ಶೌರ್ಯ ಎಂಬ ಹೆಸರಿನ ಹುಲಿಯನ್ನು ದತ್ತು ಪಡೆದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಮೊಸಳೆ ಸೇರಿದಂತೆ 380ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳು ಇವೆ. ವರ್ಷಕ್ಕೆ ನಿರ್ವಹಣಗೆ 5.80 ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಸದ್ಯ ಜೂನ್ 5ರಿಂದ ಇಲ್ಲಿಯ ವರೆಗೆ ಮೃಗಾಯಲಕ್ಕೆ 3.50 ಲಕ್ಷ ರೂಪಾಯಿ ನೆರವು ಹರಿದು ಬಂದಿದೆ.

ಹಲಿಯನ್ನು ದತ್ತು ಪಡೆದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್.

ಹಲಿಯನ್ನು ದತ್ತು ಪಡೆದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್.

  • Share this:
ಬೆಳಗಾವಿ (ಜೂನ್.14)- ದೇಶದಲ್ಲಿ ಕಳೆದ ವರ್ಷಗಳಿಂದ ಕೊರೊನಾ ಸೋಂಕಿನ ಹಾವಳಿಯಿಂದ ಲಾಕ್ ಡೌನ್ ಘೋಷಣೆಯಾಗಿದೆ. ಜತೆಗೆ ಅನೇಕ ನಿರ್ಭಂದಗಳು ಅನ್ವಯವಾಗಿದ್ದು, ಜನ ಮೃಗಾಲಯಕ್ಕೆ ಭೇಟಿ ನೀಡುವುದು ಕಡಿಮೆಯಾಗಿದೆ. ಇದರಿಂದ ಪ್ರಾಣಿ, ಪಕ್ಷಗಳಿಗೆ ಆಹಾರ ನೀಡುವುದು ಸಹ ಸಮಸ್ಯೆಯಾಗಿತ್ತು. ಖ್ಯಾತ ನಟ ದರ್ಶನ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಕರೆ ನೀಡಿದ್ದರು. ಇದರಿಂದ ಇದೀಗ ಮೃಗಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೆರವು ಹರಿದು ಬರುತ್ತಿದೆ. ಅದೇ ರೀತಿಯಲ್ಲಿ ಇಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯ ರಾಣಿ ಚನ್ನಮ್ಮ ಕಿರು ಮೃಗಾಲಯದ ಒಂದು ಹುಲಿಯನ್ನು ಜೀವತಾವಧಿಯ ವರೆಗೆ ದತ್ತು ಪಡೆದಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಪುತ್ರ ಹರ್ಷನ ಹುಟ್ಟು ಹಬ್ಬವನ್ನು ಕುಟುಂಬ ವಿಭಿನ್ನವಾಗಿ ಆಚರಣೆ ಮಾಡಿದೆ. ಕುಟುಂಬ ಸಮೇತರಾಗಿ ಭೂತರಾಮನಹಟ್ಟಿ ಗ್ರಾಮದ ಬಳಿ ಇರೋ ಮೃಗಾಲಯಕ್ಕೆ ಭೇಟಿ ನೀಡಿದರು. ಜತೆಗೆ ಮೃಗಾಯದಲ್ಲಿ ಇರೋ ಶೌರ್ಯ ಹೆಸರಿನ ಹುಲಿಯನ್ನು ಜೀವತಾವಧಿಯ ವರೆಗೆ ದತ್ತು ಪಡೆದುಕೊಳ್ಳಲಾಗಿದೆ. ಸದ್ಯ ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಹೆಬ್ಬಾಳ್ಕರ್ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಾಣಿ ಸಂಗ್ರಹಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ಸಂಗ್ರಹಾಲಯಕ್ಕೆ ಬರುತ್ತಿದ್ದ ಆದಾಯ ನಿಂತು ಹೋಗಿದ್ದು, ಪ್ರಾಣಿ, ಪಕ್ಷಿಗಳಿಗೆ ಆಹಾರ ಹಾಗೂ ಸಿಬ್ಬಂದ ವೇತನ, ನಿರ್ವಹಣೆ ಸಹ ಕಷ್ಟವಾಗಿತ್ತು. ಕಳೆದ ಒಂದು ವರ್ಷದಿಂದ ಆ್ಯಪ್ ಮೂಲಕ ದೇಣಿಗೆ ಸಂಗ್ರಹಿಸುವ ಪ್ರಯತ್ನ ಮಾಡಿದ್ರು ಅದು ಅಷ್ಟೊಂದು ಸಫಲವಾಗಿರಲಿಲ್ಲ. ನಟ ದರ್ಶನ ಕರೆ ಹಿನ್ನೆಲೆಯಲ್ಲಿ ಸಾಕಷ್ಟು ಜನ ಮುಂದೆ ಬಂದು ಮೃಗಾಯಗಳಿಗೆ ಹಣದ ದೇಣಿಗೆ ನೀಡುತ್ತಿದ್ದಾರೆ.

ಇದನ್ನೂ ಓದಿ: CoronaVirus| ತೀವ್ರವಾದ ಕೋವಿಡ್ 19 ಸೋಂಕು ನಿಮಗೆ ಬಲವಾದ ರೋಗ ನಿರೋಧಕ ಶಕ್ತಿ ನೀಡುವುದೇ? 

ಬೆಳಗಾವಿ ರಾಣಿ ಚನ್ನಮ್ಮ ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಮೊಸಳೆ ಸೇರಿದಂತೆ 380ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳು ಇವೆ. ವರ್ಷಕ್ಕೆ ನಿರ್ವಹಣಗೆ 5.80 ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಸದ್ಯ ಜೂನ್ 5ರಿಂದ ಇಲ್ಲಿಯ ವರೆಗೆ ಮೃಗಾಯಲಕ್ಕೆ 3.50 ಲಕ್ಷ ರೂಪಾಯಿ ನೆರವು ಹರಿದು ಬಂದಿದೆ. ಇನ್ನೂ ಅನೇಕರು ನೆರವು ನೀಡುತ್ತೇವೆ, ಪ್ರಾಣಿಗಳನ್ನು ದತ್ತು ಪಡೆಯುತ್ತೇವೆ ಎಂದು ಮುಂದೆ ಸಹ ಬಂದಿದ್ದಾರೆ ಎಂದು ಆರ್ ಎಫ್ ಓ ರಾಕೇಶ ಮಾಹಿತಿ ನೀಡಿದ್ದಾರೆ.

ಹುಲಿಯನ್ನು ಜೀವತಾವಧಿಯ ವರೆಗೆ ದತ್ತು ಪಡೆದು ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಹುಲಿಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡಿದ್ದೇನೆ. ಇದರ ಜೀವಿತಾವಧಿಯವರೆಗೆ ಆರೈಕೆಯ ಜವಾಬ್ದಾರಿ ನನ್ನ ಮೇಲಿದೆ. ಲಾಕ್ ಡೌನ್ ನಿಂದ ಪ್ರಾಣಿ ಸಂಗ್ರಹಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ: Mob Lynching| ರಾಜಸ್ಥಾನ; ಹಸುವಿನ ಕಳ್ಳಸಾಗಾಣೆ ಅನುಮಾನ, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ!

ಇದರಿಂದ ಸಂಗ್ರಹಾಲಯಕ್ಕೆ ಬರುತ್ತಿದ್ದ ಆದಾಯ ನಿಂತು ಹೊಗಿದೆ. ಈ ಹಿನ್ನೆಲೆಯಲ್ಲಿ ಶೌರ್ಯ ಎಂಬ ಹೆಸರಿನ ಹುಲಿಯನ್ನು ನಾನು ದತ್ತು ಪಡೆದಿದ್ದೇನೆ. ಸಾರ್ವಜನಿಕರು ದತ್ತು ಪಡೆಯುವ ಮೂಲಕ ಮೂಖ ಪ್ರಾಣಿಗಳಿಗೆ ನೆರವಾಗಬೇಕು ಎಂದು ಕರೆ ನೀಡಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: