ಹಾವೇರಿಯಲ್ಲಿ ಕೈಗಾರಿಕಾ ಟೌನ್​ಶಿಪ್​ಗೆ ಒಂದು ಸಾವಿರ ಎಕರೆ ಭೂಸ್ವಾಧೀನಕ್ಕೆ ಸೂಚನೆ: ಸಚಿವ ಜಗದೀಶ್ ಶೆಟ್ಟರ್

ಹಾವೇರಿಯಲ್ಲಿ ಕೈಗಾರಿಕಾ ಬೆಳವಣಿಗೆ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಜಗದೀಶ್ ಶೆಟ್ಟರ್, ಗಣಜುರ ಮತ್ತು ಕೊಳೂರ ಕೈಗಾರಿಕಾ ವಲಯದಲ್ಲಿ ಗುರುತಿಸಿರುವ 406 ಎಕರೆ ಜಮೀನಿನ ಜೊತೆ 1 ಸಾವಿರ ಎಕರೆ ಹೆಚ್ಚುವರಿ ಜಮೀನು ಗುರುತಿಸಿ ಭೂಸ್ವಾಧೀನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದಿದ್ದಾರೆ.

ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತಿತರರು

ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮತ್ತಿತರರು

  • Share this:
ಹಾವೇರಿ: ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಎಲ್ಲ ನೇರವು ನೀಡಲಿದೆ. ಈಗಾಗಲೇ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಕೈಗಾರಿಕಾ ಟೌನ್‍ಶಿಪ್ ಆರಂಭಕ್ಕೆ ಕನಿಷ್ಠ ಒಂದು ಸಾವಿರ ಎಕರೆಯನ್ನು ಕಾಯ್ದಿರಿಸಿ ಭೂಸ್ವಾಧೀನ ಪಡೆಸಿಕೊಳ್ಳಲು ಕೆ.ಐ.ಎ.ಡಿ.ಬಿ. ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮ ಸಚಿವರಾದ ಜಗದೀಶ್ ಶೆಟ್ಟರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಕೈಗಾರಿಕೆಯ ಬೆಳವಣಿಗೆಯ ಕುರಿತಂತೆ ಜಿಲ್ಲೆಯ ಜನಪ್ರತಿನಿಧಿಗಳು, ಕೈಗಾರಿಕೊದ್ಯಮಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ಈಗಾಗಲೇ ಸುವರ್ಣ ಕಾರಿಡಾರ್ ಯೋಜನೆಯಲ್ಲಿ ಗಣಜುರ ಮತ್ತು ಕೊಳೂರ ಕೈಗಾರಿಕಾ ವಲಯದಲ್ಲಿ ಗುರುತಿಸಿರುವ 406 ಎಕರೆ ಜಮಿನಿನ ಭೂಸ್ವಾಧೀನಕ್ಕೆ ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಈ ಜಮೀನು ಅಭಿವೃದ್ದಿಪಡಿಸುವುದರೊಂದಿಗೆ ಒಂದು ಸಾವಿರ ಎಕರೆ ಹೆಚ್ಚುವರಿ ಜಮೀನನ್ನು ಗುರುತಿಸಿ ಕೈಗಾರಿಕಾ ಟೌನ್‍ಶಿಪ್‍ಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

“ರಟ್ಟಿಹಳ್ಳಿ ಕೈಗಾರಿಕಾ ವಲಯದಲ್ಲಿ ಮೆ.ಜಿ.ಎಂ ಶುಗರ್ ಮತ್ತು ಎನರ್ಜಿ ಕಂಪನಿಗೆ ಮಂಜೂರಾಗಿರುವ 180 ಎಕರೆ ಜಮೀನಿನ ತಕರಾರು ಬಗೆಹರಿದಿದೆ. ಈಗಾಗಲೇ ಕಂಪನಿಯವರು ಹಣ ತುಂಬಿದ್ದಾರೆ ಎಂದು ಮಾಹಿತಿ ನೀಡಿದ್ದಿರಿ. ವಾರದೊಳಗಾಗಿ ಇವರಿಗೆ ಭೂಮಿ ಹಸ್ತಾಂತರಿಸಿ ಕಾರ್ಖಾನೆ ಆರಂಭಕ್ಕೆ ಅನುವು ಮಾಡಿಕೊಡಿ.

“ಗಣಜೂರು, ತೋಟದಯಲ್ಲಾಪುರ, ಮಾಗೋಡ, ಕಜ್ಜರಿ, ಹನುಮನಮಟ್ಟಿ, ಪರವಡಿ ಸೇರಿದಂತೆ ಜಿಲ್ಲೆಯಲ್ಲಿ ಮಂಜೂರಾತಿಗೆ ಬಾಕಿ ಇರುವ ಕೈಗಾರಿಕಾ ಉದ್ದೇಶಕ್ಕಾಗಿ ಗುರುತಿಸಿಕೊಂಡಿರುವ ಜಮೀನಿನ ಸ್ವಾಧೀನ ಮಂಜೂರಾತಿಗಾಗಿ ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಸೂಚಿಸಿದರು. ಕೋವಿಡ್ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ‘ಆತ್ಮ ನಿರ್ಭರ’ ಯೋಜನೆಯಡಿ 1522 ಕೈಗಾರಿಕೋದ್ಯಮಿಗಳಿಗೆ ಜಿಲ್ಲೆಯಲ್ಲಿ 81 ಕೋಟಿ ರೂ ಬ್ಯಾಂಕುಗಳ ಮೂಲಕ ನೆರವು ನೀಡಲಾಗಿದೆ.

“ಸರ್ಕಾರ ಕೇಂದ್ರಿಕೃತ ಕೈಗಾರಿಕಾ ಬೆಳವಣಿಗೆ ಬದಲು ಟೈಪ್ 2 ಮತ್ತು ಟೈಪ್ 3 ನಗರಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ ನೀಡಿದೆ. ಹಾವೇರಿಯಂತಹ ನಗರಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದೆ. ಹುಬ್ಬಳಿಯಲ್ಲಿ ಹೂಡಿಕೆದಾರರ ಸಮಾವೇಶ ಮಾಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗಾರಿಕಾ ಟೌನ್‍ಶಿಪ್ ಹಾಗೂ ಕೈಗಾರಿಕಾ ವಸಾಹತು ಸ್ಥಾಪನೆಗೆ ಅಗತ್ಯ ಕ್ರಮವಹಿಸಿ” ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಸರ್ಕಾರದಿಂದಲೇ ಖಾಸಗಿ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ - ಸಚಿವ ಡಾ.ಕೆ‌ ಸುಧಾಕರ್

ಯಾವುದೇ ಉದ್ಯಮಿಗಳು ಕೈಗಾರಿಕಾ ಸ್ಥಾಪನೆಗೆ ಮುಂದೆ ಬಂದರೆ ಏಕಗವಾಕ್ಷಿ ಪದ್ದತಿಯಲ್ಲಿ ಮಂಜೂರಾತಿಗೆ ಅವಕಾಶ ಕಲ್ಪಿಸಿ ಸರಳಿಕರಣ ವ್ಯವಸ್ಥೆಯಲ್ಲಿ ಉದ್ಯಮಿಗಳಿಗೆ ನೆರವು ನೀಡುವಂತೆ ಅಧಿಕಾರಿಗಳಿಗೆ ಸಚಿವ ಜಗದೀಶ್ ಶೆಟ್ಟರ್ ಆದೇಶ ನೀಡಿದರು.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಹಾವೇರಿ, ಗದಗ ಹಾಗೂ ಧಾರವಾಡ ಕೈಗಾರಿಕಾ ಬೆಳವಣಿಗೆಗೆ ಉತ್ತಮ ಅವಕಾಶವಿದ್ದು ಕೇಂದ್ರ ಸರ್ಕಾರ ಪುಣೆ ಬೆಂಗಳೂರು ಹೆದ್ದಾರಿಯಲ್ಲಿರುವ ಎಲ್ಲ ನಗರಗಳಲ್ಲಿ ಕೈಗಾರಿಕಾ ಅಭಿವೃದ್ದಿಗೆ ಆದ್ಯತೆ ನೀಡಿದೆ. ಕರ್ನಾಟಕ ಸರ್ಕಾರ ಕೈಗಾರಿಕಾ ಬೆಳವಣಿಗೆಗೆ ಅಗ್ರೆಸಿವ್ ಆಗಿದೆ. ಭೂಮಂಜೂರಾತಿ ಕೈಗಾರಿಕೆ ಸ್ಥಾಪನೆಗೆ ಇರುವ ಎಲ್ಲ ತೊಡಕುಗಳನ್ನು ನಿವಾರಣೆ ಮಾಡಿ ಸರಳೀಕರಿಸಲಾಗಿದೆ. ಹಾವೇರಿ ಜಿಲ್ಲೆ ಕೈಗಾರಿಕಾ ಬೆಳವಣಿಗೆಗೆ ಪೂರಕ ಜಿಲ್ಲೆಯಾಗಿದೆ. ಅಧಿಕಾರಿಗಳು ಹಾಗೂ ಕೈಗಾರಿಕೊದ್ಯಮಿಗಳು ದೂರದೃಷ್ಟಿಯಿಂದ ಹೆಚ್ಚಿನ ಆಸಕ್ತಿ ವಹಿಸಿ ಕ್ರಮವಹಿಸಬೇಕು. ಇತರ ಜಿಲ್ಲೆಗಳಲ್ಲಿ ಕೈಗಾರಿಕೆಗಾಗಿ 10ರಿಂದ ಒಂದು ಲಕ್ಷ ಎಕರೆಯವರೆಗೆ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಈ ಜಿಲ್ಲೆಯಲ್ಲೂ ಈ ಕೆಲಸವಾಗಬೇಕು, ಕೆ.ಐ.ಡಿ.ಬಿ ಕೈಗಾರಿಕೆ ಉದ್ದೆಶಕ್ಕಾಗಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸಿಕೊಳ್ಳಬೇಕೆಂದರು.ಕೆ.ಎಸ್.ಎಸ್.ಐ.ಡಿ.ಸಿ ಯಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕೈಗಾರಿಕಾ ವಸಾಹತುಗಳನ್ನು ನಿರ್ಮಾಣ ಮಾಡಬೇಕು. ಸಣ್ಣ ಹಾಗೂ ಅತೀ ಸಣ್ಣ ಘಟಕಗಳ ಸ್ಥಾಪನೆಗೆ ಒತ್ತು ನೀಡಬೇಕು. ಇದಕ್ಕಾಗಿ ಅಗತ್ಯ ಜಮೀನು ಸ್ರ್ವಾಧೀನಪಡಿಸಿಕೊಂಡು ಅಭಿವೃದ್ದಿಪಡಿಸಲು ಬೊಮ್ಮಾಯಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೈಗಾರಿಕಾ ಟೌನ್‍ಶಿಪ್‍ಗೆ ಹಳೆಯ ಭೂಸ್ವಾಧೀನ ಪ್ರಕರಣಗಳ ಇತ್ಯರ್ಥಪಡಿಸಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಒಂದು ತಿಂಗಳ ಒಳಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಭಿವೃದ್ದಿಗೆ ಕ್ರಮವಹಿಸಬೇಕೆಂದು ಗೃಹ ಸಚಿವರು ಹೇಳಿದರು.
Published by:Vijayasarthy SN
First published: