Corona Effect: ಕೆಲಸವಿಲ್ಲದೇ ಕೂಲಿ ಕಾರ್ಮಿಕರು ಕಂಗಾಲು, ಉದ್ಯೋಗ ಖಾತ್ರಿ ಯೋಜನೆಯೊಂದೇ ದಿಕ್ಕು

ಲಾಕ್ ಡೌನ್ ಆತಂಕದಿಂದ ಈಗಾಗಲೇ ಮುಂಬೈ,ಬೆಂಗಳೂರಿನಿಂದ ಜಿಲ್ಲೆಗೆ ಮರಳಿದವರು ಕೆಲಸವಿಲ್ಲ ಏನು ಮಾಡೋಣವೆಂದು ಚಿಂತಿತರಾಗಿದ್ದಾರೆ. ಹಳ್ಳಿಯಲ್ಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಬೇರೆ ಏನಾದರು ಕೆಲಸ ಮಾಡೋಣವೆಂದರೇ ಅಘೋಷಿತ ಲಾಕ್ ಡೌನ್ ನಿಂದ ಯಾವುದೇ ಕ್ಷೇತ್ರದಲ್ಲಿ ಈಗ ಕೆಲಸ ಸಿಗುತ್ತಿಲ್ಲ. ಈಗಾಗಲೇ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಬಡವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಈಗ ಕಣ್ಣೀರು ಹಾಕುವಂತಾಗಿದೆ. 

ಕಂಗಾಲಾದ ಕಾರ್ಮಿಕರು

ಕಂಗಾಲಾದ ಕಾರ್ಮಿಕರು

  • Share this:
ಯಾದಗಿರಿ: ಒಂದು ಕಡೆ ಆಘೋಷಿತ ಲಾಕ್ ಡೌನ್ ಮತ್ತೊಂದೆಡೆ ಕೊರೊನಾ ಆತಂಕ...! ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಈಗ ಕಾರ್ಮಿಕರು ಕೆಲಸವಿಲ್ಲದೇ ಕಂಗಲಾಗಿದ್ದಾರೆ‌. ಬೇಸಿಗೆ ಕಾಲದಲ್ಲಿ ಬೃಹತ್ ನಗರಗಳಾದ ಮುಂಬೈ, ಬೆಂಗಳೂರು, ಹೈದ್ರಾಬಾದ್, ಪುಣೆ ಮೊದಲಾದ ಕಡೆ  ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದ ಕಾರ್ಮಿಕರು ಕೊರೊನಾ ಆತಂಕದಿಂದ ಮುಂಬೈ, ಬೆಂಗಳೂರು ಮೊದಲಾದ ಕಡೆಯಿಂದ ಈಗ ಯಾದಗಿರಿ ಜಿಲ್ಲೆಗೆ ಮರಳಿ ಬರುತ್ತಿದ್ದಾರೆ. ಲಾಕ್ ಡೌನ್  ಹಾಗೂ ಕೊರೊನಾ ಪರಿಣಾಮ ಕಾರ್ಮಿಕರ ಕೈಗೆ ಈಗ ಕೆಲಸ ಸಿಗುತ್ತಿಲ್ಲ‌. ಕಾರ್ಮಿಕರು ಬೃಹತ್ ನಗರಗಳತ್ತ ಕೂಡ ತೆರಳಲು ಸಾಧ್ಯವಾಗದೇ ಊರಲ್ಲಿಯೇ ಖಾಲಿ ಕುಳಿತು ಕೊಳ್ಳುವಂತಾಗಿದೆ.

ಲಾಕ್ ಡೌನ್ ಆತಂಕದಿಂದ ಈಗಾಗಲೇ ಮುಂಬೈ,ಬೆಂಗಳೂರಿನಿಂದ ಜಿಲ್ಲೆಗೆ ಮರಳಿದವರು ಕೆಲಸವಿಲ್ಲ ಏನು ಮಾಡೋಣವೆಂದು ಚಿಂತಿತರಾಗಿದ್ದಾರೆ. ಹಳ್ಳಿಯಲ್ಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಬೇರೆ ಏನಾದರು ಕೆಲಸ ಮಾಡೋಣವೆಂದರೇ ಅಘೋಷಿತ ಲಾಕ್ ಡೌನ್ ನಿಂದ ಯಾವುದೇ ಕ್ಷೇತ್ರದಲ್ಲಿ ಈಗ ಕೆಲಸ ಸಿಗುತ್ತಿಲ್ಲ. ಈಗಾಗಲೇ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಬಡವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಈಗ ಕಣ್ಣೀರು ಹಾಕುವಂತಾಗಿದೆ.

ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕಾರ್ಮಿಕರು: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮುನಮುಟಗಿ ಗ್ರಾಮದ ಕಾರ್ಮಿಕರು ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದೆ 21 ರಂದು  ಕೂಲಿ ಕೆಲಸ ಮಾಡಲು ರಾಯಚೂರು ಜಿಲ್ಲೆಯ ದೇವದುರ್ಗ ದ ಕಡೆ ತೆರಳುತ್ತಿದ್ದರು. ಟಂಟಂನಲ್ಲಿ ತೆರಳುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐದು ಜನ ಕಾರ್ಮಿಕ ಮಹಿಳೆಯರು ಬಲಿಯಾಗಿದ್ದಾರೆ. ಊರಲ್ಲಿ ಹಾಗೂ ಸುತ್ತಮುತ್ತಲಿನ ‌ಹಳ್ಳಿಯಲ್ಲಿ‌ ಕೆಲಸ ಸಿಗದ ಹಿನ್ನೆಲೆ ಕೂಲಿ ಕೆಲಸಕ್ಕೆ ತೆರಳುವಾಗ ಐದು ಜನ ಕಾರ್ಮಿಕರು ಬಲಿಯಾಗಿದ್ದು ಈಡಿ ಗ್ರಾಮದ ಕಾರ್ಮಿಕರು ಈ ಘಟನೆಯಿಂದ ಜರ್ಜರಿತವಾಗಿ ಕಣ್ಣೀರು ಹಾಕುತ್ತಿದ್ದಾರೆ. ಕೂಲಿ ಕೆಲಸಕ್ಕೆಂದು ಬೆರೆ ಊರಿಗೆ ತೆರಳುವಾಗ ಕೂಡ ಇಂತಹ ರಸ್ತೆ ಅಪಘಾತಗಳು ಘಟನೆ ನಡೆದರೇ ಕಾರ್ಮಿಕರ ಕುಟುಂಬಸ್ಥರ ಬದುಕು ಹೇಗೆ ನಡೆಸುವದು. ಕುಟುಂಬ ನಡೆಸುವರೇ ಬಲಿಯಾಗಿದ್ದ ಘಟನೆಯಿಂದ ಈಡೀ ಗ್ರಾಮ ಕಣ್ಣೀರಾಗಿದೆ. ಈಗ ಗ್ರಾಮಸ್ಥರು ಲಾಕ್ ಡೌನ್, ಕೊರೊನಾ ಆತಂಕ ಮತ್ತೆ  ರಸ್ತೆ ಅಪಘಾತ ಘಟನೆಯಿಂದ ಕಂಗಲಾಗಿದ್ದಾರೆ‌.

ಇದನ್ನೂ ಓದಿ: https://kannada.news18.com/news/state/here-is-why-second-dose-of-covid-vaccine-is-given-after-45-days-of-first-instead-of-28-sktv-554679.html

ಗ್ರಾಮದಲ್ಲಿಯೇ ಉದ್ಯೋಗ ನೀಡಬೇಕೆಂದು ಕಾರ್ಮಿಕರು ಒತ್ತಾಯ ಮಾಡಿದ್ದಾರೆ . ಇಂತಹ ದುರ್ಘಟನೆ ಯಿಂದ ಮುನಮುಟಗಿ ಗ್ರಾಮದ ಕಾರ್ಮಿಕರು ಈಗ ಬೆರೆ ಕಡೆ ಕೆಲಸಕ್ಕೆ ತೆರಳಲು ಸಂಕಷ್ಟ ಎದುರಿಸುತ್ತಿದ್ದಾರೆ. ಲಾಕ್ ಡೌನ್, ಕೊರೊನಾ ಆತಂಕ ಜೊತೆ ಐದು ಜನ ಕಾರ್ಮಿಕರು ಮೃತ ಪಟ್ಟ ನಂತರ, ಕಾರ್ಮಿಕರು ಊರಲ್ಲಿಯೇ ಕೆಲಸ ಮಾಡಬೇಕೆಂದು ಊರಲ್ಲಿ ಕೆಲಸಕ್ಕಾಗಿ ಅಲೆದಾಡುವಂತಾಗಿದೆ. ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನವಾಗದ ಹಿನ್ನೆಲೆ, ಕಾರ್ಮಿಕರ ಕೈಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ.ಇದರಿಂದ ಗ್ರಾಮೀಣ ಭಾಗದ ಕಾರ್ಮಿಕರು ಪರದಾಡುವಂತಾಗಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಬಿಜೆಪಿ ‌ಮುಖಂಡ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಪಂಚಾಯತ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಮರ್ಪಕವಾಗಿ ಕೆಲಸ ಸಿಗುತ್ತಿಲ್ಲ. ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಕಾರ್ಮಿಕರು ಕೆಲಸವಿಲ್ಲದೇ ಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಮಿಕರ ಹಿತ ಕಾಪಾಡುವ ವಿಶ್ವಾಸ ನನಗಿದೆ ಎಂದರು. ಯಾದಗಿರಿ ಜಿಲ್ಲೆಯ ಗುರುಮಠಕಲ್, ಶಹಾಪುರ, ಸುರಪುರ, ವಡಗೇರಾ, ಹುಣಸಗಿ ಮೊದಲಾದ ಕಡೆ ಗ್ರಾಮೀಣ ಭಾಗದಲ್ಲಿ ಈಗ ಕಾರ್ಮಿಕರು ಕೆಲಸವಿಲ್ಲದೇ ಕೆಲಸಕ್ಕಾಗಿ ಪರದಾಡುವಂತಾಗಿದೆ. ಸರಕಾರ ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಜಾರಿ ಮಾಡಿ ಉದ್ಯೋಗ ನೀಡಿ ಕಾರ್ಮಿಕರ ಹಿತ ಕಾಪಾಡಬೇಕಿದೆ.
Published by:Soumya KN
First published: