• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಸ್​​ಆರ್​​​ಟಿಸಿ ಬಸ್ ಸಂಚಾರ ಸ್ಥಗಿತ : ಪ್ರಯಾಣಿಕರ ಪರದಾಟ

ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಸ್​​ಆರ್​​​ಟಿಸಿ ಬಸ್ ಸಂಚಾರ ಸ್ಥಗಿತ : ಪ್ರಯಾಣಿಕರ ಪರದಾಟ

ನಿಲ್ದಾಣದಲ್ಲಿ ನಿಂತಿರುವ ಬಸ್

ನಿಲ್ದಾಣದಲ್ಲಿ ನಿಂತಿರುವ ಬಸ್

ಇಂದು ಬಹುತೇಕ ಬಸ್ ಗಳು ಶಿವಮೊಗ್ಗ ನಿಲ್ದಾಣಕ್ಕೆ ಬಂದಿಲ್ಲ. ಅದರಲ್ಲೂ ಬೆಂಗಳೂರಿನಿಂದ ಬರುವಂತ ಮತ್ತು ಬೆಂಗಳೂರಿಗೆ ತೆರಳುವಂತ ಬಸ್ ಗಳು ಬಹುತೇಕ ಸ್ಥಗಿತವಾಗಿವೆ

  • Share this:

ಶಿವಮೊಗ್ಗ (ಡಿಸೆಂಬರ್​.11) :  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಹೀಗಾಗಿ ಕೆಎಸ್​​ಆರ್​ಟಿಸಿ ಬಸ್ ಗಳ ಸಂಚಾರ ಸ್ಥಗಿತಗೊಂಡಿವೆ. ಶಿವಮೊಗ್ಗ ವಿಭಾಗದಲ್ಲಿ 320 ಬಸ್ ಗಳು ಇದ್ದು, ಅದರಲ್ಲಿ ಇಂದು 60 ಬಸ್ ಗಳು ಬೆಳಗ್ಗೆ ನಿಲ್ದಾಣದಿಂದ ಹೊರಟಿವೆ. ಕೆಎಸ್ ಆರ್ ಟಿಸಿ ಬಸ್  ಸಿಬ್ಬಂದಿಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬ ಒತ್ತಾಯ ಜೋರಾಗುತ್ತಿದೆ. ಇಂದಿನಿಂದ ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ನ ಸಿಬ್ಬಂದಿಗಳು ಪ್ರತಿಭಟನೆ  ಹಮ್ಮಿಕೊಂಡಿದ್ದಾರೆ. ಹೀಗಾಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆಯಿಂದ 9-30 ರವರೆಗೆ ಬಸ್ ಗಳು ಎಂದಿನಂತೆ ಸಂಚಾರ ಮಾಡಿದವು. ಅದರೆ ಬೆಳಗ್ಗೆ 10 ಗಂಟೆಯ ನಂತರ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. 


320 ಬಸ್ ಗಳಿಂದ 500 ಟ್ರಿಪ್ ಗಳು ನಡೆಯುತ್ತದೆ. ಶಿವಮೊಗ್ಗ ಕೆಎಸ್ ಆರ್ ಟಿಸಿ ವಿಭಾಗದಲ್ಲಿ  1,600 ಜನ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.ಇನ್ನು ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣಕ್ಕೆ ಪ್ರತಿ ನಿತ್ಯ 1,300 ಬಸ್ ಗಳು ಬಂದು ಹೋಗುತ್ತವೆ. ಅದರೆ ಇಂದು ಬಹುತೇಕ ಬಸ್ ಗಳು ಶಿವಮೊಗ್ಗ ನಿಲ್ದಾಣಕ್ಕೆ ಬಂದಿಲ್ಲ. ಅದರಲ್ಲೂ ಬೆಂಗಳೂರಿನಿಂದ ಬರುವಂತ ಮತ್ತು ಬೆಂಗಳೂರಿಗೆ ತೆರಳುವಂತ ಬಸ್ ಗಳು ಬಹುತೇಕ ಸ್ಥಗಿತವಾಗಿವೆ.


ಇನ್ನು ಶಿವಮೊಗ್ಗ  ಭದ್ರಾವತಿ ನಡುವೆ ಸಂಚಾರ ನಡೆಸುತ್ತಿದ್ದ ಕೆಎಸ್ ಆರ್ ಟಿಸಿ ಸಿಟಿ ಬಸ್ ಗೆ ಬಸ್ ವೊಂದಕ್ಕೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಶಿವಮೊಗ್ಗ ಸಮೀಪದ ಮಾಚೇನಹಳ್ಳಿ ಬಳಿ ಚಲಿಸುತ್ತಿದ್ದ ಬಸ್ ಗೆ ಕಲ್ಲು ತೂರಿದ ಘಟನೆ ನಡೆದಿದೆ.


ಇದನ್ನೂ ಓದಿ : ಈಶ್ವರಪ್ಪನವರೇ ಎಷ್ಟು ಜನ ಕುರುಬರಿಗೆ ಎಂಎಲ್​ಎ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೀರಿ?: ಬೈರತಿ ಸುರೇಶ್ ಪ್ರಶ್ನೆ


ಬಸ್  ನ ಕಿಟಕಿಯ ಗಾಜಿಗೆ ಕಲ್ಲು ಬಿದ್ದ ಪರಿಣಾಮ ಗಾಜು ಪುಡಿಯಾಗಿದೆ. ಕೆಎ 17 ಎಫ್  1865 ನಂಬರ್ ಕೆಎಸ್ ಆರ್ ಟಿಸಿ ಬಸ್ ಗೆ ಕಲ್ಲು ಹೊಡೆಯಲಾಗಿದೆ. ನಂತರ ಬಸ್ ಅನ್ನು ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣಕ್ಕೆ ತಂದು ನಿಲ್ಲಿಸಲಾಗಿದೆ.


ನೂರಾರು ಜನ ಪ್ರಯಾಣಿಕರು ಬಸ್ ಸಂಚಾರ ಇಲ್ಲದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು, ಮೈಸೂರು, ಹಾಸನ ಭಾಗಕ್ಕೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದರು.

Published by:G Hareeshkumar
First published: