ಕೆಪಿಎಸ್‌ಸಿ ಕರ್ಮಕಾಂಡ; ಲಿಖಿತ ಪರೀಕ್ಷೆಗೂ ಮುನ್ನವೇ ವೈದ್ಯಕೀಯ ಪರೀಕ್ಷೆ

ಉದ್ಯೋಗ ಭವನ.

ಉದ್ಯೋಗ ಭವನ.

ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿದ್ದು, ಜೂನ್/ಜುಲೈನಲ್ಲಿ ಪರೀಕ್ಷೆ ನಡೆಸುವ ಸಂಭವನೀಯ ದಿನಗಳನ್ನು ಘೋಷಿಸಿದ್ದ ಕೆಪಿಎಸ್‌ಸಿ ಇದೀಗ ಏಕಾಏಕಿ ಲಿಖಿತ ಪರೀಕ್ಷೆಗೂ ಮುನ್ನವೇ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿರುವುದು, ಅದಕ್ಕೆ ಸ್ಪಷ್ಟ ಕಾರಣಗಳನ್ನು ಮರೆ ಮಾಚಿರುವುದು ಮತ್ತೇ ಗೋಲ್‌ಮಾಲ್‌ನ ಶಂಕೆ ಮೂಡಿಸಿದೆ.

ಮುಂದೆ ಓದಿ ...
  • Share this:

ಕೊಪ್ಪಳ: 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಕೆಪಿಎಸ್‌ಸಿ ಇಲ್ಲೂ ಸಹ ಎಡವಟ್ಟು ಮಾಡಿಕೊಂಡು ಗೊಂದಲ ಸೃಷ್ಟಿಸಿದೆ. ಪ್ರತಿ ಬಾರಿ ಪರೀಕ್ಷೆ ನಂತರ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ, ಜೊತೆಯಲ್ಲೇ ಮೆಡಿಕಲ್ ಟೆಸ್ಟ್ ನಡೆಸುತ್ತಿದ್ದ ಕರ್ನಾಟಕ‌ ಲೋಕಸಭಾ ಆಯೋಗ ಈ ಬಾರಿ ಲಿಖಿತ ಪರೀಕ್ಷೆಗೂ ಮುನ್ನವೇ ಮೆಡಿಕಲ್ ಟೆಸ್ಟ್ ಕಂಡಕ್ಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.


2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 106 ಹುದ್ದೆಗಳ ನೇಮಕಾತಿಗೆ 2020ರ ಜನವರಿ 31, ಫೆಬ್ರವರಿ 24 ಮತ್ತು 25ರಂದು ಅಧಿಸೂಚನೆ ಹೊರಡಿಸಿ ಮಾರ್ಚ್ 17ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಅಧಿಸೂಚನೆಯಲ್ಲಿ ಲಿಖಿತ ಪರೀಕ್ಷೆಯ ನಂತರ ದಾಖಲಾತಿ ಪರಿಶೀಲನೆ, ವಿಕಲಚೇತನ ಮೀಸಲಾತಿ ಕೋರಿರುವ ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು.


ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿದ್ದು, ಜೂನ್/ಜುಲೈನಲ್ಲಿ ಪರೀಕ್ಷೆ ನಡೆಸುವ ಸಂಭವನೀಯ ದಿನಗಳನ್ನು ಘೋಷಿಸಿದ್ದ ಕೆಪಿಎಸ್‌ಸಿ ಇದೀಗ ಏಕಾಏಕಿ ಲಿಖಿತ ಪರೀಕ್ಷೆಗೂ ಮುನ್ನವೇ ವೈದ್ಯಕೀಯ ಪರೀಕ್ಷೆ ನಡೆಸಲು ಮುಂದಾಗಿರುವುದು, ಅದಕ್ಕೆ ಸ್ಪಷ್ಟ ಕಾರಣಗಳನ್ನು ಮರೆ ಮಾಚಿರುವುದು ಮತ್ತೇ ಗೋಲ್‌ಮಾಲ್‌ನ ಶಂಕೆ ಮೂಡಿಸಿದೆ.


ಪಾಸಿಟಿವ್ ಬಂದರೆ ಏನು ಮಾಡಬೇಕು?


ಸರಿ, ಇದು ಒತ್ತಟ್ಟಿಗಿರಲಿ. ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾದ ಅಂಗವಿಕಲ ಮೀಸಲಾತಿ (ವಿಶೇಷವಾಗಿ ಅಂಧ/ದೃಷ್ಟಿಮಂದ ಅಭ್ಯರ್ಥಿಗಳು) ಕೋರಿರುವ ಅಭ್ಯರ್ಥಿಗಳಿಗೆ ಈಗಾಗಲೇ ಕೆಪಿಎಸ್‌ಸಿ ಅವರ ನೋಂದಾಯಿತ ಸಂಪರ್ಕ ಸಂಖ್ಯೆ, ಈಮೇಲ್ ಐಡಿ ಹಾಗೂ ಮನೆ ವಿಳಾಸಕ್ಕೆ ವೈದ್ಯಕೀಯ ಪರೀಕ್ಷೆಯ ದಿನ, ಸ್ಥಳ, ಸಮಯ ಹಾಗೂ ಹಾಜರುಪಡಿಸಬೇಕಾದ ದಾಖಲೆಗಳ ಮಾಹಿತಿ ನೀಡಿದ್ದು ಸ್ವಾಗತಾರ್ಹ. ಆದರೆ ಸೂಚನಾ ಪತ್ರದ ಕೊನೆಯಲ್ಲಿ ರ್‍ಯಾಪಿಡ್ ಟೆಸ್ಟ್ ಬಗ್ಗೆ ಉಲ್ಲೇಖಿಸಿದೆ. ಇದು ಬಹಳಷ್ಟು ಅಭ್ಯರ್ಥಿಗಳಿಗೆ ಗೊಂದಲ ಉಂಟು ಮಾಡಿದೆ.


ರ್‍ಯಾಪಿಡ್ ಟೆಸ್ಟ್ ಮಾಡಿಸಿದಾಗ ಕೋವಿಡ್-19 ನೆಗೆಟಿವ್ ಬಂದರೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಕೋವಿಡ್-19 ಪಾಸಿಟಿವ್ ಬಂದರೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲೇಬೇಕೇ? ಅಥವಾ ಮತ್ತೊಮ್ಮೆ ಆಹ್ವಾನಿಸುತ್ತಾರಾ? ಪಾಸಿಟಿವ್ ಕಾರಣದಿಂದಾಗಿ ವೈದ್ಯಕೀಯ ಪರೀಕ್ಷೆಗೆ ಗೈರಾದರೆ  ಲಿಖಿತ ಪರೀಕ್ಷೆಗೆ ಅವಕಾಶ ಕೊಡುತ್ತಾರೊ? ಇಲವೋ? ಅಥವಾ ಅನರ್ಹಗೊಳಿಸುತ್ತಾರಾ?


ಇದನ್ನೂ ಓದಿ : Rajinikanth: ಚಿತ್ರರಂಗದಲ್ಲಿ 45 ವಸಂತ ಪೂರೈಸಿದ ತಲೈವಾ; ಬೆಂಗಳೂರಲ್ಲೂ ರಜಿನಿ ಫ್ಯಾನ್ಸ್ ಸಂಭ್ರಮ!


ಪಾಸಿಟಿವ್ ಇದ್ದರೂ ವೈದ್ಯಕೀಯ ಪರೀಕ್ಷೆ ಕಡ್ಡಾಯವಾದರೆ ದೂರದ ಊರುಗಳಿಂದ ವೈದ್ಯಕೀಯ ಪರೀಕ್ಷೆಗೆ ಹೇಗೆ ಹಾಜರಾಗಬೇಕು. ಸೋಂಕು ಅಲ್ಲೇನಾದರೂ ಹರಡಿದರೆ ಹೇಗೆ? ನಿಯಂತ್ರಣ ಯಾವ ರೀತಿ? ಹೀಗೆ ಹತ್ತು ಹಲವು ಸಂದೇಹಗಳು ಅಭ್ಯರ್ಥಿಗಳ ಮನದಲ್ಲಿ ಮನೆ ಮಾಡಿವೆ. ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಕೆಪಿಎಸ್‌ಸಿ ಅದ್ವಾನಗಳಿಗೆ ಅಂಕುಶ ಹಾಕಬೇಕಿದೆ.


ನಾವು ಕೇರ್ ತಗೊಳ್ತೇವೆ


ಇದು ಕೆಪಿಎಸ್‌ಸಿ ನಡೆಸುವ ಪ್ರತಿ ಪರೀಕ್ಷೆಯ ನಿಯಮ. ಈಗ ಅಂಧ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ. ಸೋಮವಾರ ಈ ಕುರಿತಾದ ಯಾವುದೇ ದೂರುಗಳಿಲ್ಲ. ಪಾಸಿಟಿವ್ ಇದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುವುದು. ಆ ಬಗ್ಗೆ ನಾವು ಕೇರ್ ತೆಗೆದುಕೊಳ್ಳುತ್ತೇವೆ ಎಂದು ಕೆಪಿಎಸ್‌ಸಿ ಮುಖ್ಯಸ್ಥ ಷಡಕ್ಷರಯ್ಯ ತಿಳಿಸಿದ್ದಾರೆ.

Published by:MAshok Kumar
First published: