HOME » NEWS » District » LET INDRAJIT LANKESH INFORM THE DRUGS MAFIA WE ARE RESPONSIBLE FOR THEIR PROTECTION SAYS CT RAVI MAK

ಡ್ರಗ್ಸ್‌ ಮಾಫಿಯಾ ಬಗ್ಗೆ ಇಂದ್ರಜಿತ್‌ ಲಂಕೇಶ್ ಮಾಹಿತಿ ನೀಡಲಿ, ಅವರ ರಕ್ಷಣೆಯ ಹೊಣೆ ನಮ್ಮದು; ಸಿ.ಟಿ. ರವಿ

ಇಂದ್ರಜಿತ್ ಲಂಕೇಶ್‌ ಅವರ ಸಹಕಾರ ನಮಗೆ ಅಗತ್ಯವಿದೆ. ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಅವರಿಗೆ ಪೊಲೀಸ್‌ ಇಲಾಖೆ ರಕ್ಷಣೆಯ ವ್ಯವಸ್ಥೆಯನ್ನು ಮಾಡುತ್ತದೆ. ಹೀಗಾಗಿ ಅವರು ತನಿಖೆಗೆ ಸಹಕರಿಸಬೇಕು. ಈ ಜಾಲವನ್ನ ಬಗ್ಗು ಬಡಿಯಲು, ಮತ್ತಷ್ಟು ಜನ ಬಲಿಯಾಗದಿರಲು ಅವರ ಸಹಕಾರದ ಬೇಕು ಎಂದು ಸಚಿವ ಸಿ.ಟಿ. ರವಿ ಮನವಿ ಮಾಡಿದ್ದಾರೆ.

news18-kannada
Updated:August 29, 2020, 3:25 PM IST
ಡ್ರಗ್ಸ್‌ ಮಾಫಿಯಾ ಬಗ್ಗೆ ಇಂದ್ರಜಿತ್‌ ಲಂಕೇಶ್ ಮಾಹಿತಿ ನೀಡಲಿ, ಅವರ ರಕ್ಷಣೆಯ ಹೊಣೆ ನಮ್ಮದು; ಸಿ.ಟಿ. ರವಿ
ಸಚಿವ ಸಿ.ಟಿ. ರವಿ
  • Share this:
ಚಿಕ್ಕಮಗಳೂರು: ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ತನ್ನ ಕಬಂಧಬಾಹುಗಳನ್ನು ಚಾಚಿದೆ. ಇನ್ನೂ ಸ್ಯಾಂಡಲ್‌ವುಡ್‌ ಮತ್ತು ಡ್ರಗ್‌ ಮಾಫಿಯಾ ನಡುವಿನ ಸಂಬಂಧವೂ ಬೆಳಕಿಗೆ ಬಂದಿದ್ದು ಇದು ನಿಜಕ್ಕೂ ಆಘಾತಕಾರಿ ವಿಚಾರ. ಹೀಗಾಗಿ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಈ ಡ್ರಗ್‌ ಮಾಫಿಯಾ ಬಗ್ಗೆ ತಮಗೆ ಗೊತ್ತಿರುವ ಮಾಹಿತಿ ನೀಡಲಿ, ಅವರ ರಕ್ಷಣೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿರುವ ಸಚಿವ ಸಿ.ಟಿ. ರವಿ, "ಈ ಡ್ರಗ್ ಮಾಫಿಯಾ ಎಂಬುದು ವ್ಯವಸ್ಥಿತವಾದ ರಾಜ್ಯ, ಅಂತರಾಷ್ಟ್ರೀಯ ಜಾಲ. ಬಹಳ ದಿನಗಳಿಂದ ದಂಧೆಯ ಸೈಡ್ ಆಕ್ಟರ್ ಸಿಗ್ತಿದ್ರು. ಆದರೆ, ಇದೀಗ ಮೇನ್ ಆಕ್ಟ್ರು ಸಿಗ್ತಾರಾ ನೋಡ್ಬೇಕು. ಇದರ ತನಿಖೆಯನ್ನ ಗಂಭೀರವಾಗಿ ನಡೆಸಲಾಗುತ್ತಿದೆ. ಈ ಡ್ರಗ್ಸ್‌ ರಾಕೆಟ್ ನಲ್ಲಿ ಯಾರಿದ್ದಾರೆ? ವ್ಯಾಪಾರ ಯಾರದ್ದು? ಎಂಬುದು ತನಿಖೆಯ ಬಳಿಕ ತಿಳಿಲಿದೆ.

ಆದರೆ, ಈ ತನಿಖೆಗೆ ಇಂದ್ರಜಿತ್ ಲಂಕೇಶ್‌ ಅವರ ಸಹಕಾರ ನಮಗೆ ಅಗತ್ಯವಿದೆ. ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಅವರಿಗೆ ಪೊಲೀಸ್‌ ಇಲಾಖೆ ರಕ್ಷಣೆಯ ವ್ಯವಸ್ಥೆಯನ್ನು ಮಾಡುತ್ತದೆ. ಹೀಗಾಗಿ ಅವರು ತನಿಖೆಗೆ ಸಹಕರಿಸಬೇಕು. ಈ ಜಾಲವನ್ನ ಬಗ್ಗು ಬಡಿಯಲು, ಮತ್ತಷ್ಟು ಜನ ಬಲಿಯಾಗದಿರಲು ಅವರ ಸಹಕಾರದ ಬೇಕು" ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಎನ್​ಸಿಬಿ ಅಧಿಕಾರಿಗಳು ಗುರುವಾರ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ವಿಚಾರಣ ವೇಳೆ ಅನೇಕ ಅಚ್ಚರಿಯ ಮಾಹಿತಿಗಳು ಹೊರಬೀಳುತ್ತಿವೆ. ಇವರು ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರಿಗೂ ಡ್ರಗ್ ಪೂರೈಸುತ್ತಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಮರದ, ರಟ್ಟಿನ ಬಾಕ್ಸ್​ಗಳಲ್ಲಿ ಮಕ್ಕಳ ಆಟಿಕೆ ವಸ್ತುಗಳಲ್ಲಿ ಡ್ರಗ್ಸ್ ಪಾರ್ಸೆಲ್ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ : ಪೊಲೀಸ್ ರಕ್ಷಣೆ ನೀಡಿದರೆ ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ ಹೆಸರು ಬಹಿರಂಗ ಪಡಿಸುತ್ತೇನೆ; ಇಂದ್ರಜಿತ್‌ ಲಂಕೇಶ್‌

ಜರ್ಮನಿ, ಬೆಲ್ಜಿಯಂ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್​ ಪಾರ್ಸಲ್ ಆಗುತ್ತಿತ್ತು. ಮಕ್ಕಳ ಗೊಂಬೆಗಳ ಗಿಫ್ಟ್ ಬಾಕ್ಸ್ ಗ್ರಾಹಕರಿಗೆ ನೇರವಾಗಿ ರವಾನೆ ಮಾಡಲಾಗುತ್ತಿತ್ತು. ಡಾರ್ಕ್ ವೆಬ್​ನ ಮೂಲಕ ಬುಕ್ ಮಾಡಿ ಬಿಟ್ ಕಾಯಿನ್ ಮೂಲಕ ಹಣ ಸಂದಾಯ ಮಾಡಲಾಗುತ್ತಿತ್ತು. ದೊಡ್ಡ ಗುಬ್ಬಿಯ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿದ್ದ ಅನಿಕಾ ಎಂಬಾಕೆ ಕೆ. ರೆಹಮಾನ್ ಎಂಬ ವ್ಯಕ್ತಿಯ ಹೆಸರಲ್ಲಿ ಬುಕ್ಕಿಂಗ್ ಮಾಡುತ್ತಿದ್ದಳು. ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಅಂಚೆ ಕಚೇರಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ರೆಹಮಾನ್ ಪಡೆದುಕೊಂಡು, ಅದನ್ನು ಅನಿಕಾ, ಅನೂಪ್ ಹಾಗೂ ರಾಜೇಶ್​ಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
Youtube Video
ಇದರ ಬೆನ್ನಿಗೆ ಸ್ಪೋಟಕ ಮಾಹಿತಿ ಹೊರಹಾಕಿದ್ದ ನಟ-ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, "ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಮಾಫಿಯಾ ತನ್ನ ಕಬಂಧಬಾಹುಗಳನ್ನು ಚಾಚಿರುವುದು ನಿಜ. ಈ ಡ್ರಗ್‌ಗೆ ಅನೇಕ ನಟ-ನಟಿಯರು ಅಡಿಕ್ಟ್‌ ಆಗುತ್ತಿದ್ದಾರೆ. ಕೊಕೇನ್ ವರೆಗೂ ನಮ್ಮ ಇಂಡಸ್ಟ್ರಿ ಬೆಳೆದಿದೆ. ಆದರೆ, ಪೊಲೀಸರು ನನಗೆ ಸೂಕ್ತ ರಕ್ಷಣೆ ನೀಡಿದರೆ ನಾನು ಇದನ್ನು ಬಳಸುವವರ ಹೆಸರನ್ನು ಬಹಿರಂಗಪಡಿಸುತ್ತೇನೆ" ಎಂದು ತಿಳಿಸಿದ್ದರು.
Published by: MAshok Kumar
First published: August 29, 2020, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories