HOME » NEWS » District » KR PETE WOMEN MURDER CASE THREE MONTHS LATER THE POLICE FRAMED THE CASE RGM MAK

Crime News: ಕೆ.ಆರ್​. ಪೇಟೆಯಲ್ಲಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣ; ಮೂರು ತಿಂಗಳ ಬಳಿಕ ಪ್ರಕರಣ ಬೇಧಿಸಿದ ಪೊಲೀಸರು

ಕಳೆದ ವರ್ಷ ನ-17 ರಂದುಈ ಮಹಿಳೆಯ ಶವ ತ್ರಿಸೂಲ್ ಪವರ್ ಪ್ಲಾಂಟ್ ಬಳಿಪತ್ತೆಯಾಗಿತ್ತು. ಈ ಸಂಬಂಧ ಕೆ.ಆರ್. ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಆ‌ ಮಹಿಳೆಯ ಶವ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು ಜಿಲ್ಲೆಯ ಜನರು ಈ ಕೊಲೆ ಪ್ರಕರಣ ಕಂಡು ಬೆಚ್ಚಿ ಬಿದ್ದಿದ್ದರು.

news18-kannada
Updated:March 8, 2021, 7:57 PM IST
Crime News: ಕೆ.ಆರ್​. ಪೇಟೆಯಲ್ಲಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣ; ಮೂರು ತಿಂಗಳ ಬಳಿಕ ಪ್ರಕರಣ ಬೇಧಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ.
  • Share this:
ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಬಳಿ ನಾಲೆಯಲ್ಲಿ ಕಳೆದ ವರ್ಷ ನವೆಂಬರ್ 17 ರಂದು ಮಹಿಳೆಯೊಬ್ಬಳ ಶವ ದೊರೆತಿತ್ತು. ಶವವವನ್ನು ತುಂಡರಿಸಿದ್ದು, ಬರ್ಬರವಾಗಿ ಹತ್ಯೆ ಮಾಡಿ ನಾಲೆಗೆ ಬೀಸಾಡಲಾಗಿತ್ತು. ಈ ಬರ್ಬರ ಹತ್ಯೆ ಪ್ರಕರಣವನ್ನು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು  ಮೂರು ತಿಂಗಳ ಬಳಿಕ ಕಡೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ವಿಪರ್ಯಾಸವೆಂದರೆ ಪತಿಯೇ ತನ್ನ ಪತ್ನಿಯನ್ನು ಈ ರೀತಿ ಬರ್ಬರವಾಗಿ ಹತ್ಯೆ ಮಾಡಿ ಇದೀಗ ಭಾವನ ಜೊತೆ ಜೈಲು ಸೇರಿದ್ದಾನೆ.

ಹೌದು!  ಕಳೆದ ವರ್ಷ ನವೆಂಬರ್-17 ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಬಳಿ ಹೇಮಾವತಿ ನಾಲೆಯಲ್ಲಿ ಮಹಿಳೆಯೊಬ್ಬಳ ಶವ ದೊರೆತಿತ್ತು. ಶವವನ್ನು ದುಷ್ಕರ್ಮಿಗಳು ತುಂಡು ಮಾಡಿ ನಾಲೆಗೆ ಬಿಸಾಡಿ ಪರಾರಿಯಾಗಿದ್ದರು. ಈ ಬರ್ಬರ ಹತ್ಯೆ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಉಂಟುಮಾಡಿತ್ತು. ಕೊಲೆಯಾದ ಮಹಿಳೆ ಯಾರು?ಎಲ್ಲಿಯವಳು ಎಂಬುದು ಪತ್ತೆಯಾಗದೆ, ಈ ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು‌.

ಎರಡು ತಿಂಗಳ ಬಳಿಕ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳ ಮಿಸ್ಸಿಂಗ್ ಪ್ರಕರಣ ಈ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸ ರಿಗೆ ನೆರವಾಯಿತ್ತಲ್ಲದೆ, ಈ ಕೊಲೆ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು  ಪೊಲೀಸರು ಬಂಧಿಸಿ ಈ ಬರ್ಬರ  ಕೊಲೆ ಪ್ರಕರಣವನ್ನು ಕಡೆಗೂ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನೂ ಈ ಕೊಲೆ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯನ್ನು ಆಕೆಯ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಭಾವನೊಂದಿಗೆ ಸೇರಿ ಕೊಲೆ ಮಾಡಿದ್ದಾನೆ. ಪಾಂಡವಪುರ ತಾಲೂಕಿನ ದೇಶವಳ್ಳಿ ಗ್ರಾಮದ ಆಶಾ(30) ಕೊಲೆಯಾದ ದುರ್ದೈವಿಯಾಗಿದ್ದು ಈಕೆಯ ಪತಿ ರಂಗಪ್ಪ ಹಾಗೂ ಈತನ ಭಾವ ರಾಮಚಂದ್ರ‌ ಸೇರಿ ಈಕೆಯನ್ನು‌ಕೊಲೆಗೈದು ಬಳಿಕ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ಕೊಂಡೋಯ್ದು K.R.ಪೇಟೆ ತಾಲೂಕಿನಹೇಮಗಿರಿ ಬಳಿಯ ಬಳಿ ಇರುವ  ಹೇಮಾವತಿ‌ ನಾಲೆಗೆಎಸೆದು ಪರಾರಿಯಾಗಿದ್ದರು.

ಇದನ್ನೂ ಓದಿ: Farmers Protest: ರೈತ ಹೋರಾಟದ ಕಿಚ್ಚಿಗೆ ಬೀಳುತ್ತಾ ಹರಿಯಾಣದ ಬಿಜೆಪಿ ಸರ್ಕಾರ: ಅವಿಶ್ವಾಸ ನಿಲುವಳಿ ಪರ ಮತ ಚಲಾಯಿಸಲು ರೈತರ ಕರೆ

ಕಳೆದ ವರ್ಷ ನ-17 ರಂದುಈ ಮಹಿಳೆಯ ಶವ ತ್ರಿಸೂಲ್ ಪವರ್ ಪ್ಲಾಂಟ್ ಬಳಿಪತ್ತೆಯಾಗಿತ್ತು. ಈ ಸಂಬಂಧ ಕೆ.ಆರ್. ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಆ‌ ಮಹಿಳೆಯ ಶವ ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು ಜಿಲ್ಲೆಯ ಜನರು ಈ ಕೊಲೆ ಪ್ರಕರಣ ಕಂಡು ಬೆಚ್ಚಿ ಬಿದ್ದಿದ್ದರು. ಕಡೆಗೂ ಪೊಲೀಸರ ತಮ್ಮ ತನಿಖೆ ಮೂಲಕ ಈ ಬರ್ಬರ ಕೊಲೆ ಪ್ರಕರಣ ಭೇದಿಸಿ ಆರೋಪಿಗಳ ಎಡೆ ಮುರಿ ಕಟ್ಟಿದ್ದಾರೆ.
ಒಟ್ಟಾರೆ KRಪೇಟೆಯಲ್ಲಿ ನಡೆದಿದ್ದ ಮಹಿಳೆಯ ಬರ್ಬರ ಕೊಲೆ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ಭೇಧಿಸಿ ಇಬ್ಬರು ಆರೋಪಿಗಳನ್ನು  ಬಂಧಿಸಿ ಜೈಲಿಗೆ ಕಳಿಸಿ ದ್ದಾರೆ. ಜಿಲ್ಲೆಯ ಪೊಲೀಸರಿಗೆ ಕಗ್ಗಂಟಾಗಿದ್ದ ಈ ಕೊಲೆ ಪ್ರಕರಣ ಭೇಧಿಸಿದ KR ಪೇಟೆಗ್ರಾಮಾಂತರ ಪೊಲೀಸರ ಕಾರ್ಯವನ್ನು ಎಸ್ಪಿ ಆಶ್ವಿನಿ ಮುಕ್ತಕಂಠದಿಂದ ಶ್ಲಾಘಿಸಿ, ಪ್ರಕರಣ ಭೇಧಿಸಿದ ಪೊಲೀಸರ ತಂಡಕ್ಕೆ ನಗದು ಬಹು ಮಾನ ನೀಡು ಪ್ರಶಂಸಿಸಿ ಅಭಿನಂದಿಸಿದ್ದಾರೆ.
Published by: MAshok Kumar
First published: March 8, 2021, 7:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories