಗಾಡಿ ಕಪಾಳಮೋಕ್ಷಕ್ಕೊಳಗಾದ ಕಂಡಕ್ಟರ. ಈ ಎರಡು ಘಟನೆಗಳು ನಡೆದಿದ್ದು ಬಸವನಾಡು ವಿಜಯಪುರದಲ್ಲಿ. ಅದೂ ಕೂಡ ಎರಡು ಪ್ರತ್ಯೇಕ ಬಸ್ ನಿಲ್ದಾಣಗಳಲ್ಲಿ. ಅಷ್ಟಕ್ಕೂ ಆಗಿದ್ದೇನೆಂದರೆ, ಸಾರಿಗೆ ಇಲಾಖೆ ನೌಕರರು ಬಸ್ ಬಂದ್ ಮಾಡಿ ಇಂದಿಗೆ ಮೂರು ದಿನಗಳಾಗುತ್ತಿವೆ. ಆದರೆ, ಇದಾವುದರ ಬಗ್ಗೆ ಮಾಹಿತಿ ಅಲ್ಲದ ಜನ ಇನ್ನೂ ಕೂಡ ಬಸ್ ನಿಲ್ದಾಣಗಳಿಗೆ ಬರುತ್ತಲೇ ಇದ್ದಾರೆ. ಮೊದಲ ಘಟನೆ ನಡೆದಿದ್ದು, ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ. ಈ ಫೋಟೋ ನೋಡಿದರೆ ನಿಮಗೆ ಪ್ರಯಾಣಿಕರ ಗೋಳು ಅರ್ಥವಾಗುತ್ತೆ. ಬಸ್ ನಿಲ್ದಾಣಕ್ಕೆ ಬಂದಿರುವ ಪುಟ್ಟ ಮಕ್ಕಳ ಪಾಡು ಅರ್ಥವಾಗುತ್ತೆ. ವಿಜಯಪುರದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ಮೊದಲ ದಿನ ಅಷ್ಟೋಂದು ಪರಿಣಾಮ ಬೀರಿರಲಿಲ್ಲ.


ಆದರೆ, ಮೊನ್ನೆ ಮಧ್ಯರಾತ್ರಿಯಿಂದ ಬಸ್ ಮುಷ್ಕರದ ಬಿಸಿ ವಿಜಯಪುರ ಜಿಲ್ಲೆಗೂ ತಟ್ಟಿದೆ.  ಆದರೂ, ಈ ಕುರಿತು ಮಾಹಿತಿ ಇಲ್ಲದ ಕಾರಣ ನಾನಾ ಊರುಗಳಿಂದ ಜನ ಬಸ್ ನಿಲ್ದಾಣಗಳಿಗೆ ಬರುತ್ತಲೇ ಇದ್ದಾರೆ. ಬಸ್ಸುಗಳಿಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿಯೇ ಕಾಲ ಕಳೆಯುವಂತಾಗಿದೆ. ಅದರಲ್ಲಿಯೂ ಚಳಿ ಮಾತ್ರ ಎಂಥವರನ್ನೂ ಹೈರಾಣಾಗಿಸುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳು, ಹಿರಿಯ ನಾಗರಿಕರ ಗೋಳಂತೂ ಹೇಳತೀರದಾಗಿದೆ.


ಇಂಥದ್ದೆ ಘಟನೆಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಸಾಕ್ಷಿಯಾಗಿದೆ. ರಾತ್ರಿ ಚಳಿಗೆ ಹೆದರಿ ಪುಟ್ಟ ಬಾಲಕಿಯೊಬ್ಬಳು ಬಸ್ ನಿಲ್ದಾಣದಲ್ಲಿದ್ದ ಕಬ್ಬಿಣದ ಟೇಬಲ್ ಗೂಡು ಸೇರಿದ ದೃಶ್ಯ ಪ್ರಯಾಣಿಕರ ಗೋಳಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಪೋಷಕರೊಂದಿಗೆ ಬಂದಿದ್ದ ಬಾಲಕಿಗೆ ರಾತ್ರಿ ಚಳಿಯಾಗಿದೆ. ಇದರಿಂದ ರಕ್ಷಣೆ ಪಡೆಯಲು ಈ ಪುಟ್ಟ ಬಾಲಕಿ ಬಸ್ ನಿಲ್ದಾಣದಲ್ಲಿರುವ ಕಂಟ್ರೋಲರ್ ಟೇಬಲ್ ಕೆಳಗೆ ಇರುವ ಖಾಲಿ ಜಾಗದಲ್ಲಿ ಕುಳಿತಿದ್ದಾಳೆ. ಈ ಘಟನೆಯನ್ನು ನೋಡಿದರೆ ಪ್ರಯಾಣಿಕರ ಗೋಳು ಕೇಳೋರಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.


ಸವದಿಗೂ ಹೇಳ್ತೇನೆ, ಜಾರಕಿಹೊಳಿಗೂ ಹೇಳ್ತೇನೆ ಎಂದ ಕುಡುಕ ಕಂಡಕ್ಟರ್​


ಎರಡನೇ ಪ್ರಕರಣ ಕುಡುಕ ಕಂಡಟ್ಕರ್ ನ ಕಿತಾಪತಿಗೆ ಸಾಕ್ಷಿಯಾಗಿದೆ. ಕುಡುಕ ಕಂಡಕ್ಟರನೊಬ್ಬ ಕಂಠಪೂರ್ತಿ ಕುಡಿದು ಬಂದು ಸಂಚರಿಸುತ್ತಿದ್ದ ಬಸ್ಸಿಗೆ ಅಡ್ಡಿ ಪಡಿಸಿದ ಘಟನೆ ವಿಜಯಪುರ ನಗರದ ಸೆಟಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದೆ. ನಿನ್ನೆ ಸಾರಿಗೆ ಇಲಾಖೆಯ ನೌಕರರ ಸಂಘಟನೆಗಳ ಜೊತೆ ವಿಜಯಪುರ ಈಶಾನ್ಯ ಸಾರಿಗೆ ಸಂಸ್ಥೆಯ ಡಿವಿಜನಲ್ ಕಂಟ್ರೋಲರ ನಾರಾಯಣಪ್ಪ ಕುರುಬರ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು 50 ಜನ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದಾಗಿ ವಿಜಯಪುರ ನಗದ ಸೆಟಲೈಟ್ ಬಸ್ ನಿಲ್ದಾಣದಿಂದ ಒಂದೊಂದಾಗಿ ಬಸ್ಸುಗಳ ಸೇವೆ ಆರಂಭವಾಗಿದ್ದವು.


ಈ ಸಮಯದಲ್ಲಿ ನಿಗದಿತ ಸ್ಥಳಕ್ಕೆ ಹೊರಟಿದ್ದ ಬಸ್ ವೊಂದನ್ನು ತಡೆದ ಕಂಡಕ್ಟರ್ ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ್ದಷ್ಟೇ ಅಲ್ಲದೇ, ಬೇಕಾಬಿಟ್ಟಿ ಬಾಯಿ ಹರಿಬಿಟ್ಟ ಘಟನೆ ನಡೆಯಿತು.  ಕುಡುಕ ಕಂಡಕ್ಟರ ಭೀಮಪ್ಪ ಕರೆಪ್ಪ ಮೆಳಂಕಿ ಬಸ್ ತಡೆಯಲು ಯತ್ನಿಸುತ್ತಿದ್ದಂತೆ ಅಲ್ಲಿಗೆ ದೌಡಾಯಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಅವನನ್ನು ಆಚೆಗೆ ಕಳುಹಿಸಿದರು. ಈ ಸಂದರ್ಭದಲ್ಲಿ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟ ಈ ಕುಡುಕ ಕಂಡಕ್ಟರ್, ನಾನು ಡಿಪೋ ನಂ. 1ರಲ್ಲಿದ್ದೇನೆ.  1024 ನನ್ನ ನಂಬರ್. ಕುಡಿದು ಬಂದಿದ್ದೇನೆ.  ಸವದಿಗೂ ಹೇಳ್ತೇನೆ, ರಮೇಶ ಜಾರಕಿಹೊಳಿಗೂ ಹೇಳ್ತೇನೆ ಎಂದು ಆವಾಜ್ ಹಾಕಿದ ಘಟನೆ ನಡೆಯಿತು.


ಅಷ್ಟೇ ಅಲ್ಲ, ನಾನು ಮೊದಲು ಲಖನ್ ಸಾಹುಕಾರ, ನಂತರ ಸತೀಶ ಜಾರಕಿಹೊಳಿ ಡ್ರೈವರ್ ಆಗಿದ್ದೆ.  ಖಾಕಿ ಬಟ್ಟೆ ತೆಗೆದ ನಂತರ ಕುಡಿಯುತ್ತೇನೆ. ತನಗೆ ಏಕ ಬೇಕು ಎಂದು ಮದ್ಯ ಬೇಕು ಎಂದು ಕಿತಾಪತಿ ನಡೆಸಿದ್ದಾನೆ. ಔರಂಗಾಬಾದ್ ಬಸ್ ರೂಟ್ ನಲ್ಲಿ ಕಂಡಕ್ಟರ್ ಡ್ಯೂಟಿ ಮಾಡುತ್ತೇನೆ. ಆನ್ ಡ್ಯೂಟಿ ಮೇಲೆ ನೋ ಡ್ರಿಂಕ್. ಈಗ ಬಸ್ ಓಡಿಸುತ್ತಿದ್ದ ಅಣ್ಣ-ತಮ್ಮ ಚಾಲಕರಿಗೆ ಹೇಳಿದ್ದೇನೆ.  ಇಲಾಖೆ ನಿವೃತ್ತಿ ಅಧಿಕಾರಿ ಕಾಡಪ್ಪನವರ ಅಳಿಯ ನಾನು ಎಂದು ಕಂಡಕ್ಟರ್ ಭೀಮಪ್ಪ ಕರೆಪ್ಪ ಮೆಳಂಕಿ ಬೇಕಾಬಿಟ್ಟಿ ಬಾಯಿ ಹರಿಬಿಟ್ಟ.


ಆಗ ಈತನನ್ನು ಪಕ್ಕಕ್ಕೆ ಎಳೆದೊಯ್ದ ಪೊಲೀಸರು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿಸಿದರು. ಆಗ ಸಿಟ್ಟಾದ ಗಾಂಧಿಚೌಕ್ ಪಿಎಸ್‌ಐ ಶರಣಗೌಡ ಕುಡುಕ ಕಂಡಕ್ಟರ್ ಕಪಾಳಿಗೆ ಹೊಡೆಯುವ ಮೂಲಕ ಬಲವಂತವಾಗಿ ಬಸ್ ಬಂದ್ ಮಾಡಿಸಲು ಯತ್ನಿಸಿದ್ದಕ್ಕೆ ಆಕ್ರೋಶ ಹೊರ ಹಾಕಿದರು. ಒಟ್ಟಾರೆ, ಈ ಎರಡು ಘಟನೆಗಳು ವಿಜಯಪುರ ಜಿಲ್ಲೆಯಲ್ಲಿ ಬಸ್ ಮುಷ್ಕರದ ಮೂರನೇ ದಿನ ಗಮನ ಸೆಳೆದಿದ್ದು ಮಾತ್ರ ವಿಪರ್ಯಾಸವಾಗಿತ್ತು.

top videos
    First published: