HOME » NEWS » District » KSRTC STAFF PROTEST IN MADIKERI RHHSN RSK

ಕೆಎಸ್ಆರ್​ಟಿಸಿ ನೌಕರರ ಪ್ರತಿಭಟನೆ; ಮಡಿಕೇರಿಯಲ್ಲಿ ನಿನ್ನೆ ಉರುಳು ಸೇವೆ ಇಂದು ಬಸ್ಸಿನಡಿ ಮಲಗಿ ಅರೆಬೆತ್ತಲೆ ಹೋರಾಟ

ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ಪ್ರತಿಭಟನೆ ಸ್ವರೂಪ ಬದಲಾಗುತಿದ್ದು, ಯಾವ ಹಂತ ತಲುಪುತ್ತೋ ಕಾದು ನೋಡಬೇಕಾಗಿದೆ. ಒಂದು ವೇಳೆ ಸರ್ಕಾರ ಅವರ ಬೇಡಿಕೆಗಳನ್ನುು ಈಡೇರಿಸದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. 

news18-kannada
Updated:December 12, 2020, 2:43 PM IST
ಕೆಎಸ್ಆರ್​ಟಿಸಿ ನೌಕರರ ಪ್ರತಿಭಟನೆ; ಮಡಿಕೇರಿಯಲ್ಲಿ ನಿನ್ನೆ ಉರುಳು ಸೇವೆ ಇಂದು ಬಸ್ಸಿನಡಿ ಮಲಗಿ ಅರೆಬೆತ್ತಲೆ ಹೋರಾಟ
ಮಡಿಕೇರಿಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಕೆಎಸ್​ಆರ್​ಟಿಸಿ ನೌಕರರು.
  • Share this:
ಕೊಡಗು: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ನಿನ್ನೆಯಿಂದಲೂ ನಡೆಯುತ್ತಿರುವ ಕೆಎಸ್‍ಆರ್ ಟಿಸಿ ನೌಕರರ ಪ್ರತಿಭಟನೆ ಮಡಿಕೇರಿಯಲ್ಲಿ ಕ್ಷಣದಿಂದ ಕ್ಷಣಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ನಿನ್ನೆ ಬೆಳಿಗ್ಗೆಯಿಂದ ಎಲ್ಲಾ ಬಸ್ಸುಗಳನ್ನು ಸ್ಥಗಿತಗೊಳಿಸಿ ಮಡಿಕೇರಿ ಬಸ್ಸು ನಿಲ್ದಾಣದಲ್ಲೇ ಪ್ರತಿಭಟನೆ ನಡೆಸುತ್ತಿರುವ ನೌಕರರ ಸಹನೆಯ ಕಟ್ಟೆಯೊಡೆದಿದ್ದು, ಬಸ್ಸಿನ ಚಕ್ರಕ್ಕೆ ಅಡ್ಡಲಾಗಿ ಮಲಗಿ ನೌಕರರು ಪ್ರತಿಭಟನೆ ನಡೆಸಿದರು.

ಬಸ್ ನಿಲ್ದಾಣದಲ್ಲೇ ನಿಂತಿರುವ ಪ್ರತೀ ಬಸ್ಸಿನ ಚಕ್ರಗಳಿಗೆ ಅಡ್ಡಲಾಗಿ ಮಲಗಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ನೌಕರರೆಂದು ಘೋಷಿಸುವವರೆಗೆ ಪ್ರತಿಭಟನಾ ಧರಣಿ ನಡೆಸುವುದಾಗಿ ಪಟ್ಟುಹಿಡಿದ್ದಾರೆ. ಬೆಳಿಗ್ಗೆಯೂ ಅರೆಬೆತ್ತಲೆಯಾಗಿ ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನು ಓದಿ: ಮುಷ್ಕರ ನಿಲ್ಲಿಸುವಂತೆ ಬಿಎಂಟಿಸಿ ಎಂಡಿ ಶಿಖಾ ಮನವಿ; ಸಾರಿಗೆ ನೌಕರರ ಜೊತೆ ಮಾತುಕತೆಗೆ ಸವದಿಗೆ ಸಿಎಂ ಸೂಚನೆ

ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಕೆಎಸ್‍ಆರ್ ಟಿಸಿ ನೌಕರರು ನಿನ್ನೆಯಿಂದ ನಡೆಸುತ್ತಿರುವ ಪ್ರತಿಭಟನಾಕಾರರು ಎರಡನೆ ದಿನವಾದ ಇಂದು ಮಡಿಕೇರಿಯಲ್ಲಿ ಬಸ್ ನಿಲ್ದಾಣದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿಯೂ ಬಸ್ ನಿಲ್ದಾಣದಲ್ಲೇ ತಂಗಿದ್ದ ಪ್ರತಿಭಟನಾಕಾರರು ಇಂದು ಮತ್ತೆ ಬೆಳಿಗ್ಗೆ ಆರು ಗಂಟೆಯಿಂದಲೇ ಧರಣಿ ಆರಂಭಿಸಿದ್ದಾರೆ. ಬಸ್ ನಿಲ್ದಾಣದಲ್ಲೇ ಅಡುಗೆ ಮಾಡುತ್ತಿರುವ ಪ್ರತಿಭಟನಾಕಾರರು ಸಂಜೆಯವರೆಗೂ ಧರಣಿ ಮುಂದುವರೆಸಲಿದ್ದಾರೆ. ಒಂದು ವೇಳೆ ಸರ್ಕಾರ ಇಂದು ತಮ್ಮ ಸಮಸ್ಯೆ ಬಗೆಹರಿಸದಿದ್ದರೆ, ನಾಳೆಯೂ ತಮ್ಮ ಪ್ರತಿಭಟನೆ ಮುಂದುವರೆಸಲಿದ್ದಾರೆ. ನಾಲ್ಕು ನೂರಕ್ಕೂ ಹೆಚ್ಚಿನ ಪ್ರತಿಭಟನಾಕಾರರು ನಿರಂತರವಾಗಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Youtube Video

ಬೆಳಗ್ಗೆಯಿಂದಲೇ ಅರೆಬೆತ್ತಲೆಯಾಗಿ ಪ್ರತಿಭಟಿಸಿದ್ದ ಸಾರಿಗೆ ನೌಕರರು ಆ ನಂತರ ಬಸ್ಸುಗಳ ಚಕ್ರಕ್ಕೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕ್ಷಣದಿಂದ ಕ್ಷಣಕ್ಕೆ ಪ್ರತಿಭಟನೆ ಸ್ವರೂಪ ಬದಲಾಗುತಿದ್ದು, ಯಾವ ಹಂತ ತಲುಪುತ್ತೋ ಕಾದು ನೋಡಬೇಕಾಗಿದೆ. ಒಂದು ವೇಳೆ ಸರ್ಕಾರ ಅವರ ಬೇಡಿಕೆಗಳನ್ನುು ಈಡೇರಿಸದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
Published by: HR Ramesh
First published: December 12, 2020, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories