HOME » NEWS » District » KS ESHWARAPPA CRITICISES SIDDARAMAIAH FOR COMMENTING NEGATIVELY ON RAM MANDIR LCTV SNVS

ವಕೀಲ ಎಂದು ಹೇಳಿಕೊಳ್ಳಲು ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು: ಸಚಿವ ಕೆ ಎಸ್ ಈಶ್ವರಪ್ಪ

ಅಯೋಧ್ಯೆಯ ರಾಮಮಂದಿರ ವಿವಾದಿತ ವಿಚಾರ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಈಶ್ವರಪ್ಪ, ಸುಪ್ರೀಂ ತೀರ್ಪಿನ ಬಳಿಕವೂ ಹೀಗೆ ಹೇಳಿರುವ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಗುಡುಗಿದ್ದಾರೆ.

news18-kannada
Updated:February 26, 2021, 3:42 PM IST
ವಕೀಲ ಎಂದು ಹೇಳಿಕೊಳ್ಳಲು ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು: ಸಚಿವ ಕೆ ಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ
  • Share this:
ಬೆಳಗಾವಿ: ರಾಮ ಮಂದಿರ ವಿವಾದಿತ ಜಾಗದಲ್ಲಿದೆ. ಈ ರಾಮ ಮಂದಿರ ನಿರ್ಮಾಣಕ್ಕೆ ನಾನು ಹಣ ನೀಡಲ್ಲ. ಬದಲಾಗಿ ಬೇರೆ ಜಾಗದಲ್ಲಿ ನಿರ್ಮಾಣ ಮಾಡಿದ್ರೆ ಅದಕ್ಕೆ ಬೇಕಾದರೆ ಹಣ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಮತ್ತೊಮ್ಮೆ ಗುಡುಗಿದ್ದಾರೆ. ಸಿದ್ದರಾಮಯ್ಯಮವರಿಗೆ ತಲೆ ಸರಿ ಇಲ್ಲ ಅನ್ನೋದು ಇದಕ್ಕಾಗಿಯೇ. ಸಿದ್ದರಾಮಯ್ಯ ಒಬ್ಬ ವಕೀಲ ಎಂದು ಹೇಳಿಕೊಳ್ಳಲು ಅವರಿಗೆ ನಾಚಿಕೆಯಾಗಬೇಕು, ಎನ್ನುವ ಮೂಲಕ ಹರಿಹಾಯ್ದಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮಿಕ ಶಾಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಈಶ್ವರಪ್ಪ, ಉದ್ಘಾಟನೆ ಬಳಿಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸುಪ್ರೀಂ ತೀರ್ಪಿನ ಬಳಿಕವೂ ಸಿದ್ದರಾಮಯ್ಯ ಅಯೋಧ್ಯೆಯದ್ದು ವಿವಾದಿತ ಮಂದಿರ ಎಂದಿದ್ದಾರೆ. ಅವರಿಗೆ ತಲೆ ಸರಿ ಇಲ್ಲ ಅನ್ನೋದು ಇದಕ್ಕಾಗಿಯೇ. ಸಿದ್ದರಾಮಯ್ಯ ಒಬ್ಬ ವಕೀಲ ಎಂದು ಹೇಳಿಕೊಳ್ಳಲು ಅವರಿಗೆ ನಾಚಿಕೆಯಾಗಬೇಕು. ಸುಪ್ರಿಂ ತೀರ್ಪಿನ ಬಳಿಕವೂ ರಾಮ ಮಂದಿರದ ಜಾಗ ವಿವಾದಿತ ಅಂತ ಹೇಳ್ತಿದ್ದಾರೆ. ಹೀಗಾಗಿ ರಾಜ್ಯದ ಜನ ಅವರನ್ನು ಛೀ ಥೂ ಎಂದು ಉಗಿಯುತ್ತಿದ್ದಾರೆ ಎಂದು ಹೇಳಿದರು.

ರಾಮಮಂದಿರಕ್ಕೆ ಹಣ ಕೊಡದಿದ್ದರೆ ಕೊಡಬೇಡ ಬಿಡು ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಈಶ್ವರಪ್ಪ, ಹಣ ಕೊಡದೆ ಲೆಕ್ಕ ಕೇಳ್ತಾರೆ. ರಾಜ್ಯದ ಜನ ದೇಶದ ಜನ ರಾಮನ ಬಗ್ಗೆ ಅಪಮಾನ ಮಾಡಿದ್ದಕ್ಕೆ ಕಾಂಗ್ರೆಸ್​ನವರನ್ನು ತಿರಸ್ಕಾರ ಮಾಡಿದ್ದಾರೆ. ಆದರೂ ಕೂಡ ಇವರು ಬುದ್ದಿ ಕಲಿತಿಲ್ಲ ಎಂದು ಈಶ್ವರಪ್ಪ ಟೀಕಿಸಿದರು.

ಇದನ್ನೂ ಓದಿ: ಗ್ರಾ.ಪಂ.ಗಳ ಹೆಗಲಿಗೆ ಮೊಟ್ಟೆ ಹೊರೆ: ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ನಿರ್ಧಾರ

ಇನ್ನು ಸ್ವಾಮೀಜಿಗಳು ಮೀಸಲಾತಿ ಹೋರಾಟ ಹಾಗೂ ರಾಜಕೀಯ ನಾಯಕರು ಭಾಗಿಯಾಗಿರುವ ಕುರಿತು ಮಾತನಾಡಿದ ಅವರು ಅಂಬೇಡ್ಕರ್ ಆಶಯದಂತೆ ಎಲ್ಲಾ ಹಿಂದುಳಿದ ಹಾಗೂ ದಲಿತ ಸಮಾಜದ ಜನ ದ್ವನಿ ಎತ್ತಬೇಕು ಎಂದು ಅಂಬೇಡ್ಕರ್ ಅವರು ಅವತ್ತೇ ಹೇಳಿದ್ದಾರೆ. ಎಲ್ಲಾ ಬಡವರು ಈಗ ಜಾಗೃತರಾಗಿದ್ದಾರೆ. ಜಗದ್ಗುರುಗಳ ನೇತೃತ್ವದಲ್ಲಿ ಮೀಸಲಾತಿಗೆ ಹೋರಟಿದ್ದಾರೆ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಮೀಸಲಾತಿ ಸಿಗುತ್ತೆ ಎಂದರು.

ಇನ್ನು ಮಠಾದಿಪತಿಗಳು ಇರೋದು ಬಡವರಿಗಾಗಿ, ಮನೆಯಲ್ಲಿ ಇರಲು ಅಲ್ಲ. ಇವತ್ತು ಸ್ವತಃ ಮಠಾಧೀಶರು ಮೀಸಲಾತಿಗಾಗಿ ಹೋರಾಟ ಮಾಡುತ್ತಿರೋದು ಸಂತೋಷ ವಿಚಾರ. ಕಳೆದ 50 ವರ್ಷಗಳಿಂದ ಸಚಿವರು ಶಾಸಕರು ಮೀಸಲಾತಿ ವಿಚಾರದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇವತ್ತು ನಾನು ಸಹ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಹೋರಾಟ ಸಮಿತಿ ನಡುವೆ ನಾನು ಕೊಂಡಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದವರನ್ನು ಮೂರೇ ದಿನದಲ್ಲಿ ಬೇರೆ ಮಾಡಿದ ಮಂಡ್ಯದ ಪೊಲೀಸರು; ಕಣ್ಣೀರಿಡುತ್ತಿರುವ ಪತಿನಿನ್ನೆ ನಡೆದ ಕೌಲಗುಡ್ಡ ಗ್ರಾಮದ ಕರಿಯೋಗಸಿದ್ದೇಶ್ವರ ಕನ್ನಡ ಮಾಧ್ಯಮಿಕ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೇಸ್ ಹಾಗೂ ಬಿಜೆಪಿ ಶಾಸಕರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಸಮಾಜದ ಒಗ್ಗಟಿನ ಬಗ್ಗೆ ಮಾತಾನಾಡಿದ ಈಶ್ವರಪ್ಪ ವೇದಿಕೆ ಇಳಿಯುತ್ತಿದ್ದಂತೆ ಕಾಂಗ್ರೆಸ್ ವಿರುದ್ದ ಹಾಗೂ ತಮ್ಮ ಸಮಾಜದ ನಾಯಕರ ವಿರುದ್ದವೇ ಹರಿಹಾಯ್ದು ಅಚ್ಚರಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸಚಿವ ಶ್ರೀಮಂತ ಪಾಟೀಲ್, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸತೀಶ್ ಜಾರಕಿಹೋಳಿ, ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ಸೇರಿದಂತೆ ಹಲವು ಮಠಾದೀಶರು ಭಾಗಿಯಾಗಿದ್ದರು.

ವರದಿ: ಲೋಹಿತ್ ಶಿರೋಳ
Published by: Vijayasarthy SN
First published: February 26, 2021, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories