HOME » NEWS » District » LACK OF BEDS IN DHARAWAD DISTRICT HOSPITAL AND 2 PREGNANT WOMEN SHARING IN ONE BED LG

ಒಂದೇ ಹಾಸಿಗೆಯಲ್ಲಿ ಇಬ್ಬರು ಗರ್ಭಿಣಿಯರು ದಾಖಲು; ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳ ಕೊರತೆ

ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲು ಕೇವಲ 25 ಬೆಡ್​ಗಳಿದ್ದವು, ಆದರೆ ನಿತ್ಯವೂ 70 ಕ್ಕೂ ಹೆಚ್ಚು ಜನ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುವುದರಿಂದ ಬೆಡ್ ಗಳ ಸಂಖ್ಯೆಯನ್ನು 40ಕ್ಕೆ ಏರಿಸಲಾಗಿತ್ತು. ಆದರೆ ಸದ್ಯ ನಿತ್ಯವು ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದೇ ಬೆಡ್ ನಲ್ಲಿ ಇಬ್ಬರು ಗರ್ಭಿಣಿಯರನ್ನು ದಾಖಲು ಮಾಡಲಾಗುತ್ತಿದೆ. ಇದರಿಂದ ಭಯದಲ್ಲಿ ಆಸ್ಪತ್ರೆಗೆ ಗರ್ಭಿಣಿಯರು ದಾಖಲಾಗುತ್ತಿದ್ದಾರೆ.

news18-kannada
Updated:July 9, 2020, 2:28 PM IST
ಒಂದೇ ಹಾಸಿಗೆಯಲ್ಲಿ ಇಬ್ಬರು ಗರ್ಭಿಣಿಯರು ದಾಖಲು; ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳ ಕೊರತೆ
ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರು
  • Share this:
ಧಾರವಾಡ(ಜು.09): ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಬೆಡ್​ಗಳ ಕೊರತೆ ಉಂಟಾಗಿದೆ. ಬೆಡ್ ಕೊರತೆಯಾಗಿ ಒಂದು ಬೆಡ್ ಮೇಲೆ ಇಬ್ಬರು ಗರ್ಭಿಣಿಯರನ್ನು ದಾಖಲು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿರುವ ಗರ್ಭಿಣಿಯರ ವಾರ್ಡ್ ನಲ್ಲಿ ಬೆಡ್ ಗಳ ಕೊರತೆ ಕಂಡುಬಂದಿದೆ. ಇದರಿಂದ ಗರ್ಭಿಣಿಯರಿಗೆ ಒಂದು ಕಡೆ ಬೆಡ್ ಕೊರತೆಯಾದ್ರೆ, ಇನ್ನೊಂದು ಕಡೆ ಕೊರೋನಾ ಭಯ ಕೂಡಾ ಶುರುವಾಗಿದೆ. ಒಂದೇ ಬೆಡ್ ನಲ್ಲಿ ಇಬ್ಬರು ಗರ್ಭಿಯರನ್ನು ಅಡ್ಮಿಟ್ ಮಾಡಿಕೊಂಡು ಹೆರಿಗೆಯಾದ ಮೇಲೆ ಬೆಡ್ ಗೆ ಒಬ್ಬರಂತೆ ಬೇರೆ ಕಡೆ ಅವರನ್ನು ಪ್ರತ್ಯೇಕ ವ್ಯವಸ್ಥೆ ಸಹ ಮಾಡಲಾಗಿದೆ. ಆದರೆ ಹೆರಿಗೆಗೂ ಮುನ್ನ ಒಂದೇ ಬೆಡ್ ನಲ್ಲಿ ಇಬ್ಬರು ಗರ್ಭಿಣಿಯರು ಇರುವುದು ಕಷ್ಟವಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಈ ಮೊದಲು ಕೇವಲ 25 ಬೆಡ್​ಗಳಿದ್ದವು, ಆದರೆ ನಿತ್ಯವೂ 70 ಕ್ಕೂ ಹೆಚ್ಚು ಜನ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗುವುದರಿಂದ ಬೆಡ್ ಗಳ ಸಂಖ್ಯೆಯನ್ನು 40ಕ್ಕೆ ಏರಿಸಲಾಗಿತ್ತು. ಆದರೆ ಸದ್ಯ ನಿತ್ಯವು ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಒಂದೇ ಬೆಡ್ ನಲ್ಲಿ ಇಬ್ಬರು ಗರ್ಭಿಣಿಯರನ್ನು ದಾಖಲು ಮಾಡಲಾಗುತ್ತಿದೆ. ಇದರಿಂದ ಭಯದಲ್ಲಿ ಆಸ್ಪತ್ರೆಗೆ ಗರ್ಭಿಣಿಯರು ದಾಖಲಾಗುತ್ತಿದ್ದಾರೆ.

Coronavirus India Updates: ಭಾರತದಲ್ಲಿ ಕೊರೋನಾ ಇನ್ನೂ ಸಮುದಾಯಕ್ಕೆ ಹರಡಿಲ್ಲ; ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

ಬಡ ಜನರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಸರ್ಕಾರಿ ಆಸ್ಪತ್ರೆಗಳ ನಿರ್ಮಾಣ ಮಾಡುತ್ತದೆ. ಆದರೆ ಕೇವಲ 25 ಗರ್ಭಿಣಿಯರಿಗೆ ಬೆಡ್ ವ್ಯವಸ್ಥೆಯಿದೆ. ಹೀಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗುವ ಬಾಣಂತಿಯರು ವಿಪರೀತ ತೊಂದರೆ ಅನುಭವಿಸುವಂತಾಗಿದೆ.

ಒಂದು ಕಡೆ ಕೊರೋನಾ ಭಯದಿಂದ ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುತ್ತದೆ.‌ ಆದರೆ ಜಿಲ್ಲಾಸ್ಪತ್ರೆಗೆ ಗರ್ಭಿಣಿಯರ ವಾರ್ಡ್ ನಲ್ಲಿ ಸಾಮಾಜಿಕ ಅಂತರವಿಲ್ಲದೇ ಬೆಡ್ ಗಳನ್ನು ಹಾಕಲಾಗಿದೆ. ಹೀಗಾಗಿ ಅಲ್ಲಿನ ಬಾಣಂತಿಯರ ಗತಿ ಹೇಳತೀರದು.
Youtube Video
ಈ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರನ್ನ ಕೇಳಿದ್ರೆ, ನಾನು ಸಹ ಜಿಲ್ಲಾ ಆಸ್ಪತ್ರೆಗೆ ಭೇಟಿ‌ ನೀಡಿದ್ದೆ, ಅಲ್ಲಿ ಗರ್ಭಿಣಿಯರಿಗೆ ಬೆಡ್ ಕೊರತೆ ಇರುವುದು ನಿಜ. ಈ‌ ನಿಟ್ಟಿನಲ್ಲಿ ಮೂರು‌ ತಿಂಗಳಲ್ಲಿ 100 ಹಾಸಿಗೆಯ ವಾರ್ಡ್ ಸಿದ್ದವಾಗುತ್ತದೆ. ಅಲ್ಲಿಯವರೆಗೆ ಯಾವುದೇ ತೊಂದರೆ ಆಗದಂತೆ ಗರ್ಭಿಯರಿಗೆ ಚಿಕಿತ್ಸೆ‌ ನೀಡಲಾಗುತ್ತೆ ಎನ್ನತ್ತಾರೆ.
Published by: Latha CG
First published: July 9, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories