ರಾಮನಗರ(ಜೂ.10): ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿರುವ ಘಟನೆ ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸಮಯದಲ್ಲಿ ನಡೆದಿದೆ.
ಸುಮಾರು ಆರು ತಿಂಗಳು ವಯಸ್ಸಿನ ಹೆಣ್ಣು ಚಿರತೆ ಬೋನಿನಲ್ಲಿ ಬಂದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಿರತೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಗ್ರಾಮದ ಪಕ್ಕದ ಕಲ್ಲುಬಂಡೆ ಮೇಲೆ ಹಾಗೇ ರಾತ್ರಿ ಸಮಯದಲ್ಲಿ, ಹಗಲಿನಲ್ಲೂ ಚಿರತೆ ಕಾಣಿಸಿಕೊಂಡು ಗಾಬರಿ ಉಂಟು ಮಾಡಿತ್ತು. ಗ್ರಾಮದ ಜನರು ಬೋನು ಇಟ್ಟು ಚಿರತೆ ಸೆರೆಹಿಡಿಯಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಕಳೆದ ಎರಡು ದಿನಗಳ ಹಿಂದಷ್ಟೇ ಬೋನು ಇಡಲಾಗಿತ್ತು. ಈ ಪರಿಣಾಮ ಇಂದು ಚಿರತೆ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಕಾಡಿಗೆ ಬಿಡಲು ಚಿರತೆ ಇದ್ದ ಬೋನನ್ನು ಸಾಗಿಸಿದ್ದಾರೆ.
ಇದನ್ನೂ ಓದಿ : ಕೊರೋನಾ ಎಫೆಕ್ಟ್: ಮಾಂಸ ಪ್ರಿಯರಿಗೆ ಶಾಂಕಿಗ್ ಸುದ್ದಿ, ಮೀನಿನ ಬೆಲೆ ಭಾರೀ ದುಬಾರಿ
ಕಾರ್ಯಾಚರಣೆಯಲ್ಲಿ ಚನ್ನಪಟ್ಟಣ ಅರಣ್ಯ ವಿಭಾಗದ ವಲಯಾರಣ್ಯಾಧಿಕಾರಿ ಮಹಮದ್ ಮುನ್ಸೂರ್, ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್, ಅರಣ್ಯ ರಕ್ಷಕ ದಿಲೀಪ್ ಮುಂತಾದವರು ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ