ಕೆರೆಗಳ ಪುನರುಜ್ಜೀವನಕ್ಕೆ ಮುಂದಾದ ಗ್ರಾಮಸ್ಥರು ; ಭಿಕ್ಷಾಟನೆ ಮೂಲಕ ನಿಧಿ ಸಂಗ್ರಹ

ಸುಸ್ಥಿರ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಚಾಲಕರೊಬ್ಬರು ಈ ಸಮಿತಿಯಲ್ಲಿದ್ದು, ಇವರು ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಪುನಶ್ಚೇತನಗೊಂಡ ಕೆರೆ

ಪುನಶ್ಚೇತನಗೊಂಡ ಕೆರೆ

  • Share this:
ಶಿವಮೊಗ್ಗ(ಮೇ.31): ಹತ್ತಾರು ಎಕರೆ ಜಮೀನು, ನೂರಾರು ಜನ, ಸಾವಿರಾರು ಪ್ರಾಣಿ, ಪಕ್ಷಿಗಳು. ಇವೆಲ್ಲವಕ್ಕೂ ಅಗತ್ಯವಾಗಿ ನೀರು ಬೇಕೇ ಬೇಕು. ಆದರೆ, ಇಂದು ಬಿರು ಬೇಸಿಗೆಗೆ ಅನೇಕ ಕೆರೆಗಳು ಬತ್ತಿ ಹೋಗಿವೆ. ಇಂತಹ ಕೆರೆಗಳ ಪುನಶ್ಚೇತನಕ್ಕಾಗಿ ಇದೀಗ ಈ ಗ್ರಾಮಸ್ಥರೇ ಮುಂದಾಗಿದ್ದಾರೆ. ಯಾವುದೇ ಸರ್ಕಾರಿ ಅನುದಾನವಿಲ್ಲದೇ ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರಕ್ಕೆ ಹೊಂದಿಕೊಂಡಂತೆ ಇರುವ ನಾಲ್ಕು ಗ್ರಾಮದ ಜನರು ಕೆರೆಗಳ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.

ಇಲ್ಲಿನ ಸುಸ್ಥಿರ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರು ಈ ಹಿಂದೆ ಘಟ್ಟದತ್ತ ದಿಟ್ಟ ಹೆಜ್ಜೆ ಎಂಬ ವಿನೂತನ ಕಾರ್ಯ ಮಾಡಿ, ಮಕ್ಕಳಲ್ಲಿ, ಅರಣ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಈ ಬಾರಿ ಸ್ವಗ್ರಾಮ ಯೋಜನೆಯ ಪರಿಕಲ್ಪನೆಯಲ್ಲಿ, ನಾಲ್ಕು ಗ್ರಾಮಗಳನ್ನು ಪ್ರಾಯೋಗಿಕವಾಗಿ ದತ್ತು ಪಡೆದಿದ್ದು, ಹರಿದ್ರಾವತಿ ಗ್ರಾ.ಪಂ. ವ್ಯಾಪ್ತಿಯ ಬಾಣಿಗ, ಹರತಾಳು ಗ್ರಾ.ಪಂ. ನಂಜವಳ್ಳಿ, ಜಿಕ್ಕಜೇನಿ ಗ್ರಾ.ಪಂ. ಮುತ್ತಳ, ಮಾರುತಿಪುರ ಗ್ರಾ.ಪಂ. ಮಜ್ವಾ ಎಂಬ ಈ ಗ್ರಾಮಗಳ ಜನರನ್ನು ಜಾಗೃತಿಗೊಳಿಸಿ, ಕೃಷಿ ಬದುಕು, ಪರಿಸರ, ಜಲ, ಅರಣ್ಯಾಭಿವೃದ್ಧಿ ಈ ಅಂಶಗಳನಿಟ್ಟುಕೊಂಡು, ಅಭಿವೃದ್ಧಿ ಕೆಲಸ ಮಾಡಿಸುತ್ತಿದೆ. ಇದರ ಮೊದಲನೆಯ ಹಂತವಾಗಿ, ಅಂತರ್ಜಲ ಕಾಪಾಡಬೇಕು, ನೀರು ಕಾಪಾಡಬೇಕೆಂಬ ನಿಟ್ಟಿನಲ್ಲಿ ಯಾವುದೇ ಕೆರೆಗಳಲ್ಲಿನ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದೆ. ಈ ಮೂಲಕ ಜನರಿಗೆ, ಪಕ್ಷಿಗಳಿಗೆ, ಪ್ರಾಣಿಗಳಿಗೆ ನೀರುಳಿಸುವ ಯೋಜನೆ ಮಾಡಲಾಗುತ್ತಿದೆ.

ಅಷ್ಟಕ್ಕೂ, ಈ ಗ್ರಾಮಸ್ಥರು ಈ ಕೆರೆಗಳ ಪುನಶ್ಚೇತನಕ್ಕೆ ಒತ್ತು ನೀಡಿದ್ದು ಕೆರೆ ಭಿಕ್ಷೆ ಮೂಲಕ ಸ್ಥಳಿಯರಿಂದಲೇ, ಹಣದ ರೂಪದಲ್ಲಿ ದೇಣಿಗೆ ಪಡೆಯದೇ, ಕೆಲಸದ ಮೂಲಕ ದೇಣಿಗೆ ಪಡೆದು, ಕೆರೆಗಳ ಪುನರುಜ್ಜೀವನ ಮಾಡುತ್ತಿರುವುದು ಉತ್ತಮ ಕೆಲಸ ವಾಗಿದೆ. ಇದೇ ಕೆಲಸ ಸರ್ಕಾರದಿಂದ ನಡೆದರೆ, 10 ಲಕ್ಷ ರೂಪಾಯಿ ಆದರೆ, ಇವರು ಕೇವಲ 2 ಲಕ್ಷ ರೂಪಾಯಿ ನಲ್ಲಿ ಹೂಳೆತ್ತುವ ಕೆಲಸ ಮುಗಿಸುತ್ತಿದ್ದಾರೆ. ಹೂಳೆತ್ತುವ ಹಿಟಾಚಿ, ಮಣ್ಣೆತ್ತುವ ಲಾರಿಗಳನ್ನು ಗಂಟೆ, ಅರ್ಧ ಗಂಟೆ ಲೆಕ್ಕದಲ್ಲಿ ಪ್ರಾಯೋಜಕತ್ವ ನೀಡಬಹುದಾಗಿದೆ. ಇಷ್ಟೇ ಅಲ್ಲದೇ, ಈ ಹಣಕಾಸು ನಿರ್ವಹಣೆಯನ್ನು, ಆ ಊರಿನವರೇ ನೋಡಿಕೊಳ್ಳಬೇಕಾಗಿದ್ದು, ಇದಕ್ಕಾಗಿ ಕೆರೆ ಮತ್ತು ಸ್ವಗ್ರಮ ಸಮಿತಿ ರಚಿಸಲಾಗಿದೆ.

ಸುಸ್ಥಿರ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಚಾಲಕರೊಬ್ಬರು ಈ ಸಮಿತಿಯಲ್ಲಿದ್ದು, ಇವರು ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕೆರೆಯ ವಿಚಾರವಾದರೆ, ಪ್ರತಿ ಹಳ್ಳಿಗಳಲ್ಲೂ ಕನಿಷ್ಟ 500 ಇಂಗು ಗುಂಡಿಗಳನ್ನು ತೆಗೆಯಲು ಕೂಡ ಯೋಜನೆ ಹಾಕಿಕೊಳ್ಳಲಾಗಿದ್ದು, ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಸಂವಾದ, ಚರ್ಚೆ ನಡೆಸುವ ಮೂಲಕ ಗ್ರಾಮಸ್ಥರ ಮತ್ತು ಅಧಿಕಾರಿಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ,ಈ ಸಂಚಾಲಕರು ಮಾಡುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 4 ಶ್ರಮಿಕ್ ರೈಲು; ತವರು ಸೇರಲಿರುವ 6 ಸಾವಿರ ವಲಸಿಗರು

ಗ್ರಾಮದಲ್ಲಿ ಆಗಬೇಕಾದ ಶಾಲೆ, ರಸ್ತೆ, ಮತ್ತು ಕೃಷಿ ಮತ್ತು ಜನರ ಬದುಕಿಗಾಗ ಬೇಕಾದ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಕೆಲಸವನ್ನೂ ಕೂಡ ಈ ಸಂಸ್ಥೆ ಮಾಡುತ್ತಿದೆ. ಹೀಗಾಗಿ ಈ ಗ್ರಾಮಸ್ಥರು ಇದೀಗ ಸಂತಸಗೊಂಡಿದ್ದು, ಕೆರೆಗಳ ಹೂಳೆತ್ತುವ ಕೆಲಸದಲ್ಲಿ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಕೆರೆಗಳ ಜೀರ್ಣೋದ್ಧಾರ ಕಾರ್ಯದ ಮೂಲಕ, ಹಸಿದವರಿಗೆ ಅನ್ನವಾಗಬಲ್ಲೆವೆಂಬ ಉತ್ಸಾಹ ಈ ಗ್ರಾಮಸ್ಥರಲ್ಲೀಗ ನೆಲೆಸಿದೆ.
First published: