ಕೊಪ್ಪಳ; ಇಂದು ಹೈಬ್ರಿಡ್ ಯುಗದಲ್ಲಿ ಈಗ ಮನುಷ್ಯ ತನ್ನ ನಂತರ ಒಂದೆರಡು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಕಾಣುವುದು ಸಹಜ. ಆದರೆ, ಇಲ್ಲೊಬ್ಬ ಅಜ್ಜಿ ಇದ್ದಾಳೆ, ಮೊಮ್ಮಗಳಿಗೆ ಮೊಮ್ಮಗಳನ್ನು ಕಂಡಿದ್ದಾಳೆ. ಈಗಲೂ ಗಟ್ಟಿಮುಟ್ಟಿಯಾಗಿರುವ ಈ ಅಜ್ಜಿ ಒಟ್ಟು ಐದು ತಲೆಮಾರುಗಳನ್ನು ಕಂಡಿರುವುದು ವಿಶೇಷ. ಮನುಷ್ಯ ಇತ್ತೀಚಿಗೆ ಸರಾಸರಿ ಆಯುಷ್ ಕಡಿಮೆಯಾಗಿದೆ. ಬಹುತೇಕರು ತಮಗೆ ಮೊಮ್ಮಕ್ಕಳ ಕಾಣುವವರೆಗೂ ಬದುಕಿರಬೇಕು ಎಂಬ ಆಸೆ. ಆದರೆ ಈ ಅಜ್ಜಿಗೆ ತನ್ನ ಮೊಮ್ಮಗಳ ಮೊಮ್ಮಗನನ್ನೂ ಕಂಡಿದ್ದಾಳೆ. ಅಜ್ಜಿ ಈಗ ಫುಲ್ ಖುಷ್, ಕೊಪ್ಪಳ ತಾಲೂಕಿನ ಹ್ಯಾಟಿಯಲ್ಲಿಯ ಹೂವಿನಾಳರ ಮನೆಯ ದ್ಯಾಮವ್ವನಿಗೆ ಈಗ 92 ವರ್ಷ.
ಆಕೆಯ ಮಗಳು ಬೆವಿನಾಳದಲ್ಲಿರುವ ಬಹದ್ದೂರ ಬಂಡಿ ಗಂಗಮ್ಮ, ಗಂಗಮ್ಮನ ಮಗಳು ಫಕೀರವ್ವ ಆಕೆಯೂ ಹ್ಯಾಟಿಯಲ್ಲಿ ಹೂವಿನಾಳರ ಮನೆಯವರು. ಫಕೀರವ್ವನ ಮಗಳ ಅಂಜಲಿ ಆಕೆ ಬೆವಿನಾಳದಲ್ಲಿ ಬಹದ್ದೂರು ಬಂಡಿಯವರ ಮನೆಯ ಸೋಸೆ, ಆಕೆಗೆ ಈಗ 14 ದಿನಗಳ ಹಿಂದೆ ಗಂಡು ಮಗುವಾಗಿದೆ. ಇದರಿಂದಾಗಿ ದ್ಯಾಮವ್ವ ಈಗ ಒಟ್ಟು ಐದು ತಲೆಮಾರುಗಳನ್ನು ಕಂಡಿರುವ ಅಪರೂಪದ ಅಜ್ಜಿಯಾಗಿದ್ದಾಳೆ.
ಅಜ್ಜಿಗೆ ಒಟ್ಟು 6 ಜನ ಮಕ್ಕಳು, 33 ಜನ ಮೊಮ್ಮಕ್ಕಳು, 66 ಜನ ಮರಿಮಕ್ಕಳು, ಈ ಒಬ್ಬರು ಗಿರಿಮಕ್ಕಳು. ಹೀಗೆ ಒಟ್ಟು 100ಕ್ಕೂ ಅಧಿಕ ಮೊಮ್ಮಕ್ಕಳನ್ನು ಕಂಡಿದ್ದಾರೆ. ಇತ್ತೀಚಿಗೆ ಅಜ್ಜಿ ಬೆವಿನಾಳದಲ್ಲಿ ತನ್ನ ಮೊಮ್ಮಗಳ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದರಿಂದ ಅಲ್ಲಿಗೆ ಬಂದಿದ್ದು ಐದು ತಲೆಮಾರಿನವರು ಒಂದೆ ಕಡೆ ಇದ್ದದ್ದು ವಿಶೇಷವಾಗಿದೆ. 92 ವಯಸ್ಸಾಗಿ ರುವ ಅಜ್ಜಿಗೆ ಕಿವಿ ಸ್ವಲ್ಪ ಮಂದ ಎನ್ನುವುದು ಬಿಟ್ಟರೆ ಉಳಿದಂತೆ ಗಟ್ಟಿಮುಟ್ಟಿ ಯಾಗಿದ್ದಾಳೆ. ಖಡಕ್ ರೊಟ್ಟಿ ಊಟ ಮಾಡುವ ಅಜ್ಜಿ ಈಗಲೂ ಯಾರ ಸಹಾಯವಿಲ್ಲದೆ ತಿರುಗಾಡುತ್ತಾರೆ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಿದ್ದಾಳೆ.
ಅಧುನಿಕ ಯುಗದಲ್ಲಿ ಈಗ ಮನುಷ್ಯ ಬಹುಬೇಗ ಆಯುಷ ಮುಗಿಸುತ್ತಿರುವಾಗ ಈ ಅಜ್ಜಿ ತುಂಬು ಕುಟುಂಬ, ತುಂಬು ಸಂಸಾರ, ಮಕ್ಕಳು, ಮೊಮ್ಮಕ್ಕಳು, ಮೊಮ್ಮಗಳಿಗೆ ಮೊಮ್ಮಗಳನ್ನು ಕಂಡಿರುವ ವಿಶೇಷವಾಗಿದೆ. ಈ ಅಜ್ಜಿ ಆರೋಗ್ಯ ಕಾಪಾಡಿಕೊಂಡು ಬಂದಿರುವದಕ್ಕೆ ಕುಟುಂಬಸ್ಥರಲ್ಲಿ ಹೆಮ್ಮೆ ಇದೆ, ಈ ಅಜ್ಜಿ ಇನ್ನಷ್ಟು ದಿನ ಗಟ್ಟಿಮುಟ್ಟಾ ಗಿರಲಿ ಎಂದು ಆಶಿಸುತ್ತಾರೆ.ಕೃಷಿ ಕಾಯಕದಲ್ಲಿರುವ ಇವರ ಕುಟುಂಬ ಅಜ್ಜಿ ಹಿರಿಯಜ್ಜಿಯಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾಳೆ.
ಇನ್ನೂ ತನ್ನ ಹಿಂದಿನ ಘಟನೆಗಳನ್ನು ಮೆಲಕು ಹಾಕುವ ಅಜ್ಜಿಯು ತಾನು ಮದುವೆಯಾದ ಒಂದು ವರ್ಷವಿದ್ದಾಗ ಹ್ಯಾಟಿ ಗ್ರಾಮವು ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾ ಯಿತು, ಆಗ ನಾವೆಲ್ಲರೂ ಹೊಸ ಊರಿಗೆ ಬಂದೆವು ಎನ್ನುತ್ತಾಳೆ. ಸಂಬಂಧಿಗಳ ಮಧ್ಯೆ ಮೂರು ತಲೆಮಾರುಗಳಿಂದ ಮಗಳನ್ನು ಕೊಡುವುದು, ಅವರ ಮಗಳನ್ನು ತಮ್ಮ ಮನೆಗೆ ತೆಗೆದುಕೊಳ್ಳುವುದನ್ನು ಮಾಡಿದ್ದೇವೆ ಎನ್ನುತ್ತಾಳೆ.
ಇದನ್ನೂ ಓದಿ: ಖಾರದ ಪುಡಿ, ಮೆಣಸಿನ ಪುಡಿಯಿಂದ ಅರುಣಾಚಲ ಪ್ರದೇಶದ ಜೈಲು ಸಿಬ್ಬಂದಿಗಳ ಮೇಲೆ ಹಲ್ಲೆ; 7 ಖೈದಿಗಳು ಪರಾರಿ
ನಮ್ಮವ್ವ ನಮಗೆಲ್ಲ ಹಿರಿಯಳಾಗಿ ನಮ್ಮ ತಂಗಿ, ತಮ್ಮರ ಕುಟುಂಬಗಳನ್ನು ಪ್ರೀತಿಯಿಂದ ನೋಡಿಕೊಂಡಿದ್ದು ಆಕೆ ಸಂತೃಪ್ತಿ ಜೀವನ ನಡೆಸಿದ್ದಾಳೆ ಈ ಕಾರಣಕ್ಕಾಗಿ ಆಕೆ ಗಟ್ಟಿ ಮುಟ್ಟಾಗಿದ್ದಾಳೆ. ಐದು ತಲೆಮಾರು ಕಂಡಿರುವುದು ಸಂತೋಷವಾಗಿದೆ ಎಂದು ಹಿರಿಯಜ್ಜಿ ದ್ಯಾಮವ್ವರ ಹಿರಿಮಗಳು ಗಂಗಮ್ಮ ಹೇಳುತ್ತಾರೆ, ತಮ್ಮ ಅಜ್ಜಿ ಅಪರೂಪದ ತಲೆಮಾರು ಗಳನ್ನು ಕಂಡಿದ್ದು ಅಜ್ಜಿಯ ಜೀವನ ಕ್ರಮ ನಮಗೆ ಮಾದರಿ ಎನ್ನುತ್ತಾರೆ ಮೊಮ್ಮಕ್ಕಳು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ