ರಾಯಚೂರಿನಲ್ಲಿ ಎಸ್​ಟಿ ಸಮಾವೇಶ; ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ

‌ಸಮಾವೇಶದಲ್ಲಿ ಮಾತನಾಡಿದ ಕಾಗಿನೆಲೆ ಕನಕ ಗುರುಪೀಠದ ಶ್ರೀನಿಜಾನಂದ ಪುರಿ ಸ್ವಾಮೀಜಿಗಳು ಇಲ್ಲಿ ಯಾವುದೇ ಗೊಂದಲಬೇಡ. ನಿಮ್ಮ ಗೊಂದಲಗಳೇನೆ ಇರಲಿ. ಈ ಗೊಂದಲಕ್ಕೆ ಜನ ಭಾಗಿಯಾಗುವುದಿಲ್ಲ. ಜನವರಿ 15ರಿಂದ ಪಾದಯಾತ್ರೆ ನಡೆಯುತ್ತಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ನಮ್ಮ ಹಕ್ಕೋತ್ತಾಯ ಮಾಡಲಾಗುವುದು ಎಂದರು.

ರಾಯಚೂರಿನಲ್ಲಿ ನಡೆದ ಕುರುಬ ಎಸ್​ಟಿ ಸಮಾವೇಶ ಉದ್ಘಾಟನೆ.

ರಾಯಚೂರಿನಲ್ಲಿ ನಡೆದ ಕುರುಬ ಎಸ್​ಟಿ ಸಮಾವೇಶ ಉದ್ಘಾಟನೆ.

  • Share this:
ರಾಯಚೂರು: ರಾಜ್ಯದಲ್ಲಿರುವ ಜನಾಂಗದ ಬಹುಸಂಖ್ಯಾತರಲ್ಲೊಂದಾದ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಈಗ ನಡೆಯುತ್ತಿರುವ ಸಮಾವೇಶವು ಕುರುಬ ಸಮಾಜ ಒಡೆಯುವ ಆರ್ ಎಸ್ ಎಸ್ ತಂತ್ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಇಂದು ಸಿಂಧನೂರಿನಲ್ಲಿ ನಡೆದ ಕುರುಬರ ಎಸ್ಟಿ ಮೀಸಲಾತಿ ಸಮಾವೇಶದಲ್ಲಿ ಹಲವರು ಪರೋಕ್ಷವಾಗಿ ಪರ- ವಿರೋಧವಾಗಿ ಮಾತನಾಡಿದರು.

ಸಿಂಧನೂರಿನಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಕುರುಬ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಕನಕ ಗುರುಪೀಠ ಮೂರು ಜನ ಸ್ವಾಮೀಜಿಗಳು ಭಾಗವಹಿಸಿದ್ದರು. ಸಮಾವೇಶವನ್ನು  ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್ ಎಂ ರೇವಣ್ಣ,  ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು. ಸುಮಾರು 50 ಸಾವಿರಕ್ಕೂ ಅಧಿಕ ಜನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆಂಧ್ರದ ಇಂದೂರು ಸಂಸದ ಗೋರಂಟ್ಲಿ ಮಾಧವರಾವ್ ಹಾಗೂ ಕೆ.ಎಸ್. ಈಶ್ವರ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಸಮಾವೇಶದಲ್ಲಿ ಮಾತನಾಡಿದ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷರಾದ ಕೆ ವಿರುಪಾಕ್ಷಪ್ಪ ನೇರವಾಗಿ ಸಿದ್ದರಾಮಯ್ಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. ಈಗ ಏನೇನೊ ಮಾತನಾಡುತ್ತಿದ್ದೀರಿ., ಈ ಹಿಂದೆ ಅಧಿಕಾರದಲ್ಲಿದ್ದಾಗ ಕತ್ತೆ ಕಾಯುತ್ತಿದ್ದೀರಾ?, ಈಗಲಾದರೂ ಸ್ವಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಬನ್ನಿ. ಈ ವಯಸ್ಸಿನಲ್ಲಿಯೂ ನೀವೇ ಖುರ್ಚಿಯಲ್ಲಿರಬೇಕು, ನೀವು ಹೇಳಿದಂತೆ ಕೇಳಬೇಕೆಂದರೆ ಹೇಗೆ. ಈಗ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ ಇಲ್ಲಿ ನನ್ನ ಸ್ವಪ್ರತಿಷ್ಠೆ ಏನು ಇಲ್ಲ. ಆರ್ ಎಸ್ ಎಸ್ ಎಂದು ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಆರ್ ಎಸ್ ಎಸ್ ಹಿಂದು ಸಮಾಜದಲ್ಲಿರುವ ಕುರುಬರಿಗೆ ಮೀಸಲಾತಿ ನೀಡಿದರೆ ಒಳ್ಳೆಯದು ಎನ್ನುತ್ತಿದೆ. ಈ ಹೋರಾಟ ನಿಲ್ಲುವುದಿಲ್ಲ. ಸ್ವಾಮೀಜಿಗಳ ನೇತೃತ್ವದ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಲಿದ್ದಾರೆ. ನಮ್ಮ ಹೋರಾಟ ಮೋದಿ ಹಾಗೂ ಅಮಿತ್ ಶಾರವರೆಗೂ ಮುಟ್ಟಲಿದೆ. ಕುಲಶಾಸ್ತ್ರ ಅಧ್ಯಯನ, ರಾಜಕೀಯ ಹಾಗು ಜನರ ಒತ್ತಡದೊಂದಿಗೆ ಮೀಸಲಾತಿ ಪಡೆಯಲು ಹೋರಾಡುತ್ತೇವೆ ಎಂದರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ ನಮ್ಮ ಹೋರಾಟ ಮೀಸಲಾತಿಗಾಗಿ. ಇಲ್ಲಿ ಯಾವುದೇ ವ್ಯಕ್ತಿಯ ಪರ ವಿರೋಧವಾಗಿ ಮಾತನಾಡುವುದು ಬೇಡ. ಭಿನ್ನಾಭಿಪ್ರಾಯಗಳನ್ನು ನಾಲ್ಕು ಗೋಡೆಯ ಮಧ್ಯೆ ಮಾತನಾಡಿ ಬಗೆಹರಿಸಿಕೊಳ್ಳೋಣ. ವೈಯಕ್ತಿಕವಾಗಿ ಯಾರನ್ನು ದೂಷಿಸುವುದು ಬೇಡ ಎಂದರು.

ಇದನ್ನು ಓದಿ: ಮಹಿಳಾ ಸದಸ್ಯರ ಬದಲಿಗೆ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ; ಸಿದ್ದರಾಮಯ್ಯ ಕಿವಿಮಾತು

‌ಸಮಾವೇಶದಲ್ಲಿ ಮಾತನಾಡಿದ ಕಾಗಿನೆಲೆ ಕನಕ ಗುರುಪೀಠದ ಶ್ರೀನಿಜಾನಂದ ಪುರಿ ಸ್ವಾಮೀಜಿಗಳು ಇಲ್ಲಿ ಯಾವುದೇ ಗೊಂದಲಬೇಡ. ನಿಮ್ಮ ಗೊಂದಲಗಳೇನೆ ಇರಲಿ. ಈ ಗೊಂದಲಕ್ಕೆ ಜನ ಭಾಗಿಯಾಗುವುದಿಲ್ಲ. ಜನವರಿ 15ರಿಂದ ಪಾದಯಾತ್ರೆ ನಡೆಯುತ್ತಿದೆ. ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ನಮ್ಮ ಹಕ್ಕೋತ್ತಾಯ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಮುಖಂಡರಾದ ಮುಕಡಪ್ಪ, ಶಾಂತಪ್ಪ, ದೊಡ್ಡನಗೌಡ ಪಾಟೀಲ, ಜಿಹ್ವೇಶ್ವರಿ, ತಿಂಥಣಿ ಕನಕಗುರು ಪೀಠದ ಶ್ರೀ ಸಿದ್ದರಾಮಾನಂದ ಪುರಿ, ಈಶ್ವರಾನಂದ ಪುರಿ ಸ್ವಾಮೀಜಿಗಳು ಉಪಸ್ಥಿತರಿದ್ದರು.
Published by:HR Ramesh
First published: