ಕೊಪ್ಪಳ: ಕೊರೋನಾ ಸಂಕಷ್ಟದ ನಡುವೆಯೂ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವ ಗವಿಮಠ

ದಾಸೋಹಕ್ಕೆ ಹೆಸರುವಾಸಿಯಾಗಿರುವ ಕೊಪ್ಪಳ ಗವಿಮಠವು, ಈಗ ಕೊರೊನಾ ಸೋಂಕಿತರ ಸೇವೆಗೆ ಸಿದ್ದವಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ‌ದಲ್ಲಿ ಮಠದ ವೃದ್ದಾಶ್ರಮವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿದೆ.

ಸೋಂಕಿತರಿಗೆ ಆಹಾರ ತಯಾರಿಸುತ್ತಿರುವ ಗವಿಮಠದ ಭಕ್ತರು.

ಸೋಂಕಿತರಿಗೆ ಆಹಾರ ತಯಾರಿಸುತ್ತಿರುವ ಗವಿಮಠದ ಭಕ್ತರು.

  • Share this:
ಕೊಪ್ಪಳ: ಜಿಲ್ಲೆಯ ಗವಿಮಠದಿಂದ ಈಗಾಗಲೇ ಕೊವಿಡ್ ಆಸ್ಪತ್ರೆ ಆರಂಭಿಸಲಾಗಿದೆ. ಈಗ ಮತ್ತೆ ಕೊರೊನಾ ಸೋಂಕಿತರ ಆರೈಕೆಗಾಗಿ ಕೊವಿಡ್ ಕಾಳಜಿ ಕೇಂದ್ರವನ್ನು ಆರಂಭಿಸಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆ, ಶ್ರೀಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ, ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಕಾಳಜಿ ಕೇಂದ್ರವನ್ನು ಇಂದು ಉದ್ಘಾಟನೆ ಮಾಡಲಾಯಿತು. ಕಳೆದ ವಾರ 100 ಹಾಸಿಗೆಯ ಕೊವಿಡ್ ಆಸ್ಪತ್ರೆ ಆರಂಭಿಸಿದ್ದ ಗವಿಮಠವು, ಈಗ ಗವಿಸಿದ್ದೇಶ್ವರ ಮಹಿಳಾ ಹಾಸ್ಟೆಲ್ ನಲ್ಲಿ 200 ಜನರಿಗೆ ಕಾಳಜಿ ವಹಿಸುವ ಕೊವಿಡ್ ಕೇರ್ ಸೆಂಟರ್ ಆರಂಭಿಸಿದೆ.  200 ಜನರಿಗೆ ಇಲ್ಲಿ ಆರೈಕೆ ಮಾಡುವ ಉದ್ದೇಶ ಹೊಂದಲಾಗಿದೆ, ಈ ಕೊವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ, ಉತ್ತಮ ಚಿಕಿತ್ಸೆ ಹಾಗೂ ಆರೈಕೆ ಮಾಡುವ ಉದ್ದೇಶ ಹೊಂದಲಾಗಿದೆ. 

ಕೊಪ್ಪಳ ಜಿಲ್ಲೆಯಲ್ಲಿ ಈಗ ಸೋಂಕು ವ್ಯಾಪಕವಾಗಿರುವಾಗುತ್ತಿದೆ, ಮುಖ್ಯವಾಗಿ ಹೋಂ ಐಸೋಲೇಷನ್ ನಲ್ಲಿರುವವರಿಂದಲೇ ಸೋಂಕು ಅಧಿಕವಾಗುತ್ತದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಹೋಂ ಐಸೋಲೇಷನ್ ನಿಂದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಇಂದು ಗವಿಮಠದಿಂದ ಕೊವಿಡ್ ಕೇರ್ ಸೆಂಟರ್ ಆರಂಭವಾಗಿದೆ. ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ ಸೇರಿ ಹಲವರು ಈ ಸಂದರ್ಭದಲ್ಲಿದ್ದು ಗವಿಮಠದ ಸ್ವಾಮೀಜಿಗಳ ಕಾರ್ಯವನ್ನು ಶ್ಲಾಘಿಸಿದರು.

ಈ ಮಧ್ಯೆ ಗವಿಮಠದಿಂದ ಸೋಂಕಿತರಿಗೆ ರುಚಿಯಾದ ಊಟ ನೀಡಲಾಗುತ್ತಿದೆ.  ಸಾಮಾನ್ಯವಾಗಿ ಆರೋಗ್ಯದಲ್ಲಿ ಏರುಪೇರಾದಾಗ ಬಾಯಿ ರುಚಿಸುವುದಿಲ್ಲ. ಇನ್ನೂ ಕೊರೋನಾ ಸೋಂಕು ತಗುಲಿದಾಗಲಂತೂ ವಾಸನೆ, ನಾಲಗೆ ರುಚಿಯನ್ನೆ ಕಳೆದುಕೊಂಡಿರುತ್ತದೆ, ಇಂಥ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಹಾಗು ರುಚಿಕಟ್ಟಾಗಿ ಮಾಡಬೇಕಾಗುತ್ತದೆ. ಕೋವಿಡ್ ಆಸ್ಪತ್ರೆಗೆ ಹೋಗುವವರಿಗೆ ನೀಡುವ ಆಹಾರದ ಬಗ್ಗೆ ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತವೆ. ಆದರೆ ಕೊಪ್ಪಳ ಗವಿಮಠದಿಂದ ಆರಂಭವಾದ ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗಾಗಿ ಬಗೆ ಬಗೆಯ ಆಹಾರ ನೀಡಲಾಗುತ್ತಿದೆ.

ದಾಸೋಹಕ್ಕೆ ಹೆಸರುವಾಸಿಯಾಗಿರುವ ಕೊಪ್ಪಳ ಗವಿಮಠವು, ಈಗ ಕೊರೋನಾ ಸೋಂಕಿತರ ಸೇವೆಗೆ ಸಿದ್ದವಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ‌ದಲ್ಲಿ ಮಠದ ವೃದ್ದಾಶ್ರಮವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದ್ದು ಒಂದು ಕಡೆಯಾದರೆ, ಮಹಿಳಾ ಹಾಸ್ಟೆಲ್ ನಲ್ಲಿ ಕೊವಿಡ್ ಕೇರ್ ಸೆಂಟರಾಗಿ ಆರಂಭಿಸಲಾಗಿದೆ.‌ ಎರಡು ಕಡೆಯಲ್ಲಿ ಸುಮಾರು 200 ಜನ ಈಗ ಇದ್ದಾರೆ. ಕೊರೋನಾ ಸೋಂಕಿತರಿಗೆ ಮುಂಜಾನೆ ಇಡ್ಲಿ, ಉಪ್ಪಿಟ್ಟು, ದೋಸೆ ಹೀಗೆ ದಿನ ಬೇರೆ ಬೇರೆ ತಿಂಡಿ ಮಾಡಿದರೆ, ಮದ್ಯಾಹ್ನ ಚಪಾತಿ, ಪಲ್ಯ, ಅನ್ನ ಸಾಂಬರ್, ಸಂಜೆ ಬಿಸಿ ರೊಟ್ಟಿ, ಆಗಾಗ ಕಷಾಯ ಹೀಗೆ ಕೊವಿಡ್ ಸೋಂಕಿತರ ಇಚ್ಛೆ ಯಂತೆ ತಯಾರಿಸಿ ನೀಡುತ್ತಿದ್ದಾರೆ.

ಗವಿಮಠದ ಸ್ವಾಮೀಜಿಗಳು ಆಗಾಗ ಕೊವಿಡ್ ಸೆಂಟರ್ ಗಳಿಗೆ ಭೇಟಿ ಹಾಗು ವಿಡಿಯೋ ಕಾಲ್ ಮುಖಾಂತರ ಸೋಂಕಿತರನ್ನು ಸಂಪರ್ಕಿಸಿ ಅವರಿಗೆ ಬೇಕಾಗುವಂತೆ ಆಹಾರವನ್ನು ನೀಡುತ್ತಿದ್ದಾರೆ. ದಾಸೋಹ ಭವನದಲ್ಲಿ ಮುಂಜಾನೆಯಿಂದ ಸಂಜೆಯವರೆಗೂ ಬಾಣಸಿಗರು ಕೊವಿಡ್ ಪೇಷಙಟ್ ಗಳಿಗಾಗಿ ಆಹಾರ ತಯಾರಿಸಿ ಸರಿಯಾಗಿ ಪ್ಯಾಕ್ ಮಾಡಿ ಸೋಂಕಿತರಿಗೆ ನೀಡುತ್ತಿದ್ದಾರೆ, ಸೋಂಕಿತರು ಇಲ್ಲಿಯ ಊಟವನ್ನು ಸವಿದು ಖುಷಿ  ಪಡುತ್ತಿರುವದಲ್ಲದೆ ಈ ಆಸ್ಪತ್ರೆಯಲ್ಲಿ ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ; Priyanka Gandhi: ಉತ್ತರಪ್ರದೇಶದಲ್ಲಿ ಕೈ ಮೀರಿದ ಕೊರೋನಾ; ಯೋಗಿ ಆದಿತ್ಯನಾಥ್​ಗೆ 5 ಅಂಶಗಳ ಪತ್ರ ಬರೆದ ಪ್ರಿಯಾಂಕಾ ಗಾಂಧಿ

ಕೊರೊನಾ ಬಂದರೆ ಸಾಕು ಎಲ್ಲರೂ ಭಯ ಬೀಳುತ್ತಾರೆ, ಭಯದಿಂದಲೇ ಸಾಕಷ್ಟು ಜನ ಅಸುನೀಗುತ್ತಿದ್ದಾರೆ, ಆದರೆ ಕೊರೊನಾ ಸೋಂಕು ತಗುಲಿದರೂ ಭಯ ಪಡದೆ ಮಾನಸಿಕವಾಗಿ ಗಟ್ಟಿಯಾಗಿ, ಉಲ್ಲಾಸ ಭರಿತವಾಗಿರಬೇಕು, ಅದಕ್ಕಾಗಿ ಸೋಂಕಿತರಿಗೆ ಆಟ, ಸರಿಯಾದ ಕ್ರೀಡೆ ಸೇರಿದಂತೆ ಮನೋಲ್ಲಾಸಿತರಾಗಲು ಅವರಿಗೆ ಒತ್ತಡ ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಕೊಪ್ಪಳದ ಗವಿಮಠದಿಂದ ಆರಂಭಿಸಿರುವ ಕೊವಿಡ್ ಆಸ್ಪತ್ರೆಯಲ್ಲಿ ವಾಲಿಬಾಲ್ , ಟೆನಿಕಾಯ್ಟ್ ನಂಥ ಕ್ರೀಡೆ ಆಡಿದರು.

ಇದನ್ನೂ ಓದಿ; White Fungus: ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪತ್ತೆ; ಅತ್ಯಂತ ಅಪಾಯಕಾರಿಯಾದ ಇದರ ಲಕ್ಷಣಗಳೇನು?

ಕೊಪ್ಪಳದಲ್ಲಿಯ ಆಸ್ಪತ್ರೆಗಳಲ್ಲಿ ಕೊವಿಡ್ ಪೇಷಂಟ್ ಗಳಿಗೆ ಬೆಡ್ ಸಿಗುತ್ತಿಲ್ಲ, ಈಗ ಕೇವಲ 8 ಬೆಡ್ ಗಳು ಮಾತ್ರ ಲಭ್ಯ ಇವೆ. ಅವು ಸಹ ಜನರಲ್ ಬೆಡ್ ಗಳು, ಇಂಥ ಸಂದರ್ಭದಲ್ಲಿ ಗವಿಮಠದಿಂದ ವೃದ್ದಾಶ್ರಮವನ್ನು ಕೊವಿಡ್ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಈಗ ಇಲ್ಲಿ 65 ಪೇಷಂಟ್ ಗಳಿದ್ದಾರೆ.ಕೊರೊನಾ ಸೋಂಕಿತರು ಸಾಕಷ್ಟು ಮಾನಸಿಕ ಒತ್ತಡದಿಂದ ಇರುವ ಉದ್ದೇಶದಿಂದ ಇಲ್ಲಿಯ ವೈದ್ಯರು ಸೋಂಕಿತರಿಗೆ ವಾಲಿಬಾಲ್, ಟೆನಿಕಾಯ್ಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುತ್ತಿದ್ದಾರೆ.

ಕೇರಂ ಆಡುತ್ತಿದ್ದವರು ಈಗ ಉಲ್ಲಾಸದಿಂದ ವಾಲಿ ಬಾಲ್ ವಾಡಿದರು, ಮಹಿಳೆಯರು ಟೆನಿಕಾಯ್ಟ್ ಆಡಿ ತಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಡ್ಯೂಟಿ ವೈದ್ಯರು ಸಹ ಅವರೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು, ಕ್ರೀಡೆಯಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಸೋಂಕಿನ ನೋವು ಮರೆತು ಬೇಗ ಗುಣಮುಖರಾಗುತ್ತಿದ್ದಾರೆ.
Published by:MAshok Kumar
First published: