• Home
  • »
  • News
  • »
  • district
  • »
  • ಏನು ಕಡಿದು ಗುಡ್ಡೆ ಹಾಕಿದ್ದಾರೆಂದು ಡಿಕೆ ಶಿವಕುಮಾರ್ ಫೋನ್ ಟ್ಯಾಪ್ ಮಾಡಬೇಕು?: ಈಶ್ವರಪ್ಪ

ಏನು ಕಡಿದು ಗುಡ್ಡೆ ಹಾಕಿದ್ದಾರೆಂದು ಡಿಕೆ ಶಿವಕುಮಾರ್ ಫೋನ್ ಟ್ಯಾಪ್ ಮಾಡಬೇಕು?: ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಡಿಕೆ ಶಿವಕುಮಾರ್ ಫೋನ್ ಟ್ಯಾಪ್ ಆಗಿಲ್ಲ. ಅವರು ಹೇಳಿದ್ದು ಪ್ರಚಾರದ ತಂತ್ರ. ಅವರು ಏನು ಕಡಿದು ಗುಡ್ಡೆ ಹಾಕಿದ್ದಾರೆಂದು ಫೋನ್ ಟ್ಯಾಪ್ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ.

  • Share this:

ಶಿವಮೊಗ್ಗ(ಆ. 25): ತಮ್ಮ ಫೋನ್ ಟ್ಯಾಪ್ ಆಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಮಾಡಿರುವ ಆರೋಪಕ್ಕೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಫೋನ್ ಟ್ಯಾಪಿಂಗ್ ಬಗ್ಗೆ ನಾನು ಟೀಕೆ ಮಾಡಲು ಹೋಗಲ್ಲ. ಅವರ ಫೋನ್ ಟ್ಯಾಪ್ ಮಾಡಿ ಏನು ದೇಶದ ಉದ್ಧಾರ ಮಾಡಬೇಕೋ ಗೊತ್ತಿಲ್ಲ. ಅವರು ಏನು ಕಡಿದು ಗುಡ್ಡೆ ಹಾಕಿದ್ದಾರೆ ಎಂದು ಫೋನ್ ಟ್ಯಾಪ್ ಮಾಡಬೇಕು? ಪ್ರಚಾರದ ಒಂದು ತಂತ್ರ ಅದು. ಇದರ ಮೂಲಕ ದೊಡ್ಡವರಾಗಬೇಕು ಎಂದುಕೊಂಡಿದ್ದಾರೆ. ಅವರ ಫೋನ್ ಟ್ಯಾಪ್ ಆಗುತ್ತಿಲ್ಲ, ಅವರು ಕಡೆದು ಗುಡ್ಡೆ ಸಹ ಹಾಕಿಲ್ಲ ಎಂದು ಡಿಕೆಶಿಗೆ ಲೇವಡಿ ಮಾಡಿದ್ದಾರೆ.


ಇವತ್ತು ದೇಶದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಬೇಕಾಗುತ್ತದೆ. ಒಂದು ಬಿಜೆಪಿ ಮತ್ತೊಂದು ಕಾಂಗ್ರೆಸ್ ಇದೆ. ಯಾವುದೇ ಪಕ್ಷಕ್ಕೆ ಪಕ್ಷದ ನಾಯಕ ಯಾರು, ಸಿದ್ಧಾಂತ ಏನು ಕಾರ್ಯಕರ್ತರ ಮನಸ್ಥಿತಿ ಏನು, ಇವುಗಳ ಮೇಲೆ ರಾಜಕೀಯ ಪಕ್ಷದ ಭವಿಷ್ಯ ನಿಂತಿರುತ್ತೆ. ದೇಶದ ಮತ್ತು ರಾಜ್ಯದ ಭವಿಷ್ಯ ಅದರ ಮೇಲೆ ನಿಂತಿರುತ್ತೆ. ಕಾಂಗ್ರೆಸ್​ಗೆ ತನ್ನ ನಾಯಕ ಯಾರು ಎಂಬುದು ಪೂರ್ಣ ಗೊಂದಲವಿದೆ, ಕಾಂಗ್ರೆಸ್ ಪಕ್ಷ ಒಡೆದ ಕನ್ನಡಿ. ಅದು ಮತ್ತೆ ಸೇರಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷರ ಬಗ್ಗೆಯೇ ಅ ಪಕ್ಷದ ನಾಯಕರು ಬಹಿರಂಗ ಪತ್ರ ಬರೆದಿರುವುದು ದೇಶದ ಇತಿಹಾಸದಲ್ಲೇ ಇರಲಿಲ್ಲ. ಪಕ್ಷದ ನಾಯಕತ್ವ ಸಾಮೂಹಿಕವಾಗಿ ಅಗಬೇಕು ಎಂದು ಅವರು ಪತ್ರ ಬರೆದಿದ್ದಾರೆ. ಈಗ ತಾತ್ಕಾಲಿಕವಾಗಿ ಸೋನಿಯಾ ಗಾಂಧಿಯವರನ್ನೇ ಮತ್ತೆ ಮುಂದುವರೆಸಬೇಕು ಎಂಬ ಪರಿಸ್ಥಿತಿ ಕಾಂಗ್ರೇಸ್ ಬಂದಿದೆ ಎಂದು ಈಶ್ವರಪ್ಪ ಮರುಕ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಡಿ.ಕೆ ಶಿವಕುಮಾರ್​​ಗೆ ಸೋನಿಯಾ, ರಾಹುಲ್​​ ಗಾಂಧಿ ದೂರವಾಣಿ ಕರೆ - ಶೀಘ್ರ ಗುಣಮುಖರಾಗಿ ಎಂದು ಹಾರೈಕೆ


ಆ ಪಕ್ಷಕ್ಕೆ ನಾಯಕತ್ವ ಇಲ್ಲ, ಸಿದ್ಧಾಂತ ಇಲ್ಲ. ಸಂಘಟನೆ ಅನ್ನುವಂಥ ಕಾರ್ಯಕರ್ತರ ಗುಂಪೇ ಇಲ್ಲ. ಬಿಜೆಪಿಗೆ ದೇಶದ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ದೊಡ್ಡ ತಂಡವೇ ಇದೆ. ಎಲ್ಲಾ ಕ್ಷೇತ್ರದಲ್ಲಿ ದೇಶವನ್ನು ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ಬಿಜೆಪಿ ಸಿದ್ದಾಂತ, ವೈಚಾರಿಕವಾಗಿ ಬೆಳೆಯುತ್ತಿರುವ ಪಕ್ಷ ಬಿಜೆಪಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇಡೀ ಪ್ರಪಂಚವೇ ಮೆಚ್ಚುವಂತಹ ನರೇಂದ್ರ ಮೋದಿ ಬಿಜೆಪಿ ಪಕ್ಷದ ನಾಯಕರಾಗಿದ್ದಾರೆ. ಇಡೀ ಸಮಾಜಕ್ಕೆ ಸ್ಪೂರ್ತಿ ಕೊಡುವಂತಹ ನಾಯಕ ನರೇಂದ್ರ ಮೋದಿ ಬಿಜೆಪಿಗೆ ನಾಯಕರು. ಅನೇಕ ಜನ ಬಿಜೆಪಿಗೆ ಬರುತ್ತಿದ್ದಾರೆ. ಐಪಿಎಸ್ ಅಧಿಕಾರಿ ಅಣ್ಣಾಮಲೈ ನಿವೃತ್ತಿ ಪಡೆದು ಈಗ ಬಿಜೆಪಿಗೆ ಸೇರಿದ್ದಾರೆ. ಅವರನ್ನು ಬಿಜೆಪಿಗೆ ಸಂತೋಷದಿಂದ ಸ್ವಾಗತ ಮಾಡುತ್ತೇನೆ. ದೇಶದ ಅಭಿವೃದ್ಧಿ ಆಗಬೇಕು, ಬೆಳೆಯಬೇಕು, ಏಕತೆಯಿಂದ ಇರಬೇಕು ಅನ್ನುವಂತಹ ಎಲ್ಲಾ ಮನಸ್ಸುಗಳು ಬಿಜೆಪಿ ಸೇರಬೇಕು ಎಂದು ಮಾಜಿ ಡಿಸಿಎಂ ಕೂಡ ಆದ ಅವರ ಕರೆ ನೀಡಿದ್ದಾರೆ.

Published by:Vijayasarthy SN
First published: