HOME » NEWS » District » KRISHNA RIVER BASIN PEOPLE ANXIETY OVER HEAVIEST RAINFALL IN MAHARASHTRA HK

ಮುಂದುವರೆದ ಮಹಾ ಮಳೆ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ; ನಡುಗಡ್ಡೆಯಾದ ತೋಟದ ವಸತಿ ಪ್ರದೇಶಗಳು

ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂವಾಡಿ, ಗ್ರಾಮದ ತೋಟದ ವಸತಿ ಪ್ರದೇಶಗಳಿಗೂ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿವೆ.

news18-kannada
Updated:August 18, 2020, 4:28 PM IST
ಮುಂದುವರೆದ ಮಹಾ ಮಳೆ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ; ನಡುಗಡ್ಡೆಯಾದ ತೋಟದ ವಸತಿ ಪ್ರದೇಶಗಳು
ಪ್ರವಾಹದ ನಡುವೆ ಜಾನುವಾರುಗಳನ್ನು ಕರೆದುಕೊಂಡು ಹೋಗುತ್ತಿರುವ ಜನರು
  • Share this:
ಚಿಕ್ಕೋಡಿ(ಆಗಸ್ಟ್​. 18): ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ 2 ಲಕ್ಷ ಕ್ಯೂಸೆಕ್ ನಷ್ಟು ನೀರು ಕೃಷ್ಣಾ ನದಿ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿದ್ದು, ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂವಾಡಿ, ಗ್ರಾಮದ ತೋಟದ ವಸತಿ ಪ್ರದೇಶಗಳಿಗೂ ನೀರು ನುಗ್ಗಿದ್ದು 100 ಕ್ಕೂ ಹೆಚ್ಚು ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿವೆ. ನ್ಯೂಸ್18 ಕನ್ನಡ ಇಂಪ್ಯಾಕ್ಟ್ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಚಿಕ್ಕೋಡಿ ತಾಲೂಕಿನ ಇಂಗಳಿ ಹಾಗೂ ಯಡೂರವಾಡಿ ಗ್ರಾಮದ ತೋಟದ ವಸತಿ ಪ್ರದೇಶ ಸುಮಾರು 100 ಕ್ಕೂ ಹೆಚ್ಚು ಮನೆ ಗಳಿರುವಂತಹ ಪ್ರದೇಶ ಕೃಷ್ಣಾ ನದಿಯ ಹಿನ್ನಿರಿನಿಂದ ಈ ಪ್ರದೇಶ ನಡುಗಡ್ಡೆಯಾಗಿ ಮಾರ್ಪಟ್ಟಿತು. ಜನ ಗ್ರಾಮದಿಂದ ತೋಟದ ಮನೆಗಳಿಗೆ ಎದೆ ಮಟ್ಟದ ನೀರಿನಲ್ಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿತ್ತು, ಆದರೆ,  ನ್ಯೂಸ್ 18 ಕನ್ನಡ ಗ್ರೌಂಡ್ ರಿಪೋರ್ಟ್ ಸುದ್ದಿ ಪ್ರಸಾರ ಮಾಡಿ ಜನರ ಕಷ್ಟವನ್ನ ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಇಂಗಳಿ ಹಾಗೂ ಯಡೂರವಾಡಿ ಗ್ರಾಮಕ್ಕೆ ಬೋಟ್ ವ್ಯವಸ್ಥೆಯನ್ನ ಕಲ್ಪಿಸಿದೆ. ಅಲ್ಲಿಂದ ಬರುವ ಜನರನ್ನ ಬೋಟ್ ಮೂಲಕ ದಡ ಸೇರಿಸುವ ಕೆಲಕ್ಕೆ ಮುಂದಾಗಿದೆ.

ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

ನ್ಯೂಸ್18 ನಲ್ಲಿ ಇಂಗಳಿ ಗ್ರಾಮದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾಂವೆ ಭೇಟಿ ನೀಡಿದ್ದಾರೆ. ದೋಣವಾಡೆ ತೋಟದ ಜನರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇದೆ ವೇಳೆ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ ತಹಶೀಲ್ದಾರ್ ತಾಲೂಕಿನಲ್ಲಿ 20 ಬೋಟ್ ಗಳ ವ್ಯವಸ್ಥೆ ಮಾಡಲಾಗಿದೆ. 10 ಕ್ಕೂ ಹೆಚ್ಚು ಕಾಳಜಿ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ತಾಲೂಕಿನಲ್ಲಿ ಒಂದು ಎನ್​​ಡಿಆರ್​ಎಫ್​​ ತಂಡವನ್ನು ನಿಯೋಜನೆ ಮಾಡಲಾಗಿದೆ. ತಾಲೂಕಿನ ಎಲ್ಲಾ ತೋಟದ ವಸತಿ ಜನರನ್ನ ಕಾಳಜಿ ಕೇಂದ್ರಗಳಿಗೆ ಕಳಿಸಲಾಗುವುದು ತಾಲೂಕಾಡಳಿತ ಪ್ರವಾಹ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಆಗಿದ್ದು ಕೋಮು ಗಲಭೆಯಲ್ಲ; ಪೊಲೀಸ್ ಠಾಣೆ ಮೇಲೆ ದಾಳಿಯಾಗಿದ್ದು ಸರಿಯಲ್ಲ: ಸಿ.ಎಂ. ಇಬ್ರಾಹಿಂ

ಒಟ್ಟಿನಲ್ಲಿ ಕ್ರಮೇಣವಾಗಿ ಕೃಷ್ಣಾ ನದಿ ನೀರು ಏರುತ್ತಲೇ ಇದೆ. ಮಹಾರಾಷ್ಟ್ರದ ಎಲ್ಲಾ ಜಲಾಶಯಗಳು ಬಹುತೇಕ ಮಟ್ಟದಲ್ಲಿ ತುಂಬಿದ್ದು ಮಳೆ ಪ್ರಮಾಣ ಜಾಸ್ತಿ. ಆದರೆ, ಇನ್ನು ಹೆಚ್ಚಿನ ನೀರು ಬರುವ ಸಂಭವಿದೆ. ಸದ್ಯ ಆಲಮಟ್ಟಿ ಜಲಾಶಯದಿಂದಲೂ ಹೆಚ್ಚಿನ ಪ್ರಮಾಣದ ನೀರು ಹೊರಗಡೆ ಬಿಡುವ ಮೂಲಕ ಪ್ರವಾಹದ ಸನ್ನಿವೇಶವನ್ನ ತಡೆಯಲು ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ.
ಚಿಕ್ಕೋಡಿಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕೃಷ್ಣಾ ತೀರದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಜೋತೆ ಚರ್ಚೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
Published by: G Hareeshkumar
First published: August 18, 2020, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories