ಕೋವಿಡ್ ಸಭೆಯಲ್ಲಿ ಜನಪ್ರತಿನಿಧಿಗಳ ಜಟಾಪಟಿ; ಮಂಡ್ಯದಲ್ಲಿ ಅಧಿಕಾರಿಗಳ ಎದುರೇ ಏಕವಚನದಲ್ಲಿ ಮಾತಿನ‌ ಚಕಮಕಿ

ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಆತಂಕವಿದ್ದರೂ  ಜಿಲ್ಲೆಯಲ್ಲಿ ರಾಜಕೀಯ ಜಟಾಪಟಿಗೇನು ಕಡಿಮೆ ಇಲ್ಲ.‌ ಜಿಲ್ಲೆಯಲ್ಲಿ ಕೋವಿಡ್ ವಿಚಾರದಲ್ಲಿ ಯಾವುದೇ ವಿಚಾರ ಮಾಹಿತಿ ನೀಡದೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲೆಯ ಜೆಡಿಎಸ್ ಶಾಸಕರು ಡಿಸಿ ಮತ್ತು ಜಿಲ್ಲಾ   ಉಸ್ತುವಾರಿ ಸಚಿವ ರ ವಿರುದ್ದ ಗರಂ ಆಗಿದ್ದಾರೆ.

news18-kannada
Updated:May 27, 2020, 8:37 PM IST
ಕೋವಿಡ್ ಸಭೆಯಲ್ಲಿ ಜನಪ್ರತಿನಿಧಿಗಳ ಜಟಾಪಟಿ; ಮಂಡ್ಯದಲ್ಲಿ ಅಧಿಕಾರಿಗಳ ಎದುರೇ ಏಕವಚನದಲ್ಲಿ ಮಾತಿನ‌ ಚಕಮಕಿ
ಮಂಡ್ಯದ ಜಿಲ್ಲಾಡಳಿತದಲ್ಲಿ ನಡೆದ ಸಭೆ.
  • Share this:
ಮಂಡ್ಯ (ಮೇ 27): ಸಕ್ಕರೆನಾಡು ಮಂಡ್ಯದಲ್ಲಿ ಕೊರೋನಾ ಆತಂಕದ ನಡುವೆ ರಾಜಕೀಯದ ಕಾವು ಜೋರಾಗಿದೆ. ಕೋವಿಡ್‌ ವಿಚಾರದಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರನ್ನು‌ ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ‌ ಪರಿಗಣಿಸುತ್ತಿಲ್ಲ ಎಂದು ಜಿಲ್ಲೆಯ ಜೆಡಿಎಸ್ ಶಾಸಕರು ಗರಂ ಆಗಿದ್ದಾರೆ.

ಜೆಡಿಎಸ್ ಶಾಸಕನ್ನು ಕಡೆಗಣಿಸುತ್ತಿರುವ ಕಾರಣಕ್ಕೆ ಇಂದು ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್‌ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಆತಂಕವಿದ್ದರೂ  ಜಿಲ್ಲೆಯಲ್ಲಿ ರಾಜಕೀಯ ಜಟಾಪಟಿಗೇನು ಕಡಿಮೆ ಇಲ್ಲ.‌ ಜಿಲ್ಲೆಯಲ್ಲಿ ಕೋವಿಡ್ ವಿಚಾರದಲ್ಲಿ ಯಾವುದೇ ವಿಚಾರ ಮಾಹಿತಿ ನೀಡದೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲೆಯ ಜೆಡಿಎಸ್ ಶಾಸಕರು ಡಿಸಿ ಮತ್ತು ಜಿಲ್ಲಾ   ಉಸ್ತುವಾರಿ ಸಚಿವ ರ ವಿರುದ್ದ ಗರಂ ಆಗಿದ್ದಾರೆ.

ಮೊನ್ನೆಯಷ್ಟೆ ಇನ್ನೇರಡು ದಿನಗಳಲ್ಲಿ ಡಿಸಿ ಸಭೆ ಕರೆದು ನಮ್ಮನ್ನು  ಸರಿಯಾಗಿ ಪರಿಗಣಿಸದಿದ್ದರೆ ಮುಂದಿನ ಹೋರಾಟಕ್ಕೆ ಜಿಲ್ಲಾಡತವೇ ಕಾರಣವಾಗುತ್ತೆ ಎಂದು ಜಿಲ್ಲೆಯ  ದಳಪತಿಗಳು ಎಚ್ಚರಿಸಿದ್ದರು. ಪರಿಣಾಮ ಎಚ್ಚೆತ್ತ ಜಿಲ್ಲಾಧಿಕಾರಿ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದರು. ಹೀಗಾಗಿ ಇಂದು ಡಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ನೇತೃತ್ವದಲ್ಲಿ ಕೋವಿಡ್‌ ಕುರಿತ ಸಭೆ ಆಯೋಜಿಸಿದ್ದರು.

ಮಧ್ಯಾಹ್ನ 3 ಗಂಟೆಗೆ ಸಭೆ ನಿಗಧಿಯಾಗಿತ್ತು. ಆದರೆ, ಜಿಲ್ಲಾಡಳಿತದ ಮೇಲೆ ಗರಂ ಆಗಿದ್ದ ಜೆಡಿಎಸ್ ನ ಶಾಸಕರಲ್ಲಿ ಮಂಡ್ಯ ಶಾಸಕ ಎಂ. ಶ್ರೀನಿವಾಸ್ ಹೊರತು ಪಡಿಸಿ ಸಭೆಗೆ ಉಳಿದರು ಗೈರಾಗುವ ಮೂಲಕ ತಾವೇ ಒತ್ತಾಯ ಮಾಡಿ ಕರೆಸಿದ್ದ ಸಭೆಗೆ ಗೈರಾಗಿ ತಮ್ಮ ಅಸಮಾಧಾನ ಹೊರ ಹಾಕಿದರು. ಬಳಿಕ ಎಸಿ ಸೂರಜ್  ರ ಸಂಧಾನದ ಮೂಲಕ ಕೋವಿಡ್ ಸಭೆಗೆ ಬಂದ ಜೆಡಿಎಸ್ ಶಾಸಕರು ಸಭೆಯಲ್ಲಿ ಅಧಿಕಾರಿಗಳ ಮುಂದೆಯೇ ಸಚಿವರ ಮತ್ತು ಡಿಸಿಯನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಜಿಲ್ಲಾಡಳಿತ ವನ್ನು ಸಮರ್ಥಿಸಿಕೊಂಡ ಸಚಿವ ನಾರಾಯಣಗೌಡ ಕೂಡ ಜೆಡಿಎಸ್ ಶಾಸಕರೊಂದಿಗೆ ಮಾತಿನ‌ ಚಕಮಕಿಗೆ ಇಳಿದರು. ಈ ವೇಳೆ ಅಧಿಕಾರಿಗಳ ಮುಂದೆಯೇ ಏಕವಚನದಲ್ಲಿ ಪರಸ್ಪರ ಬೈದಾಡಿಕೊಂಡ ಜನಪ್ರತಿನಿಧಿಗಳು  ಕೊರೊನಾ ವಿಚಾರದಲ್ಲಿ‌ ರಾಜಕೀಯ ಮಾಡಲು ಮುಂದಾದರು. ಕಡೆಗೆ ಅಧಿಕಾರಿಗಳ ಸಂಧಾನದ ಮೂಲಕ  ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಬೇಕಾಯಿತು.

ಒಟ್ಟಾರೆ ಸಕ್ಕರೆನಾಡು ಮಂಡ್ಯದಲ್ಲಿ ಕೊರೊನಾ ಆತಂಕದ ಸಂಧರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು  ಒಟ್ಟಾಗಿ ಪರಿಸ್ಥಿತಿ ಎದುರಿಸುವುದನ್ನು ಬಿಟ್ಟು ಅಧಿಕಾರಿಗಳ ಮುಂದೆ  ಕಿತ್ತಾಡಿ ತಮ್ಮ ಮಾನ ಮರ್ಯಾದೆ ಹರಾಜು ಹಾಕಿಕಿಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.ಇದನ್ನೂ ಓದಿ : ಗ್ರಾಮಗಳಿಗೆ ಹಿಂತಿರುಗಿರುವ ವಲಸೆ ಕಾರ್ಮಿಕರಿಗೂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಸಿಗಲಿದೆ 6,000 ರೂ
First published: May 27, 2020, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading