• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಂಗಾತಿ ಹುಡುಕಿ ಕಾಡಿಗೆ ಹೋಗಿ ವರ್ಷವಾದರೂ ವಾಪಸ್ಸಾಗದ ಕುಶ: ಅರಣ್ಯ ಇಲಾಖೆಯಿಂದ ನಿರಂತರ ಶೋಧ!

ಸಂಗಾತಿ ಹುಡುಕಿ ಕಾಡಿಗೆ ಹೋಗಿ ವರ್ಷವಾದರೂ ವಾಪಸ್ಸಾಗದ ಕುಶ: ಅರಣ್ಯ ಇಲಾಖೆಯಿಂದ ನಿರಂತರ ಶೋಧ!

ಕಾಡಾನೆಗಳ ಗುಂಪು.

ಕಾಡಾನೆಗಳ ಗುಂಪು.

ಶಿಬಿರದಿಂದ ತಪ್ಪಿಸಿಕೊಂಡು ಹೋಗಿರುವ  ಆನೆ ದುಬಾರೆ ಸಾಕಾನೆ ಶಿಬಿರದ ಸುತ್ತಲೂ ಇರುವ ಅರಣ್ಯದಲ್ಲೇ ಓಡಾಡಿಕೊಂಡು ಇದೆಯಾದರೂ ಅದನ್ನು ಹಿಡಿದು ವಾಪಸ್ ಕರೆತರಲು ಸಾಧ್ಯವಾಗುತ್ತಿಲ್ಲ. ಗುಂಪಿನಲ್ಲಿರುವ ಹೆಣ್ಣಾನೆಯೊಂದು ಕುಶ ಆನೆಯನ್ನು ವಾಪಸ್ ಕರೆತರಲು ಬಿಡುತ್ತಿಲ್ಲ ಎನ್ನೋದು ಅಚ್ಚರಿ. 

ಮುಂದೆ ಓದಿ ...
  • Share this:

ಕೊಡಗು: 28  ವರ್ಷದ ಕುಶ ತನ್ನ ಸಂಗಾತಿ ಅರಸುತ್ತಾ ಕಾಡಿಗೆ ಹೋದವನು ಇದುವರೆಗೂ ವಾಪಸ್ ತಿರುಗಿ ಬಂದಿಲ್ಲ. ಅವನಿಗಾಗಿ ಅರಣ್ಯ ಇಲಾಖೆ ಹುಡುಕಾಡದ ಜಾಗವಿಲ್ಲ. ಓಹ್ ಈ ಕುಶ ಯಾರು? ಅವನನ್ನು ಅರಣ್ಯ ಇಲಾಖೆ ಯಾಕೆ ಹುಡುಕಾಡಬೇಕು ಅಂತ ಯೋಚಿಸಿತ್ತಾ ಇದ್ದೀರಾ. ಇಲ್ಲೇ ಇರೋದು ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ. ಆನೆಗಳ ಮೇಲೇರಿ ಇಲ್ಲೆಲ್ಲಾದರೂ ಕುಶ ಇರಬಹುದೇ ಎಂದು ಕಾಡಿನಲ್ಲಿ ಹುಡುಕಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಮರವೇರಿ ಎಲ್ಲಾದರೂ ಪೊದೆಗಳಲ್ಲಿ ಅಡಗಿಕೊಂಡಿರಬಹುದೇ ಎಂದು ಕಣ್ಣು ಕಂಡಷ್ಟು ದೂರಕ್ಕೆ ನೋಡುತ್ತಿರುವ ಅರಣ್ಯ ರಕ್ಷಕರು. ನಾವು ಹೇಳ್ತಾ ಇರೋದು ಮದವೇರಿ ಸಂಗಾತಿ ಹುಡುಕಿ ಕಾಡಿಗೆ ಹೋಗಿರುವ 28 ರ ಹರೆಯದ ಸಾಕಾನೆ ಕುಶನ ಬಗ್ಗೆ.


ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ 2017 ರಿಂದ ಇದ್ದ ಕುಶ ಎಂಬ ಗಂಡಾನೆ, ಸಂಗಾತಿಯನ್ನು ಹುಡುಕಿ ಕಾಡಿಗೆ ಹೋಗಿ ವರ್ಷವಾಗಿದೆ. ಆದರೆ ಇಂದಿಗೂ ಶಿಬಿರಕ್ಕೆ ವಾಪಸ್ ಬಂದಿಲ್ಲ. ದುಬಾರೆ ಸಾಕಾನೆ ಶಿಬಿರದಲ್ಲಿ ಒಟ್ಟು 31 ಸಾಕಾನೆಗಳಿವೆ. ಅಷ್ಟು ಆನೆಗಳಲ್ಲಿ ಎರಡು ಮಾತ್ರವೇ ಹೆಣ್ಣಾನೆ ಇದ್ದು, ಉಳಿದ 29 ಗಂಡಾನೆಗಳಿವೆ. ಗಂಡಾನೆಗಳು ಸಹಜವಾಗಿ ವರ್ಷಕ್ಕೊಮ್ಮೆ ಮದವೇರುತ್ತವೆ. ಹೀಗೆ ಮದವೇರಿದ ಆನೆಗಳಿಗೆ, ಒಂದು ತಿಂಗಳಿಂದ ನಾಲ್ಕು ತಿಂಗಳವರೆಗೆ ಮದವಿರುತ್ತದೆ. ಹೀಗೆ ವರ್ಷದ ಹಿಂದೆ ಮದ ಬಂದ ಕುಶ ಆನೆ, ಕಾಲಿಗೆ ಕಟ್ಟಿದ್ದ ಚೈನ್ ಕಿತ್ತುಕೊಂಡು ಸಂಗಾತಿ ಅರಸಿ ಕಾಡಿಗೆ ಹೋಗಿದ್ದ.


ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ; ಚಿಂಚಲಿಯ ಪ್ರಸಿದ್ಧ ಮಾಯಕ್ಕಾದೇವಿ ಜಾತ್ರೆ ರದ್ದು, ಬೀದಿಗೆ ಬಿದ್ದ ನೂರಾರು ವ್ಯಾಪಾರಿಗಳು


ಸಾಮಾನ್ಯವಾಗಿ ಮದಬಂದಾಗ ಅದರೊಂದಿಗೆ ಹೆಣ್ಣಾನೆಯನ್ನು ಕಟ್ಟಿಹಾಕಲಾಗುತ್ತದೆ. ಈ ವೇಳೆ ಹೆಣ್ಣಾನೆಯೊಂದಿಗೆ ಮಿಲನ ಹೊಂದುವ ಗಂಡಾನೆ ಸಹಜ ಸ್ಥಿತಿಗೆ ಬರುತ್ತದೆ. ಆದರೆ ಶಿಬಿರದಲ್ಲಿ ಕೇವಲ ಎರಡು ಹೆಣ್ಣಾನೆ ಇದ್ದು, ಕಾವೇರಿ ಆನೆಗೆ ವಯಸ್ಸಾಗಿದೆ. ಹೀಗಾಗಿ ಅದು ಗಂಡಾನೆಯನ್ನು ಸೇರಿಸುವುದಿಲ್ಲ. ಮತ್ತೊಂದು ಶ್ರೀವಿದ್ಯಾ ಎನ್ನೋ ಹೆಣ್ಣಾನೆ ಇದ್ದು ಅದು ಚಿಕ್ಕ ಆನೆ. ಹೀಗಾಗಿ ಮದಬಂದ ಗಂಡಾನೆಗಳಿಗೆ ಶಿಬಿರದಲ್ಲಿ ಸಂಗಾತಿಗಳಾಗುವ ಹೆಣ್ಣಾನೆಗಳಿಲ್ಲ. ಮದಬಂದಾಗ ಆಕಸ್ಮಿಕವಾಗಿ ತಪ್ಪಿಸಿಕೊಂಡು ಕಾಡಿಗೆ ಹೋಗುವ ಗಂಡಾನೆಗಳು ಒಂದು ವಾರ ಅಥವಾ ಹದಿನೈದು ದಿನಗಳವರೆಗೆ ಹೆಣ್ಣಾನೆಯೊಂದಿಗೆ ಕೂಡಿ ನಂತರ ಶಿಬಿರಕ್ಕೆ ವಾಪಸ್ ಆಗುತ್ತವೆ. ಆದರೆ ಈ ಕುಶ ಮಾತ್ರ ವರ್ಷವಾದರೂ ವಾಪಸ್ ಆಗಿಲ್ಲ ಎನ್ನುತ್ತಿದ್ದಾರೆ ದುಬಾರೆ ಸಾಕಾನೆ ಶಿಬಿರದ ಡಿಆರ್​ಎಫ್‍ಓ ಕೆ.ಪಿ. ರಂಜನ್.


ಕುಶ ಆನೆಯನ್ನು 2017 ರಲ್ಲಿ ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿ ಬಳಿ ಹಿಡಿಯಲಾಗಿತ್ತು. ಅತ್ಯಂತ ಕೋಪಿಷ್ಟನಾಗಿದ್ದ ಕುಶ ಆನೆಯನ್ನು ಪಳಗಿಸಿದ ಮೇಲೆ ತುಂಬಾ ಸಾಧುವಾಗಿ ಪರಿವರ್ತನೆಯಾಗಿದ್ದ. ಶಿಬಿರದಿಂದ ತಪ್ಪಿಸಿಕೊಂಡು ಹೋಗಿರುವ  ಆನೆ ದುಬಾರೆ ಸಾಕಾನೆ ಶಿಬಿರದ ಸುತ್ತಲೂ ಇರುವ ಅರಣ್ಯದಲ್ಲೇ ಓಡಾಡಿಕೊಂಡು ಇದೆಯಾದರೂ ಅದನ್ನು ಹಿಡಿದು ವಾಪಸ್ ಕರೆತರಲು ಸಾಧ್ಯವಾಗುತ್ತಿಲ್ಲ. ಗುಂಪಿನಲ್ಲಿರುವ ಹೆಣ್ಣಾನೆಯೊಂದು ಕುಶ ಆನೆಯನ್ನು ವಾಪಸ್ ಕರೆತರಲು ಬಿಡುತ್ತಿಲ್ಲ ಎನ್ನೋದು ಅಚ್ಚರಿ.


ವರದಿ: ರವಿ ಎಸ್ ಹಳ್ಳಿ

Published by:HR Ramesh
First published: