HOME » NEWS » District » KPCC PRESIDENT DK SHIVAKUMAR VISITS VICTORIA HOSPITAL IN BENGALURU TO ENCOURAGE CORONA WARRIORS SNVS

ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆಶಿ ಭೇಟಿ; ಕೊರೋನಾ ವಾರಿಯರ್ಸ್​ಗೆ ಧೈರ್ಯ ತುಂಬಿದ ಕೆಪಿಸಿಸಿ ಅಧ್ಯಕ್ಷ

ಕೊರೋನಾದಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆಯೇ ನಾವು ಬದುಕಬೇಕಿದೆ. ಸೋಂಕಿತರಿಗೆ ಆತ್ಮವಿಶ್ವಾಸ, ಮನೋಧೈರ್ಯ ತುಂಬಿದರೆ ಅರ್ಧಕ್ಕರ್ಧ ರೋಗವೇ ವಾಸಿಯಾದಂತಾಗುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.

news18-kannada
Updated:July 15, 2020, 4:03 PM IST
ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆಶಿ ಭೇಟಿ; ಕೊರೋನಾ ವಾರಿಯರ್ಸ್​ಗೆ ಧೈರ್ಯ ತುಂಬಿದ ಕೆಪಿಸಿಸಿ ಅಧ್ಯಕ್ಷ
ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಡಿಕೆ ಶಿವಕುಮಾರ್
  • Share this:
ಬೆಂಗಳೂರು(ಜುಲೈ 15): ನಗರದ ಕೆಆರ್ ಮಾರುಕಟ್ಟೆ ಬಳಿ ಇರುವ ವಿಕ್ಟೋರಿಯಾ ಆಸ್ಪತ್ರೆಗೆ ಇದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಅದ್ರೆ ಆಸ್ಪತ್ರೆ ಒಳ ಪ್ರವೇಶಕ್ಕೆ ಅವರಿಗೆ ಅವಕಾಶ ನಿರಾಕರಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲೇ ವೈದ್ಯರ ಜೊತೆ ಮಾತುಕತೆ ನಡೆಸಿದರು. ಕೊರೋನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ  ಸಿಬ್ಬಂದಿಯ ಸಮಸ್ಯೆ ಆಲಿಸಿದರು.

ಈ ವೇಳೆ ಉತ್ತಮ ಗುಣಮಟ್ಟದ ಮೆಡಿಕಲ್ ಕಿಟ್ ನೀಡಲಾಗುತ್ತಿದೆಯಾ? ಜೊತೆಗೆ ಉತ್ತಮ ಗುಣಮಟ್ಟದ ಊಟ ಸಿಗುತ್ತಿದೆಯಾ? ಪೌಷ್ಠಿಕಾಂಶ ಆಹಾರವನ್ನ ಸರ್ಕಾರ ನೀಡುತ್ತಿದೆಯಾ? ಸೋಂಕಿತರಿಗೆ ಸರಿಯಾದ ಆಹಾರ ವಿತರಣೆ ಆಗುತ್ತಿದೆಯಾ? ಈ ಎಲ್ಲಾ ವಿಚಾರಗಳ ಬಗ್ಗೆ ಡಿಕೆ ಶಿವಕುಮಾರ್ ಮಾಹಿತಿ ಪಡೆದರು. ನಂತರ  ವೈದ್ಯರು, ಸಿಬ್ಬಂದಿ ವರ್ಗಕ್ಕೆ ಧೈರ್ಯ ತುಂಬಿದರು. ಬಳಿಕ ಕೋವಿಡ್ ಸೋಂಕಿತರ ಭೇಟಿಗೆ ಮುಂದಾದಾಗ ಅವರಿಗೆ ಅವಕಾಶ ಸಿಗಲಿಲ್ಲ.

ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಂಕಿತರ ಆರೋಗ್ಯ ವಿಚಾರಿಸಿದರು. ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕೊರೊನಾ ಸೋಂಕಿತರನ್ನು ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸಿದರು. ವೈದ್ಯರು, ನರ್ಸ್​ಗಳು ಹಾಗೂ ಸಿಬ್ಬಂದಿ ಜೊತೆಯೂ ಸಮಾಲೋಚನೆ ನಡೆಸಿದರು.

ಇದನ್ನೂ ಓದಿ: ಎಂಟಿಆರ್‌ ಕಂಪೆನಿಯ ಉದ್ಯೋಗಿಗಳಿಗೆ ಕೊರೋನಾ ಸೋಂಕು; ಪ್ರತಿಷ್ಠಿತ ಸಿದ್ದ ಆಹಾರ ಕಂಪೆನಿ ಸೀಲ್‌ಡೌನ್

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಉಪಸ್ಥಿತರಿದ್ದರು. ನಂತರ ಮಾತನಾಡಿದ ಡಿಕೆ ಶಿವಕುಮಾರ್, 4 ದಿನದ ಮಗುವಿನಿಂದ ಹಿಡಿದು 90 ವರ್ಷದ ವಯೋವೃದ್ಧರೂ ಸಹ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಗುಣಮುಖರಾಗಿ ಹೋದ ಉದಾಹರಣೆ ಇದೆ. ಈ ಆಸ್ಪತ್ರೆಯಿಂದ ಗುಣಮುಖರಾಗಿ ಹೋದವರಲ್ಲಿ ಅನೇಕರು ಇತರೆ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿರುವ ಬಗ್ಗೆ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.



ಕೊರೋನಾದಿಂದ ನಾವು‌ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆಯೇ ನಾವು ಬದುಕಬೇಕಿದೆ. ಸೋಂಕಿತರಿಗೆ ಆತ್ಮವಿಶ್ವಾಸ, ಮನೋಧೈರ್ಯ ತುಂಬಿದರೆ ಅರ್ಧಕ್ಕರ್ಧ ರೋಗವೇ ವಾಸಿಯಾದಂತಾಗುತ್ತದೆ. ಇನ್ನು ವಿಕ್ಟೋರಿಯಾದಲ್ಲಿ ತಾವು ತಪ್ಪು ಕಂಡುಹಿಡಿಯಲೋ ಅಥವಾ ಆರೋಪ ಮಾಡುವುಕ್ಕಾಗಿಯೆಂದೋ ಭೇಟಿ ಕೊಟ್ಟಿಲ್ಲ. ತಪ್ಪನ್ನೇ ಕಂಡುಹಿಡಿಯಬೇಕೆಂದರೆ‌ ನಮ್ಮಲ್ಲೂ ನಿಮ್ಮಲ್ಲೂ ಎಲ್ಲರಲ್ಲಿಯೂ ತಪ್ಪು ಕಂಡುಹಿಡಿಯಬಹುದು. ತಪ್ಪುಕಂಡು ಹಿಡಿಯಲು ಬೇರೆ ಬೇರೆ ವಿಚಾರಗಳಿವೆ. ವಿಧಾನಸೌಧದ ಹೊರಗೂ ಒಳಗೂ ಚರ್ಚಿಸಬಹುದು. ಆದರೆ, ಕೊರೋನಾ ಸೋಂಕಿತರ ಸೇವೆ ಮಾಡುವುದು ಅಷ್ಟು ಸುಲಭವಾದ ಕೆಲಸವೂ ಅಲ್ಲ. ಎಲ್ಲರೂ ಮಾನಸಿಕರಾಗಿ ಸಿದ್ಧರಿರಬೇಕು. ವೈದ್ಯಕೀಯ ಸಿಬ್ಬಂದಿಯೂ ಸಹ ಮನೋಸ್ಥೈರ್ಯದಿಂದಿರಬೇಕು.ಇದು ಅಷ್ಟು ಸುಲಭದ ಕೆಲಸವೂ ಅಲ್ಲ. ಆರೋಪ‌ ಮಾಡುವುದನ್ನು ಬಿಟ್ಟು ಧೈರ್ಯ ತುಂಬುವ ಹಾಗೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕೆಂದು ಡಿಕೆ ಶಿವಕುಮಾರ್ ಕರೆ ನೀಡಿದರು.
Published by: Vijayasarthy SN
First published: July 15, 2020, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories