ಕೃಷ್ಣಾ ನದಿಯ ಏರಿಕೆಯಲ್ಲಿ ಮತ್ತೆ ಹೆಚ್ಚಳ; NDRF ತಂಡದ ನಿಯೋಜನೆ, ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

news18-kannada
Updated:August 7, 2020, 9:13 PM IST
ಕೃಷ್ಣಾ ನದಿಯ ಏರಿಕೆಯಲ್ಲಿ ಮತ್ತೆ ಹೆಚ್ಚಳ; NDRF ತಂಡದ ನಿಯೋಜನೆ, ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ
ತುಂಬಿ ಹರಿಯುತ್ತಿರುವ ಕೃಷ್ಣಾ ನದಿ.
  • Share this:
ಬೆಳಗಾವಿ (ಆಗಸ್ಟ್‌ 07); ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುರೆದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ದೂದಗಂಗಾ ಹಾಗೂ ವೇದಗಂಗಾ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರ ಬಿಟ್ಟು ನೀರು ಹೊರಗಡೆ ಬಂದಿದೆ. ಇಂದು ಸಹ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಆಗಿದ್ದು, ನಿನ್ನೆ 12 ಇವತ್ತು 6 ಅಡಿಯಷ್ಟು ನೀರು ಹೆಚ್ಚಳವಾಗಿದೆ. ಪರಿಣಾಮ ನೀರು ನದಿ ಪಾತ್ರ ಬಿಟ್ಟು ಹೊರಗಡೆ ಬಂದಿದ್ದು ಕೃಷ್ಣಾ ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ.

ಸದ್ಯ ಕೃಷ್ಣಾ ನದಿಗೆ 1 ಲಕ್ಷ 70 ಸಾವಿರ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದ್ದು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿಯ ದತ್ತ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಮನೆಗಳನ್ನ ತಾಲೂಕಾಡಳಿತ ಖಾಲಿ ಮಾಡಿಸಲಾಗಿದೆ.

ರಾಜ್ಯ ಹೆದ್ದಾರಿ ಬಂದ್

ಇನ್ನು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಅಂತರರಾಜ್ಯ ಹೆದ್ದಾರಿ ಬಂದ್ ಆಗಿದೆ. ಜಮಖಂಡಿ-ಮಿರಜ ನಡುವಿ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ. ಹೆದ್ದಾರಿ ಬಂದ್ ಆಗಿರುವ ಪರಿಣಾಮ ಜನ 50 ಕಿಲೋಮೀಟರನಷ್ಟು ಜನ ಸುತ್ತುವರೆದು ಸಂಚಾರ ನಡೆಸುವಂತಾಗಿದೆ.

ಇದನ್ನೂ ಓದಿ : ಶ್ರೀಲಂಕಾ ಸಂಸದೀಯ ಚುನಾವಣೆ; ಆಡಳಿತರೂಢ ಮಹಿಂದಾ ರಾಜಪಕ್ಸೆ ಪಕ್ಷಕ್ಕೆ ಭರ್ಜರಿ ಜಯ

ಗ್ರಾಮಕ್ಕೆ ನುಗ್ಗಿದ ದೂದಗಂಗಾ ನದಿ

ಕೃಷ್ಣಾ ನದಿಯ ಉಪ ನದಿಯಾದ ದೂದಗಂಗಾ ನದಿ ಕೂಡ ಉಕ್ಕಿ ಹರಿಯುತ್ತಿದ್ದು ನೀರು ನದಿ ಪಾತ್ರ ಬಿಟ್ಟು ಗ್ರಾಮಕ್ಕೆ ನುಗ್ಗಿದೆ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮಕ್ಕೆ ನೀರು ನುಗ್ಗಿದ್ದು ಗ್ರಾಮದ ಲಕ್ಷ್ಮೀ ನಾರಾಯಣ ದೇವಸ್ತಾನ ಕೂಡ ಸಂಪೂರ್ಣ ಮುಳುಗಡೆಯಾಗಿದೆ. ಗ್ರಾಮಸ್ಥರನ್ನ ಬೇರೆಡೆಗೆ ಸ್ಥಾನಾಂತರ ಮಾಡಲು ಜಿಲ್ಲಾಡಳಿತ ಸೂಚನೆ ನೀಡಿದ್ದು ಪಕ್ಕದ ಮರಾಠಿ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಅಲ್ಲದೆ ಗ್ರಾಮಸ್ಥರ ತಮ್ಮ ಮನೆ ವಸ್ತುಗಳು ಹಾಗೂ ಜಾನುವಾರುಗಳನ್ನ ಸುರಕ್ಷಿತ ಸ್ಥಳಗಳಿಗೆ ಒಯ್ಯುಲು ಸೂಚಿಸಲಾಗಿದೆ.

ಎನ್.ಡಿ.ಆರ್.ಎಪ್.ತಂಡದ ನಿಯೋಜನೆ

ಕೃಷ್ಣಾ ನದಿಯಲ್ಲಿ ದಿನೇ ದಿನೇ ನೀರು ಹೆಚ್ಚುತ್ತಿರುವ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ 25 ಜನರ ಎನ್.ಡಿ.ಆರ್.ಎಪ್ ತಂಡವನ್ನ ಚಿಕ್ಕೋಡಿಗೆ ರವಾನೆ ಮಾಡಲಾಗಿದೆ 4 ಬೋಟ್‌ಗಳ ಸಮೇತ ಆಗಮಿಸಿರುವ ತಂಡ ಕೃಷ್ಣಾ ತೀರದಲ್ಲಿ ಕಾರ್ಯಾಚರಣೆ ಕುರಿತು ಅವಲೋಕನ ನಡೆಸಿದ್ದಾರೆ. ನದಿ ಪಾತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಮಹಾರಾಷ್ಟ್ರ ರಾಧಾನಗರಿ ಹಾಗೂ ವಾರಣಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ನೀರು ಹೊರಗಡೆ ಬಿಡಲಾಗುತ್ತಿದೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನದಿ ನೀರು ಏರಿಕೆಯಾಗುವ ನಿರೀಕ್ಷೆ ಇದೆ..
Published by: MAshok Kumar
First published: August 7, 2020, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading