ಹುಬ್ಬಳ್ಳಿ (ಮೇ 31); ಕೋವಿಡ್ ನಿರ್ವಹಣೆ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರ ಜೋರಾಗಿ ನಡೆದಿದೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಕೇವಲ ಎರಡು ತಾಸು ಸಮಯ ನೀಡಿ, ಮದ್ಯ ಮಾರಾಟಕ್ಕೆ ಸಂಜೆವರೆಗೂ ಅವಕಾಶ ನೀಡಿರೋ ಬಿಜೆಪಿ ಸರ್ಕಾರಕ್ಕೆ ಕಣ್ಣು, ಹೃದಯಾ ಇದೆಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರುವ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ರಾಜಕೀಯ ಮಾಡೋದನ್ನ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ರೈತರಿಗೆ ತರಕಾರಿ ಮಾರಾಟ ಮಾಡೋಕೆ ಕೇವಲ ಎರಡೂ ಗಂಟೆ ಅವಕಾಶ ನೀಡ್ತಾರೆ. ಆದ್ರೆ ಲಿಕ್ಕರ್ ಮಾರೋಕೆ ಸಂಜೆ 4 ಗಂಟೆಯವರೆಗೂ ಅವಕಾಶ ನೀಡ್ತಿರೋದ ಯಾವ ನ್ಯಾಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧಾರವಾಡ ಜಿಲ್ಲೆ ರಾಯಪುರ್ ನಲ್ಲಿ ರೈತರ ಜಮೀನಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ರೈತರ ಸಮಸ್ಯೆ ಕೆಳೋಣ ಅಂತ ಅವರ ಜಮೀನಿಗೆ ಬಂದಿದ್ದೇನೆ. ರೈತರ ಗೋಳು ಕೇಳೋರೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ತರಕಾರಿ ಮಾರಾಟಕ್ಕೆ ಕೆವಲ ಎರಡು ಗಂಟೆ ಅಬಕಾಶ ಮಾಡಿಕೊಟ್ಟಿರೋ ಸರ್ಕಾರ, ಮದ್ಯ ಮಾರಾಟಕ್ಕೆ ಮಾತ್ರ ಬರಪೂರ ಸಮಯಾವಕಾಶ ನೀಡಲಾಗಿದೆ. ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ನಿಮಗೆ ಕಣ್ಣು, ಹೃದಯ ಇದಿಯಾ..? ಖ್ಯಮಂತ್ರಿಗಳೇ ಈ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನ್ ಹೇಳಿದ ಮೇಲೆ ಕೆಲವು ಮಿನಿಸ್ಟರ್ ಗಳನ್ನ ಜಿಲ್ಲೆಗೆ ಕಳಿಸಿದ್ರಿ.
ನಾವು ರೈತರ ಜೊತೆ ನಿಲ್ಲುತ್ತೆವೆ. ಲಾಕ್ ಡೌನ್ ಬಗ್ಗೆ ನಾನೇನು ಹೇಳಲಾರೆ. ಅದು ಅವರ ನಿರ್ಧಾರ, ಅವರೇನಾದ್ರು ಮಾಡ್ಕೊಳ್ಳಲಿ. ನಂಗೆ ಸರ್ಕಾರ ಕೇಳಿದ್ರೆ ನಾನ್ ನನ್ನ ಅಭಿಪ್ರಾಯ ಹೇಳ್ತೆನೆ ನಾನು ಜನರ ಹತ್ತಿರ ಬಂದಿದ್ದೇನೆ, ಆ ಬಗ್ಗೆ ಮತನಾಡ್ತಾನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿರೊ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ಧರಾಮಯ್ಯ ಮತ್ತು ಡಿಕೆಶಿ ಬೆಳಿಗ್ಗೆಯಿಂದ ಸಂಜೆವರೆಗೂ ರಾಜಕಾರಣ ಮಾಡೋದನ್ನ ನಿಲ್ಲಿಸಲಿ ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಲ್ಲಿಯೋ ಒಂದು ಕಡೆ ತಪ್ಪು ಹುಡುಕೋದು. ಅದನ್ನೇ ಹಿಡಿದುಕೊಂಡು ರಾಜಕೀಯ ಮಾಡೋದು. ತಪ್ಪು ಹುಡುಕುವುದು ಬಿಟ್ಟು ಕೆಲಸ ಮಾಡಲು ಕೈ ಜೋಡಿಸಲಿ. ಕಾಂಗ್ರೆಸ್ ಅವನತಿಗೆ ಇದೂ ಒಂದು ಕಾರಣ. ಮೂರು ಹೊತ್ತು ಆರೋಪ ಮಾಡುವುದು ಬಿಟ್ಟು ನಮ್ಮ ಜೊತೆ ಕೈ ಜೋಡಿಸಿ ಕೆಲಸ ಮಾಡಿ. ಇದು ರಾಜಕಾರಣ ಮಾಡುವ ಸಮಯವಲ್ಲ.
ಜನರು ಕಷ್ಟದಲ್ಲಿ ಇದಾರೆ. ಎಂಪಿ ಮತ್ತು ಎಂಎಲ್ಎ ಫಂಡ್ ಅವರ ಮನೆಯದ್ದಲ್ಲ. ಕೋವಿಡ್ ಗೆ 100 ಕೋಟಿ ರೂಪಾಯಿ ಘೋಷಿಸಿದ್ದಾರೆ, ಆ ಹಣ ಏನು ಅವರ ಮನೆಯಿಂದ ತಂದುಕೊಟ್ಟಿದ್ದಾರಾ ಎಂದು ಶೆಟ್ಟರ್ ಪ್ರಶ್ನಿಸಿದರು. ಕಾಂಗ್ರೆಸ್ ನವರು ಮೊದಲು ರಾಜಕಾರಣ ನಿಲ್ಲಿಸಲಿ. ಒಳ್ಳೆಯ ಸಲಹೆ ಕೊಟ್ರೆ ನಾವು ಕೇಳೋದಕ್ಕೆ ರೆಡೀ ಇದ್ದೇವೆ. ಬ್ಲ್ಯಾಕ್ ಫಂಗಸ್ ಗೆ ಅಗತ್ಯ ಔಷದಿ ಪೂರೈಕೆ ಮಾಡಲಾಗುತ್ತಿದೆ. ಸಿಎಂ ಬದಲಾವಣೆ ವಿಚಾರದ ಪ್ರಶ್ನೆಯೇ ಇಲ್ಲ. ಇದೆಲ್ಲವೂ ಊಹಾಪೋಹದ ಮಾತುಎಂದು ಜಗದೀಶ ಶೆಟ್ಟರ್ ತಿಳಿಸಿದರು.
(ವರದಿ - ಶಿವರಾಮ ಅಸುಂಡಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ