ಕೊಪ್ಪಳ: ಕೋವಿಡ್ ಡ್ಯೂಟಿಯಲ್ಲಿ 36 ದಿನ ಆಸ್ಪತ್ರೆಯಲ್ಲಿಯೇ ವಾಸ್ತವ್ಯ ಹೂಡಿದ ವೈದ್ಯ!

ಕೊಪ್ಪಳದಲ್ಲಿ ಗವಿಮಠದಿಂದ ಆರಂಭಿಸಿದ್ದ ಕೊವಿಡ್ ಆಸ್ಪತ್ರೆಯ ಉಸ್ತುವಾರಿ ಯನ್ನು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ ಮಹೇಶರಿಗೆ ವಹಿಸಲಾಗಿತ್ತು. ಮೇ 11 ರಂದು ಆಸ್ಪತ್ರೆ ಆರಂಭದ ದಿನದಿಂದ ಜೂ 15 ರವರೆಗೆ ಡಾ ಮಹೇಶರ ಕೊವಿಡ್ ರೋಗಿಗಳ ಸೇವೆಗೆ ನಿಂತಿದ್ದಾರೆ.

36 ದಿನ ಆಸ್ಪತ್ರೆಯಲ್ಲೇ ಕಳೆದ ಡಾ. ಮಹೇಶ.

36 ದಿನ ಆಸ್ಪತ್ರೆಯಲ್ಲೇ ಕಳೆದ ಡಾ. ಮಹೇಶ.

  • Share this:
ಕೊಪ್ಪಳ: ಕೊರೋನಾದ ಬಗ್ಗೆ ಭಯ ಪಡುವವರೆ ಹೆಚ್ಚು, ಹಲವು ವೈದ್ಯರು ಕೊವಿಡ್ ಡ್ಯೂಟಿ ಮಾಡಿದ ನಂತರ ಕೊರೊನಾಕ್ಕೆ ತುತ್ತಾಗಿದ್ದಾರೆ. ಒತ್ತಡದ ಮಧ್ಯೆ ಕೆಲಸ ಮಾಡುವ ವೈದ್ಯರಲ್ಲಿ ಕೊಪ್ಪಳದ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಇಡೀ ಒಂದು ತಿಂಗಳು ಕೊವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಮಾದರಿ ಯಾಗಿದ್ದಾರೆ. ಒಂದು ತಿಂಗಳ ಪರ್ಯಂತ ಮನೆ, ಮಕ್ಕಳನ್ನು ಬಿಟ್ಟು ಕೊವಿಡ್ ಆಸ್ಪತ್ರೆಯಲ್ಲಿರುವ ಕೊವಿಡ್ ನಿಜವಾದ ವಾರಿಯರ್ ಆಗಿದ್ದಾರೆ.  ಕೊಪ್ಪಳದಲ್ಲಿ ಗವಿಮಠದಿಂದ ಆರಂಭಿಸಿದ್ದ ಕೊವಿಡ್ ಆಸ್ಪತ್ರೆಯ ಉಸ್ತುವಾರಿ ಯನ್ನು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ ಮಹೇಶರಿಗೆ ವಹಿಸಲಾಗಿತ್ತು. ಮೇ 11 ರಂದು ಆಸ್ಪತ್ರೆ ಆರಂಭದ ದಿನದಿಂದ ಜೂ 15 ರವರೆಗೆ ಡಾ ಮಹೇಶರ ಕೊವಿಡ್ ರೋಗಿಗಳ ಸೇವೆಗೆ ನಿಂತಿದ್ದಾರೆ.

ಅವರೊಂದಿಗೆ ನಿತ್ಯ 40 ಜನ ಸಿಬ್ಬಂದಿ ಸಹ ಕೆಲಸ ಮಾಡಿದ್ದು ಸಿಬ್ಬಂದಿಗಳು ಶಿಫ್ಟ್ ಗಳ ಆಧಾರದಲ್ಲಿ ಕೆಲಸ ಮಾಡಿದರೆ ಡಾ ಮಹೇಶ ಇಡೀ ದಿನ ಕೊವಿಡ್ ವಾರ್ಡಿನಲ್ಲಿ ಕೆಲಸ ಮಾಡಿದ್ದಾರೆ, ಕೊವಿಡ್ ಆಸ್ಪತ್ರೆಯಲ್ಲಿಯೇ ಇದ್ದು ಸಿಬ್ಬಂದಿಗಳಿಗೆ ಮಾರ್ಗದರ್ಶನ, ರೋಗಿಗಳ ಯೋಗಕ್ಷೇಮ ನೋಡಿಕೊಂಡಿದ್ದಾರೆ. ಕೊವಿಡ್ ಆಸ್ಪತ್ರೆಗೆ ಮಠದಿಂದ ಬರುವ ಊಟ , ತಿಂಡಿ ಸೇವಿಸಿದ ಅವರು ಸ್ವಲ್ಪ ವಿಶ್ರಾಂತಿ ಬೇಕಾದರೆ ಪಕ್ಕದಲ್ಲಿರುವ ಯಾತ್ರಿ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ.

36 ದಿನ ನಿರಂತರ ಕೊವಿಡ್ ಡ್ಯೂಟಿ ಮಾಡಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಇದ್ದು ಅವರನ್ನು ಫೋನಿನಲ್ಲಿಯೇ ಸಂಪರ್ಕಿಸಿ ಕೊವಿಡ್ ಡ್ಯೂಟಿ ಮುಗಿಯುವವರಿಗೂ ಮನೆಗೆ ಬರುವುದಿಲ್ಲ ಎಂದು ಮಕ್ಕಳು, ಪತ್ನಿಯನ್ನು ಒಪ್ಪಿಸಿದ್ದು ಇದು ಒಂದು ಸೇವೆ, ಭಾವನಾತ್ಮಕ ಸಂಬಂಧಕ್ಕೆ ಅವಶ್ಯವಿರುವ ಕೆಲಸ ಮಾಡಬೇಕೆನ್ನು ಕಾರಣಕ್ಕೆ ಕೆಲಸ ಮಾಡಿದ್ದಾಗಿ ಅವರು ಹೇಳಿದ್ದಾರೆ. ಅವರ ಉಸ್ತುವಾರಿ ಯಲ್ಲಿ ಗವಿಮಠದ ಕೊವಿಡ್ ಆಸ್ಪತ್ರೆ ಮಾದರಿ ಆಸ್ಪತ್ರೆಯಾಗಿದ್ದು ಗುಣಮುಖರಾಗುವವರ ದರ ಶೇ.94 ರಷ್ಟು ಇತ್ತು.

ಸಾವಿನ ಪ್ರಮಾಣವೂ ಸಹ ಕಡಿಮೆ, ಸರಕಾರಿ ನೌಕರಿ 8 ತಾಸು ಕೆಲಸ ಮಾಡಿದರೆ ಸಾಕು ಎನ್ನುವವರ ಮಧ್ಯೆ ಡಾ ಮಹೇಶ ಕೊವಿಡ್ ಆಸ್ಪತ್ರೆಯಲ್ಲಿ ನಿರಂತರ ಸೇವೆ ಮಾಡಿ ಮಾದರಿಯಾಗಿದ್ದಾರೆ. ಈ ಕುರಿತು ಕರ್ತವ್ಯ ಮಾಡಿದ ಡಾ ಮಹೇಶರನ್ನು ಕೇಳಿದಾಗ ಇದೊಂದು ಸೇವೆಗೆ ಅವಕಾಶ ಸಿಕ್ಕಿದೆ, ಈ ಸಂದರ್ಭದಲ್ಲಿ ಸಿಕ್ಕಿರುವ ಅವಕಾಶವನ್ನು ಶ್ರದ್ದೆಯಿಂದ ಮಾಡಬೇಕೆನ್ನುವ ಉದ್ದೇಶ ಈಡೇರಿದೆ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ವಹಿಸಿಕೊಟ್ಟಿರುವ ಜನ ಸೇವೆ ಮಾಡಿದ್ದೇವೆ.

ಇದನ್ನೂ ಓದಿ: CoronaVirus| ಕನ್ನಡದ ಖ್ಯಾತ ನಟಿಯ ಮಗ ಕೊರೋನಾಗೆ ಬಲಿ, ಸಾವು ಬದುಕಿನ ನಡುವೆ ಪತಿಯ ಹೋರಾಟ.!

ಕೇವಲ ನಾನೊಬ್ಬನೆ ಮಾಡಿಲ್ಲ, ಇಲ್ಲಿ ನಾನು ಟೀ ಲೀಡರ್ ಅಷ್ಟೆ ನಮ್ಮ ಇಡೀ ದಿನ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡಿದ್ದೇವೆ, ಸೋಂಕಿತರಿಗೆ ಅಗತ್ಯವಾಗಿರುವ ಸೇವೆಯನ್ನು ತಕ್ಷಣ ನೀಡಲಾಗಿದೆ. ಇದೇ ಕಾರಣಕ್ಕೆ ಗವಿಮಠದ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಾಗಿರು ವವರಲ್ಲಿ ಶೇ 94 ರಷ್ಟು ಜನ ಗುಣಮುಖರಾಗಿದ್ದಾರೆ. ಶೇ 6 ರಷ್ಟು ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶ ಮುಸ್ಲೀಂ ವೃದ್ಧನ ಹಲ್ಲೆ ಪ್ರಕರಣ; ಪೊಲೀಸರ ಪ್ರತಿಪಾದನೆ ಸುಳ್ಳು ಎಂದ ಕುಟುಂಬ

ಇಲ್ಲಿ ವೈದ್ಯಕೀಯ ಚಿಕಿತ್ಸೆಯೊಂದಿಗೆ ಆತ್ಮಬಲ ಹೆಚ್ಚಿಸಿದ್ದೆ ಬೇಗ ಗುಣಮುಖರಾಗಲು ಕಾರಣವಾಯಿತು ಎನ್ನುತ್ತಾರೆ.ಮಕ್ಕಳು ಹಾಗು ಪತ್ನಿಯಿಂದ 36 ದಿನ ದೂರವಿದ್ದರೂ ಅವರೊಂದಿಗೆ ವಿಡಿಯೋ ಕಾಲ್ ಮಾತಾನಾಡಿದ್ದೇನೆ, ಭಾವನಾತ್ಮಕ ಸಂಬಂಧಕ್ಕಿಂತ ಕರ್ತವ್ಯ ಮುಖ್ಯ ಎನ್ನುತ್ತಾರೆ, ಡಾ ಮಹೇಶರ ಕಾರ್ಯವನ್ನು ಗವಿಮಠದ ಸ್ವಾಮೀಜಿ ಶ್ರೀಗವಿಸಿದ್ದೇಶ್ವರ ಸ್ವಾಮಿಗಳು ಸಹ ಶ್ಲಾಘಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: