ಒಂದೇ ವಾರದ ಮಳೆಗೆ ಕೊಡಗಿನಲ್ಲಿ ಭೂ ಕುಸಿತ, ಜನರಲ್ಲಿ ಹೆಚ್ಚಿದ ಆತಂಕ; 5 ಕುಟುಂಬಗಳು ಸ್ಥಳಾಂತರ

ಕೊಡಗಿನ ಮಳೆ ಎಂದರೆ ಕನಿಷ್ಟ ಮೂರು ತಿಂಗಳು ಎಡಬಿಡದೆ ಸುರಿಯೋದು ಕಾಮನ್. ಆದರೆ, ಒಂದು ವಾರದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ವೇಳೆ ಸುರಿದ ಮಳೆಗೆ ಮಡಿಕೇರಿಯ ಚಾಮುಂಡೇಶ್ವರಿ ನಗರದ ಶ್ಯಾಮ್ ಎಂಬುವರ ಮನೆಯ ಬಳಿ ಸ್ವಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಇದು ಸುತ್ತಮುತ್ತಲ ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.

ಭೂ ಕುಸಿತಕ್ಕೊಳಗಾಗಿರುವ ಸ್ಥಳವನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು.

ಭೂ ಕುಸಿತಕ್ಕೊಳಗಾಗಿರುವ ಸ್ಥಳವನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು.

  • Share this:
ಕೊಡಗು : ಮಾನ್ಸೂನ್ ಆರಂಭವಾಗಿ ಇನ್ನು ಕೇವಲ ಒಂದು ವಾರವಷ್ಟೇ ಕಳೆದಿದೆ. ಅದರಲ್ಲೂ ಮಳೆಯ ತೀವ್ರತೆ ಅಷ್ಟೇನು ಇಲ್ಲ. ಆದರೂ ಈ ಪ್ರಮಾಣದ ಮಳೆಗೆ ಕೊಡಗಿನಲ್ಲಿ ಅಲ್ಪ ಪ್ರಮಾನದ ಭೂ ಕುಸಿತ ಉಂಟಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಪರಿಣಾಮ ಜಿಲ್ಲಾಡಳಿತ ಈಗಾಗಲೇ ಕೆಲವು ಕುಟುಂಬಗಳನ್ನು ಸ್ಥಳಾಂತರ ಮಾಡಲು ಮುಂದಾಗಿದೆ

ಕೊಡಗಿನ ಮಳೆ ಎಂದರೆ ಕನಿಷ್ಟ ಮೂರು ತಿಂಗಳು ಎಡಬಿಡದೆ ಸುರಿಯೋದು ಕಾಮನ್. ಆದರೆ, ಒಂದು ವಾರದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ವೇಳೆ ಸುರಿದ ಮಳೆಗೆ ಮಡಿಕೇರಿಯ ಚಾಮುಂಡೇಶ್ವರಿ ನಗರದ ಶ್ಯಾಮ್ ಎಂಬುವರ ಮನೆಯ ಬಳಿ ಸ್ವಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಇದು ಸುತ್ತಮುತ್ತಲ ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.

ನಿನ್ನೆ ಸಂಜೆ ಸ್ವಲ್ಪ ಪ್ರಮಾಣದ ಭೂ ಕುಸಿತವಾಗುತ್ತಿದ್ದಂತೆ ಜನರು ಭಯಗೊಂಡು ಜಿಲ್ಲಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು, ಎನ್‍ಡಿಆರ್ ಎಫ್ ತಂಡ ಸೇರಿದಂತೆ ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅಲ್ಲದೆ ತಕ್ಷಣವೇ ಐದು ಕುಟುಂಬಗಳನ್ನು ಶಿಫ್ಟ್ ಮಾಡಿದ್ದಾರೆ. ಆದರೆ, ಇನ್ನೂ ಕೂಡ ಕೆಲವು ಮನೆಗಳಿಗೆ ಇದರಿಂದ ಆತಂಕ ಎದುರಾಗಿದ್ದು, ಮನೆಗಳಿಂದ ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಬೇಕು ಎಂಬುದು ಜನರ ಆಗ್ರಹ.

ಚಾಮುಂಡೇಶ್ವರಿ ನಗರದ ಶ್ಯಾಮ್ ಅವರ ಮನೆಯ ಸುತ್ತಮುತ್ತಲಿನ ಐದು ಕುಟುಂಬಗಳನ್ನು ರಾತ್ರೋ ರಾತ್ರಿಯೇ ಸ್ಥಳಾಂತರ ಮಾಡಲಾಗಿದೆ. ಉಳಿದಿರುವ ಮನೆಗಳಲ್ಲೂ ಚಿಕ್ಕಪುಟ್ಟ ಮಕ್ಕಳು, ವೃದ್ಧರಿದ್ದು, ಅಪ್ಪಿತಪ್ಪಿ ಭೂ ಕುಸಿತವಾದಲ್ಲಿ ಭಾರೀ ಅನಾಹುತ ಎದುರಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬೆಳಿಗ್ಗೆಯೂ ಸಹ ಸ್ಥಳಕ್ಕೆ ಉಪವಿಭಾಗ ಅಧಿಕಾರಿ ಜವರೇಗೌಡ, ನಗರ ನೋಡೆಲ್ ಅಧಿಕಾರಿ ಅರುಂಧತಿ ಸೇರಿದಂತೆ ಮಡಿಕೇರಿ ನಗರ ಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಭಾಗ್ಯ ಅವರ ಮನೆ ಮತ್ತು ಎದುರಿನ ಮನೆಗಳು ತೀವ್ರ ಅಪಾಯದಲ್ಲಿ ಇರುವುದರಿಂದ ಎರಡು ಮನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲಾಗುವುದು. 2018 ರಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ವಿತರಣೆ ಮಾಡಲು ಜಂಬೂರಿನಲ್ಲಿ ನಿರ್ಮಿಸುತ್ತಿರುವ ಮನೆಗಳಲ್ಲಿ ಈ ಇಬ್ಬರಿಗೂ ಮನೆಗಳನ್ನು ಕೊಡಲಾಗುವುದು ಎಂದು ಉಪವಿಭಾಗಾಧಿಕಾರಿ ಜವರೇಗೌಡರು ತಿಳಿಸಿದ್ದಾರೆ.

ಇದನ್ನೂ ಓದಿ : ವಲಸೆ ಕಾರ್ಮಿಕರ ಜೀವನೋಪಾಯಕ್ಕೆ 50,000 ಕೋಟಿ; ಗರೀಬ್‌ ಕಲ್ಯಾಣ್ ರೋಜ್‌ಗಾರ್‌ ಯೋಜನೆ ಮಾಹಿತಿ ನೀಡಿದ ಸೀತಾರಾಮನ್

ಒಟ್ಟಿನಲ್ಲಿ ಕೊಡಗಿನಲ್ಲಿ ಎರಡು ವರ್ಷಗಳಿಂದ ಎದುರಾಗಿರುವ ಪ್ರಾಕೃತಿಕ ವಿಕೋಪ ಜನರನ್ನು ಆತಂಕದಲ್ಲೇ ಇರಿಸಿದೆ. ಈ ನಡುವೆ ಸಣ್ಣ ಮಳೆಗೆ ಮಡಿಕೇರಿ ನಗರದಲ್ಲಿ ಭೂ ಕುಸಿತವಾಗಿರುವುದು ಜನರನ್ನು ಮತ್ತಷ್ಟು ಆತಂಕ ಎದುರಾಗುವಂತೆ ಮಾಡಿರುವುದಂತು ಸತ್ಯ.
First published: