• Home
  • »
  • News
  • »
  • district
  • »
  • Corona Virus: ಜಿಂದಾಲ್​ನವರು ಆಕ್ಸಿಜನ್ ಹೊರರಾಜ್ಯಕ್ಕೆ ಕೊಡುವ ಬದಲು ಇಲ್ಲೇ ಕೊಡಲಿ, ಕೇಂದ್ರ ಸರ್ಕಾರಕ್ಕೆ ಶೆಟ್ಟರ್ ಮನವಿ

Corona Virus: ಜಿಂದಾಲ್​ನವರು ಆಕ್ಸಿಜನ್ ಹೊರರಾಜ್ಯಕ್ಕೆ ಕೊಡುವ ಬದಲು ಇಲ್ಲೇ ಕೊಡಲಿ, ಕೇಂದ್ರ ಸರ್ಕಾರಕ್ಕೆ ಶೆಟ್ಟರ್ ಮನವಿ

ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

ರಾಜ್ಯದಲ್ಲಿ ನಾನು ಓಡಾಡುತ್ತಿದ್ದೇನೆ, ಈ ಕುರಿತು ನಿನ್ನೆ ಕೇಂದ್ರ ಸಚಿವರಾದ ಪಿಯೂಶ್ ಗೊಯಲ್ , ಪ್ರಹ್ಲಾದ ಜೋಶಿ ಜೊತೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ನೀಡಬೇಕು ಎಂದು ಒತ್ತಾಯ ಮಾಡಿ, ಜಿಂದಾಲ್ ನವರು ಹೊರ ರಾಜ್ಯಕ್ಕೆ ಆಕ್ಸಿಜನ್ ಕಳಿಸುವ ಬದಲು ಇಲ್ಲೆ ಕೊಡಬೇಕು ಎಂದು ಚರ್ಚಿಸಿದ್ದೇವೆ ಎಂದು ಚಿತ್ರದುರ್ಗದಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ: ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಕೊರೋನಾ ಪ್ರಕರಣಗಳು ಬಂದಿರುವುದ್ದರಿಂದ ಬೆಡ್ಗಳು, ಆಕ್ಸಿಜನ್ ಕೊರತೆ ಆಗಿದೆ. ರಾಜ್ಯದ ಮುಖ್ಯಮಂತ್ರಿಗಳು ಹೆಚ್ಚಿನ ಜವಬ್ದಾರಿ ನೀಡಿದ್ದಾರೆ, ಹಾಗಾಗಿ ರಾಜ್ಯದಲ್ಲಿ ನಾನು ಓಡಾಡುತ್ತಿದ್ದೇನೆ, ಈ ಕುರಿತು ನಿನ್ನೆ ಕೇಂದ್ರ ಸಚಿವರಾದ ಪಿಯೂಶ್ ಗೊಯಲ್ , ಪ್ರಹ್ಲಾದ ಜೋಶಿ ಜೊತೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ನೀಡಬೇಕು ಎಂದು ಒತ್ತಾಯ ಮಾಡಿ, ಜಿಂದಾಲ್ ನವರು ಹೊರ ರಾಜ್ಯಕ್ಕೆ ಆಕ್ಸಿಜನ್ ಕಳಿಸುವ ಬದಲು ಇಲ್ಲೆ ಕೊಡಬೇಕು ಎಂದು ಚರ್ಚಿಸಿದ್ದೇವೆ ಎಂದು ಚಿತ್ರದುರ್ಗದಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.


ಇಂದು ಚಿತ್ರದುರ್ಗ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದ ಜಗದೀಶ್ ಶೆಟ್ಟರ್ ಜಿಲ್ಲೆಯ ಕೊರೋನಾ ನಿಯಂತ್ರಣ ಆಕ್ಸಿಜನ್ ಸಪ್ಲೆ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿ, DHO ಬಳಿ ಚರ್ಚಿಸಿ, ಬಳಿಕ ಮಾದ್ಯಮಗಳ ಜೊತೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನನಗೆ  ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿ ನಾನು ಓಡಾಟ ಮಾಡುತ್ತಿದ್ದೇನೆ. ನಿನ್ನೆ ಕೇಂದ್ರ ಸಚಿವರಾದ ಪಿಯೂಶ್ ಗೊಯಲ್ , ಪ್ರಹ್ಲಾದ ಜೋಶಿ ಜೊತೆ ಚರ್ಚಿಸಿದ್ದೇನೆ. ನಮ್ಮ ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ನೀಡಬೇಕು ಎಂದು ಒತ್ತಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿhttps://kannada.news18.com/news/coronavirus-latest-news/oxygen-shortage-everywhere-what-is-the-severity-of-corona-for-a-patient-to-be-icu-or-o2-dependent-sktv-559607.html


ಅಷ್ಟೆ ಅಲ್ಲದೇ ಜಿಂದಾಲ್ ನವರು ಹೊರ ರಾಜ್ಯಕ್ಕೆ ಆಕ್ಸಿಜನ್ ಕಳಿಸುವ ಬದಲು ಇಲ್ಲೆ ಕೊಡಬೇಕು ಎಂದು ಚರ್ಚಿಸಿದ್ದೇನೆ. ಇನ್ನೂ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಕೊರೋನಾ  ಕೇಸ್ ಬಂದಿದ್ದರಿಂದ ಈ ರೀತಿ ಕೊರತೆಯಾಗಿದೆ, ಭದ್ರಾವತಿಯ ಬಲ್ಡೋಟಾ ಆಕ್ಸಿಜನ್ ಯುನಿಟ್ ಪುನಃ ಪ್ರಾರಂಭಿಸಲು ಭದ್ರಾವತಿಗೆ ಭೇಟಿ ಮಾಡುತ್ತಿದ್ದೇನೆ, ಚಿತ್ರದುರ್ಗಕ್ಕೆ ಹೆಚ್ಚಿನ ಆಕ್ಸಿಜನ್ ಕುರಿತು ಡಿಸಿ ಹೇಳಿದ್ದಾರೆ. ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿ, ಜಿಲ್ಲೆಗೆ ತೊಂದರೆ ಆಗದ ರೀತಿಯಲ್ಲಿ ಮಾಡುತ್ತೇನೆ ಎಂದಿದ್ದಾರೆ. ಅಲ್ಲದೇ  ಜಿಲ್ಲಾ ಆಸ್ಪತ್ರೆ ಸೇರಿ ಯಾವುದೇ ಕಡೆ ಯಾರಿಗೂ ತೊಂದರೆ ಆಗಬಾರದು ಎಂದು ಡಿಸಿಗೆ ಸೂಚನೆ ನೀಡಿದ್ದೇನೆ ಎಂದರು.


ಇನ್ನು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಕುರಿತು ಶೆಟ್ಟರ್ ಪ್ರತಿಕ್ರಿಯೆ ನೀಡಿ ಸರ್ಕಾರ ಎಲ್ಲವನ್ನೂ ಮಾಡಲು ಆಗಲ್ಲ, ಸಾರ್ವಜನಿಕರು ಸೆಲ್ಪ್ ಕಂಟ್ರೋಲ್ ಬರ್ಬೇಕು, ಕಡ್ಡಾಯ ಮಾಸ್ಕ್, ದೈಹಿಕ ಅಂತರದ ಕುರಿತು ಜಾಗೃತಿ ಬರಬೇಕು. 12ರ ನಂತರ ಲಾಕ್ ಡೌನ್ ಕುರಿತು  ಚರ್ಚೆ  ಇನ್ನೂ ಆರು ದಿನ ಬಾಕಿ ಇದೆ, ಕೇಂದ್ರ ಸರ್ಕಾರವೂ ಕೂಡಾ ಆಕ್ಸಿಜನ್ ಕುರಿತು ನಿರ್ಧಾರ ಮಾಡುತ್ತದೆ. ಅಲ್ಲದೇ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆದಷ್ಟು ಬೇಗನೆ ಸರಿ ಆಗುತ್ತದೆ, ವೆಂಟಿಲೇಟರ್ ಅವಶ್ಯಕತೆ ವೈದ್ಯರು, ಜಿಲ್ಲಾಡಳಿತ ನಿರ್ಧಾರ ಮಾಡಬೇಕು. ಆಕ್ಸಿಜನ್, ರೆಮಿಡಿಸಿವಿಯರ್ ಕೊರತೆ ಆಗದಂತೆ ಎಲ್ಲವನ್ನು ಮಾಡುತ್ತಿದ್ದೇವೆ, ಎಲ್ಲವೂ ಸರಿ ಹೋಗುತ್ತದೆ ನನಗೆ ನಂಬಿಕೆ ಇದೆ  ಎಂದು ಹೇಳಿದ್ದಾರೆ.

Published by:Soumya KN
First published: