ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಜೆಡಿಎಸ್​ನಿಂದ ಉಚ್ಛಾಟಿಸಲಿ; ಜಿ.ಟಿ. ದೇವೇಗೌಡ

ಪಾರ್ಟಿಯಲ್ಲೆ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡಿಲ್ಲ. ನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನ ಯಾಕೇ ಟಾರ್ಗೆಟ್ ಮಾಡ್ತೀರಾ?. ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಕೂಗು ಆರಂಭವಾಗಿದ್ದು ಮೈಸೂರಿನಿಂದಲೇ ಎಂದು ಜಿಟಿ ದೇವೇಗೌಡ ತಿಳಿಸಿದ್ದಾರೆ.

ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ.

ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ.

  • Share this:
ಮೈಸೂರು (ಜನವರಿ 07); ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನ ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಿ ನಾನು ಅದನ್ನ ಸ್ವಾಗತ ಮಾಡ್ತಿನಿ. ಆದರೆ, ಉಚ್ಚಾಟನೆ ಮಾಡುವವರ ಪಟ್ಟಿಯಲ್ಲಿ ನಾನಿರುವುದಿಲ್ಲ. ಏಕೆಂದರೆ ನಾನು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್​ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್​ ಪಕ್ಷದ ಸಭೆ ಆಯೋಜಿಸಲಾಗಿದೆ. ಆದರೆ, ಈ ಸಭೆಯಲ್ಲಿ ಜಿಟಿ ದೇವೇಗೌಡ ಪಾಲ್ಗೊಂಡಿಲ್ಲ. ಇದೇ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿರುವ ಜಿ.ಟಿ. ದೇವೇಗೌಡ, "ನಾನು ಜೆಡಿಎಸ್‌ನಲ್ಲಿ ಒಂದೆ ಒಂದು ಸಣ್ಣ ತಪ್ಪನ್ನು ಮಾಡಿಲ್ಲ. ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೋ ಅವರನ್ನ ಉಚ್ಛಾಟನೆ ಮಾಡಲಿ. ನಾನೇನು ದೇವೇಗೌಡರ ವಿರುದ್ದ ಮಾತನಾಡಿದ್ದೀನಾ?. ಕುಮಾರಸ್ವಾಮಿ ವಿರುದ್ದ ಮಾತನಾಡಿದ್ದೀನಾ? ಅಥವಾ ರೇವಣ್ಣ ವಿರುದ್ದ ಮಾತನಾಡಿದ್ದೀನಾ? ಅದ್ಯಾವ ಪಕ್ಷ ವಿರೋಧಿ ಕೆಲಸ ಮಾಡಿದ್ದೀನಿ ತೋರಿಸಲಿ. ಕಳೆದ ಚುನಾವಣೆಯಲ್ಲಿ ನನ್ನ ಮಗನಿಗೆ ಹುಣಸೂರು ಟಿಕೆಟ್ ಕೊಡಲಿಲ್ಲ.

ಇದನ್ನೂ ಓದಿ: ಟ್ರಂಪ್ ಕೈಯಲ್ಲಿದೆ ನ್ಯೂಕ್ಲಿಯಾರ್ ಬಟನ್, ಏನ್ ಮಾಡ್ತೀರಿ? ಇಂಟರ್ನೆಟ್​ನಲ್ಲಿ ಹೀಗೊಂದು ಕೂಗು

ಆದರೂ, ನಾವು ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಿ ಗೆಲ್ಲಿಸಿದ್ದೆವು. ಯಾರಿಗೋ ಅನುಕೂಲ‌ ಮಾಡಿಕೊಡಲು ಜೆಡಿಎಸ್‌ನಿಂದ ವೀಕ್ ಕ್ಯಾಂಡಿಡೆಟ್ ಹಾಕಿಸಿಲ್ಲ. ಪಾರ್ಟಿಯಲ್ಲೆ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡಿಲ್ಲ. ನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನ ಯಾಕೇ ಟಾರ್ಗೆಟ್ ಮಾಡ್ತೀರಾ?. ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಕೂಗು ಆರಂಭವಾಗಿದ್ದು ಮೈಸೂರಿನಿಂದಲೇ.

1994ರಲ್ಲಿ ದೇವೇಗೌಡರ ರಾಜಕೀಯ ಬದಲಾವಣೆ ಆಗಿದ್ದು ಮೈಸೂರಿನಿಂದಲೇ.
ಎರಡನೆ ಬಾರಿ ಕುಮಾರಸ್ವಾಮಿ ಸಿಎಂ ಆಗಬೇಕೆಂದು ಹೇಳಿದ್ದು ಸಹ ಮೈಸೂರಿನಿಂದಲೇ.
ಹಾಗಾಗಿ ಅವರಿಗೆ ಎಲ್ಲ ಕೆಲಸ ಮೈಸೂರಿನಿಂದ ಆರಂಭವಾದ್ರೆ ಶುಭ ಅಂತ ಅನ್ನಿಸಿದೆ. ಮೈಸೂರಿನಿಂದಲೇ ಪಕ್ಷ ಶುದ್ದಿ ಮಾಡುವ ಚಿಂತನೆ ಮಾಡಿರಬಹುದು. ಇಲ್ಲಿಂದ ಆರಂಭಿಸಿದ್ರೆ ಪಕ್ಷ ಸಂಘಟನೆಯ ಆಗುವ ಉದ್ದೇಶದಿಂದ ಮಾತನಾಡಿರಬಹುದು.
ನಾಯಕರ ನಿರ್ಧಾರವನ್ನ ನಾನು ಸ್ವಾಗತ ಮಾಡ್ತಿನಿ" ಎಂದು ತಿಳಿಸಿದ್ದಾರೆ.
Published by:MAshok Kumar
First published: