ಕೊರೋನಾದಿಂದ ಸತ್ತವರ ಅಂತ್ಯಕ್ರಿಯೆ ಮಾಡೋದು ಪುಣ್ಯದ ಕೆಲಸ; 11 ಪಾರ್ಥಿವ ಶರೀರಕ್ಕೆ ಮುಕ್ತಿ ಕೊಟ್ಟ ಕೃಷ್ಣಪ್ಪ
ಬಾಗಲಕೋಟೆಯಲ್ಲಿ ಏಪ್ರಿಲ್ 4ರಂದು ಕೊರೋನಾಗೆ ಮೊದಲ ಸಾವು ಸಂಭವಿಸಿತ್ತು. ಈ ವೇಳೆ ಅಂತ್ಯಕ್ರಿಯೆ ಮಾಡುವುದಕ್ಕೆ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಿಂದೇಟು ಹಾಕಿದ್ದರು. ಈ ವೇಳೆ ಜಿಲ್ಲಾ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಅಂತ್ಯಕ್ರಿಯೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಮುಂದೆ ಬಂದಿದ್ದಾರೆ.
news18-kannada Updated:July 13, 2020, 6:27 PM IST

ಕೃಷ್ಣಪ್ಪ ಮರಡಿಮನೆ.
- News18 Kannada
- Last Updated: July 13, 2020, 6:27 PM IST
ಬಾಗಲಕೋಟೆ (ಜು,13): ಕೊರೋನಾದಿಂದ ಸತ್ತವರ ಅಂತ್ಯಕ್ರಿಯೆ ಮಾಡೋದು ಪುಣ್ಯದ ಕೆಲ್ಸಾರಿ. ನಾವು ಹಿಂದೂ, ಮುಸ್ಲಿಂ ಎಂದು ಯಾವುದೇ ಜಾತಿ- ಧರ್ಮ ನೋಡದೇ ಸೋಂಕಿನಿಂದ ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೆ ಕೊರೋನಾವಾಗಿ ಹುಟ್ಟಬೇಡಿ ಎಂದು ಪ್ರಾರ್ಥಿಸಿ, ಊದಬತ್ತಿ ಹಚ್ಚಿ ಅಂತಿಮ ವಿಧಿವಿಧಾನದಂತೆ ಅಂತ್ಯಕ್ರಿಯೆ ಮಾಡುತ್ತೇವೆ. ಅಂತ್ಯಕ್ರಿಯೆ ವೇಳೆ ಮೃತರ ಬಂಧು-ಬಾಂಧವರಿಗೆ ಅವಕಾಶ ಇರೋದಿಲ್ಲ. ಮೃತರಿಗೆ ನಾವೇ ಬಂಧುಗಳಾಗಿ ಅಂತ್ಯಕ್ರಿಯೆ ಮಾಡ್ತೀವಿ ಎನ್ನುತ್ತಾರೆ ಬಾಗಲಕೋಟೆಯಲ್ಲಿ ಕೋವಿಡ್ನಿಂದ ಸಾವಿಗೀಡಾದವರ ಅಂತ್ಯಕ್ರಿಯೆ ಮಾಡುವ ಉಸ್ತುವಾರಿ ಹೊತ್ತಿರುವ ಕೃಷ್ಣಪ್ಪ ಮರಡಿಮನೆ.
ರಾಜ್ಯದಲ್ಲಿ ಕೊರೋನಾದಿಂದ ಸಾವಿಗೀಡಾದವರ ಮೃತದೇಹದ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ಮಾಡಲಾಗುತ್ತಿದೆ ಎನ್ನುವ ಸುದ್ದಿ ವಿಡಿಯೋ ಸಹಿತ ಜಗಜ್ಜಾಹೀರಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಅಂತಿಮ ವಿಧಿ ವಿಧಾನಗಳಂತೆ ಗೌರವಯುತವಾಗಿ ನಡೆಸಲಾಗುತ್ತಿದೆ. ಪ್ರತಿ ಮೃತದೇಹದ ಆತ್ಮಕ್ಕೆ ಶಾಂತಿ ಸಿಗಬೇಕು. ನಾವು ರೊಕ್ಕ ನೋಡುವುದಿಲ್ಲ. ಕೊರೋನಾ ಸೋಂಕಿತರ ಅಂತ್ಯಕ್ರಿಯೆ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ನಾವೇ ಅಂತ್ಯಕ್ರಿಯೆ ಮಾಡ್ತೀವಿ ಎಂದಾಗ ಜಿಲ್ಲಾಡಳಿತ ನಮಗೆ ಜವಾಬ್ದಾರಿ ನೀಡಿದೆ. ನಮ್ಮ ಆ್ಯಂಬುಲೆನ್ಸ್ ಮೂಲಕ ಮೃತದೇಹ ತೆಗೆದುಕೊಂಡು ಹೋಗಿ ಗುಂಡಿಯಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ. ಐದು ಜನರು ಸೇರಿ ನಾವು ಇದನ್ನು ಪುಣ್ಯದ ಕೆಲಸವೆಂದು ಭಾವಿಸಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ ಎನ್ನುತ್ತಾರೆ ಕೃಷ್ಣಪ್ಪ. ಇನ್ನು ಕಳೆದ ನಾಲ್ಕು ತಿಂಗಳಿಂದ ಕುಟುಂಬಸ್ಥರಿಂದ ದೂರವಿದ್ದು, ಬಾಗಲಕೋಟೆ ನವನಗರದಲ್ಲಿ ಪ್ರತ್ಯೇಕ ಬಾಡಿಗೆ ರೂಮ್ ಮಾಡಿಕೊಂಡಿದ್ದೇವೆ. ಕುಟುಂಬಸ್ಥರ ನೆನಪಾದರೆ ಮನೆಗೆ ಹೋಗಿ ದೂರದಿಂದಲೇ ಕುಶಲೋಪರಿ ವಿಚಾರಿಸಿ ಬರುತ್ತೇನೆ. ಕೊರೋನಾದಿಂದ ಸಾವಿಗೀಡಾದವರ ಅಂತ್ಯಕ್ರಿಯೆ ಮಾಡುವ ಪುಣ್ಯದ ಕಾರ್ಯವೆಂದು ತಿಳಿದಿದ್ದೇವೆ ಎನ್ನುತ್ತಾರೆ ಕೃಷ್ಣಪ್ಪ. ಇನ್ನು ಬಾಗಲಕೋಟೆಯಲ್ಲಿ 75ವರ್ಷದ ವೃದ್ಧನ ಮೊದಲ ಸಾವಿನಿಂದ ಇಲ್ಲಿಯವರೆಗೆ 11 ಮೃತದೇಹವನ್ನು ಗೌರವಯುತವಾಗಿ ಕೃಷ್ಣಪ್ಪ ತಂಡದವರು ಅಂತ್ಯಕ್ರಿಯೆ ಮಾಡಿದ್ದಾರೆ. ಈಚೆಗೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಬಾಗಲಕೋಟೆ ಜೆಎಂಎಫ್ ಸಿ ನ್ಯಾಯಾಧೀಶರ 78 ವರ್ಷದ ತಾಯಿ ಕೊರೋನಾಗೆ ಬಲಿಯಾಗಿದ್ದರು. ಕೊನೆಗೆ ತಾಯಿ ಮುಖ ನೋಡಿ ಕಣ್ಣೀರು ಹಾಕಿದ ನ್ಯಾಯಾಧೀಶರ ಕಂಡು ನಮ್ಗೂ ಬಹಳ ನೋವಾಯಿತು ಎನ್ನುತ್ತಾರೆ ಕೃಷ್ಣಪ್ಪ.
ಆ್ಯಂಬುಲೆನ್ಸ್ ಚಾಲಕರಾಗಿರುವ ಕೃಷ್ಣಪ್ಪ ಮರಡಿಮನಿ ನೇತೃತ್ವದಲ್ಲಿ ಐದು ಜನರ ತಂಡದಲ್ಲಿ ಬಸವರಾಜ, ಸೈದುಸಾಬ, ಮುತ್ತಪ್ಪ, ಗಿರೀಶ್ ಎಂಬುವರಿದ್ದಾರೆ. ಪಿಪಿಇ ಕಿಟ್ ಜೊತೆಗೆ ಮುಂಜಾಗ್ರತಾ ಸುರಕ್ಷಿತ ಕ್ರಮದೊಂದಿಗೆ ಅಂತ್ಯಕ್ರಿಯೆ ಮಾಡುತ್ತಾರೆ. ಹಿಂದೆ ಇಬ್ಬರು ಚಾಲಕರು, ಮನೆಯಲ್ಲಿ ಸಣ್ಣ ಮಕ್ಕಳಿದ್ದಾರೆ ಎಂದು ಭಯದಿಂದ ಕೆಲಸ ಬಿಟ್ಟರು. ನಾವು ಮಾತ್ರ ಅಂತ್ಯಕ್ರಿಯೆ ಮಾಡುವ ಪುಣ್ಯದ ಕೆಲಸ ಮಾಡುತ್ತಿದ್ದೇವೆ. ಮೊದಲು ನಮಗೂ ಭಯವಾಗುತ್ತಿತ್ತು. ಇದೀಗ ಅಂತ್ಯಕ್ರಿಯೆ ವೇಳೆ ಭಯವಿಲ್ಲದೇ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕೃಷ್ಣಪ್ಪ.
ಇದನ್ನು ಓದಿ: Dharwad Lockdown: ಜು.15ರಿಂದ ಒಂದು ವಾರ ಧಾರವಾಡ ಕೂಡ ಲಾಕ್ಡೌನ್; ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಘೋಷಣೆ
ಜಿಲ್ಲಾಡಳಿತದ ಸಹಕಾರಬಾಗಲಕೋಟೆಯಲ್ಲಿ ಏಪ್ರಿಲ್ 4ರಂದು ಕೊರೋನಾಗೆ ಮೊದಲ ಸಾವು ಸಂಭವಿಸಿತ್ತು. ಈ ವೇಳೆ ಅಂತ್ಯಕ್ರಿಯೆ ಮಾಡುವುದಕ್ಕೆ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಿಂದೇಟು ಹಾಕಿದ್ದರು. ಈ ವೇಳೆ ಜಿಲ್ಲಾ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಅಂತ್ಯಕ್ರಿಯೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಮುಂದೆ ಬಂದಿದ್ದಾರೆ. ಆಗ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಯವರು ಮೃತ ಸೋಂಕಿತ ದೇಹ ಅಂತ್ಯಕ್ರಿಯೆಗೆ 10 ಸಾವಿರ, ಶಂಕಿತ ದೇಹ ಅಂತ್ಯಕ್ರಿಯೆಗೆ 5 ಸಾವಿರ ಮೊತ್ತ ನಿಗದಿ ಮಾಡಿದೆ. ಕೃಷ್ಣಪ್ಪ ಮರಡಿಮನೆ ನೇತೃತ್ವದ ತಂಡ ಘೋಷಿತ ಮೊತ್ತವನ್ನೂ ನೋಡದೆ ಮಾನವೀಯತೆ ದೃಷ್ಟಿಯಿಂದ ಕೊರೋನಾದಿಂದ ಸಾವಿಗೀಡಾದ ಮೃತದೇಹ ಅಂತ್ಯಕ್ರಿಯೆ ಮಾಡುತ್ತಿದೆ. ಇವರ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದಲ್ಲಿ ಕೊರೋನಾದಿಂದ ಸಾವಿಗೀಡಾದವರ ಮೃತದೇಹದ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ಮಾಡಲಾಗುತ್ತಿದೆ ಎನ್ನುವ ಸುದ್ದಿ ವಿಡಿಯೋ ಸಹಿತ ಜಗಜ್ಜಾಹೀರಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಅಂತಿಮ ವಿಧಿ ವಿಧಾನಗಳಂತೆ ಗೌರವಯುತವಾಗಿ ನಡೆಸಲಾಗುತ್ತಿದೆ. ಪ್ರತಿ ಮೃತದೇಹದ ಆತ್ಮಕ್ಕೆ ಶಾಂತಿ ಸಿಗಬೇಕು. ನಾವು ರೊಕ್ಕ ನೋಡುವುದಿಲ್ಲ. ಕೊರೋನಾ ಸೋಂಕಿತರ ಅಂತ್ಯಕ್ರಿಯೆ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ನಾವೇ ಅಂತ್ಯಕ್ರಿಯೆ ಮಾಡ್ತೀವಿ ಎಂದಾಗ ಜಿಲ್ಲಾಡಳಿತ ನಮಗೆ ಜವಾಬ್ದಾರಿ ನೀಡಿದೆ. ನಮ್ಮ ಆ್ಯಂಬುಲೆನ್ಸ್ ಮೂಲಕ ಮೃತದೇಹ ತೆಗೆದುಕೊಂಡು ಹೋಗಿ ಗುಂಡಿಯಲ್ಲಿ ಅಂತ್ಯಕ್ರಿಯೆ ಮಾಡುತ್ತೇವೆ. ಐದು ಜನರು ಸೇರಿ ನಾವು ಇದನ್ನು ಪುಣ್ಯದ ಕೆಲಸವೆಂದು ಭಾವಿಸಿ ಅಂತ್ಯಕ್ರಿಯೆ ಮಾಡುತ್ತಿದ್ದೇವೆ ಎನ್ನುತ್ತಾರೆ ಕೃಷ್ಣಪ್ಪ.