ಕೊಪ್ಪಳ: ಶುಭ ಕಾರ್ಯಕ್ಕೆ ಬೇಕು ವಿಳ್ಯೆದೆಲೆ ಆದರೆ, ಬೆಳೆಗಾರರಿಗಿಲ್ಲ ಶುಭ ಸುದ್ದಿ!

ಕೊರೋನಾ ಲಾಕ್ ಡೌನ್ ವಿಳ್ಯೆದೆಲೆ ಬೆಳೆಗಾರರನ್ನು ಸಾಲಗಾರನನ್ನಾಗಿ ಮಾಡಿದೆ. ತೋಟಗಾರಿಕೆ ಬೆಳೆಯಾಗಿರುವ ವಿಳ್ಯೆದೆಲೆಯನ್ನು ಆಯಾಯ ಪ್ರದೇಶದ ಹವಾಗುಣ ಆಧಾರವಾಗಿ ಬೆಳೆಯುತ್ತಾರೆ.

ವೀಳ್ಯದ ಎಲೆ ಬೆಳೆಗಾರ.

ವೀಳ್ಯದ ಎಲೆ ಬೆಳೆಗಾರ.

  • Share this:
ಕೊಪ್ಪಳ: ವಿಳ್ಯೆದೆಲೆ ಸವಿಯುವವರು ಎಲ್ಲಾ ಕಡೆ ಇದ್ದಾರೆ, ಬಹುತೇಕರು ವಿಳ್ಯೆದೆಲೆಯನ್ನು ಊಟದ ನಂತರ ತಾಂಬೂಲವಾಗಿಯೂ ಬಳಸುತ್ತಾರೆ, ಶುಭ ಸಮಾರಂಭಗಳಲ್ಲಿ ಅಗ್ರ ಸ್ಥಾನ ವಿಳ್ಯೆದೆಲೆಗೆ ಇದೆ. ವಿಳ್ಯೆದೆಲೆಯನ್ನು ಬೆಳೆಯುವ ರೈತ ವರ್ಷಪೂರ್ತಿ ದುಡಿಯುತ್ತಾನೆ, ಕಷ್ಟಪಟ್ಟು ಸಾಕಷ್ಟು ಖರ್ಚು ಮಾಡಿ ಬೆಳೆದ ವಿಳ್ಯೆದೆಲೆಯು ಇತ್ತೀಚಿಗೆ ಭಾರಿ ಡಿಮ್ಯಾಂಡ್ ಇದೆ. ಈ ಕಾರಣಕ್ಕೆ ವಿಳ್ಯೆದೆಲೆ ಬಳೆಗಾರನಿಗೆ ಲಾಭ ತರುವ ಬೆಳೆಯಾಗಿದೆ. ಆದರೆ ಈಗ ಲಾಕ್ ಡೌನ್ ನಿಂದಾಗಿ ವಿಳ್ಯೆದೆಲೆ ಬೆಳಗಾರನಿಗೆ ಲಾಭವಿರಲಿ ಮಾಡಿದ ಖರ್ಚು ಬರುತ್ತಿಲ್ಲ. ಸಭೆ, ಸಮಾರಂಭಗಳು, ಪೂಜೆ, ಮದುವೆಯಂಥ ಸಂದರ್ಭದಲ್ಲಿ ಶಾಸ್ತ್ರಕ್ಕೆ, ಭರ್ಜರಿ ಊಟದ ನಂತರ ವಿಳ್ಯೆದೆಲೆ ಹಾಕಿಕೊಳ್ಳುವುದು ಸ್ವಾಭಾವಿಕ. ಆದರೆ, ವಿಳ್ಯೆದೆಲೆ ಬೆಳೆಯುವ  ರೈತರಿಗೆ ಕಳೆದೆರಡು ವರ್ಷಗಳಿಂದ ಸಂಕಷ್ಟ ಅನುಭವಹಿಸುತ್ತಿದ್ದಾನೆ.

ಕೊರೋನಾ ಲಾಕ್ ಡೌನ್ ವಿಳ್ಯೆದೆಲೆ ಬೆಳೆಗಾರರನ್ನು ಸಾಲಗಾರನನ್ನಾಗಿ ಮಾಡಿದೆ. ತೋಟಗಾರಿಕೆ ಬೆಳೆಯಾಗಿರುವ ವಿಳ್ಯೆದೆಲೆಯನ್ನು ಆಯಾಯ ಪ್ರದೇಶದ ಹವಾಗುಣ ಆಧಾರವಾಗಿ ಬೆಳೆಯುತ್ತಾರೆ. ಕೊಪ್ಪಳ ಜಿಲ್ಲೆಯ ಡಂಬರಳ್ಳಿ, ಬೇಳೂರು,  ಮಡಿಕೆರಿ, ಯರಗೇರಾ, ಹನುಮಸಾಗರ ಸೇರಿದಂತೆ ಹಲವು ಕಡೆ ಸುಮಾರು 50 ಹೆಕ್ಟರ್ ಪ್ರದೇಶದಲ್ಲಿ ವಿಳ್ಯೆದೆಲೆ ಯನ್ನು ಬೆಳೆಯುತ್ತಾರೆ. ಅಧಿಕ ತೇವಾಂಶ, ಗೊಬ್ಬರ, ಎಲೆಗಳನ್ನು ಬೆಳೆಯಲು ವರ್ಷವಿಡೀ ದುಡಿಯುವ ರೈತನಿಗೆ ಉತ್ತಮ ಆದಾಯ ತರುವ ಬೆಳೆಯೂ ಆಗಿದೆ.

ಆದರೆ, ಕಳೆದ ವರ್ಷ ಹಾಗು ಈ ವರ್ಷ ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದು ಇದರಿಂದ ವಿಳ್ಯೆದೆಲೆ ಬೆಳೆದ ರೈತನಿಗೆ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸುತ್ತಿದ್ದಾನೆ. ಸಾಮಾನ್ಯವಾಗಿ ಬೇಸಿಗೆಯ ಕಾಲದಲ್ಲಿ ಮದುವೆಗಳು ಅಧಿಕ. ಸಭೆ ಸಮಾರಂಭಗಳು ಅಧಿಕ. ಆದರೆ, ಕಳೆದ ವರ್ಷ ಹಾಗು ಈ ವರ್ಷ ಬೇಸಿಗೆಯ ಕಾಲದಲ್ಲಿ ಲಾಕ್ ಡೌನ್ ಮಾಡಿದ್ದರಿಂದ ಮದುವೆ, ಸಭೆ ಸಮಾರಂಭಗಳು, ದೇವಸ್ಥಾನಗಳು ಬಂದ್ ಆಗಿವೆ. ಪಾನ್ ಶಾಪ್ ಗಳು ಸಹ ಬಂದ್ ಆಗಿವೆ. ಪರಿಣಾಂ ವಿಳ್ಯೆದೆಲೆ ಮಾರಾಟ ಮಾಡಲು ಆಗುತ್ತಿಲ್ಲ.

ಇದರಿಂದ ಕಷ್ಟ ಪಟ್ಟು ಬೆಳೆದ ವಿಳ್ಯೆದೆಲೆ ಮಾರಾಟವಾಗುತ್ತಿಲ್ಲ. ತೋಟದಲ್ಲಿಯೇ ಎಲೆಗಳು ಉಳಿಯುವಂತಾಗಿದೆ. ಪ್ರತಿ ಎಕರೆಗೆ ಪ್ರತಿ ತಿಂಗಳು 10-15 ಪೆಂಡಿ ವಿಳ್ಯೆದೆಲೆ ಬೆಳೆದು ಮಾರುಕಟ್ಟೆಯಲ್ಲಿ 5-6 ಸಾವಿರ ರೂಪಾಯಿಗೆ ಮಾರಾಟ ಮಾಡಿ ಪ್ರತಿ ತಿಂಗಳು 50 ಸಾವಿರ ರೂಪಾಯಿಯಷ್ಟು ಆದಾಯ ಬರುತ್ತಿತ್ತು. ಈಗ ಮಾರುಕಟ್ಟೆಗೆ ಹೋದರೆ ಬಹಳಷ್ಟು ಕಡಿಮೆ ಕೇಳುತ್ತಾರೆ. ಕೇವಲ 1000-2000 ರೂಪಾಯಿ ಕೇಳುತ್ತಿದ್ದಾರೆ.

ಇದನ್ನೂ ಓದಿ: Sushant Singh Rajput: ನಟ ಸುಶಾಂತ್ ಸಿಂಗ್ ಸಾವಿನ ಕುರಿತ ಚಿತ್ರಕ್ಕೆ ತಡೆ ನೀಡಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್​

ವಿಳ್ಯೆದೆಲೆ ಕೋಯ್ಲು ಮಾಡಲು ಕಾರ್ಮಿಕರಿಗೆ ಈ ಹಣ ಸಾಲುತ್ತಿಲ್ಲ. ತೋಟಗಾರಿಕೆ ಬೆಳೆಯಾಗಿರುವ ವಿಳ್ಯೆದೆಲೆ ಗೆ ಕಳೆದ ವರ್ಷ ಪರಿಹಾರ ಬಂದಿಲ್ಲ. ಈ ವರ್ಷವಾದರೂ ಸಮಿಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ರಾಜ್ಯ ಸರಕಾರ ತೋಟಗಾರಿಕೆ ಬೆಳೆಗಳಿಗೆ ಪ್ರತಿ ಹೆಕ್ಟರ್ ಗೆ 10 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಕಳೆದ ವರ್ಷವೂ ಸಹ ತೋಟಗಾರಿಕೆ ಬೆಳೆಗೆ ಸರಕಾರದಿಂದ ಪರಿಹಾರ ಘೋಷಿಸಿ ನೀಡಿದೆ.

ಇದನ್ನೂ ಓದಿ: Black Fungus: ಬೆಳಗಾವಿ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಹೆಚ್ಚಳ; ಬಿಮ್ಸ್ ನಲ್ಲಿ ವೈದ್ಯರು, ಸೌಲಭ್ಯ ಕೊರತೆ

ಆದರೆ, ತೋಟಗಾರಿಕೆ ಬೆಳೆಗಾರರಿಗೆ ಸಿಕ್ಕ ಪರಿಹಾರ ಅತ್ಯಲ್ಪವಾಗಿದೆ, ಕಳೆದ ವರ್ಷ ವಿಳ್ಯೆದೆಲೆ ಬೆಳೆಗಾರರಿಗೆ ಪರಿಹಾರ ನೀಡಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ವಿಳ್ಯೆದೆಲೆ ತೋಟಗಳಿಗೆ ಭೇಟಿ ನೀಡಿ ಸಮಿಕ್ಷೆ ಮಾಡಿದ್ದಾರೆ, ಆದರೆ ಪರಿಹಾರ ಮಾತ್ರ ನೀಡಿಲ್ಲ, ಈಗಲಾದರೂ ಸರಕಾರ ವಿಳ್ಯೆದೆಲೆ ಬೆಳೆಗಾರರಿಗೆ ಪರಿಹಾರ ನೀಡುತ್ತಾರೊ ಕಾದು ನೋಡಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: