Basanagouda Patil Yatnal| ತಾಲಿಬಾನಿಗಳ ರೀತಿ ಇಲ್ಲಿನ ಹಿಂದೂ ವಿರೋಧಿಗಳ ಮೇಲೆ ಗುಂಡು ಹಾರಿಸಬೇಕು; ಯತ್ನಾಳ್ ವಿವಾದಾತ್ಮಕ ಹೇಳಿಕೆ

ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುವುದಿಲ್ಲ? ರಾಹುಲ್ ಗಾಂಧಿ ಯಾವ ಧರ್ಮದಲ್ಲಿ ಜನಸಿದ್ದಾರೆ ನನಗೆ ಗೊತ್ತಿಲ್ಲ. ಅವನು ಹಿಂದೂನೂ ಅಲ್ಲ, ಕ್ರಿಶ್ಚಿಯನ್ನೂ ಅಲ್ಲ ಎಂದು ಏಕ ವಚನದಲ್ಲಿ ಶಾಸಕ ಯತ್ನಾಳ್ ಹೀಯಾಳಿಸಿದ್ದಾರೆ.

ಬಸನಗಗೌಡ ಪಾಟೀಲ್ ಯತ್ನಾಳ

ಬಸನಗಗೌಡ ಪಾಟೀಲ್ ಯತ್ನಾಳ

 • Share this:
  ವಿಜಯಪುರ (ಆಗಸ್ಟ್ 23); ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದ್ದು ಮಾಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (basanagouda patil yatnal) ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಯ ಕೇಂದ್ರದಲ್ಲಿದ್ದಾರೆ. ಅಫ್ಘಾನಿಸ್ತಾನವನ್ನು ಉಗ್ರ ತಾಲಿಬಾನಿ (Taliban) ಸಂಘಟನೆ ಆಕ್ರಮಿಸುತ್ತಿದ್ದಂತೆ ಅಲ್ಲಿನ ಜನರಿಗೆ ಉಪಟಳ ಹೆಚ್ಚಾಗಿದೆ. ತಾಲಿಬಾನಿಗಳು ಸಾಮಾನ್ಯ ಜನರ ಮೇಲೆ ಗುಂಡು ಹಾರಿಸುತ್ತಿರುವ ಸುದ್ದಿಗಳು ಪ್ರತಿನಿತ್ಯ ಪ್ರಸಾರವಾಗುತ್ತಲೇ ಇದೆ. ಆದರೆ, ಈ ಬಗ್ಗೆ ಕುಹಕವಾಡಿರುವ ಶಾಸಕ ಯತ್ನಾಳ್, "ತಾಲಿಬಾನಿಗಳು ಅಫ್ಘನ್ನಲ್ಲಿ (Afghanistan Crisis) ಗುಂಡು ಹಾರಿಸುತ್ತಿರುವ ಹಾಗೆ ಭಾರತದಲ್ಲಿರುವ ಹಿಂದೂ ವಿರೋಧಿ ತಾಲಿಬಾನ್​ಗಳ ಮೇಲೆ ಗುಂಡು ಹಾಕಬೇಕು. ಇವರ ಮೇಲೆ ಗುಂಡು ಹಾಕದಿದ್ದರೆ ಇವರು ದೇಶಕ್ಕೆ ಪಿಡುಗಾಗುತ್ತಾರೆ" ಎಂದು ಹೇಳುವ ಮೂಲಕ ಕೋಮು ಪ್ರಚೋದನೆ ನೀಡಲು ಮುಂದಾಗಿದ್ದಾರೆ.

  ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, “ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದೇವೆ. ಆದರೆ, ದೇಶದಲ್ಲಿ ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವವರು ತಾಲಿಬಾನ್ಗೆ ಹುಟ್ಟಿದ ಸಂತಾನ, ಲದ್ದಿ ತಿನ್ನುವ ಜನ" ಎಂದು ಕಿಡಿಕಾರಿದ್ದಾರೆ.

  ಅಲ್ಲದೆ ರಾಹುಲ್ ಗಾಂಧಿಯ ಬಗ್ಗೆಯೂ ಆಕ್ರೋಶ ಹೊರಹಾಕಿರುವ ಯತ್ನಾಳ್, "ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುವುದಿಲ್ಲ? ರಾಹುಲ್ ಗಾಂಧಿ ಯಾವ ಧರ್ಮದಲ್ಲಿ ಜನಸಿದ್ದಾರೆ ನನಗೆ ಗೊತ್ತಿಲ್ಲ. ಅವನು ಹಿಂದೂನೂ ಅಲ್ಲ, ಕ್ರಿಶ್ಚಿಯನ್ನೂ ಅಲ್ಲ" ಎಂದು ಏಕ ವಚನದಲ್ಲಿ ಹೀಯಾಳಿಸಿದ್ದಾರೆ.

  "ರಾಜ್ಯದ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏಕೆ ಮಾತನಾಡಲ್ಲ? ಮೋದಿ ಈ ದೇಶದ ಪ್ರಧಾನಿಯಾಗಿರದಿದ್ದರೆ ಇವರೆಲ್ಲರೂ ದೇಶದ ಒಳಗೆ ತಾಲಿಬಾನಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಇನ್ನೂ ತಮ್ಮನ್ನು ತಾವು ಶೂರರು ಎಂದು ಹೇಳಿಕೊಳ್ಳುವ ಪಠಾಣರು ಕಳ್ಳ ನನ್ಮಕ್ಕಳು, ಈಗ ಹೆಂಡತಿ ಮಕ್ಕಳನ್ನು ಬಿಟ್ಟು ಅಫ್ಘಾನಿಸ್ತಾನದಿಂದ ಓಡಿ ಬರ್ತಿದ್ದಾರೆ.

  ಇದನ್ನೂ ಓದಿ: Indian Army| ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ಶ್ರೇಣಿ ನೀಡಿದ ಭಾರತೀಯ ಸೇನೆ!

  ಭಾರತ ಸುರಕ್ಷಿತವಾಗಿಲ್ಲ ಹೀಗಾಗಿ ನಾವು ದೇಶ ಬಿಡುತ್ತೇವೆ ಎಂದು ಹೇಳುವ ಬಾಲಿವುಡ್ ಖಾನ್ಗಳು ಈಗ ಬೇಕಿದ್ದರೆ ಪಾಕಿಸ್ತಾನಕ್ಕೋ ಅಫ್ಘಾನಿಸ್ತಾನಕ್ಕೋ ಓಡಿ ಹೋಗಲಿ" ಎಂದು ಬಾಲಿವುಡ್ ನಟರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

  ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರುವ ನಿರಾಶ್ರಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ವೀಸಾ ಕೆಲಸಗಳನ್ನು ಸುಲಭಗೊಳಿಸಿತ್ತು. ಆದರೆ, ಇದಕ್ಕೂ ತಕಾರಾರು ಎತ್ತಿರುವ ಯತ್ನಾಳ್, "ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಇಚ್ಛಿಸುವ ಹಿಂದೂ, ಸಿಖ್, ಬುದ್ಧ ಮತ್ತು ಜೈನ ಧರ್ಮದವರಿಗೆ ನಮ್ಮ ಸ್ವಾಗತ ಇದೆ. ಆದರೆ, ಈ ಧರ್ಮಗಳನ್ನು ಬಿಟ್ಟು ಉಳಿದ ಧರ್ಮದವರಿಗೆ ದೇಶದ ಒಳಗೆ ಅನುಮತಿ ನೀಡಬಾರದು.

  ಇದನ್ನೂ ಓದಿ: Explained: ತೈಲ ಹಾಗೂ ಅನಿಲ ಕಂಪನಿಗಳು ನೈಸರ್ಗಿಕ ಶಕ್ತಿ ಮೂಲಗಳನ್ನು ಅನ್ವೇಷಿಸುತ್ತಿರುವುದಕ್ಕೆ ಕಾರಣವೇನು?

  ಆದರೂ, ಬೇರೆ ಧರ್ಮದವರು ಭಾರತ ಪ್ರವೇಶಕ್ಕೆ ಮುಂದಾದರೆ ಅವರನ್ನು ಹಿಂದೂ, ಬೌದ್ಧ, ಸಿಖ್ ಅಥವಾ ಜೈನ ಧರ್ಮಕ್ಕೆ ಮತಾಂತರ ಮಾಡಿ ನಂತರ ಅವಕಾಶ ನೀಡಬೇಕು" ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: