ಕೊರೋನಾ ಮೂರನೆ ಅಲೆ ಭೀತಿ; ಇಂದಿನಿಂದ ಕೊಪ್ಪಳ ಜಿಲ್ಲೆಯಲ್ಲಿ ಮನೆ ಮನೆ ಸಮಿಕ್ಷೆ!

ಮಂಗಳವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ 14,304 ಜನ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ 382 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 3,418 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 276 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ, 5483 ಜನ ಡಿಸ್ವಾರ್ಜ್ ಆಗಿದ್ದು, ಆಕ್ಟಿವ್ ಕೇಸ್​ಗಳ ಸಂಖ್ಯೆ 1,43,702 ಕ್ಕೆ ಇಳಿದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ: ಕಳೆದ ಒಂದು ವರ್ಷದಿಂದ ಇಡೀ ದೇಶವೇ ಕೊರೋನಾ ವೈರಸ್ ಎರಡನೆ ಅಲೆಯಿಂದ ತತ್ತರಿಸಿದೆ. ಕಳೆದ ಮಾರ್ಚ್ ತಿಂಗಳನಿಂದ ಆಗಸ್ಟ್ ತಿಂಗಳವರೆಗೂ ಕೊರೋನಾ ಮೊದಲು ಅಲೆಯು ಅಪ್ಪಳಿಸಿ ಜನರು ಸೋಂಕಿನಿಂದ ಬಳಲುವಂತೆ ಮಾಡಿತ್ತು. ಇದೇ ಸಂದರ್ಭದಲ್ಲಿ ಸೋಂಕು ರೂಪಾಂತರ ಕೊರೋನಾವು ಈಗ ಎರಡನೆಯ ಅಲೆಯಾಗಿ ಅಪ್ಪಳಿಸಿ ಬಹುತೇಕ ಯುವಕರನ್ನು ಬಲಿ ಪಡೆದಿದೆ. ಈ ಮಧ್ಯೆ ಅಕ್ಟೋಬರ್ ತಿಂಗಳ ವೇಳೆಗೆ ಮೂರನೆಯ ಅಲೆಯು ಬರಲಿದ್ದು, ಮೂರನೆಯ ಅಲೆಯು ಮಕ್ಕಳನ್ನು ಹೆಚ್ಚಾಗಿ ಬಾಧಿಸಲಿದೆ ಎಂದು ತಜ್ಞರು ವರದಿ ನೀಡಿದ್ದು, ಈ ಸಂದರ್ಭದಲ್ಲಿ ಮೂರನೆಯ ಅಲೆ ತಡೆಗೆ ರಾಜ್ಯದಲ್ಲಿ ಈಗಲೇ ಸಿದ್ದತೆ ಮಾಡಿಕೊಂಡಿದ್ದು, ಅದರಲ್ಲಿಯೂ ಕೊಪ್ಪಳ ಜಿಲ್ಲಾಡಳಿ ಒಂದು ಹೆಜ್ಜೆ ಮುಂದು ಹೋಗಿ ಇಂದಿನಿಂದ (ಜೂ. 2 ) ರಿಂದ ಮನೆ ಮನೆ ಸಮಿಕ್ಷೆ ಮಾಡಲು ಮುಂದಾಗಿದೆ.

ಬರುವ ದಿನಗಳಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಸಂಬಂಧಿತ ಎಲ್ಲ ಮಾಹಿತಿ ಸಂಗ್ರಹಿಸಲು ಕೊಪ್ಪಳ ಜಿಲ್ಲಾಡಳಿತ ಮುಂದಾಗಿದೆ.  ಶಿಕ್ಷಕರ ಮೂಲಕ 18 ವರ್ಷದೊಳಗಿನ ಎಲ್ಲ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದೆ. ಮಕ್ಕಳ ಕುರಿತ ಮಾಹಿತಿ ಸಂಗ್ರಹ ಇದೇ ಜೂನ್ 2 ರಿಂದ ಪ್ರಾರಂಭಗೊಳ್ಳಲಿದೆ. ಕೊಪ್ಪಳ ಜಿಲ್ಲೆಯಲ್ಲಿ 18 ವರ್ಷದೊಳಗಿನ ಸುಮಾರು 3 ಲಕ್ಷ ಮಕ್ಕಳಿದ್ದಾರೆ. ಈ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಶಿಕ್ಷಕರು, ಮುಖ್ಯ ಶಿಕ್ಷಕರಿಂದ ಈ ಸಮೀಕ್ಷೆ ನಡೆಯಲಿದೆ‌. ಸಮೀಕ್ಷೆಯ ಸಂದರ್ಭದಲ್ಲಿ ಆರೈಕೆ, ಅವರು ಏನಾದರೂ ಕಾಯಿಲೆ ಹೊಂದಿದ್ದಾರಾ? ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಯಾವ ಕಾಯಿಲೆ ಹೀಗೆ ಹಲವಾರು ಅಂಶಗಳ ಬಗ್ಗೆ ಶಿಕ್ಷಕರು ಮಾಹಿತಿ ಸಂಗ್ರಹಿಸಲಿದ್ದಾರೆ. ಒಬ್ಬ ಶಿಕ್ಷಕರು ಸುಮಾರು 100 ಮನೆಯಿಂದ ಮಕ್ಕಳ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರ ಜೊತೆಗೆ ಮಕ್ಕಳನ್ನು ಹೊರಗಡೆ ಬಿಡದಂತೆ, ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ಪಾಲಕರಿಗೆ ಸೂಚನೆ ಹಾಗೂ ಜಾಗೃತಿ ಮೂಡಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಘುನಂದನಮೂರ್ತಿ ಅವರು ತಿಳಿಸಿದ್ದಾರೆ.

ಗ್ರಾಮಗಳಲ್ಲಿಯ ಮಕ್ಕಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಈ ಮಾಹಿತಿಯನ್ನು ದಾಖಲು ಮಾಡುತ್ತಾರೆ. ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿರುವ ಶಿಕ್ಷಕರು ಮಕ್ಕಳಲ್ಲಿ ತೀವ್ರ ಅನಾರೋಗ್ಯ ಇದ್ದರೆ ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಯಾವ ರೀತಿಯ ತೊಂದರೆ ಆಗಿದೆ. ಅವರಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಾರೆ. ಈ ಮಾಹಿತಿಯು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಅವರಿಗೆ ಚಿಕಿತ್ಸೆ ಯಾವ ರೀತಿ ನೀಡಬೇಕು ಎನ್ನುವ ಮಾಹಿತಿ ವೈದ್ಯರಿಗೆ ಸಿಗಲಿದೆ. ಸುಮಾರು ಒಂದು ತಿಂಗಳು ಸಮಿಕ್ಷೆ ಮಾಡಲಿರುವ ಶಿಕ್ಷಕರು ಮಾಹಿತಿ ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಂದ ಜಿಲ್ಲಾ ಮಟ್ಟದಲ್ಲಿಯೂ ದಾಖಲೆ ನೀಡುತ್ತಾರೆ. ಮೂರನೆಯ ಅಲೆಯಲ್ಲಿ ಮಕ್ಕಳಿಗೆ ಬಾಧಿಸಿದರೆ ಅವರಿಗೆ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಆರಂಭಿಸಲು ಚಿಂತನೆ ನಡೆದಿದೆ.

ಇದನ್ನು ಓದಿ: Monsoon Rain 2021: ಜೂನ್ 6-7ರಂದು ರಾಜ್ಯದಲ್ಲಿ ಮುಂಗಾರು ಮಳೆ ಆರಂಭ; 20 ಜಿಲ್ಲೆಗಳಲ್ಲಿ ವಾಡಿಕೆ ಮಳೆ!

ಕೊಪ್ಪಳ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 1740 ಮಕ್ಕಳಿಗೆ ಸೋಂಕು ತಗುಲಿದ್ದು ಈಗ ಸುಮಾರು 124 ಜನರು ಸೋಂಕಿತರಲ್ಲಿ ಸೋಂಕು ಸಕ್ರಿಯವಾಗಿದೆ, ಒಟ್ಟಾರೆಯಾಗಿ ಒಂದು ಹಾಗು ಎರಡು ಅಲೆಯಿಂದ ಪಾಠ ಕಲಿತಿರುವ ರಾಜ್ಯ ಸರಕಾರ ಮೂರನೆಯ ಅಲೆ ತಡೆಗೆ ಯತ್ನ ನಡೆದಿದ್ದು ಈ ಯತ್ನದಿಂದ ಮೂರನೆಯ ಬಾಧಿಸುವುದು ಬೇಡ ಎಂದು ಜನತೆ ಆಶಿಸಿದ್ದಾರೆ.

ಕಳೆದ ಐದು ವಾರಗಳಿಂದ ರಾಜ್ಯ ಮತ್ತು ಬೆಂಗಳೂರಿನಲ್ಲಿ ಸತತ ಏರಿಕೆಯ ಹಾದಿಯಲ್ಲಿ ಕೊರೋನಾ ವೈರಸ್​ ಇದೀಗ ಹಂತಹಂತವಾಗಿ ಇಳಿಯುತ್ತಿದೆ. ಕಳೆದ ವಾರದವರೆಗೆ ದಿನವೊಂದಕ್ಕೆ ಸರಿ ಸುಮಾರು 25 ರಿಂದ 30 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಸಾವಿನ ಸಂಖ್ಯೆಯೂ ಆಘಾತಕಾರಿಯಾಗಿತ್ತು. ಆದರೆ, ಇದೀಗ ಸೋಂಕಿತರ ಸಂಖ್ಯೆ 15ಕ್ಕಿಂತ ಕೆಳಕ್ಕೆ ಇಳಿದಿರುವುದು ತುಸು ನೆಮ್ಮದಿಗೆ ಕಾರಣವಾಗಿದೆ. ಈ ನಡುವೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ 14,304 ಜನ ಸೋಂಕಿಗೆ ತುತ್ತಾಗಿದ್ದಾರೆ. ಇನ್ನೂ 382 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 3,418 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 276 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ, 5483 ಜನ ಡಿಸ್ವಾರ್ಜ್ ಆಗಿದ್ದು, ಆಕ್ಟಿವ್ ಕೇಸ್​ಗಳ ಸಂಖ್ಯೆ 1,43,702 ಕ್ಕೆ ಇಳಿದಿದೆ.
Published by:HR Ramesh
First published: