Police Quarters: ಮೂಲಸೌಲಭ್ಯವಿಲ್ಲದೆ ಭೂತ ಬಂಗಲೆಯಂತಾದ ಕುಶಾಲನಗರದ ಪೊಲೀಸ್ ಕ್ವಾಟ್ರಸ್!

ಕಳೆದ 15 ವರ್ಷಗಳ ಹಿಂದೆ ಮೂರು ಹಂತಸ್ತಿನ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ 12 ಮನೆಗಳಿವೆ. ಆದರೆ ಬಹುತೇಕ ಮನೆಗಳಲ್ಲಿ ಸರಿಯಾದ ಕಿಟಕಿ ಬಾಗಿಲುಗಳಿಲ್ಲ. ಕಟ್ಟಡವೂ ಸಾಕಷ್ಟು ಬಿರುಕು ಬಿಟ್ಟಿದ್ದು ಆತಂಕದಲ್ಲೇ ಜೀವನ ನಡೆಸಬೇಕಾಗಿದೆ ಎನ್ನೋದು ಪೊಲೀಸ್ ಸಿಬ್ಬಂದಿಗಳ ಕುಟುಂಬಗಳ ಅಳಲು.

ಕುಶಾಲನಗರ ಪೊಲೀಸ್ ಕ್ವಾಟ್ರಸ್ ಪರಿಸ್ಥಿತಿ.

ಕುಶಾಲನಗರ ಪೊಲೀಸ್ ಕ್ವಾಟ್ರಸ್ ಪರಿಸ್ಥಿತಿ.

  • Share this:
ಕೊಡಗು: ಸಮಾಜದಲ್ಲಿ ಯಾವುದೇ ಅವಘಡಗಳು ಸಂಭವಿಸಿದ್ದರೂ ರಕ್ಷಣೆಗೆ ಮೊದಲು ಪೊಲೀಸರು ಮುಂದಾಗುತ್ತಾರೆ. ಆದರೆ ಇಲ್ಲಿ ಪೊಲೀಸರಿಗೆ ಸರಿಯಾದ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ಇಂತಹ ಸ್ಥಿತಿ ಇರೋದು ಬೇರೆಲ್ಲೂ ಅಲ್ಲ ಕೊಡಗಿನ ಕುಶಾಲನಗರದಲ್ಲಿ (Kushalanagara). ಕುಶಾಲನಗರ ಕೊಡಗಿನ ವಾಣಿಜ್ಯ ಪಟ್ಟಣವಾಗಿದ್ದು, ಈಗ ಇದು ತಾಲ್ಲೂಕು ಕೇಂದ್ರವಾಗಿಯೂ ಮೇಲ್ದರ್ಜೆಗೆ ಏರಿದೆ. ಇಲ್ಲಿ ಡೆವೈಎಸ್ ಪಿ ಕಚೇರಿ, ಇನ್ಸ್‌ಪೆಕ್ಟರ್ ಕಚೇರಿ, ನಗರ ಪೊಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಜೊತೆಗೆ ಸಂಚಾರಿ ಪೊಲೀಸ್ ಠಾಣೆಯೂ ಇದೆ. ಈ ಎಲ್ಲಾ ಠಾಣೆಗಳಲ್ಲಿ ನೂರಾರು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬಹುತೇಕ ಸಿಬ್ಬಂದಿಗೆ ವಾಸ್ತವ್ಯ ಮಾಡೋದಕ್ಕೆ ಸುಸಜ್ಜಿತವಾದ ವಸತಿ ಗೃಹಗಳ ವ್ಯವಸ್ಥೆ ಇಲ್ಲ (Police Quarters). ಇರುವ ವಸತಿ ಗೃಹಗಳು 35 ರಿಂದ 40 ವರ್ಷಗಳ ಹಿಂದಿನ ಹಳೆಯ ಕಟ್ಟಡಗಳು.

ಈ ಕಟ್ಟಡಗಳೆಲ್ಲವೂ ಬಹುತೇಕ ಶಿಥಿಲಾವಸ್ಥೆ ತಲುಪಿದ್ದು, ಕಟ್ಟಡಗಳ ಮೇಲೆ ಸಂಪೂರ್ಣ ಕಾಡು ಬೆಳೆದುಕೊಂಡಿದೆ. ಹೀಗಾಗಿ ಇಡೀ ಕಟ್ಟಡಗಳೂ ಭೂತ ಬಂಗಲೆಯಂತೆ ಆಗಿವೆ. ಹಂಚುಗಳೆಲ್ಲಾ ಹೊಡೆದು ಹೋಗಿ, ಕಿಟಕಿ ಬಾಗಿಲುಗಳೆಲ್ಲಾ ಮುರಿದುಹೋಗಿದ್ದರಿಂದ ಈ ಹಿಂದೆ ಅವುಗಳಲ್ಲಿ ವಾಸವಾಗಿದ್ದ ಸಿಬ್ಬಂದಿ ಖಾಲಿ ಮಾಡಿ ಬೇರೆಡೆಗೆ ಹೋಗಿ ಬಾಡಿಗೆ ಮನೆಗಳಲ್ಲಿ ಇದ್ದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಬೇರೆ ದಾರಿಯಿಲ್ಲದೆ ಇದೇ ಹಳೆಯದಾದ ಮೂರು ಕಟ್ಟಡಗಳಲ್ಲಿ ಇಂದಿಗೂ ಮೂರು ಪೊಲೀಸ್ ಸಿಬ್ಬಂದಿಗಳ ಕುಟುಂಬಗಳು ಬದುಕುತ್ತಿವೆ. ಅವುಗಳಲ್ಲಿ ಹಂಚುಗಳೆಲ್ಲಾ ಹೊಡೆದು ಹೋಗಿ ಮಳೆಗಾಲ ಬಂತೆಂದರೆ ಇಡೀೀ ಮನೆಗೆ ನೀರು ತುಂಬಿಕೊಂಡು ಬದುಕೋದೆ ದುಸ್ಥರವಾಗಿದೆ. ಅಲ್ಲದೆ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಯಾವಾಗ ಅನಾಹುತಗಳು ಸಂಭವಿಸುತ್ತದೆಯೋ ಎಂದು ಜೀವ ಭಯದಲ್ಲೇ ಬದುಕುವಂತಾಗಿದೆ.

ಹೆಂಚುಗಳೆಲ್ಲಾ ಹೊಡೆದು ಹೋಗಿ ವಾಸಿಸಲು ಸಾಧ್ಯವಾಗದೆ ಸಿಬ್ಬಂದಿಗಳು ಖಾಲಿ ಮಾಡಿದ್ದ ಮನೆಗಳು ಈಗ ಸಂಪೂರ್ಣ ಕಾಡು ಪಾಲಾಗಿವೆ. ವಿಪರ್ಯಾಸವೆಂದರೆ ಪಾಳು ಬಿದ್ದಿರುವ ಮನೆಗಳ ಒಳಗೆ ಸಂಪೂರ್ಣ ಮದ್ಯದ ಬಾಟಲಿಗಳು ತುಂಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ನಿರ್ಮಾಣವಾಗಿವೆ ಎನ್ನೋದು ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರಾದ ಮನು ಅವರ ಆಕ್ರೋಶ.

ಕಳೆದ 15 ವರ್ಷಗಳ ಹಿಂದೆ ಮೂರು ಹಂತಸ್ತಿನ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ 12 ಮನೆಗಳಿವೆ. ಆದರೆ ಬಹುತೇಕ ಮನೆಗಳಲ್ಲಿ ಸರಿಯಾದ ಕಿಟಕಿ ಬಾಗಿಲುಗಳಿಲ್ಲ. ಕಟ್ಟಡವೂ ಸಾಕಷ್ಟು ಬಿರುಕು ಬಿಟ್ಟಿದ್ದು ಆತಂಕದಲ್ಲೇ ಜೀವನ ನಡೆಸಬೇಕಾಗಿದೆ ಎನ್ನೋದು ಪೊಲೀಸ್ ಸಿಬ್ಬಂದಿಗಳ ಕುಟುಂಬಗಳ ಅಳಲು. ಪಕ್ಕದಲ್ಲೇ ಭಾರೀ ಪ್ರಮಾಣದಲ್ಲಿ ಕಾಡು ಬೆಳೆದಿರುವುದರಿಂದ ಹಾವು ಚೇಳುಗಳ ಕಾಟ ಮಿತಿ ಮೀರಿದೆ. ಮಕ್ಕಳನ್ನು ಹೊರಕ್ಕೆ ಆಟಕ್ಕೆ ಕಳುಹಿಸಲು ಕೂಡ ಭಯ ಪಡುವಂತೆ ಆಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ನೆಮ್ಮದಿಯ ವಾಸಕ್ಕೆ ಅವಕಾಶ ಮಾಡಿಕೊಡಲಿ ಎನ್ನೋದು ಪೊಲೀಸ್ ಸಿಬ್ಬಂದಿಗಳ ಆಗ್ರಹ.

ಇದನ್ನು ಓದಿ: Midday Meal: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಬಳಿಕ ಶಾಲಾ ಮಕ್ಕಳಿಗೆ ಮತ್ತೆ ಮಧ್ಯಾಹ್ನದ ಬಿಸಿಯೂಟ!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
Published by:HR Ramesh
First published: