ಬಾಗಲಕೋಟೆಯಲ್ಲಿ ಬೆಳಿಗ್ಗೆ ಕಣ್ಣೀರು : ಸಾಯಂಕಾಲ ಸ್ಟೆಪ್ ಹಾಕಿದ ಮಹಿಳಾ ಕಂಡಕ್ಟರ್​ಗಳು

ಬೆಳಿಗ್ಗೆ ಕಣ್ಣೀರು ಹಾಕಿದ್ದ ಮಹಿಳಾ ಕಂಡಕ್ಟರ್​​ಗಳು ಮುಷ್ಕರ ಅಂತ್ಯವಾದ ಸಾಯಂಕಾಲ ಸಂಭ್ರಮಾಚರಣೆ ವೇಳೆ  ಸ್ಟೆಪ್ ಹಾಕಿ ಸಂಭ್ರಮಿಸಿದ ಘಟನೆ ಬಾಗಲಕೋಟೆ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ

ಡಾನ್ಸ್​​ ಮಾಡಿದ ಮಹಿಳಾ ಕಂಡಕ್ಟರ್​​ಗಳು

ಡಾನ್ಸ್​​ ಮಾಡಿದ ಮಹಿಳಾ ಕಂಡಕ್ಟರ್​​ಗಳು

  • Share this:
ಬಾಗಲಕೋಟೆ(ಡಿಸೆಂಬರ್ 14): ಬಾಗಲಕೋಟೆ ಜಿಲ್ಲೆಯಲ್ಲೂ ನಾಲ್ಕನೇ ದಿನದ ಸಾರಿಗೆ ನೌಕರರ ಮುಷ್ಕರದ ಮಧ್ಯೆಯೂ ಬೆಳಿಗ್ಗೆ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳ ಭದ್ರತೆ ಜೊತೆಗೆ ಬಸ್ ಸೇವೆ ಆರಂಭಿಸಿದ್ದರು. ಈ ವೇಳೆ ಮೂರು ದಿನದಿಂದ ನಡೆಯುತ್ತಿರುವ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಿ ಎನ್ನುವ ಬೇಡಿಕೆಯೊಂದಿಗೆ ಮುಷ್ಕರ ಆರಂಭಿಸಲಾಗಿತ್ತು. ಮುಷ್ಕರದಲ್ಲಿ ಬೆಳಿಗ್ಗೆ ಕಣ್ಣೀರು ಹಾಕಿದ್ದ ಮಹಿಳಾ ಕಂಡಕ್ಟರ್​ಗಳು ಮುಷ್ಕರ ಅಂತ್ಯವಾದ ಸಾಯಂಕಾಲ ಸಂಭ್ರಮಾಚರಣೆ ವೇಳೆ ಸ್ಟೆಪ್ ಹಾಕಿ ಸಂಭ್ರಮಿಸಿದ ಘಟನೆ ನಡೆದಿದೆ. ಬಾಗಲಕೋಟೆ ಹಳೆ ಬಸ್ ನಿಲ್ದಾಣದಲ್ಲಿ ಮುಷ್ಕರ ನಿರತರು ನಾಲ್ಕನೆ ದಿನವೂ ಬೆಳ್ಳಂಬೆಳಗ್ಗೆ ಮೈ ಕೊರೆಯುವ ಚಳಿಯಲ್ಲಿ ಆರಂಭಿಸಿದ್ದರು. ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಬಿ ವಿ ಮೇತ್ರಿ, ಮುಷ್ಕರ ನಿರತ ಬಳಿ ಬಂದು ಮನವೊಲಿಸಲು ಪ್ರಯತ್ನಿಸಿದರು. ಆದರೆ ಸಾರಿಗೆ ನೌಕರರು ಕೈಮುಗಿತಿವಿ ನಮ್ಮ ಪ್ರಮುಖ ಬೇಡಿಕೆ ಸರ್ಕಾರ ಈಡೇರಿಸಲಿ ಎಂದಿದ್ದರು.

ಈ ವೇಳೆ ಹಳೆ ಬಸ್ ನಿಲ್ದಾಣಕ್ಕೆ ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ ನೇತೃತ್ವದಲ್ಲಿ ಪೊಲೀಸರು,ಸಾರಿಗೆ ಇಲಾಖೆ ಅಧಿಕಾರಿಗಳು ಭದ್ರತೆಯೊಂದಿಗೆ ಜಮಖಂಡಿ, ಇಳಕಲ್  ಹಾಗೂ ವಿಜಯಪುರದ ಕಡೆಗೆ ಬಸ್ ಸಂಚಾರ ಆರಂಭಿಸಿದ್ದರು. ಬಸ್ ಆರಂಭವಾಗಿದ್ದಕ್ಕೆ ಪ್ರಯಾಣಿಕರು ಸಂತಸದಿಂದ ಪ್ರಯಾಣ ಬೆಳೆಸಿದರು.

ಬಾಗಲಕೋಟೆಯಲ್ಲಿ ಮುಷ್ಕರ ನಿರತರು ಮಹಿಳಾ ಕಂಡಕ್ಟರ್​ಗಳು ಕಣ್ಣೀರು..!!

ಬಾಗಲಕೋಟೆಯಲ್ಲಿ ಬೆಳಿಗ್ಗೆ ಬಸ್ ಆರಂಭವಾಗಿದ್ದಕ್ಕೆ ಮುಷ್ಕರ ನಿರತ ಮಹಿಳಾ ಕಂಡಕ್ಟರ್​ ಕಣ್ಣೀರು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್, ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ವಿರುದ್ಧವೂ ಮಹಿಳಾ ಕಂಡಕ್ಟರ್​ ಆಕ್ರೋಶ ವ್ಯಕ್ತಪಡಿಸಿ, ಕಣ್ಣೀರಿಟ್ಟರು. ಬಾಗಲಕೋಟೆ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಡಕ್ಟರ್​ ನೂರಜಾನ್ ನಧಾಫ್ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಿ ಎಂದು ಹೋರಾಡುತ್ತಿದ್ದೇವೆ. ನಮ್ಮ ಹೊಟ್ಟೆ ಮೇಲೆ ಕಾಲಿಟ್ಟು ಬಸ್ ಓಡಿಸುತ್ತಿದ್ದಾರೆ. ಮನೆಯಲ್ಲಿ ತಾಯಿಗೆ ಆರಾಮ ಇಲ್ಲ, ಸಲಾಯಿನ್ ಹಚ್ಚಿ ಬಂದು ಪ್ರತಿಭಟನೆ ಕುಳಿತ್ತಿದ್ದೇವೆ.

ಇದನ್ನೂ ಓದಿ : ನಮ್ಮೂರು ಬಸ್ ಬಂತು ಎಂದು ಓಡೋಡಿ ಸೀಟು ಹಿಡಿದ ಪ್ರಯಾಣಿಕರು ; ಕರ್ತವ್ಯಕ್ಕೆ ಬಂದ ಸಿಬ್ಬಂದಿಗೆ ಕೈಕುಲುಕಿ ಶುಭ ಕೋರಿದ ಮುಖಂಡರು

ನಮ್ಮ ಸಂಕಷ್ಟ ಕೇಳುವವರು ಯಾರು ಇಲ್ಲ. ಆದರೂ  ಹಗಲು ರಾತ್ರಿ ಮುಷ್ಕರದಲ್ಲಿ ಭಾಗಿಯಾಗಿದ್ದೇ. ಇನ್ನೊಂದಿನ ತಡೆದಿದ್ದರೆ ಅವರಿಗೂ ನ್ಯಾಯ ಸಿಗುತ್ತಿತ್ತು ಡಿಸಿಎಂ ಗೋವಿಂದ ಕಾರಜೋಳ ಕೋಡಿಹಳ್ಳಿ ತುತ್ತೂರಿ ಊದುತ್ತಿದ್ದಾರೆ ಎನ್ನುತ್ತಾರೆ. ಕೋಡಿಹಳ್ಳಿ ನ್ಯಾಯದ ಪರ ತುತ್ತೂರಿ ಊದುತ್ತಿದ್ದಾರೆ. ಗೋವಿಂದ ಕಾರಜೋಳರೇ ನಿಮ್ಮ ಹಾಗೆ ಹಾವು ಆಡಿಸೋ ತುತ್ತೂರಿ ಅಲ್ಲ, ಮುಂದೆ ನಮಗೇನಾದರೇ ಇವರೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೋರ್ವ ಮಹಿಳಾ ಕಂಡಕ್ಟರ್​ ನೀಲಮ್ಮ ಮಾಧ್ಯಮಗಳೆದರು ಗೋಳು ತೋಡಿಕೊಂಡರು.ಸಾಯಂಕಾಲ ಸಾರಿಗೆ ನೌಕರರ ಮುಷ್ಕರ ಅಂತ್ಯವಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಮುಷ್ಕರ ನಿರತರಾದ ಮಹಿಳಾ ಕಂಡಕ್ಟರ್ ಕಣ್ಣೀರು ಹಾಕಿದ್ದ ನೂರಜಾನ್ ನಧಾಫ್ ಸೇರಿದಂತೆ ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿಗಳು ಡಾ.ರಾಜ್ ಕುಮಾರ್ ಅವರು ಹಾಡಿರುವ ಕೂಡಿ ಬಾಳೋಣ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಾಚರಣೆ ನಡೆಸಿದರು. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು, ಸಾರಿಗೆ ನೌಕರರಲ್ಲಿ ಸಂತಸ ತಂದಿದೆ.
Published by:G Hareeshkumar
First published: