ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆ ಮುಂದೂಡಿಕೆ, ಹೆಚ್.ಸಿ.ಬಾಲಕೃಷ್ಣ ಪ್ರಶ್ನೆಗಳಿಗೆ ಅಧಿಕಾರಿಗಳು ಥಂಡಾ!

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಕಾರಿ ಅರ್ಚನಾ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನನ್ನ ಪಾತ್ರ ಇರುವುದಿಲ್ಲ. ಅಲ್ಲದೇ, ನೋಟಿಫಿಕೇಷನ್ ಕೂಡ ಗಮನಕ್ಕೆ ಬರುವುದಿಲ್ಲ. ಕೇವಲ ಭೂದರ ನಿಗದಿ ಮಾಡಲಷ್ಟೇ ಅಧಿಕಾರವಿದೆ ಎಂದರು. ಈ ಸಂದರ್ಭದಲ್ಲಿ ಕೆಐಎಡಿಬಿ ಅಧಿಕಾರಿಗಳು ಸಹ ಬಾಲಕೃಷ್ಣ ಪ್ರಶ್ನೆಗೆ ಉತ್ತರಿಸಲಾಗದೆ ಸಭೆ ಮುಂದೂಡಿದರು.

news18-kannada
Updated:August 12, 2020, 5:51 PM IST
ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆ ಮುಂದೂಡಿಕೆ, ಹೆಚ್.ಸಿ.ಬಾಲಕೃಷ್ಣ ಪ್ರಶ್ನೆಗಳಿಗೆ ಅಧಿಕಾರಿಗಳು ಥಂಡಾ!
ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಭೂ ದರ ನಿರ್ಧಾರ ಸಮಿತಿ ಸಭೆ.
  • Share this:
ರಾಮನಗರ: ರಾಮನಗರ ಜಿಲ್ಲೆ ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಿಸಲು ಗುರುತಿಸಿರುವ ಭೂ ಪ್ರದೇಶವನ್ನು ರೆಡ್ ರೆನ್ ನಿಂದ ಮುಕ್ತಗೊಳಿಸಬೇಕು ಅಥವಾ ಕೆಐಎಡಿಬಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕೆಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ರೈತರು ಪಟ್ಟು ಹಿಡಿದರು. ಈ ಕಾರಣ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶ ವ್ಯಾಪ್ತಿ ಗ್ರಾಮಗಳ ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು ಮುಂದೂಡಲಾಯಿತು.

ರಾಮನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶದ ಕಂಚುಗಾರನಹಳ್ಳಿ ಕಾವಲ್, ಯರೇಹಳ್ಳಿ ಮತ್ತು ಮುಡೇನಾಹಳ್ಳಿ ಗ್ರಾಮಗಳ ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡಲಾಗದೆ ಕಕ್ಕಾಬಿಕ್ಕಿಯಾದರು.

ರೆಡ್​ರೆನ್​ನಲ್ಲಿರುವ 9.178 ಎಕರೆ ಪೈಕಿ ಕೇವಲ 734 ಎಕರೆ ಮಾತ್ರ ಹೇಗೆ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ನಡೆದಿರುವ ಸಭೆಯ ನಡಾವಳಿ ಹಾಗೂ ಬಿಎಂಆರ್​ಡಿಎ ನೀಡಿರುವ ಎನ್​ಒಸಿ ಪ್ರತಿಯನ್ನು ಸಲ್ಲಿಸಿ. ರೈತರಿಗೆ ಕಾನೂನು ಕೇಳಿದಂತೆ ಸರ್ಕಾರಕ್ಕೂ ಕಾನೂನು ಕೇಳಬೇಕಲ್ಲವೇ ಎಂದು ಬಾಲಕೃಷ್ಣರವರು ಜಿಲ್ಲಾಕಾರಿಗಳನ್ನು ಕೇಳಿದರು.

ಇದನ್ನು ಓದಿ: ಬೆಂಗಳೂರು ಗಲಬೆ: ಡಿಜಿ ಹಳ್ಳಿ ಘಟನೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು: ಡಿಕೆ ಶಿವಕುಮಾರ್​

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಕಾರಿ ಅರ್ಚನಾ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನನ್ನ ಪಾತ್ರ ಇರುವುದಿಲ್ಲ. ಅಲ್ಲದೇ, ನೋಟಿಫಿಕೇಷನ್ ಕೂಡ ಗಮನಕ್ಕೆ ಬರುವುದಿಲ್ಲ. ಕೇವಲ ಭೂದರ ನಿಗದಿ ಮಾಡಲಷ್ಟೇ ಅಧಿಕಾರವಿದೆ ಎಂದರು. ಈ ಸಂದರ್ಭದಲ್ಲಿ ಕೆಐಎಡಿಬಿ ಅಧಿಕಾರಿಗಳು ಸಹ ಬಾಲಕೃಷ್ಣ ಪ್ರಶ್ನೆಗೆ ಉತ್ತರಿಸಲಾಗದೆ ಸಭೆ ಮುಂದೂಡಿದರು.
Published by: HR Ramesh
First published: August 12, 2020, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading