ಜನರಲ್ಲಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಶಿವಮೊಗ್ಗದ ‘ಅರಿವು’

ವಿವಿಧ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ  ಹಿಂದೆ ಮಾಡಿದ್ದ ಅರಿವು ಸಂಸ್ಥೆಯ ಲಕ್ಷ್ಮಿಕಾಂತ್  ಇದೀಗ, ಕೊರೊನಾದ ಬಗ್ಗೆ ಜನರಲ್ಲಿ ಭಯ ಕಡಿಮೆಯಾಗಿರುವುದನ್ನು ಕಂಡು, ತಮ್ಮ ಕೆಲಸವನ್ನೆಲ್ಲಾ  ಬುದಿಗೊತ್ತಿ ಬೀದಿಗಿಳಿದಿದ್ದಾರೆ.

ಶಿವಮೊಗ್ಗದ ಅರಿವು ಸಂಸ್ಥೆ

ಶಿವಮೊಗ್ಗದ ಅರಿವು ಸಂಸ್ಥೆ

  • Share this:
ಶಿವಮೊಗ್ಗ(ಮೇ 30): ಕಳೆದೆರೆಡು ತಿಂಗಳಿನಿಂದ ಇದ್ದ ಈ ಕೊರೊನಾ ಬಗ್ಗೆ ಇತ್ತೀಚಿಗೆ ಜನರಲ್ಲಿ ಭಯ ಕಾಣೆಯಾಗುತ್ತಿದೆ.  ಜಾಗೃತಿ ಕಡಿಮೆಯಾಗುತ್ತಿದೆ.  ಮಹಾಮಾರಿಗೆ ಹೆದರಿ, ಮನೆಯಲ್ಲಿ ಲಾಕ್ ಡೌನ್ ಆದವರೆಲ್ಲಾ ಇಂದು ಬೀದಿಗೆ ಬಂದು ಸಾಮಾಜಿಕ ಅಂತರ ಮರೆತು, ಓಡಾಟ ಮಾಡುತ್ತಿದ್ದಾರೆ. ಕೊರೊನಾದ ಬಗ್ಗೆ ಸಾಮಾಜಿಕ ಜಾಗೃತಿ ಮರೆಯಾಗುತ್ತಿದೆ.  ಈ ಎಲ್ಲಾ ನಿಟ್ಟಿನಲ್ಲಿ ಅರಿತ ಶಿವಮೊಗ್ಗದ ಅರಿವು ಸಂಸ್ಥೆಯ ಲಕ್ಷ್ಮಿಕಾಂತ್, ಜನರಲ್ಲಿ ವಿಭಿನ್ನವಾಗಿ ವಿಶೇಷವಾಗಿ ಜಾಗೃತಿ ಮೂಡಿಸಲು ಹೊರಟಿದ್ದಾರೆ. 

ಈಗಾಗಲೇ, ವಿವಿಧ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಈ  ಹಿಂದೆ ಮಾಡಿದ್ದ ಅರಿವು ಸಂಸ್ಥೆಯ ಲಕ್ಷ್ಮಿಕಾಂತ್  ಇದೀಗ, ಕೊರೊನಾದ ಬಗ್ಗೆ ಜನರಲ್ಲಿ ಭಯ ಕಡಿಮೆಯಾಗಿರುವುದನ್ನು ಕಂಡು, ತಮ್ಮ ಕೆಲಸವನ್ನೆಲ್ಲಾ  ಬುದಿಗೊತ್ತಿ ಬೀದಿಗಿಳಿದಿದ್ದಾರೆ. ಜನರು ಕೊರೊನಾದಿಂದ ಹೇಗೆ ದೂರವಿರಬೇಕೆಂದು ಜಾಗೃತಿ ಮೂಡಿಸಲು ಹೊರಟಿದ್ದಾರೆ. ತಮ್ಮ ವಾಹನದ ಪೂರ್ತಿ ಕೊರೊನಾ ಜಾಗೃತಿ ಸಂಬಂಧ ಫ್ಲೆಕ್ಸ್, ಬ್ಯಾನರ್ ಗಳನ್ನು ಅಂಟಿಸಿಕೊಂಡಿರುವ ಲಕ್ಷ್ಮಿಕಾಂತ್, ವ್ಯಾನ್ ಮೇಲ್ಭಾಗದಲ್ಲೊಂದು ಮೈಕ್ ಸಿಕ್ಕಿಸಿಕೊಂಡು ಸಾರ್ವಜನಿಕರಿಗೆ ಕೊರೊನಾ ಸಂಬಂಧ ಜಾಗೃತಿ ಮೂಡಿಸಲು ಬೀದಿ ಬೀದಿ ಅಲೆಯುತ್ತಿದ್ದಾರೆ.

ಇದನ್ನೂ ಓದಿ: ಸದ್ಯಕ್ಕಿಲ್ಲ ಜಿಮ್, ಬಾರ್ ಓಪನ್ ಭಾಗ್ಯ; ಇನ್ನೊಂದಷ್ಟು ದಿನ ಕಾಯಲೇಬೇಕು ಎಂದ ಸಚಿವ ಆರ್​​. ಅಶೋಕ್​​

Lakshmikanth of Arivu
ಅರಿವು ಸಂಸ್ಥೆಯ ಲಕ್ಷ್ಮೀಕಾಂತ್


ಕೊರೊನಾದ ವಿಚಾರದಲ್ಲಿ ಎಚ್ಚರ ತಪ್ಪದಿರಿ. ಸದಾ ಜಾಗೃತರಾಗಿರಿ. ನಿಮ್ಮ ಕುಟುಂಬ ಮರೆಯದಿರಿ. ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಬೇಡಿ. ಕೊರೊನಾ ಪಾಶಕ್ಕೆ ಬಲಿಯಾಗಬೇಡಿ. ಕೊರೊನಾ ವಾರಿಯರ್ಸ್ ಗಳಿಗೆ ಸಹಕರಿಸಿ… ಕೊರೊನಾ ವಿರುದ್ಧ ಹೋರಾಡಿ.. ಮಾಸ್ಕ್ ಧರಿಸಿ, ಕೊರೊನಾದಿಂದ ದೂರವಿರಿ. ಚೆನ್ನಾಗಿ ಕೈ ತೊಳೆಯಿರಿ… ಗುಂಪು ಸೇರಬೇಡಿ… ವೃದ್ಧರನ್ನು ಮಕ್ಕಳನ್ನು ಮನೆಯಲ್ಲಿರಿಸಿ…. ಸಾಮಾಜಿಕ ಅಂತರ ಕಾಯ್ದುಕೊಳ್ಳಿ… ನಗರವನ್ನು ಹಸಿರುವಲಯವನ್ನಾಗಿಯೇ ಉಳಿಸಿ.. ಸರ್ಕಾರದ ನಿಯಮಗಳನ್ನು ಪಾಲಿಸಿ.… ಹೀಗೆ ಹತ್ತು ಹಲವು ಬರಹಗಳನ್ನು ತಮ್ಮ ಸ್ವಂತ ವಾಹನದ ಮೇಲೆ ಅಂಟಿಸಿಕೊಂಡು ಬೀದಿ ಬೀದಿ ಅಲೆದು, ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ಮೂಲಕ ಕೊರೊನಾ ಜಾಗೃತಿಗಾಗಿ ವಿಭಿನ್ನ  ಪ್ರಯತ್ನ ನಡೆಸಿದ್ದಾರೆ. ಈ ಪ್ರಯತ್ನಕ್ಕೆ, ಅರಿವು ಸಂಸ್ಥೆಯ ಇತರೆ ಸದಸ್ಯರು ಕೂಡ ಕೈ ಜೋಡಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಾಮಾಜಿಕ ಜವಬ್ದಾರಿಯನ್ನರಿತು ಜಾಗೃತಿ ಮೂಡಿಸುತ್ತಿರುವ ಇವರಿಗೆ ಕೃತಜ್ಞತೆ ಸಲ್ಲಿಸಲೇಬೇಕು.

ವರದಿ: ಹೆಚ್.ಆರ್. ನಾಗರಾಜ

First published: