ತಹಶೀಲ್ದಾರ್‌ಗೆ ಪಾಸಿಟಿವ್, ಶಾಸಕರು ಕ್ವಾರಂಟೈನ್​ನಲ್ಲಿ‌ ; ಮೈಸೂರಿನಲ್ಲಿ ಸಾವಿನ ಜೊತೆ ಕೊರೋನಾ ಸಂಖ್ಯೆಯೂ ಹೆಚ್ಚಳ

ಕೆ.ಆರ್‌.ನಗರ ತಾಲೂಕು ತಹಶೀಲ್ದಾರ್​​ಗೆ ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ಅವರ ಜೊತೆ ಪ್ರಾಥಮಿಕ ಸಂಪರ್ಕದ ಶಾಸಕರು ಕ್ವಾರಂಟೈನ್ ಆಗಿದ್ದಾರೆ

news18-kannada
Updated:July 6, 2020, 4:11 PM IST
ತಹಶೀಲ್ದಾರ್‌ಗೆ ಪಾಸಿಟಿವ್, ಶಾಸಕರು ಕ್ವಾರಂಟೈನ್​ನಲ್ಲಿ‌ ; ಮೈಸೂರಿನಲ್ಲಿ ಸಾವಿನ ಜೊತೆ ಕೊರೋನಾ ಸಂಖ್ಯೆಯೂ ಹೆಚ್ಚಳ
ಸಾಂದರ್ಭಿಕ ಚಿತ್ರ.
  • Share this:
ಮೈಸೂರು(ಜುಲೈ.06): ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿರುವ ಹಿನ್ನಲೆಯಲ್ಲೆ ಅರಮನೆ ನಗರಿ ಮೈಸೂರಿನಲ್ಲಿ ಇಂದು ಸಹ ಕೊರೋನಾ ಅಟ್ಟಹಾಸ ಮೆರೆದಿದೆ. ಕೊರೋನಾ ಹೊಡೆತ ಎಷ್ಟರ ಮಟ್ಟಿಗೆ ಇದೆ ಅಂದ್ರೆ ಮೈಸೂರಿನಲ್ಲಿ ತಹಶೀಲ್ದಾರ್​ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರ ಜೊತೆ ಓಡಾಟ ಮಾಡಿದ್ದ ಶಾಸಕ, ಇನ್ಸ್​ಪೇಕ್ಟರ್,‌ ಪಿಎಸ್‌ಐ ಸೇರಿದಂತೆ 50ಕ್ಕು ಹೆಚ್ಚು ಮಂದಿ ಕ್ವಾರಂಟೈನ್ ಆಗಿದ್ದಾರೆ. ಇಂದು ಮೈಸೂರಿನಲ್ಲಿ 50ಕ್ಕೂ ಹೆಚ್ಚು ಕೇಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಮಾಹಿತಿ ಬಂದಿದ್ದು, ಸಾವಿನ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ತಹಶಿಲ್ದಾರ್​ಗೆ ಕೊರೋನಾ ಪಾಸಿಟಿವ್ ಬಂದಿದೆ. ಕೆ.ಆರ್.ನಗರ ತಾಲೂಕು ತಹಶೀಲ್ದಾರ್‌ ಮಂಜಳಾರವರಿಗೆ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಮೊನ್ನೆ ತಹಶೀಲ್ದಾರ್​ ಸ್ವ್ಯಾಬ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ನಿನ್ನೆ ಸಂಜೆ ಲ್ಯಾಬ್ ವರದಿಯಲ್ಲಿ ತಹಶೀಲ್ದಾರ್‌ಗೆ ಪಾಸಿಟಿವ್ ದೃಢವಾಗಿದ್ದು, ನಿನ್ನೆ ಸಂಜೆಯೆ ತಹಶೀಲ್ದಾರ್​ ‌ನ್ನ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕೆ.ಆರ್‌.ನಗರ ತಾಲೂಕು ತಹಶೀಲ್ದಾರ್​​ಗೆ ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ಅವರ ಜೊತೆ ಪ್ರಾಥಮಿಕ ಸಂಪರ್ಕದ ಶಾಸಕರು ಕ್ವಾರಂಟೈನ್ ಆಗಿದ್ದಾರೆ. ಕೆ ಆರ್​ ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಸೆಲ್ಫ್ ಹೋಂ ಕ್ವಾರಂಟೈನ್ ಆಗಿದ್ದು, ಶಾಸಕರ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿದೆ. 2 ದಿನದ ಹಿಂದೆ ತಹಶೀಲ್ದಾರ್ ಜೊತೆ ಕಂಟೈನ್​​ಮೆಂಟ್ ಝೋನ್‌ಗೆ ಭೇಟಿ ನೀಡಿದ್ದ ಶಾಸಕ ಸಾ ರಾ ಮಹೇಶ್‌ರಿಂದ ಸಾಲಿಗ್ರಾಮ, ಕಂಚಿನಕೆರೆ, ಕಂಟೈನ್​​ಮೆಂಟ್ ಝೋನ್‌ಗೆ ತಹಶೀಲ್ದಾರ್ ಜೊತೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈಗ  ಸಾರಾ ಮಹೇಶ್‌ಗೆ ಕೊರೊನಾ ಭೀತಿ ಎದುರಾಗಿದೆ.

ನಿನ್ನೆ ರಾತ್ರಿಯಿಂದಲೇ ಸಾ ರಾ ಮಹೇಶ್ ಹೋಂ ಕೊರೈಂಟೈನ್ ಆಗಿದ್ದಾರೆ. ಜೊತೆಯಲ್ಲಿ ಇನ್ಸ್​ಪೇಕ್ಟರ್ ರಾಜು, ಪಿಎಸ್​ಐ ಚೇತನ್, ಆರತಿ ಸೇರಿ ತಾಲೂಕು ಅಧಿಕಾರಿಗಳಿಗೆ ಹೋಂ ಕ್ವಾರಂಟೈನ್ ಆಗಿದ್ದು, ಕೆ.ಆರ್. ನಗರ ತಾಲೂಕಿನಲ್ಲಿ ಕೊರೋನಾ ಭೀತಿ ಶುರುವಾಗಿ ಕೆ ಆರ್​.ನಗರ ತಹಶೀಲ್ದಾರ್ ಕೊಠಡಿಯೂ ಸೀಲ್‌ ಡೌನ್ ಆಗಿದೆ.

ಮೈಸೂರಿನಲ್ಲಿ ಇಂದು ಕೂಡ ಕೊರೋನಾ ಆರ್ಭಟ ಮುಂದುವರೆಲಿದ್ದು, ಇಂದು ಒಂದೇ ದಿನ 50ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್​​ಗಳನ್ನು ನಿರೀಕ್ಷೆ ಮಾಡಲಾಗಿದೆ. ಅಂತರ್ ‌ಜಿಲ್ಲೆ ಅಂತರ್ ‌ರಾಜ್ಯದಿಂದ ಬಂದವರಲ್ಲಿ ಸೋಂಕು ದೃಢವಾಗಿದ್ದು, ಕೊರೋನಾ ವಾರಿಯರ್ಸ್‌ಗೆ ತಗುಲಿರುವ ಮಹಾಮಾರಿಯಿಂದಾಗಿ ತಹಶೀಲ್ದಾರ್‌,  ಶಾಸಕರು ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಂದು ಮತ್ತಷ್ಟು ಕಂಟೈನ್​ಮೆಂಟ್ ಝೋನ್​​‌ಗಳು ಸೃಷ್ಟಿಯಾಗಿದ್ದು, ಪ್ರತಿ ಏರಿಯಾಗಳಲ್ಲಿ ಸೀಲ್‌ಡೌನ್ ಆಗುತ್ತಿರುವ ರಸ್ತೆಗಳುಗಳನ್ನ ಕಂಡು ಜನರು ಭಯ ಭೀತರಾಗುತ್ತಿದ್ದಾರೆ.

ಮೈಸೂರಿನಲ್ಲಿ ಕೊರೋನಾ ಪ್ರಕರಣ ದಿನೆ ದಿನೆ ಹೆಚ್ಚಳ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಹೇಳಿಕೆ ನೀಡಿದ್ದು, ಮೈಸೂರಿನಲ್ಲಿ ಇನ್ನೂ ಪಾಸಿಟಿವ್ ಪ್ರಕರಣ ಜಾಸ್ತಿ ಆಗುತ್ತವೆ ತೆಗೆಯುತ್ತಿರುವ ಸ್ಯಾಂಪಲ್ ನಲ್ಲಿ ಹೆಚ್ಚು ಪಾಸಿಟಿವ್ ಬರುತ್ತಿವೆ, ಸಾವಿನ ಸಂಖ್ಯೆ ಕೂಡ ಜಾಸ್ತಿ ಆಗುತ್ತಿವೆ ಅಂತ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಹುಟ್ಟಿದ ಮಗುವಿನ ಕೊಲೆ ಮಾಡಿದ ಆರೋಪ ; ಮೂವರ ವಿರುದ್ದ ಪ್ರಕರಣ ದಾಖಲುಇನ್ನು ಬೆಂಗಳೂರಿನಿಂದ ಬರುವ ಪ್ರವಾಸಿಗರನ್ನು ನಿಷೇಧಿಸಬೇಕೆಂಬ ಒತ್ತಾಯ ಇದೆ ಇದನ್ನು ಕೂಡ ಪರಿಶೀಲಿಸುತ್ತಿದ್ದೇವೆ. ಬೆಂಗಳೂರಿಂದ ಬರುವವರ ತಪಾಸಣೆ, ನಿಷೇಧ ಕಷ್ಟ ಸಾಧ್ಯ ಇದೆ, ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ರೆಸಾರ್ಟ್ ಗಳಿಗೆ ಬರುತ್ತಿರುವ ಪ್ರವಾಸಿಗರ ನಿಷೇಧದ ಬಗ್ಗೆ ಗಂಭೀರವಾಗಿ ಚರ್ಚೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳಿಗೆ ಕೊರೋನಾ ಹೆಚ್ಚುತ್ತಿದೆ ಅಂತ ಕಚೇರಿಗಳನ್ನ ಬಂದ್ ಮಾಡಲು ಆಗಲ್ಲ ಈಗ ಎಲ್ಲಾ ಕಡೆ ರೈತರು ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಮಯ. ಒಂದಲ್ಲಾ ಒಂದು ಕೆಲಸಕ್ಕೆ ರೈತರು ಬರುತ್ತಿರುತ್ತಾರೆ‌ ನಾವು ಅವರನ್ನ ಬರಬೇಡಿ ಅಂತ ಹೇಳಲು ಆಗಲ್ಲ .ಆದರೆ, ಅನವಶ್ಯಕವಾಗಿ ಎಲ್ಲಿಗೂ ಹೋಗಬೇಡಿ, ಸುಖಾಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಡಿ ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ ಸಾಧ್ಯವಾದಷ್ಟು ಎಲ್ಲರಿಗೂ ಹೆಚ್ಚು ಓಡಾಡುವುದನ್ನು ನಿಲ್ಲಿಸಿ ಎಂದು ಡಿಸಿ ಅಭಿರಾಮ್ ಜಿ ಶಂಕರ್ ಮನವಿ ಮಾಡಿದ್ದಾರೆ.
Published by: G Hareeshkumar
First published: July 6, 2020, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading