• Home
  • »
  • News
  • »
  • district
  • »
  • ಬೆಳಗಾವಿ ಲೋಕಸಭಾ ಉಪಚುನಾವಣೆ; ಬಹಿರಂಗ ಪ್ರಚಾರ ಅಂತ್ಯ, ಮನೆ ಮನೆ ಕಸರತ್ತು ಆರಂಭ

ಬೆಳಗಾವಿ ಲೋಕಸಭಾ ಉಪಚುನಾವಣೆ; ಬಹಿರಂಗ ಪ್ರಚಾರ ಅಂತ್ಯ, ಮನೆ ಮನೆ ಕಸರತ್ತು ಆರಂಭ

ಬಹಿರಂಗ ಪ್ರಚಾರದಲ್ಲಿ ಬಿಜೆಪಿ

ಬಹಿರಂಗ ಪ್ರಚಾರದಲ್ಲಿ ಬಿಜೆಪಿ

ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದಿದೆ. ಅಭ್ಯರ್ಥಿಗಳು ಇನ್ನೇನಿದ್ದರು ಮನೆ ಮನೆ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಕೊನೆಯ ದಿನ ಬೆಳಗಾವಿಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಪ್ರಚಾರ ನಡೆಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ‌ ಮಾತ್ರ ಮಸ್ಕಿಗೆ ಹೋಗಿ ಬಸನಗೌಡ ತುರ್ವಿಹಾಳ ಪ್ರಚಾರ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.

ಮುಂದೆ ಓದಿ ...
  • Share this:

ಬೆಳಗಾವಿ(ಏಪ್ರಿಲ್ 15)- ಇದೇ ಏಪ್ರಿಲ್ 17ಕ್ಕೆ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದಿದೆ. ಅಭ್ಯರ್ಥಿಗಳು ಇನ್ನೇನಿದ್ದರು ಮನೆ ಮನೆ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಕೊನೆಯ ದಿನ ಬೆಳಗಾವಿಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಪ್ರಚಾರ ನಡೆಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ‌ ಮಾತ್ರ ಮಸ್ಕಿಗೆ ಹೋಗಿ ಬಸನಗೌಡ ತುರ್ವಿಹಾಳ ಪ್ರಚಾರ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.


ಬೆಳಗಾವಿ ಲೋಕಸಭಾ ಉಪಚುನಾವಣೆ ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಕೊನೆಯ ದಿನ ಸಿಎಂ ಬಿ ಎಸ್ ಯಡಿಯೂರಪ್ಪ ಅನಾರೋಗ್ಯದ ನಡುವೆ ಪ್ರಚಾರ ನಡೆಸಿದರು. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠ, ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಸಿಎಂ ಪಡೆದ್ರು‌. ನಂತರ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು . ಬಿಸಿಲಿನಿಂದ ಆಯಾಸಗೊಂಡ ಸಿಎಂ ಅರ್ಧಕ್ಕೆ ರ‌್ಯಾಲಿ ಬಿಟ್ಟು ಖಾಸಗಿ ಹೋಟೆಲ್ ಗೆ ತೆರಳಿ ವಿಶ್ರಾಂತಿ ಪಡೆದರು‌.


ನಿನ್ನೆಯಿಂದ ಸಿಎಂ ಬಿ ಎಸ್ ಯಡಿಯೂರಪ್ಪಗೆ ಜ್ವರ ಕಾಡುತ್ತಿದೆ. ಸಂಜೆ ಹಿಂಡಲಗಾ ಗ್ರಾಮದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿದ್ದ ಸಿಎಂ ಇದನ್ನು ರದ್ದು ಮಾಡಿದರು. ಬಳಿಕ ನೇರವಾಗಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಇನ್ನೂ ಸಿಎಂ ಹೊರಡುವ ಮುನ್ನ ‌ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಗಾಗಿ ಮಾತುಕತೆ ನಡೆಸಿದರು. ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ನಡೆದ ಭೇಟಿ ವೇಳೆ ಸೌಹಾರ್ದ ಚರ್ಚೆ ನಡೆದಿದೆ. ನಂತರ ಫಡ್ನವಿಸ್ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡರು.


ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ನಾಯಕರು ಅಬ್ಬರದ ಪ್ರಚಾರ ನಡೆಸಿದರು. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ ಜಾರಕಿಹೊಳಿ‌ ಮಾತ್ರ ‌ಮಸ್ಕಿಗೆ ಹೋಗಿ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಪರ ಪ್ರಚಾರ ನಡೆಸಿದರು. ಬಳಿಕ ಗೋಕಾಕ್ ನಲ್ಲಿಯೂ ಸತೀಶ್ ಜಾರಕಿಹೊಳಿ‌ ಪ್ರಚಾರ ಕಾರ್ಯ ನಡೆಸಿದರು.


ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದ ಹಿನ್ನೆಲೆಯಲ್ಲಿ ಬಹುತೇಕ ನಾಯಕರು ಬೆಳಗಾವಿ ಬಿಟ್ಟಿದ್ದಾರೆ. ಉಪಚುನಾವಣೆ ಪ್ರಚಾರದ ವೇಳೆ ಸಿಎಂ ಬಿ ಎಸ್ ವೈ ಮೂರು ಸಲ ಬೆಳಗಾವಿಗೆ ಆಗಮಿಸಿದ್ದರು. ಡಿಕೆಶಿ ಹಾಗೂ ಸಿದ್ದರಾಮಯ್ಯ ಸಹ ಎರಡು ಸಲ ಬಂದು ಪ್ರಚಾರ ಕಾರ್ಯ‌ನಡೆಸಿದ್ದರು. ಅಷ್ಟೇ ಅಲ್ಲದೇ ರಾಜ್ಯದ ಅನೇಕ ನಾಯಕರು ಹಾಗೂ ಪ್ರಭಾವಿಗಳು ಪ್ರಚಾರದಲ್ಲಿ ಭಾಗವಹಿಸಿದ್ದರು. ಆದರೆ ಜೆಡಿಎಸ್ ಪಕ್ಷ‌ ಮಾತ್ರ ಚುನಾವಣೆಯಿಂದ ದೂರು ಉಳಿದಿದೆ.

Published by:Soumya KN
First published: