HOME » NEWS » District » KOPPALA ENGINEER WON INTERNATIONAL PHOTOGRAPHY AWARD SBR MAK

ಅಂತಾರಾಷ್ಟ್ರೀಯ ಫೋಟೊಗ್ರಾಫಿ ಪ್ರಶಸ್ತಿ ಪಡೆದ ಕೊಪ್ಪಳದ ಇಂಜಿನೀಯರ್

ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳಾದ ಓಲಾ ಅಲ್ಡೌಜ್, ಶಫೀಕ್ ಅಲ್ ಶಫೀಕ್, ಅಮ್ಮರ್ ಅಲಾವರ್, ನಜೌತ್ ಪರ್ಸಾನ ತೀರ್ಪುಗಾರರಾಗಿದ್ದರು. ಶ್ರೀನಿವಾಸ ಆರು ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಫೋಟೊಗಳನ್ನು ಸ್ಪರ್ಧೆಗಾಗಿ ಕಳುಹಿಸಿದ್ದು ಈಗಾಗಲೇ 100 ಅಧಿಕ ಮೆಡಲ್, ಪ್ರಶಂಸೆಗಳನ್ನು ಪಡೆದುಕೊಂಡಿದ್ದಾರೆ.

news18-kannada
Updated:June 25, 2021, 3:26 PM IST
ಅಂತಾರಾಷ್ಟ್ರೀಯ ಫೋಟೊಗ್ರಾಫಿ ಪ್ರಶಸ್ತಿ ಪಡೆದ ಕೊಪ್ಪಳದ ಇಂಜಿನೀಯರ್
ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಪೋಟೋ.
  • Share this:
ಕೊಪ್ಪಳ; ಒಂದು ಫೋಟೊ ಸಾವಿರ ಪದಗಳಿಗೆ ಸಮ ಎನ್ನುತ್ತಾರೆ. ಫೋಟೊ ದಲ್ಲಿರುವ ಭಾವ, ಫೋಟೊ ಹೇಳುವ ನೂರಾರು ಕಥೆಗಳಿಂದಾಗಿ ಫೋಟೋಗ್ರಾಫರ್ ಗಳಿಗೆ ತನ್ನದೆ ಸ್ಥಾನ ಹೊಂದಿದ್ದಾರೆ. ಹಲವರು ಫೋಟೋಗ್ರಾಫಿಯನ್ನು ವೃತ್ತಿಯ ನ್ನಾಗಿ ಮಾಡಿಕೊಂಡಿದ್ದಾರೆ. ಬಹಳಷ್ಟು ಫೋಟೋಗ್ರಾಫಿ ಯನ್ನು ಪ್ಯಾಶನ್ ನ್ನಾಗಿ ಇಟ್ಟುಕೊಂಡಿದ್ದಾರೆ. ಹೀಗೆ ಹವ್ಯಾಸಕ್ಕಾಗಿ ಫೋಟೋಗ್ರಾಫಿ ಮಾಡುವ ಇಂಜಿನೀಯರ್ ಕೆಲವೇ ದಿನಗಳಲ್ಲಿ ನೂರಾರು ಮೆಡಲ್ ಪಡೆದಿದ್ದಾರೆ. ಅದರಲ್ಲಿ ಕಳೆದ ತಿಂಗಳ ಹಿಂದೆ ಅಂತರಾಷ್ಟ್ರೀಯ ಫೋಟೊಗ್ರಾಫಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಮೂಲತಃ ಗಂಗಾವತಿ ಯವರಾಗಿರುವ ಶ್ರೀನಿವಾಸ ಎಣ್ಣಿ, ಓದಿದ್ದು ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್, ಗಂಗಾವತಿಯಲ್ಲಿ ಕೆಪಿಟಿಸಿಎಲ್ ನಲ್ಲಿ ಟ್ರಾನ್ಸಮಿಷನ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೃತ್ತಿ, ಓದಿನ ಜೊತಗೆ ಅವರಿಗೆ ಅವರ ಒಳತುಡಿತ ಫೋಟೋಗ್ರಾಫಿ, ದೇಶ , ವಿದೇಶದ ಫೋಟೊಗ್ರಾಫರ್ ಗಳ ಬಗ್ಗೆ ಮಾಹಿತಿ ಪಡೆದಿರುವ ಶ್ರೀನಿವಾಸ ಅವರಂತೆ ತಾನು ಫೋಟೊಗಳನ್ನು ತೆಗೆಯಬೇಕೆನ್ನುವ ತುಡಿತ ಹೊಂದಿದವರು, ಇದಕ್ಕೆ ತಕ್ಕಂತೆ ಕ್ಯಾಮರ ಖರೀದಿಸಿದ ಅವರು ಪ್ರಕೃತಿಯಲ್ಲಿಯ ಫೋಟೊಗಳನ್ನು ಕ್ಲಿಕ್ಕಿಸುತ್ತಾ ಹೋಗುತ್ತಿದ್ದಾರೆ.

ಅವರು ರಸ್ತೆಯಲ್ಲಿ ಹೋಗುವಾಗ ನೋಡಿರುವ ದೃಷ್ಠಿಕೋನ, ಸಭೆ ಸಮಾರಂಭಗಳು, ಉತ್ಸವಗಳಲ್ಲಿ ಅವರ ಚಕಾಚಕಿತ ಹಾಗು ಬೆಳಕು, ಫೋಟೊಗಳಲ್ಲಿರುವ ಭಾವವನ್ನು ತಾಳ್ಮೆಯಿಂದ ಕ್ಲಿಕ್ ಮಾಡಿದ್ದಾರೆ, ನಿತ್ಯ ಸರಕಾರಿ ಕಚೇರಿಯ ನಂತರ ಬಿಡುವಿನ ವೇಳೆಯನ್ನು ಅವರ ಇಂಥ ಹವ್ಯಾಸಕ್ಕಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ. ಕಳೆದ ಆರು ವರ್ಷಗಳ ಹಿಂದೆಯೇ ರಘು ರಾಯ್, ರಘಬೀರಸಿಂಗ್, ಅಶೋಕ ಸರವಣಂ ರ ಫೋಟೋಗ್ರಾಫಿ ಯಿಂದ ಉತ್ತೇಜನಗೊಂಡು ಫೋಟೊಗಳನ್ನು ತೆಗೆಯುವ ಹವ್ಯಾಸ ಬಳಸಿಕೊಂಡಿದ್ದಾರೆ.

ನಾಡಿನ ಎಲ್ಲಿಯಾದರೂ ಉತ್ಸವಗಳು ನಡೆದರೆ ಅಲ್ಲಿ ಹೋಗಿ ತಮ್ಮ ಕಲ್ಪನೆಗೆ ತಕ್ಕಂತೆ ಫೋಟೊಗಳನ್ನು ಸೆರೆ ಹಿಡಿಯುತ್ತಾರೆ‌ಕಳೆದ ಎರಡು ತಿಂಗಳ ಹಿಂದೆ ಭಾರತ, ಗಾಲ್ಫ ಸಮೂಹ, ಬಹರೈನ್, ಸೌದಿ ಅರಬಿಯಾ, ಕುವೈತ್ ರಾಷ್ಟ್ರಗಳ ಫೋಟೋಗ್ರಾಫಿ ಸೋಸಾಯಿಟಿಯಿಂದ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ 48 ದೇಶಗಳ 450 ಕ್ಕೂ ಹೆಚ್ಚು ಫೋಟೋಗ್ರಾಫರ್ ಗಳು ಭಾಗವಹಿಸಿದ್ದರು. ಅದರಲ್ಲಿ ಶ್ರೀನಿವಾಸ ಎಣ್ಣಿಯವರ ಟ್ರಾವೆಲ್ ವಿಭಾಗದಲ್ಲಿ ನಾಲ್ಕು ಫೋಟೊಗಳಿಗೆ ಪ್ರಶಸ್ತಿ ಬಂದಿದ್ದು ಚಿನ್ನದ ಪದಕ ಪಡೆದಿದ್ದಾರೆ.

ಇದನ್ನೂ ಓದಿ: ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ್ ವಿರುದ್ಧದ ದೇಶದ್ರೋಹ ಪ್ರಕರಣ; ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್

ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಫೋಟೋಗ್ರಾಫರ್ ಗಳಾದ ಓಲಾ ಅಲ್ಡೌಜ್, ಶಫೀಕ್ ಅಲ್ ಶಫೀಕ್, ಅಮ್ಮರ್ ಅಲಾವರ್, ನಜೌತ್ ಪರ್ಸಾನ ತೀರ್ಪುಗಾರರಾಗಿದ್ದರು. ಶ್ರೀನಿವಾಸ ಆರು ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಫೋಟೊಗಳನ್ನು ಸ್ಪರ್ಧೆಗಾಗಿ ಕಳುಹಿಸಿದ್ದು ಈಗಾಗಲೇ 100 ಅಧಿಕ ಮೆಡಲ್, ಪ್ರಶಂಸೆಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Emergency Black Day| ಜನರ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ಕಾಂಗ್ರೆಸ್​ ದೇಶದ ಜನರ ಕ್ಷಮೆ ಕೇಳಬೇಕು; ಬಿ.ಎಸ್. ಯಡಿಯೂರಪ್ಪನಾಡಿನ ಬಹುತೇಕ ಡಿಜಿಟಲ್ ವಿಭಾಗದಲ್ಲಿ ಸಾಕಷ್ಟು ಫೋಟೊಗಳು ಪ್ರಕಟವಾಗಿವೆ. ದೇಶದ ವಿವಿಧ ಫೋಟೋಗ್ರಾಫರ್ ಅಸೋಸಿಯೇಷನ್ ಸದಸ್ಯರಾಗಿದ್ದಾರೆ.ಪರಿಸರ, ಜನರ ಬದುಕು, ಉತ್ಸವ,ಸಭೆ ಸಮಾರಂಭಗಳನ್ನು ಎಲ್ಲರೂ ನೋಡುವ ದೃಷ್ಠಿಕೋನ ಒಂದಾದರೆ ಶ್ರೀನಿವಾಸ ಎಣ್ಣಿ ನೋಡುವ ದೃಷ್ಠಿಕೋನವೇ ವಿಭಿನ್ನವಾಗಿದ್ದು, ಅವರ ಸಾವಿರಾರು ಭಾವನೆಗಳ ಫೋಟೊಗಳ ಇನ್ನಷ್ಟು ಪ್ರಸಾರವಾಗಿ ಅವರ ಇನ್ನಷ್ಡು ಮನ್ನಣೆ ಸಿಗಲಿ ಎಂಬುವುದು ಅವರ ಸ್ನೇಹಿತರ ಆಶಯ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 25, 2021, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories