news18-kannada Updated:December 9, 2020, 9:13 PM IST
ಬೀದರ್ನಲ್ಲಿರುವ ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ.
ಬೀದರ್; ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ತಗ್ಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಬೀದರ್ ಜಿಲ್ಲೆಯಲ್ಲಿ ಮಕ್ಕಳಿಗೆ ಗರ್ಭಿಣಿಯರಿಗೆ ಉಚಿತವಾಗಿ ಪೌಷ್ಠಿಕ ಆಹಾರ ಕೊಡುತ್ತಿದ್ದರೂ ಈವರೆಗೆ ಪರಿಣಾಮಕಾರಿ ಬದಲಾವಣೆ ಕಂಡುಬಂದಿಲ್ಲ. ಇದಕ್ಕೆ ಒಂದು ಕಡೆ ಪಾಲಕರ ತಿಳುವಳಿಕೆ ಕೊರತೆಯಾದರೆ, ಮತ್ತೊಂದೆಡೆ ಸಮರ್ಪಕ ಮಾಹಿತಿ ಸಿಗದಿರುವುದು ಸಹ ಕಾರಣ. ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಸರ್ಕಾರವೇನೋ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ. ಅದರೆ, ಅಲ್ಲಿಗೆ ಮಕ್ಕಳೇ ಬರುತ್ತಿಲ್ಲ. ಹೀಗಾಗಿ ಸರಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವುದರ ನಡುವೆಯೂ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಏರುತ್ತಲೇ ಇದೆ.
ಬೀದರ್ ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಸದ್ಯ 900 ಗಡಿ ದಾಟಿದ್ದು, ಅಪೌಷಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆಯೇ ಗಮನಾರ್ಹ ಬದಲಾವಣೆ ಆಗಿಲ್ಲ. ಇನ್ನೂ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹ ಪ್ರತೀ ವರ್ಷ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಇದರ ಜೊತೆಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗಂತಲೇ ಸರಕಾರ ಪ್ರತಿ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರದಲ್ಲಿಯೂ ಕೂಡಾ ಮಕ್ಕಳ ಆರೊಗ್ಯ ಪುನಶ್ಚೇತನ ಕೇಂದ್ರವನ್ನು ತೆರೆದಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ಕರಡು ತಿರಸ್ಕರಿಸಿದ ರೈತರು: ಡಿ.12ಕ್ಕೆ ದೇಶದ್ಯಾಂತ ಟೋಲ್ ಪ್ಲಾಜಾ ಬಂದ್ ಮೂಲಕ ಪ್ರತಿಭಟನೆ
ಅಲ್ಲಿ ನುರಿತ ವೈದ್ಯರನ್ನು ನಿಯೋಜಿಸಲಾಗಿದೆ. ಜೊತೆಗೆ ಚಿಕಿತ್ಸೆಗಾಗಿ ದಾಖಲಾಗುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಭತ್ಯೆ ನೀಡಿ ಮಗುವಿನ ಆರೋಗ್ಯ ಪರಿಶೀಲಿಸಿ ಕನಿಷ್ಠ 10 ರಿಂದ ಗರಿಷ್ಠ 15 ದಿನಗಳ ವರೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಬರುವ ಮಗುವಿನ ಆಹಾರಕ್ಕೆ ಪ್ರತಿ ದಿನ 125 ರೂಪಾಯಿ, ಔಷಧಿಗೆ 125 ರೂಪಾಯಿ ಹಾಗೂ ಮಗುವಿನ ತಾಯಿಯ ಊಟಕ್ಕೆ 125 ರೂಪಾಯಿ ಮತ್ತೆ ತಾಯಿಗೆ 174 ಪರಿಹಾರ ಭತ್ಯೆ ಎಂದು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 1,124 ತೀವ್ರ ಹಾಗೂ ಸಾಧಾರಣ ಅಪೌಷ್ಠಿಕ ಮಕ್ಕಳಿದ್ದಾರೆ. ಈ ಪೈಕಿ ಮಾರ್ಚ್ 2020 ರಿಂದ ಇಲ್ಲಿಯರೆಗೂ ಕೂಡಾ 405 ಅಪೌಷ್ಠಿಕ ಮಕ್ಕಳು ಮಾತ್ರ ಅಪೌಷ್ಠಿಕ ಮಕ್ಕಳ ಪುನಶ್ಚೇತನ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಮಡೆದುಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಇನ್ನುಳಿದ ಮಕ್ಕಳು ಚಿಕಿತ್ಸೆಗಾಗಿ ಬಂದಿಲ್ಲ. ಹೀಗಾಗಿ ಅಪೌಷ್ಠಿಕ ಮಕ್ಕಳನ್ನು ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಜಿಲ್ಲೆಯ ಮಕ್ಕಳ ಪರ ಹೋರಾಟಗಾರರು ಹಾಗೂ ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ.
Published by:
MAshok Kumar
First published:
December 9, 2020, 9:13 PM IST